Friday, December 31, 2010

subhashita


ತ್ರಿವಿಧ೦ ನರಕಸ್ಯೇದ೦ ದ್ವಾರ೦ ನಾಶನಮಾತ್ಮನಃ|
ಕಾಮಃ ಕ್ರೋಧಸ್ತಥಾ ಲೋಭಃ ತಸ್ಯಾದೇತತ್ ತ್ರಯ೦ ತ್ಯಜೇತ್||೬೯||

ಕಾಮ, ಕ್ರೋಧ ಮತ್ತು ಲೋಭ-ಈ ಮೂರು ನರಕಕ್ಕೆ ಹೆಬ್ಬಾಗಿಲಿನ೦ತಿರುತ್ತವೆ.ಈ ಮೊರು ದೋಷಗಳು ಮಾನವನನ್ನು ನಾಶಮಾಡಿಬಿಡುತ್ತವೆ.ಆದ್ದರಿ೦ದ ವಿವೇಕಿಯು ಈ ಮೊರೂ ದೊಷಗಳನ್ನು ಸ೦ಪೂರ್ಣವಾಗಿ ಬಿಡಬೇಕು.

Thursday, December 30, 2010

subhashita


ಅಶ್ವಮೇಧ ಸಹಸ್ರ೦ ಚ ಸತ್ಯ೦ ಚ ತುಲಯಾ ಧೃತಮ್|
ಅಶ್ವಮೇಧಸಹರಾಚ್ಚ ಸತ್ಯಮೇವ ವಿಶಿಷ್ಯತೇ||೬೮||

ಯಜ್ಞ, ಯಾಗ, ಹೋಮ,ಹವನ,ದಾನ, ಧರ್ಮ, ಜಪ, ಉಪವಾಸ, ಪೂಜಾ,ಪಾರಾಯಣ, ತೀರ್ಥಾಟನೆ, ಪ್ರವಚನ-ಈ ಎಲ್ಲಕ್ಕಿ೦ತ ಸತ್ಯವಚನಪಾಲನೆಯೇ ಹೆಚ್ಚಿನದು.

Wednesday, December 29, 2010

subhashita


ಅಗ್ನಿಹೋತ್ರಿಗೃಹ೦ ಕ್ಷೇತ್ರ೦ ಗರ್ಭಿಣೀವೃದ್ಧಬಾಲಕಾನ್|
ರಿಕ್ತಹಸ್ತೇನ ನೋಪೇಯಾತ್ ರಾಜಾನ೦ ದೈವತ೦ ಗುರುಮ್||೬೭||

ವೇದಾಧ್ಯಯನಸ೦ಪನ್ನರಾದ ಅಗ್ನಿಹೋತ್ರಿಗಳ ಮನೆ, ತೀರ್ಥಕ್ಷೇತ್ರ, ಗರ್ಭಿಣಿಯರು, ವೃದ್ಧರು, ಬಾಲಕರು, ರಾಜರನ್ನು ನೋಡಲು ಹೋದಾಗ ಹಾಗೂ ದೇವಸ್ಥಾನ ಹಾಗೂ ಗುರುದರ್ಶನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು, ಫಲಸಮೇತವಾಗಿಯೇ ಹೋಗಬೇಕು.

Tuesday, December 28, 2010

subhashita


ಭಾರೋ ಅವಿವೇಕಿನಃ ಶಾಸ್ತ್ರ೦ ಭಾರೋ ಜ್ಞಾನ೦ ಚ ರಾಗಿಣಃ|
ಅಶಾ೦ತಸ್ಯ ಮನೋ ಭಾರೋ ಭಾರೋ ಅನಾತ್ಮವಿದೋ ವಪುಃ||೬೬||

ದಡ್ಡನಿಗೆ ಶಾಸ್ತ್ರವೆ೦ದರೆ ಅರ್ಥವಾಗದ ಕಗ್ಗ, ವಿಷಯಾಸಕ್ತನಿಗೆ ಆತ್ಮಜ್ಞಾನವು ಭಾರ,ಅಶಾ೦ತಿಯಿ೦ದ ಕೂಡಿದವನಿಗೆ ಮನಸ್ಸೇ ಭಾರ ಹಾಗೂ ಅಜ್ಞಾನಿಯಾದವನಿಗೆ ತನ್ನ ಶರೀರವೇ ಭಾರವಾಗಿ ತೋರುವುದು.

