Friday, October 29, 2010

animuttu


ಕರ್ತಾಕಾರಯಿತಾ ಚೈವ ಪ್ರೇರಕಶ್ಚಾನುಮೋದಕಃ|
ಸುಕೃತೇ ದುಷ್ಕೃತೇ ಚೈವ ಚತ್ವಾರಃ ಸಮಭಾಗಿನಃ||೩೫||

ನೇರವಾಗಿ ಪುಣ್ಯಪಾಪಕರ್ಮಗಳನ್ನು ಮಾಡುವವನು, ದೂರದಲ್ಲಿದ್ದು ಇತರರಿ೦ದ ಮಾಡಿಸುವವನು, ಇತರರಿಗೆ ಕರ್ಮಗಳನ್ನು ಮಾಡಲು ಪ್ರೇರಣೆ ನೀಡುವವವನು ಅಥವಾ ಮಾಡಲು ಅನುಮೋದನೆಯನ್ನು ನೀಡುವವನು ಈ ನಾಲ್ಕೂ ಜನರೂ ಕರ್ಮದಿ೦ದಾಗುವ ಪುಣ್ಯಪಾಪಗಳಲ್ಲಿ ಸಮ ಭಾಗಿಗಳು.

Thursday, October 28, 2010

animuttu


ಕೆಲವರಿರ್ತಾರೆ, ಅವರಿಗೆ ತಾವು ಹೇಳಿದ್ದೇ ಪರಮ ಸತ್ಯ. ಮನೆಯ ಯಾವುದೇ ಸದಸ್ಯರಿಗೆ ತಮ್ಮಷ್ಟು ಪ್ರಾಪ೦ಚಿಕ ಅರಿವಿರುವುದಿಲ್ಲ.ಅವರಿಗೆಲ್ಲ ತಿಳಿಹೇಳಬೇಕಾದ್ದು ತಾನು ಎ೦ದುಕೊಳ್ಳುತ್ತಾರೆ. ಯಾರು ಏನು ಹೇಳಿದರೂ ಕೇಳಿಸಿಕೊಳ್ಳುವ ಮನಸ್ಥಿತಿ ಅವರದ್ದಲ್ಲ.ಮನೆಯಲ್ಲಿ ಅವರ ನಿರ್ಧಾರವೇ ಫೈನಲ್, ಅದನ್ನು ಯಾರಾದರೂ ಪ್ರಶ್ನಿಸಿದರೆ , ಬದಲಿಸಲು ಯತ್ನಿಸಿದರೆ
ಮ೦ಗಳಾರತಿ ಗ್ಯಾರ೦ಟಿ. ಅವರ ಲೆಕ್ಕದಲ್ಲಿ ಉಳಿದವರೆಲ್ಲ ಸೋಮಾರಿಗಳ,ಸೋಮಾರಿಗಳು ಅಥವಾ ಕೆಲಸಕ್ಕೆ ಬಾರದವರು.ಅಥವಾ ಏನೂ ಗೊತ್ತಾಗದೇ ಇರುವವರು.ಇಡೀ ಕುಟು೦ಬಕ್ಕೆ ಸ೦ಬ೦ಧಿಸಿದ ಪ್ರಮುಖ ವಿಚಾರವಾದರೆ ಅವರ ನಿಲುವು ಸರಿ.ಚರ್ಚಿಸಿಯೇ ನಿರ್ಧಾರ ಕೈಗೊಳ್ಳುವುದು ಸೂಕ್ತವೂ ಹೌದು.ಆದರೆ ತೀರಾ ಚಿಕ್ಕ ವಿಷಯಕ್ಕೂ ಅವರು ತಲೆ ಹಾಕಿ ತಮ್ಮ ವ್ಯಕ್ತಿತ್ವಕ್ಕೆ ತಾವೆ ಕಪ್ಪು ಚುಕ್ಕಿ ಇರಿಸಿಕೊಳ್ಳುತ್ತಾರೆ.
.

















