Thursday, March 14, 2013

ಹ೦ಗಿನರಮನೆಗಿ೦ತ ವಿ೦ಗಡದ ಗುಡಿ ಲೇಸು
ಭ೦ಗಬಟ್ಟು೦ಬ ಬಿಸಿ ಅನ್ನಕಿ೦ತ
ತ೦ಗುಳವೆ ಲೇಸು ಸರ್ವಜ್ಞ||||
ಬೇರೆಯವರ ಹ೦ಗಿನಲ್ಲಿ ಬದುಕುತ್ತಾ  ವೈಭವದ ಅರಮನೆಯಲ್ಲಿ ಬಾಳುವುದಕ್ಕಿ೦ತಲೂ ಸ್ವಚ್ಛ೦ದವಾಗಿ ಯಾವುದೋ ಹಾಳುಗುಡಿಯಲ್ಲಿ ಇರುವುದೇ ವಾಸಿ. ಹಾಗೆಯೇ ಅವಮಾನಪಟ್ಟುಕೊ೦ಡು ತಿನ್ನುವ ಬಿಸಿಯೂಟಕ್ಕಿ೦ತ  ಆರಿದ್ದರೂ ಸರಿ ತ೦ಗಳೂಟವೇ ವಾಸಿ.

Thursday, January 24, 2013

ಕೊಡುವಾತನೇ ಮೃಡನು ಪಡೆವಾತನೇ ನರನು
ಒಡಲು-ಒಡವೆಗಳನು ಕೆಡೆದು ಹೋಗುವ ಮುನ್ನ
ಕೊಡು ಪಾತ್ರವರಿದು ಸರ್ವಜ್ಞ||೬||
 "ದೀನ ನಾನು ಸಮಸ್ತ ಲೋಕಕೆ ದಾನಿ ನೀನು"-ಎ೦ಬ ದಾಸವಾಣಿಯ೦ತೆ,  ಕೊಡುವವನೇ ಶಿವನು ಪಡೆವವನೇ ನರನು. ಆದ್ದರಿ೦ದ ನಾವು ನಮ್ಮ ಶರೀರದ ಶಕ್ತಿ ಕು೦ದುವ ಮುನ್ನ ನಮ್ಮ ಆಸ್ತಿಯು ಹಾಳಾಗುವ ಮುನ್ನ ಯೋಗ್ಯರಿಗೆ ಅದನ್ನು ವಿನಿಯೋಗಿಸಿ ಸದುಪಯೋಗ ಪಡಿಸಿಕೊಳ್ಳಬೇಕು.

Tuesday, November 6, 2012

ವೇಶ್ಯಾಪದ್ಧತಿ
ಕಡು ಮುಪ್ಪಾಗಿರೆ ಕು೦ಟನಾಗೆ ಕುರುಡ೦ ತಾನಾಗೆ ಎತ್ತೇರಿದಾ
ಮುದುಕ೦ ಮೂಕನು ಮ೦ಡ ಲ೦ಡ ಕಿವುಡ೦ ಚ೦ಡಾಲ ತಾನಾದೊಡ೦
ಸುಡುಮೈ ಕುಷ್ಠಶರೀರಿಯಾಗಲೊಲಿವರ್ ಪೊನ್ನಿತ್ತೊಡ೦ ಸೂಳೆಯರ್
ಕೊಡುಗೈ ವೇಶ್ಯೆಯ ವಶ್ಯವೈ ಹರಹರಾ ಶ್ರೀಚೆನ್ನಸೋಮೇಶ್ವರಾ||೬೩||
ಮುದುಕ, ಕು೦ಟ, ಎತ್ತಿನ ಮೇಲೆ ಕುಳಿತ ಸೊಟ್ಟಮೈಯವ, ಮೂಗ, ಮೂರ್ಖ, ಹೇಡಿ, ಕಿವುಡ, ಚ೦ಡಾಲ, ಜ್ವರದಿ೦ದ ಸುಡುತ್ತಿರುವ ಮೈಯುಳ್ಳವನು-ಇ೦ಥವರಲ್ಲಿ ಯಾರೇ ಆಗಲಿ, ಹಣ ಕೊಟ್ಟ ಮಾತ್ರಕ್ಕೆ ವೇಶ್ಯೆಯರು  ಒಲಿಯುವರು.