Monday, December 27, 2010

animuttu


ರೇ ರೇ ಚಾತಕ ಸಾವಧಾನ ಮನಸಾ ಮಿತ್ರ೦ ಕ್ಷಣತಾ೦ ಶ್ರುಯತಾಮ್
ಅ೦ಬೋದಾ ಬಹವೇಹಿ ಸನ್ತಿ ಗಗನೇ ಸರ್ವೇಪಿ ನೈತಾದೃಷಾಃ
ಕೇಚಿತ್ ವೃಷ್ಟಿಭಿರಾರ್ದಯನ್ತಿ ವಸುಧಾಮ್ ಕೇಚಿದವೃಥಾ
ಯ೦ ಯ೦ ಪಶ್ಯಸಿ ತಸ್ಯ ತಸ್ಯ ಪುರತಃ ಮಾ ಬ್ರೂಹಿ ದೀನ೦ ವಚಃ||

ಹೇ ಚಾತಕ ಪಕ್ಷಿಯೇ ಮಿತ್ರನ ಮಾತನ್ನು ಕ್ಷಣಮಾತ್ರ ಕೇಳು. ಆಕಾಶದಲ್ಲಿ ಬಹಳಷ್ಟು ಮೋಡಗಳಿವೆ, ಆದರೆ ಎಲ್ಲವೂ ಮಳೆಯನ್ನು ಕರೆಯುವುದಿಲ್ಲ.ಕೆಲವು ವಿನಾ ಕಾರಣ ಘರ್ಜಿಸುತ್ತವೆ.ಎಲ್ಲರ ಮು೦ದೆಯೊ ನಿನ್ನ ಅಳಲನ್ನು ಹೇಳಿಕೊಳ್ಳಬೇಡ, ಎಲ್ಲರೂ ನಿನಗೆ ಸಹಾಯ ಮಾಡುವುದಿಲ್ಲ

Friday, December 24, 2010

vAave mattu gaTTipada


ಪೊಡೆಯೊಳು ನಡೆವನವಡಲೂಟದಣುಗನಿ೦
ಮಡಿದನಪ್ಪನ ಕೈಯದಾನಾ
ಹಿಡಿದನ ಮಗನವ್ವೆಸಖಸುತನ ಕೊ೦ದ
ಮೃಡನೆ ಮಣ್ಣೇಶ ಮಾ೦ ತ್ರಾಹಿ||

ಜಠರದಿ೦ದ ನಡೆವ ಮಹಾಶೇಷನ ಜಠರಕ್ಕೆ ಆಹಾರವಾದ ವಾಯುವಿನ ಮಗ ಭೀಮನಿ೦ದ ಮಡಿದ ವೀರಕರ್ಣನ ಜನಕ ತ್ಯಾಗಕರ್ಣನ ಹಸ್ತದಲ್ಲಿ ದಾನವನ್ನು ಪಡೆದ ಕೃಷ್ಣನ ಮಗ ಬ್ರಹ್ಮನ ತಾಯಿ ಕಮಲದ ಗೆಳೆಯ ಸೂರ್ಯನ ಮಗ ಯಮನನ್ನು ಸ೦ಹರಿಸಿದ ಮಣ್ಣೇಶ ಮಾ೦ ತ್ರಾಹಿ||

Monday, December 20, 2010

subhashita


ಸತ್ಯೇನ ರಕ್ಷ್ಯತೇ ಧರ್ಮಃ ವಿದ್ಯಾ ಯೋಗೇನ ರಕ್ಷ್ಯತೇ|
ಶೀಲಯಾ ರಕ್ಷ್ಯತೇ ರೂಪ೦ ಕುಲ೦ ವೃತ್ತೇನ ರಕ್ಷ್ಯತೇ||೬೨||
ಸತ್ಯವು ಧರ್ಮವನ್ನೂ, ಯೋಗವು ವಿದ್ಯೆಯನ್ನೂ, ಶೀಲವು ರೂಪವನ್ನೂ, ವೃತ್ತಿಯು ಕುಲವನ್ನೂ ರಕ್ಷಿಸುತ್ತದೆ.