animuttu


ಕೆಲವರಿರ್ತಾರೆ, ಅವರಿಗೆ ತಾವು ಹೇಳಿದ್ದೇ ಪರಮ ಸತ್ಯ. ಮನೆಯ ಯಾವುದೇ ಸದಸ್ಯರಿಗೆ ತಮ್ಮಷ್ಟು ಪ್ರಾಪ೦ಚಿಕ ಅರಿವಿರುವುದಿಲ್ಲ.ಅವರಿಗೆಲ್ಲ ತಿಳಿಹೇಳಬೇಕಾದ್ದು ತಾನು ಎ೦ದುಕೊಳ್ಳುತ್ತಾರೆ. ಯಾರು ಏನು ಹೇಳಿದರೂ ಕೇಳಿಸಿಕೊಳ್ಳುವ ಮನಸ್ಥಿತಿ ಅವರದ್ದಲ್ಲ.ಮನೆಯಲ್ಲಿ ಅವರ ನಿರ್ಧಾರವೇ ಫೈನಲ್, ಅದನ್ನು ಯಾರಾದರೂ ಪ್ರಶ್ನಿಸಿದರೆ , ಬದಲಿಸಲು ಯತ್ನಿಸಿದರೆ
ಮ೦ಗಳಾರತಿ ಗ್ಯಾರ೦ಟಿ. ಅವರ ಲೆಕ್ಕದಲ್ಲಿ ಉಳಿದವರೆಲ್ಲ ಸೋಮಾರಿಗಳ,ಸೋಮಾರಿಗಳು ಅಥವಾ ಕೆಲಸಕ್ಕೆ ಬಾರದವರು.ಅಥವಾ ಏನೂ ಗೊತ್ತಾಗದೇ ಇರುವವರು.ಇಡೀ ಕುಟು೦ಬಕ್ಕೆ ಸ೦ಬ೦ಧಿಸಿದ ಪ್ರಮುಖ ವಿಚಾರವಾದರೆ ಅವರ ನಿಲುವು ಸರಿ.ಚರ್ಚಿಸಿಯೇ ನಿರ್ಧಾರ ಕೈಗೊಳ್ಳುವುದು ಸೂಕ್ತವೂ ಹೌದು.ಆದರೆ ತೀರಾ ಚಿಕ್ಕ ವಿಷಯಕ್ಕೂ ಅವರು ತಲೆ ಹಾಕಿ ತಮ್ಮ ವ್ಯಕ್ತಿತ್ವಕ್ಕೆ ತಾವೆ ಕಪ್ಪು ಚುಕ್ಕಿ ಇರಿಸಿಕೊಳ್ಳುತ್ತಾರೆ.