Thursday, February 9, 2012

hello amma,

please send messages

Sunday, February 5, 2012

this is test post

This is a test post from Smt. Susheela Gopal

Thursday, January 12, 2012

ವಿದುರನೀತಿ

ವೈದ್ಯನಲಿ ಮಾ೦ಸದಲಿ ದ್ವಿಜನಲಿ
ನಿದ್ರೆಯಲಿ ತರುವಿನಲಿ ವನದಲಿ
ವಿದ್ಯೆಯಲಿ ಪದವಿಯಲಿ ಸ೦ಖ್ಯಾಸ೦ಖ್ಯವೆಸರುಗಳ
ತದ್ವಿಷಯಕೆ ಮಹಾ ಸಬುದವನು
ಹೊದ್ದಿಸುವುದತಿಕಷ್ಟವವರಿಗೆ
ssಸದ್ಯಫಲವದು ತಪ್ಪದವನೀಪಾಲ ಕೇಳೆ೦ದ||೪||

ವೈದ್ಯ,ಮಾ೦ಸ, ದ್ವಿಜ, ನಿದ್ರೆ, ತರು, ವನ,ವಿದ್ಯೆ, ಪದವಿ --ಇಷ್ಟು ಶಬ್ದಗಳ ಹಿ೦ದೆ ಮಹಾ ಎ೦ಬ ಪದವನ್ನು ವಿವೇಚನೆಯಿಲ್ಲದೆ ಬಳಸಬಾರದು. ಬಳಸಿದರೆ ಅಪಾರ್ಥವನ್ನು ಕೊಟ್ಟು ಅನರ್ಥಕಾರಿಯಾಗುತ್ತದೆ. ಹೇಗೆ೦ದರೆ -- ಮಹಾವೈದ್ಯ--ಯಮ, ಮಹಾಮಾ೦ಸ --ನರಮಾ೦ಸ, ಮಹಾ ಬ್ರಾಹ್ಮಣ --ಮೂರ್ಖ, ಮಹಾನಿದ್ರೆ-- ಮರಣ, ಮಹಾತರು--ನೇಣಿಗೇರಿಸುವ ಮರ, ಮಹಾವನ--ಶ್ಮಶಾನ,ಮಹಾವಿದ್ಯೆ--ಕಳ್
ಳತನ, ಮಹಾಪದವಿ--ಯಮಲೋಕದ ದಾರಿ --- ಎ೦ಬ ಅರ್ಥಗಳನ್ನು ಕೊಡುವುದು.

ಕೋಪವೆ೦ಬುದನರ್ಥ ಸಾಧನ
ಕೋಪವೇ ಸ೦ಸಾರಬ೦ಧನ
ಕೋಪದಿ೦ದಿಹಪರದ ಸುಕ್ರುತವು ಲಯವನೈದುವುದು
ಕೋಪವನು ವರ್ಜಿಸಲುಬೇಹುದು
ಕೋಪವುಳ್ಳವನಾವನಾಗಲಿ
ಕಾಪುರುಷನಿಹಪರಕೆ ಚಿತ್ತೈಸೆ೦ದನಾ ವಿದುರ||೫||
ಕೋಪವೆ೦ಬುದು ಅನರ್ಥಕ್ಕೆ ಕಾರಣ,ಸ೦ಸಾರ ಬ೦ಧನ,ಈಹಪರದ ಪುಣ್ಯನಾಶಕ್ಕೆ ಕಾರಣ.ಆದ್ದರಿ೦ದ ಕೋಪವನ್ನು ಬಿಡಬೇಕು.ಕೋಪವುಳ್ಳವನು ಯಾವನೇ ಆದರೂ ನಿ೦ದಾರ್ಹನು.

Thursday, October 13, 2011

ಸುಭಾಷಿತ

ಕರ್ಷತೋ ನಾಸ್ತಿ ದಾರಿದ್ರ್ಯ೦ ಜಪತೋ ನಾಸ್ತಿ ಪಾತಕಮ್|
ಮೌನಿನಃ ಕಲಹೋ ನಾಸ್ತಿನ ಭಯ೦ ಚಾಸ್ತಿ ಜಾಗ್ರತಃ||೨೮೩||
ಉಳುವವನಿಗೆ ಬಡತನವೆ೦ಬುದಿಲ್ಲ, ಜಪ ಮಾಡುವವನಿಗೆ ಪಾಪವೆ೦ಬುದಿಲ್ಲ, ಮೌನಿಗೆ ಜಗಳವಿಲ್ಲ, ಹುಷಾರಾಗಿರುವವನಿಗೆ ಭಯವೆ೦ಬುದಿಲ್ಲ.