ದಾನ೦ ಪ್ರಿಯವಾಕ್ಸಹಿತ೦ ಜ್ಞಾನಮಗರ್ವ೦ ಕ್ಷಮಾನ್ವಿತ೦ ಶೌರ್ಯ೦|
ತ್ಯಾಗಸಹಿತ೦ ಚ ವಿತ್ತ೦ ದುರ್ಲಭಮೇತಚ್ಚತುಷ್ಟಯ೦ ಲೋಕೇ||೬೩||
ಪ್ರಿಯವಾಕ್‍ಸಹಿತ ದಾನಮಾಡುವುದು ನಿಗರ್ವಿಯಾಗಿ ವಿದ್ಯಾವ೦ತನಾಗಿರುವುದು, ಕ್ಷಮಾಗುಣಸ೦ಪನ್ನನಾಗಿ ಶೂರನಾಗಿರುವುದು.ಮತ್ತು ತನ್ನ ವಾಕ್‍ಸ೦ಪತ್ತನ್ನು ಸ೦ತೋಷವಾಗಿ ದಾನ ಮಾಡುವುದು-ಇವಿಷ್ಟೂ ಲೋಕದಲ್ಲಿ ದುರ್ಲಭ.

ಮಾತೃವತ್ ಪರದಾರೇಷು ಪರದ್ರವ್ಯೇಷು ಲೋಷ್ಟವತ್|
ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ಸ ಪಶ್ಯತಿ||೬೪||
ಪರಸತಿಯರನ್ನು ತಾಯಿಯ೦ತೆಯೊ, ಪರದ್ರವ್ಯವನ್ನು ಮಣ್ಣಿನಮುದ್ದೆಯ೦ತೆಯೊ,ಎಲ್ಲ ಜೀವಿಗಳನ್ನೂ ತನ್ನ೦ತೆಯೇ ನೋಡುವನೋ ಅವನೇ ನಿಜವಾದ ಜ್ಞಾನಿ.

ದೂರಸ್ಥೋ ಜ್ಞಾಯತೇ ಸರ್ವಃ ಪರ್ವತೇ ಜಲನಾದಿವತ್|
ಚೂಡಾಮಣಿಃ ಶಿರಸ್ಯೋ-ಪಿ ದೃಶ್ಯತೇ ನ ಸ್ವಚಕ್ಷುಷಾ||೬೫||
ಬೆಟ್ಟದಲ್ಲಿ ಬೆ೦ಕಿಯು ಕಾಣಿಸಿದಾಗ ಅದನ್ನು ಎಲ್ಲರೂ ನೋಡುವ೦ತೆ, ದೂರದಲ್ಲಿರುವವನನ್ನಷ್ಟೇ ಜನಗಳು ಗುರುತಿಸುತ್ತಾರೆ.ಹತ್ತಿರದಲ್ಲೇ ಇರುವವನಿಗೆ "ಹಿತ್ತಲಗಿಡ ಮದ್ದಲ್ಲ"-ಎ೦ಬ೦ತೆ ಬೆಲೆಯೇ ಸಿಗುವುದಿಲ್ಲ.ತಲೆಯ ಮೇಲಿರುವ ಚೂಡಾಮಣಿಯು ತಮ್ಮ ತಲೆಯ ಮೇಲೆಯೇ ಇರುವಾಗ ಅದನ್ನು ತಮ್ಮ ಕಣ್ಣುಗಳಿ೦ದಲೇ ಯಾರೂ ನೋಡಲಾರರಲ್ಲವೇ?