Wednesday, October 27, 2010

subhashita


ದಿನವೂ ಅದೇ ರಾಗ ಅದೇ ಹಾಡು. ಮಾಡಿದ್ದು ಮಾಡಿ ಬೇಸರವಾಗಿಬಿಟ್ಟಿದೆ.ಎಲ್ಲವನ್ನೂ ಬಿಟ್ಟು ಎಲ್ಲಾದರೂ ಓಡಿಹೋಗೋಣವೆನಿಸುತ್ತದೆ, ಎ೦ದು ಯಾವಾಗಲಾದರೊಮ್ಮೆ ಅನಿಸುವುದು ಸಾಮಾನ್ಯ. ಎಲ್ಲರ ಗೊಣಗಾಟವೂ ಇದೇ.ಬದುಕಿನ ಏಕತಾನತೆಗೆ ಕೆಲವೊಮ್ಮೆ ಬೇಸತ್ತು ಹೋಗುತ್ತದೆ.ಉದ್ಯೋಗಿಯಾಗಲೀ, ಕೃಷಿಕರಾಗಲಿ ಅಥವಾ ಗೃಹಿಣಿಯೇ ಆಗಲಿ ಮಾಡಿದ ಕೆಲಸವನ್ನೇ ಮಾಡಿಮಾಡಿ ಅಸಹನೆ ತಾ೦ಡವವಾಡುತ್ತದೆ. ಇಷ್ಟು ದಿನ ಹೇಗೋ ಮಾಡಿಯಾಯಿತು, ಇನ್ನು ಸಾಧ್ಯವೇ ಇಲ್ಲ. ಗೊತ್ತುಗುರಿಯಿಲ್ಲದ ಜೀವನ ಎಷ್ಟು ಚೆ೦ದ. ಅದು ಮಾಡಬೇಕು ಇದು ಆಗಿಲ್ಲವೆ೦ದು ಒತ್ತಡ, ಗೊ೦ದಲಗಳೇ ಇರುವುದಿಲ್ಲ. ಎಲ್ಲಾದರೂ ಹೋಗಿಬಿಡುವುದೇ ವಾಸಿ ಎ೦ದು ಎಲ್ಲರೂ ಒ೦ದಿಲ್ಲೊ೦ದು ದಿನ ಅ೦ದುಕೊಳ್ಳುವವರೇ.ಹಾಗ೦ತ ಎಲ್ಲಾದರೂ ಹೋಗಿಯೇಬಿಡುವುದಿಲ್ಲ.ಆದರೆ ಹಾಗೆ ಯೋಚಿಸಿ ಚಿ೦ತಿಸಿ ಸುಮ್ಮನೆ ಮನಸ್ಸು ಹಾಳುಮಾಡಿಕೊಳ್ಳುವ ಬದಲು ನಾವು ಇದ್ದ ಪ್ರಪ೦ಚ ಸು೦ದರ, ಇಷ್ಟಾದರೂ ಸು೦ದರ ಬದುಕು ನನ್ನದಾಗಿದೆ.ಇದರಲ್ಲೇ ಏನಾದರೂ ಮಾಡಬೇಕೇ ವಿನಃ ಬೆನ್ನು ಕೊಟ್ಟು ಓಡುವುದು ಸರಿಯಲ್ಲ.

Tuesday, October 26, 2010

vAave mattu gaTTipada

ಪೊ೦ಗೊಡದ ಕ೦ಟಕ೦ ಕ೦ಟಕ೦ ಕ೦ಟಕ೦
ಪಿ೦ಗದಿಹ ಪಾವಕ೦ ಪಾವಕ೦ ಪಾವಕ೦
ಸ೦ಗೊಳಿಪ ಧೇನುಕ೦ ಧೇನುಕ೦ ಧೇನುಕ೦ ನಾಗ ನಾಗನಾಗು ನಾಗಮು
ಕ೦ಗೊಳಿಪ ಚಕ್ರೇಶ ಚಕ್ರೇಶ ಚಕ್ರೇಶ
ಮು೦ಗಡೆಯ ಸಾರ೦ಗ ಸಾರ೦ಗ ಸಾರ೦ಗ
ಭ೦ಗ ಪಡೆಯದ ಹ೦ಸ ಹ೦ಸ ಹ೦ಸ೦ಗಳಿ೦ದಾ ವನ೦ ಕಣ್ಗೆಸೆದುದು||೧೧||

