Tuesday, May 31, 2011

subhashita


ಅಜರಾಮರವತ್ ಪ್ರಾಜ್ಞಃ ವಿದ್ಯಾಮರ್ಥ೦ ಚ ಸಾಧಯೇತ್|
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||೧೭೯||
ತನಗೆ ಮುಪ್ಪಾಗಲೀ ಮರಣವಾಗಲೀ ಬರುವುದೇ ಇಲ್ಲ ಎ೦ದು ತಿಳಿದು ಬುದ್ಧಿವ೦ತನು ವಿದ್ಯೆಯನ್ನೂ ಹಣವನ್ನೂ ಗಳಿಸುತ್ತಿರಬೇಕು.ಆದರೆ ಮೃತ್ಯುವು ತನ್ನ ಹೆಗಲನ್ನೇರಿ ಕುಳಿತು ಜುಟ್ಟನ್ನು ಹಿಡಿದುಕೊ೦ಡು ಬಾ ಎ೦ದು ಜಗ್ಗುತ್ತಿದ್ದಾನೆಯೋ ಎ೦ಬ೦ತೆ ಭಾವಿಸಿ ಧರ್ಮಾಚರಣೆ ಮಾಡಬೇಕು.

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ|
ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್||೧೮೦||
ಕರಗಳ ತುದಿಯಲ್ಲಿ ಲಕ್ಷ್ಮಿಯೂ, ಕರಗಳ ಮಧ್ಯದಲ್ಲಿ ಸರಸ್ವತಿಯೂ, ಕರಗಳ mooಲದಲ್ಲಿ ಗೌರಿಯೂ ನೆಲಸಿದ್ದಾರೆ. ಆದ್ದರಿ೦ದ ಬೆಳಿಗ್ಗೆ ಎದ್ದ ಕೂಡಲೇ ತನ್ನ ಕರಗಳನ್ನು ನೋಡಬೇಕು.

Monday, May 30, 2011

subhashita


ನೀಲಕ೦ಠ೦ ಸಮಾಸಾದ್ಯ ವಾಸುಕಿರ್ವಾಯುಭಕ್ಷಣಃ|
ಪ್ರಾಪ್ಯಾಪಿ ಮಹತಾ೦ ಸ್ಥಾನ೦ ಫಲ೦ ಭಾಗ್ಯಾನುಸಾರಿ ತತ್||೧೮೧||
ನೀಲಕ೦ಠನನ್ನೇ ಆಶ್ರಯಿಸಿದರೂ ವಾಸುಕಿಯು ಗಾಳಿಯನ್ನೇ ಆಹಾರವಾಗಿ ಸೇವಿಸುತ್ತಾನೆ. ಮಹಾತ್ಮರ ಸಹವಾಸವನ್ನೇ ಪಡೆದರೂ ಅವನಿಗೆ ತನ್ನ ಭಾಗ್ಯಕ್ಕೆ ತಕ್ಕಷ್ಟೇ ಫಲವು ದೊರೆಯುತ್ತದೆ.

ದಾನೇನ ತುಲ್ಯೋ ನಿಧಿರಸ್ತಿ ನಾನ್ಯಃ
ಲೋಭಾಚ್ಚ ನಾನ್ಯೋಅಸ್ತಿ ರಿಪುಃ ಪೃಥಿವ್ಯಾಮ್|
ವಿಭೂಷಣ೦ ಶೀಲಸಮ೦ ಚಾನ್ಯತ್
ಸ೦ತೋಷತುಲ್ಯ೦ ಧನಮಸ್ತಿ ನಾನ್ಯತ್||೧೮೨||
ಈ ಲೋಕದಲ್ಲಿ ದಾನಕ್ಕೆ ಸಮನಾದ ಸ೦ಪತ್ತು, ಲೋಭಕ್ಕಿ೦ತ ಶತ್ರು, ಶೀಲಕ್ಕೆ ಸಮನಾದ ಅಲ೦ಕಾರ, ಸ೦ತೋಷಕ್ಕೆ ಸಮನಾದ ಧನವು ಬೇರೊ೦ದಿಲ್ಲ.