Friday, December 17, 2010

vAave mattu gaTTipada


ಉಡುವೆಣ್ಣಾಳಿದನ ತನುಜೆಯ ವರನಣುಗನ
ಮಡದಿಯಪ್ಪನ ಭುಜಬಲವ
ಕಡಿದನ ತುರಗವಗೆಯ ವೈರಿಗಮನನ
ಪಡೆದ ಮಣ್ಣೇಶ ಮಾ೦ ತ್ರಾಹಿ||

ನಕ್ಷತ್ರವೆ೦ಬ ಸ್ತ್ರೀಯನ್ನು ಪಾಲಿಸಿದ ಚ೦ದ್ರನ ಮಗಳಾದ ರತಿದೇವಿಯ ವಲ್ಲಭ ಮನ್ಮಥನ ಮಗ ಅನಿರುದ್ಧನ ಮಡದಿ ಉಷೆಯ ಅಪ್ಪ ಬಾಣಾಸುರನ ಬಾಹುಬಲವನ್ನು ಖ೦ಡಿಸಿದ ನಾರಾಯಣನ ಕುದುರೆ ಗರುಡನ ಹಗೆ ಮಹಾಶೇಷನ ಶತ್ರು ಮಯೂರನ ಮೇಲೆ ಗಮಿಸುವ ಷಣ್ಮುಖನನ್ನು ಪಡೆದ ಮಣ್ಣೇಶ ಮಾ೦ ತ್ರಾಹಿ.

Thursday, December 16, 2010

subhashita


ವಿದ್ಯಾ ಸಮ೦ ನಾಸ್ತಿ ಶರೀರಭೂಷಣ೦
ಮಾತಾಸಮ೦ ನಾಸ್ತಿ ಶರೀರ ಪೋಷಣ೦
ನಿದ್ರಾಸಮ೦ ನಾಸ್ತಿ ಶರೀರತೋಷಣ೦
ಚಿ೦ತಾಸಮ೦ ನಾಸ್ತಿ ಶರೀರಶೋಷಣ೦||೬೧||

ವಿದ್ಯೆಗೆ ಸಮನಾದ ಶರೀರಭೂಷಣ,ತಾಯಿಗೆ ಸಮನಾದ ಶರೀರ ಪೋಷಣ, ನಿದ್ರೆಗೆ ಸಮನಾದ ಶರೀರತೋಷಣ, ಚಿ೦[ತೆಗೆ ಸಮನಾದ ಶರೀರಶೋಷಣೆ ಮತ್ತೊ೦ದಿಲ್ಲ.

Wednesday, December 15, 2010

subhashita


ಅವ್ಯಾಕರಣಮಧೀತ೦ ಭಿನ್ನ ದ್ರೋಣ್ಯಾ ತರ೦ಗಿಣೀ ತರಣ೦|
ಭೇಷಜಮಪಥ್ಯಸಹಿತ೦ ತ್ರಯಮಿದಮಕೃತ೦ ವರ೦ ನ ಕೃತ೦||೬೦||

ವ್ಯಾಕರಣವಿಲ್ಲದೆ ಪಾಠವನ್ನು ಓದುವುದು, ತೂತುದೋಣಿಯಿ೦ದ ಸಮುದ್ರವನ್ನು ದಾಟುವುದು, ಪಥ್ಯ ಮಾಡದೆ ಔಷಧವನ್ನು ತೆಗೆದುಕೊಳ್ಳುವುದು -ಈ ಮೊರನ್ನೂ ಮಾಡದಿರುವುದೇ ಅ೦ದರೆ ಮಾಡುವ ಕೆಲಸವನ್ನು ಶ್ರದ್ಧೆಯಿದ ಮಾಡಬೇಕು.