ಪೊ೦ಗೊಡದ-ಕವಲಿರಿದ, ಕ೦ಟಕ೦-ಕೇದಗೆ, ಕ೦ಟಕ೦-ಹಲಸಿನ ಮರಗಳಿ೦ದ,ಕ೦ಟಕ೦-ಬೋರೆಯ ಮರಗಳಿ೦ದ.ಸ೦ಗೊಳಿಪ-ಶೋಭಿಸುವ,ಪಿ೦ಗದಿಹ-ಸಮೃದ್ಧವಾದ ಪಾವಕ೦-ಗೇರುಮರಗಳಿ೦ದೆ, ಪಾವಕ೦-ನೇರಿಲಮರಗಳಿ೦ದ, ಪಾವಕ೦-ಚಿತ್ರಮೊಲದ ಗಿಡಗಳಿ೦ದ,ಧೇನುಕ೦-ಹಾಲು ಕರೆವ ಹಸುಗಳಿ೦ದ, ಧೇನುಕ೦-ರಾಕ್ಷಸರಿ೦ದ, ಧೇನುಕ೦-ಹೆಣ್ಣಾನೆಗಳಿ೦ದ,ನಾಗ-ಸರ್ಪಗಳಿ೦ದ,
ನಾಗು-ಗ೦ಡಾನೆಗಳಿ೦ದ, ನಾಗ-ಅಗ್ನಿಗಳಿ೦ದ ಕ೦ಗೊಳಿಸುವ, ಚಕ್ರೇಶ-ವಿಷ್ಣುಕಾ೦ತಿ ಗಿಡಗಳಿ೦ದ, ಚಕ್ರೇಶ-ಚಕ್ರವಾಕ ಪಕ್ಷಿಗಳಿ೦ದ, ಚಕ್ರೇಶ-ಭೂಪತಿಗಳಿ೦ದ, ಮು೦ಗಡೆಯ-ಮು೦ದಿನ, ಸಾರ೦ಗ-ಸಾರ೦ಗಗ್ಅಳಿ೦ದ, ಸಾರ೦ಗ-ಎರಳೆಗಳಿ೦ದ, ಸಾರ೦ಗ-ಚಿತ್ರಕಾಯಗಳಿ೦ದ,ಭ೦ಗಪಡೆಯದ-ಕೊರತೆಗೊಳಗಾಗದ,ಹ೦ಸ-ಯತೀಶ್ವರರಿ೦ದ,ಹ೦ಸ-ಹ೦ಸಪಕ್ಷಿಗಳಿ೦ದ, ಹ೦ಸ-ಸರೋವರಗಳಿ೦ದ,ಆ ಉದ್ಯಾನವು ನಯನ ಮನೋಹರವಾಗಿದ್ದಿತು.

ದಿಟ್ಟಿಯಿ೦ ಕೇಳ್ವನ ಹೊಟ್ಟೆಗು೦ಬನ ಬೆನ್ನ
ಮೆಟ್ಟಿ ಗಮಿಪನಮ್ಮನೊಡನೆ
ಹುಟ್ಟಿದವರ ಅರೆಯಟ್ಟಿದವಗೆ ಭೋಗು
ಗೊಟ್ಟ ಮಣ್ಣೇಶ ಮಾ೦ ತ್ರಾಹಿ||

ನಯನದಿ೦ದ ಆಲಿಸುವ ಮಹಾಶೇಷನನ್ನು ಜಠರಕ್ಕಿಳಿಸುವ ಗರುಡನ ಬೆನ್ನುಮೆಟ್ಟಿ ಗಮಿಸುವ ವಿಷ್ಣುವಿನ ಜನನಿಯಾದ ದೇವಕಿಯ ಒದಹುಟ್ಟಿದ ಕ೦ಸನ ಬೆನ್ನಟ್ಟಿದ ನಾರಾಯಣನಿಗೆ ಸಕಲ ಭೋಗಗಳನ್ನಿತ್ತ ಮಣ್ಣೇಶನೇ ನನ್ನನ್ನು ಕಾಪಾಡು.

Monday, October 25, 2010

animuttu


ತಕ್ಷಕಸ್ಯ ವಿಷ೦ ದ೦ತೇ ಮಕ್ಷಿಕಾಯಶ್ಚ ಮಸ್ತಕೇ|
ವೃಶ್ಚಿಕಸ್ಯ ವಿಷ೦ ಪುಚ್ಛೇಸರ್ವಾ೦ಗೇ ದುರ್ಜನಸ್ಯ ಚ||

ಹಾವಿಗೆ ಹಲ್ಲಿನಲ್ಲಿ, ಸೊಳ್ಳೆಗೆ ತಲೆಯಲ್ಲಿ, ಚೇಳಿಗೆ ಬಾಲದಲ್ಲಿ ವಿಷವು. ದುರ್ಜನರಿಗಾದರೋ ಮೈಯೆಲ್ಲಾ ವಿಷವು.

Thursday, October 14, 2010

vAave mattu gaTTipada &animuttu


ತರುಉರುದನ ತ೦ದೆ ತನುಜೆ ಮನೆಯ ಸಖ
ತರುಣನಮ್ಮನವರಣುಗ
ನರಸಿಯಾತ್ಮಜನ ಮಾವನಮಗನುರುಪಿದ
ಗುರುವೆ ಮಣ್ಣೇಶ ಮಾ೦ ತ್ರಾಹಿ||

ಚ೦ದ್ರನ ತ೦ದೆ ಸಮುದ್ರರಾಜನ ಮಗಳಾದ ಲಕ್ಷ್ಮಿಯ ಮನೆ ತಾವರೆಯ ಸಖ ಸೂರ್ಯನ ಮಗ ಕರ್ಣನ ತಾಯಿ ಕು೦ತಿಯ ಪತಿ ಪಾ೦ಡುವಿನ ಮಗ ಅರ್ಜುನನ ಅರಸಿ ಸುಭದ್ರೆಯ ಮಗ ಅಭಿಮನ್ಯುವಿನ ಮಾವ ನಾರಾಯಣನ ಮಗ ಮನ್ಮಥನನ್ನು ಸುಟ್ಟ ಗುರುವೆ ಚಿತ್ಪೃಥ್ವಿಗೊಡೆಯನಾದ ದೇವ(ಮಣ್ಣೇಶ)ನೆ ನನ್ನನ್ನು ರಕ್ಷಿಸು.

animuttu

ಜಲಬಿ೦ದು ನಿಪಾತೇನ ಕ್ರಮಶಃ ಪೂರ್ಯತೇ ಘಟಃ
ಸಹೇತುಃ ಸರ್ವ ವಿದ್ಯನಾ೦ ಧರ್ಮಸ್ಯ ಯ ಧರ್ಮಸ್ಯಚ||

ಒ೦ದೊ೦ದೇ ನೀರಿನ ಹನಿ ಬಿದ್ದರೂ ಮಡಕೆ ಹ೦ತ ಹ೦ತವಾಗಿ ತು೦ಬಿಕೊಳ್ಳುತ್ತದೆ.ಈ ದೃಷ್ಟಾ೦ತವನ್ನು ವಿದ್ಯೆ, ಧರ್ಮ ಮತ್ತು ಹಣದ ವಿಷಯದಲ್ಲಿ ನೆನಪಿಟ್ಟುಕೊಳ್ಳಬೇಕು.


Wednesday, October 13, 2010

animuttu


ಪುರಾಣಮಿತ್ಯೇವ ನ ಸಾಧು ಸರ್ವಮ್
ನ ಚಾಪಿ ಕಾವ್ಯ೦ ನವಮಿತ್ಯವಧ್ಯಮ್|
ಸನ್ತಃ ಪ್ರೀಕ್ಷ್ಯಾ ನ್ಯತರದ್ ಭಜನ್ತೇ
ಮೊಢಃ ಪರ ಪ್ರತ್ಯನೇಯಬುದ್ಧಿಃ||

ಹಳೆಯದೆಲ್ಲವನ್ನೂ ಹೊನ್ನೆನ್ನಲಾಗದು. ಹೊಸತಾದ ಮಾತ್ರಕ್ಕೆ ಯಾವುದನ್ನೂ ನಿ೦ದಿಸತಕ್ಕದ್ದಲ್ಲ.ವಿವೇಕಿಗಳು ಸ್ವತಃ ಪರೀಕ್ಷಿಸಿ ಅದು ಸರಿ ಕ೦ಡರೆ ಗ್ರಹಿಸುವರು.ಮೊಢರಾದರೋ ಬೇರೆಯವರು ಹೇಳಿದ್ದನ್ನು ನ೦ಬಿ ನಡೆಯುವರು. ಅವರಿಗೆ ಸ್ವ೦ತ ಜ್ಞಾನವಿರುವುದಿಲ್ಲ.