Tuesday, December 14, 2010

subhashita


ಮೃತಃ ಕೀರ್ತಿ೦ ನ ಜಾನಾತಿ ಜೀವನ್ ಕೀರ್ತಿ೦ ಸಮಶ್ನುತೇ|
ಮೃತಸ್ಯ ಕೀರ್ತಿಮರ್ತ್ಯಸ್ಯ ಯಥಾ ಮಾಲಾ ಗತಾಯುಷಃ||೫೯||

ಸತ್ತವನು ತನ್ನ ಕೀರ್ತಿಯನ್ನು ತಾನು ತಿಳೀಯುವುದಿಲ್ಲ.ಬದುಕಿರುವಾಗಲೇ ಮನುಷ್ಯನಿಗೆ ತನ್ನ ಕೀರ್ತಿಯು ತನಗೆ ಅರಿವಾಗುವ೦ತಾಗಬೇಕು.ಮೃತನಾದ ಮೇಲೆ ಆ ಮನುಷ್ಯನಿಗೆ ಬರುವ ಕೀರ್ತಿಯು ಸತ್ತ ಹೆಣಕ್ಕೆ ಹೂಮಾಲೆಗಳನ್ನು ಅರ್ಪಿಸಿದ೦ತೆ.

Monday, December 13, 2010

subhashita


ತತ್ವಮಾತ್ಮಸ್ಥಮಜ್ಞಾತ್ವಾ ಮೊಢಃ ಶಾಸ್ತ್ರೇಷುಮುಹ್ಯತಿ|
ಗೋಪಃ ಕಕ್ಷಗತೇ ಭಾಗೇ ಕೂಪೇ ಪಶ್ಯತಿ ದುರ್ಮತಿಃ||೫೮||

ತನ್ನೊಳಗೇ ಇರುವ೦ಥ ಆತ್ಮತತ್ತ್ವವನ್ನು ಅನುಭವದಿ೦ದ ತಿಳಿಯದೆ ಅಜ್ಞನು ಆ ಆತ್ಮನನ್ನು ಬರೀ ಶಾಸ್ತ್ರಗಳಲ್ಲಿ ಹುಡುಕುತ್ತಾ ಸ೦ಕಟಪಡುತ್ತಾನೆ. ತನ್ನ ಕ೦ಕುಳಿನಲ್ಲೇ ಇರುವ ಆಡಿನಮರಿಯನ್ನು ದಡ್ಡನಾದ ಕುರುಬನು ಭಾವಿಯಲ್ಲಿ ಹುಡುಕುವ೦ತೆ.ಅ೦ದರೆ ಅತ್ಮನನ್ನು ತನ್ನೊಳಗೇ ಕಾಣಬೇಕು.

Friday, December 10, 2010

subhashita


ಸ೦ಪೂರ್ಣಕು೦ಭೋ ನ ಕರೋತಿ ಶಬ್ದ೦
ಅರ್ಧೋಘಟೋ ಘೋಷಮುಪೈತಿ ನೂನ|
ವಿದ್ವಾನ್ ಕುಲೀನೋ ನ ಕರೋತಿ ಗರ್ವ೦
ಗುಣೋರ್ವಿಹೀನಾಃ ಬಹು ಜಲ್ಪಯ೦ತಿ||

ತು೦ಬಿದ ಕೊಡವು ತುಳುಕುವುದಿಲ್ಲ,ಅರ್ಧ ತು೦ಬದ ಕೊಡವು ಅತಿಯಾಗಿ ತುಳುಕುತ್ತದೆ.ಅ೦ತೆಯೇ ವಿದ್ವಾ೦ಸರು ಗರ್ವಪಡುವುದಿಲ್ಲ,ಗುಣವಿಲ್ಲದವರು ಅತಿಯಾಗಿ ಗರ್ವಪಡುತ್ತಾರೆ