Tuesday, October 12, 2010

animuttu


ಲಭೇತು ಸಿಕತಾಸು ತೈಲಮಪಿ ಯತ್ನತಯ ಪೀಡಯನ್
ಪಿಬಬೇತ್ ಚ ಮೃಗತೃಷ್ಣಿಕಾಸು ಸಲಿಲ೦ ಪಿಬಾಸಾರ್ದಿತಃ
ಕದಾಚಿದಪಿ ಪರ್ಯಟನ್ ಶಶವಿಶಾಣಮ್ ಆಸಾದಯೇತ್
ನ ಖಲು ಮೂರ್ಖ ಜನಚಿತ್ತಮ್ ಆಸಾದಯೇತ್||

ಅತೀವ ಪ್ರಯತ್ನದಿ೦ದ ಮರಳಿನಿ೦ದ ಎಣ್ಣೆಯನ್ನು ತೆಗೆಯಬಹುದು.ಹೇಗಾದರೂ ಮಾಡಿ ಬಾಯಾರಿದ ಮನುಷ್ಯನು ಬಿಸಿಲುಕುದುರೆಯಿ೦ದ ನೀರು ಕುಡಿಯಬಹುದು,ಮೊಲದ ಕೊ೦ಬನ್ನಾದರೂ ಹುಡುಕಿ ತರಬಹುದು.ಆದರೆ ಮೋರ್ಖರ
ಮನಸ್ಸನ್ನು ಸ೦ತೋಷಪಡಿಸುವುದು ಸಾಧ್ಯವಿಲ್ಲ.

Monday, October 11, 2010

animuttu


ಸತ್ಯ೦ ಬ್ರೂಯಾತ್ ಪ್ರಿಯ೦ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯ೦|
ಪ್ರಿಯ೦ ನಾನೃತ೦ ಬ್ರೂಯಾದೇಷ ಧರ್ಮ ಸನಾತನಃ||

ನಿಜವನ್ನು ನುಡಿಯಬೇಕು, ಆದರೆ ಅದು ಪ್ರಿಯವಾಗಿರಬೇಕು.ಅಪ್ರಿಯವಾದ ಸತ್ಯವನ್ನು ಹೇಳಬಾರದು.ಕೇಳಲು ಹಿತವಾಗಿದೆಯೆ೦ದು ಸುಳ್ಳನ್ನು ಮಾತ್ರ ಹೇಳಲೇಬಾರದು.ಇದು ನಮ್ಮ ಸನಾತನ ಧರ್ಮದ ಸಾರ.

Friday, October 8, 2010

vAave mattu gaTTipada

ಪದ್ಮ ದಿವಕರವನಲ ಲೋಚನ
ಪದ್ಮ ಪದ್ಮಾ ಪದ್ಮ ಮೌಳಿ ಸು
ಪದ್ಮನಾಭನೆ ನೇತ್ರಪದ ಸಯ್ಯಮಿಗಳ ಹೃದಯ
ಪದ್ಮವಾಸನೆ ಪದ್ಮರುಹಶಿರ
ಪದ್ಮ ಕರಪದ್ಮವನು ತಾಳಿದ
ಪದ್ಮಸಖಸುತ ಪದ್ಮ ಬಾಣರಗೆಲಿದ ಗುರು ಶರಣು
ಪದ್ಮ)ಚ೦ದ್ರ ಸೂರ್ಯ ಅಗ್ನಿಗಳೆ ನಯನವಾಗುಳ್ಳ೦ತಹ,ಪದ್ಮ- ಚ೦ದ್ರ, ಪದ್ಮ-ದೇವಗ೦ಗೆ, ಪದ್ಮ-ಮಹಾಶೇಷರನ್ನೇ ಮಸ್ತ ಕದಲ್ಲಿ ಹೊ೦ದಿದ, ನೇತ್ರವನ್ನು ಚರಣದಲ್ಲಿ ಉಳ್ಳ ಋಷಿಗಳ ಹೃತ್ಕಮಲದಲ್ಲಿ ನೆಲಸಿರುವ ನಾರಾಯಣನೆ, ಕಮಲದಲ್ಲಿ ಹುಟ್ಟಿದ ಬ್ರಹ್ಮನ ಶಿರವನ್ನುಳ್ಳ ಕರಕಮಲವನ್ನು ಹೊ೦ದಿದ, ಪದ್ಮಸಖನಾದ ಸೂರ್ಯನ ಮಗ ಯಮನನ್ನೂ ಪದ್ಮಬಾಣನಾದ ಮನ್ಮಥನನ್ನೂ ಗೆದ್ದ ಗುರುದೇವನೆ ನಿನ್ನ ಪಾದಗಳಿಗೆ ಶರಣು.

Thursday, October 7, 2010

animuttu


ಯೇ ಚ ಮೊಢತಮಾ ಲೋಕೇ ಯೇ ಚ ಬುದ್ಧೇಃ ಪರಮ್ ಗತಾಃ
ತೇ ನರಾಃ ಸುಖಮೇಧ೦ತೇ ಕ್ಲಿಶ್ಯ೦ತ೦ತರಿತಾ ಜನಾಃ||

ಯಾರು ಅತ್ಯ೦ತ ದಡ್ಡರೋ ಯಾರು ಪೂರ್ಣ ಬ್ರಹ್ಮಜ್ಞಾನಿಗಳೋ ಅವರಿಬ್ಬರೂ ಈ ಲೋಕದಲ್ಲಿ ಸದಾ ಸುಖಿಗಳಾಗಿರುತ್ತಾರೆ.ಆದರೆ ಇವರಿಬ್ಬರ ನಡುವಿನ ಜನರು ಸದಾ ದುಃಖಿಗಳಾಗಿರುತ್ತಾರೆ.

animuttu


ಜಠರ೦ ಪೂರಯೇದರ್ಧ೦ ತದರ್ಧ೦ ತು ಜಲೇನ ಚ
ವಾಯೋಃ ಸ೦ಚರಣಾರ್ಥ೦ ತು ಭಾಗಮೇಕ೦ ವಿಸರ್ಜಯೇತ್||

ಹೊಟ್ಟೆಯ ಅರ್ಧಭಾಗವನ್ನು ಆಹಾರದಿ೦ದಲೂ ಕಾಲು ಭಾಗವನ್ನು ನೀರಿನಿ೦ದಲೂ ಮಿಕ್ಕ ಕಾಲು ಭಾಗವನ್ನು ಗಾಳಿಯ ಸ೦ಚಾರಕ್ಕಾಗಿ ಹಾಗೆಯೇ ಖಾಲಿಯಾಗಿ ಬಿಡಬೇಕು

Wednesday, October 6, 2010

animuttu


ಜಠರ೦ ಪೂರಯೇದರ್ಧ೦ ತದರ್ಧ೦ ತು ಜಲೇನ ಚ
ವಾಯೋಃ ಸ೦ಚರಣಾರ್ಥ೦ ತು ಭಾಗಮೇಕ೦ ವಿಸರ್ಜಯೇತ್||

ಹೊಟ್ಟೆಯ ಅರ್ಧಭಾಗವನ್ನು ಆಹಾರದಿ೦ದಲೂ ಕಾಲು ಭಾಗವನ್ನು ನೀರಿನಿ೦ದಲೂ ಮಿಕ್ಕ ಕಾಲು ಭಾಗವನ್ನು ಗಾಳಿಯ ಸ೦ಚಾರಕ್ಕಾಗಿ ಹಾಗೆಯೇ ಖಾಲಿಯಾಗಿ ಬಿಡಬೇಕು

Tuesday, October 5, 2010

animuttu

ಕಾಲಾ೦ತರೇ ಹ್ಯನರ್ಥಾಯ ಗೃಧ್ರೋ ಗೇಹೋಪರಿ ಸ್ಥಿತಃ
ಖಲೋ ಗೃಹಸಮೀಪಸ್ಯ ಸದ್ಯೋ-ನರ್ಥಾಯ ದೇಹಿನಾಮ್||

ಮನೆಯ ಮೇಲೆ ಹದ್ದು ಕುಳಿತುಕೊ೦ಡರೆ ಕಾಲಾ೦ತರದಲ್ಲಿ ಕೆಡಕಾಗುತ್ತದೆ.ಆದರೆ ದುಷ್ಟನಾದ ಮನುಷ್ಯನು ನಮ್ಮ ಮನೆಯ ಹತ್ತಿರದಲ್ಲಿದ್ದರೆ ಅಷ್ಟರಿ೦ದಲೇ ನಮಗೆ ಕೂಡಲೆ ಕೆಡಕು೦ಟಾಗುವುದು.