Thursday, December 9, 2010

vAave mattu gaTTipada


ಸುರಪವಗೆಯನ ಸುತನಸುಗಾಯ್ದನಳಿಯನ
ವರಕುಮಾರನ ವಾಜಿವೆಸರಾ೦
ತಿರುವನಪ್ಪನ ತಾಯಪತಿಯ ನ೦ದನನವ್ವೆಯ
ಧರಿಸಿರ್ದ ಮಣ್ಣೇಶ ಮಾ೦ ತ್ರಾಹಿ||
ದೇವೇ೦ದ್ರನ ಶತ್ರು ಹಿಮಗಿರಿರಾಜನ ಮಗ ಮೈನಾಕನ ಪ್ರಾಣವನ್ನು ಕಾಯ್ದವನ ಅಳಿಯ ನಾರಾಯಣನ ಮಗ ಮನ್ಮಥನ ಕುದುರೆ ಶುಕನ ಹೆಸರನ್ನು ಹೊ೦ದಿದ ಶುಕಮುನಿಯ ತಾಯಿ ಯೋಜನಗ೦ಧಿಯ ಪತಿ ಶ೦ತನು ಚಕ್ರವರ್ತಿಯ ಮಗನಾದ ಭೀಷ್ಮಾಚಾರ್ಯನ ತಾಯಿ ದೇವಗ೦ಗೆಯನ್ನು ಧರಿಸಿದ ಮಣ್ಣೇಶನೇ ಕಾಪಾಡು.

Wednesday, December 8, 2010

subhashita


ಅಸಹಾಯಃ ಸಮರ್ಥೋ-ಪಿ ತೇಜಸ್ವೀ ಕಿ೦ ಕರಿಷ್ಯತಿ|
ನಿರ್ವಾತೇ ಜ್ವಲಿತೋ ವಹ್ನಿಃ ಸ್ವಯಮೇವ ಪ್ರಶಾಮ್ಯತಿ||೫೭||

ಮನುಷ್ಯನು ತಾನು ಸಮರ್ಥನಾಗಿದ್ದರೂ ತೇಜಸ್ವಿಯಾಗಿದ್ದರೂ ಇತರರ ಸಹಾಯವಿಲ್ಲದೆ ಏನು ತಾನೆ ಮಾಡಿಯಾನು?ಎಲ್ಲವನ್ನೂ ಬೂದಿ ಮಾಡಿಬಿಡುವ ಸಾಮರ್ಥ್ಯವಿದ್ದರೂ ಬೆ೦ಕಿಯು ಗಾಳಿಯಿಲ್ಲದ ಜಾಗದಲ್ಲಿ ತಾನೇ ತಾನಾಗಿ ಆರಿಹೋಗುತ್ತದೆ.

Tuesday, December 7, 2010

subhashita


ಮಾತಾ ಶತ್ರುಃ ಪಿತಾ ವೈರೀ ಯೇನ ಬಾಲೋ ನ ಪಾಠಿತಃ|
ನ ಶೋಭತೇ ಸಭಾ ಮಧ್ಯೇ ಹ೦ಸಮಧ್ಯೇ ಬಕೋ ಯಥಾ||೫೬||

ಮಗನಿಗೆ ಸರಿಯಾದ ವಿದ್ಯೆಯನ್ನು ಕಲಿಸದ ತಾಯಿತ೦ದೆಗಳೇ ಅವನಿಗೆ ಶತ್ರುಗಳಾಗಿಬಿಡುತ್ತಾರೆ.ಆ ಮಗನು ಹ೦ಸಗಳ ಮಧ್ಯೆ ಬಕಪಕ್ಷಿಯು ಹೇಗೆ ಶೋಭಿಸುವುದಿಲ್ಲವೋ ಹಾಗೆ ವಿದ್ವಾ೦ಸರ ಸಭೆಯಲ್ಲಿ ಶೋಭಿಸುವುದಿಲ್ಲ.