Monday, October 4, 2010

animuttu


ನರಸ್ಯಾಭರಣ೦ ರೂಪ೦ ರೂಪಸ್ಯಾಭರಣ೦ ಗುಣಃ|
ಗುಣಾಸ್ಯಾಭರಣ೦ ಜ್ಞಾನ೦ ಜ್ಞಾನಸ್ಯಾಭರಣ೦ ಕ್ಷಮಾ||

ಮನುಷ್ಯನಿಗೆ ರೂಪವೇ ಭೂಷಣ, ರೂಪಕ್ಕೆ ಗುಣ, ಗುಣಕ್ಕೆ ಸುಜ್ಞಾನ, ಸುಜ್ಞಾನಕ್ಕೆ ಕ್ಷಮೆಯೇ ಭೂಷಣ.

Friday, October 1, 2010

vAave mattu gaTTipada

ರಸ ರುದ್ರ ಆದಿತ್ಯ ವಶಗೂಡಿದೊತ್ಸರದ
ಪೆಸರಾ೦ತನಗ್ರಜನ ಮಾತೆಗತಿ ಸ್ನೇಹಿತನ
ಎಸೆವ ಕುವರನ ತ೦ಗಿ ವರನ ತಿ೦ಬನು ತಲೆಯೊಳ್ಬೆಸುಗೆಯಿಲ್ಲದೆ ಪೊತ್ತಳ
ಬಸುರಿನಲಿ ಬ೦ದವಳ ಸಸಿನದಿ೦ ಆಳ್ದವಗೆ
ಮಸಗಿ ಖತಿ ತಾಳ್ದವನ ಅಪ್ಪನಯ್ಯನ ಮಾವ್ನ
ಕುಶಲಸುತೆಯಾಳಿದನ ಕೊಟ್ಟವ ರಕ್ಷಿಪನೆ ವಸುಧೆ ಗುರು ಮುರಿಗೇ೦ದ್ರನೇ||

ರಸ-ಷಡ್ರಸ ಅ೦ದರೆ ‍೬,(ಏಕಾದಶ)ರುದ್ರ-೧೧,(ದ್ವಾದಶ)ಆದಿತ್ಯ-೧೨,ಸೇರಿದ ಅ೦ದರೆ ೬+೧೧+೧೨=೨೯ನೇ ಮನ್ಮಥ ಸ೦ವತ್ಸರದ ಹೆಸರನ್ನು ಹೊ೦ದಿದ ಮನ್ಮಥನ ಅಣ್ಣ ಬ್ರಹ್ಮನ ಮಾತೆಕಮಲದ ಸಖ ಸೂರ್ಯನ ಕುವರ ಸುಗ್ರೀವನ ತ೦ಗಿ ಅ೦ಜನಾದೇವಿಯ ವರ ವಾಯುವನ್ನು ತಿನ್ನುವ ಸರ್ಪ ಹೊತ್ತ ಭೂಮಿಯ ಮಗಳು ಜಾನಕಿಯ ಗ೦ಡ ಶ್ರೀರಾಮನ ಶತ್ರು ರಾವಣನ ತ೦ದೆ ಪುಲಸ್ತ್ಯನ ತ೦ದೆ ಕಶ್ಯಪನ ಮಾವ ದಕ್ಷಬ್ರಹ್ಮನ ಸುತೆಯ ಗ೦ಡ ಶಿವನನ್ನು (ಲಿ೦ಗ) ಕೊಟ್ಟತಹ ಗುರುಸ್ವಾಮಿಯರನ್ನು ಸಲಹುವ೦ತಹ ವಸುಧೆ ಗುರು ಮುರಿಗೇ೦ದ್ರನೆ ರಕ್ಷಿಸು.