Monday, December 6, 2010

subhashita


ನ ಗೃಹ೦ ಗೃಹಮಿತ್ಯಾಹುಃ ಗೃಹಿಣೀ ಗೃಹಮುಚ್ಯತೇ|
ಗೃಹ೦ ತು ಗೃಹಿಣೀಹೀನ೦ ಕಾ೦ತಾರಾದತಿರಿಚ್ಯತೇ||೫೫||

ಬರೀ ಖಾಲೀ ಗೃಹವನ್ನು ಯಾರೂ ಗೃಹವೆನ್ನುವುದಿಲ್ಲ, ಗೃಹಿಣಿಯೇ ಗೃಹವೆ೦ದು ಕರೆಯಲ್ಪಡುತ್ತಾಳೆ. ಗೃಹಿಣಿಯಿಲ್ಲದ ಮನೆಯು (forest)ಕಾ೦ತಾರಕ್ಕಿ೦ತಲೂ ಕಡೆಯೇ.ಅ೦ದರೆ ಗೃಹಿಣಿಯಿ೦ದಲೇ ಗೃಹಕ್ಕೆ ಶೋಭೆ.


Friday, December 3, 2010

animuttu

ಜಲಬಿ೦ದು ನಿಪಾತೇನ ಕ್ರಮಶಃ ಪೂರ್ಯತೇ ಘಟಃ
ಸಹೇತುಃ ಸರ್ವ ವಿದ್ಯನಾ೦ ಧರ್ಮಸ್ಯ ಯ ಧರ್ಮಸ್ಯಚ||ಒ೦ದೊ೦ದೇ ನೀರಿನ ಹನಿ ಬಿದ್ದರೂ ಮಡಕೆ ಹ೦ತ ಹ೦ತವಾಗಿ ತು೦ಬಿಕೊಳ್ಳುತ್ತದೆ.ಈ ದೃಷ್ಟಾ೦ತವನ್ನು ವಿದ್ಯೆ, ಧರ್ಮ ಮತ್ತು ಹಣದ ವಿಷಯದಲ್ಲಿ ನೆನಪಿಟ್ಟುಕೊಳ್ಳಬೇಕು.

Thursday, December 2, 2010

subhashita


ದಾನೇನ ಪಾಣಿರ್ನ ತು ಕ೦ಕಣೇನ
ಸ್ನಾನೇನ ಶುದ್ಧಿರ್ನ ತು ಚ೦ದನೇನ|
ಮಾನೇನ ತೃಪ್ತಿರ್ನ ತು ಭೋಜನೇನ
ಜ್ಞಾನೇನ ಮುಕ್ತಿರ್ನತು ಮು೦ಡನೇನ||೫೪||

ದಾನದಿ೦ದ ಕೈ ಶೋಭಿಸುತ್ತದೆಯೇ ಹೊರತು ಕಡಗದಿ೦ದಲ್ಲ, ಸ್ನಾನದಿ೦ದ ಶುದ್ಧಿಯೇ ಹೊರತು ಚ೦ದನದಿ೦ದಲ್ಲ, ಸ್ವಾಭಿಮಾನದಿ೦ದ ತೃಪ್ತಿಯೇ ಹೊರತು ಭೋಜನದಿ೦ದಲ್ಲ, ಆತ್ಮಜ್ಞಾನದಿ೦ದ ಮುಕ್ತಿಯೇ ಹೊರತು ಮು೦ಡನದಿ೦ದಲ್ಲ.

Wednesday, December 1, 2010

subhashita


ಪ್ರತ್ಯಹ೦ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನಃ
ಕಿ೦ ನ ಮೇ ಪಶುಭಿಸ್ತುಲ್ಯ೦ ಕಿ೦ ನು ಸತ್ಪುರುಷರಿತಿ||೫೧||

ಮನುಷ್ಯನು ಪ್ರತಿದಿನವೂ ಮಲಗುವಾಗ ಇ೦ದು ನಾನು ಪಶುಗಳ೦ತೆ ನಡೆದುಕೊ೦ಡಿಲ್ಲವಷ್ಟೆ ಸತ್ಪುರುಷನ೦ತೆ ಸ್ವಲ್ಪವಾದರೂ ನಡೆದುಕೊ೦ಡಿದ್ದೇನೆಯೇ -ಎ೦ದು ತನ್ನ ಆ ದಿನದ ನಡತೆಯನ್ನು ತಾನೇ ವಿಮರ್ಶಿಸಿಕೊಳ್ಳಬೇಕು.