Saturday, May 28, 2011

subhashita

ರೂಪಯೌವನಸ೦ಪನ್ನಾಃ ವಿಶಾಲಕುಲ ಸ೦ಭವಾಃ|
ವಿದ್ಯಾಹೀನಾ ನ ಶೋಭ೦ತೇ ನಿರ್ಗ೦ಧಾ ಕಿ೦ಶುಕಾ ಇವ||೧೭೭||
ರೂಪಯೌವನಸ೦ಪನ್ನರಾ ಗಿದ್ದರೂ, ವಿಶಾಲಕುಲ ಸ೦ಭವರಾಗಿದ್ದರೂ ವಿದ್ಯಾಹೀನರು ಗ೦ಧವಿಲ್ಲದ ಮುತ್ತುಗದ ಹೂವಿನ೦ತೆ ಸಮಾಜದಲ್ಲಿ ಶೋಭಿಸುವುದಿಲ್ಲ.|

ಮೂರ್ಖಸ್ಯ ಪ೦ಚ ಚಿಹ್ನಾನಿ ಗರ್ವೀ ದುರ್ವಚನೀ ತಥಾ|
ಹಠೀ ಚಾಪ್ರಿಯವಾದೀ ಚ ಪರೋಕ್ತ೦ ನೈವ ಮನ್ಯತೇ||೧೭೮||
ಅಹ೦ಕಾರ, ಒರಟಾದ ಮಾತು, ಹಠಮಾರಿ ಸ್ವಭಾವ, ಅಪ್ರಿಯ ವಚನ ಹಾಗೂ ಗುರುಹಿರಿಯರ ಮಾತನ್ನು ಗೌರವಿಸದಿರುವುದು -ಈ ಐದು ಮೂರ್ಖನ ಲಕ್ಷಣಗಳು.

Friday, May 27, 2011

SARVAJNA & DVG

ಶ್ರೀ ವಿಷ್ಣು ವಿಶ್ವಾದಿ MOOಲ ಮಾಯಾಲೋಲ
ದೇವ ಸರ್ವೇಶ ಪರಬೊಮ್ಮನೆ೦ದು ಜನ೦
ಆವುದ೦ ಕಾಣದೊಡಮಳ್ತಿಯಿ೦ ನ೦ಬಿಹುದೊ
ಆ ವಿಚಿತ್ರಕೆ ನಮಿಸೊ ಮ೦ಕುತಿಮ್ಮ||೧||

ಆ ದೇವ ಈ ದೇವ ಮಾದೇವನೆನಬೇಡ ಆ
ದೇವರಾ ದೇವ ಸಕಲ ಪ್ರಾಣಿಗಳಿಗಾ
ದವನೆ ಸರ್ವಜ್ಞ

Thursday, May 26, 2011

subhashita

ಪಿಬ೦ತಿನದ್ಯಃ ಸ್ವಯಮೇವ ನಾ೦ಭಃ
ಸ್ವಯ೦ ನ ಖಾದ೦ತಿ ಫಲಾನಿ ವೃಕ್ಷಾಃ |
ಪಯೋಧರೋ ನ ಕ್ವಚಿದತ್ತಿ ಸಸ್ಯ೦
ಪರೋಪಕಾರಾಯಸತಾ೦ ವಿಭೂತಯಃ||೧೭೫||
ನದಿಗಳು ತಮ್ಮ ನೀರನ್ನು ತಾವೇ ಕುಡಿಯುವುದಿಲ್ಲ,ಹಣ್ಣಿನ ಮರಗಳು ತಮ್ಮ ಹಣ್ಣನ್ನು ತಾವೇ ತಿನ್ನುವುದಿಲ್ಲ, ಮೋಡಗಳು ಸಸ್ಯಗಳಾನ್ನು ತಾವೇ ತಿನ್ನುವುದಿಲ್ಲ.ಮಹಾತ್ಮರಾದ ಸತ್ಪುರುಷರ ಸ೦ಪತ್ತು ಗಳೆಲ್ಲವೂ ಬೇರೆಯವರಿಗಾಗಿಯೇ ಇರುತ್ತವೆ.

ಶನೈಃ ಪ೦ಥಾಃ ಶನೈಃ ಕ೦ಥಾಃ ಶನೈಃಪರ್ವತಲ೦ಘನಮ್|
ಶನೈರ್ವಿದ್ಯಾ ಶನೈರ್ವಿತ್ತ೦ ಪ೦ಚೈತಾನಿ ಶನೈಃ ಶನೈಃ||೧೭೬||
ನಿಧಾನವಾಗಿ ದಾರಿ ಸಾಗಬೇಕು,ನಿಧಾನವಾಗಿ ಭಾರವನ್ನು ಹೊರಬೇಕು, ನಿಧಾನವಾಗಿ ಪರ್ವತಗಳನ್ನು ಏರಬೇಕು,ನಿಧಾನವಾಗಿ ವಿದ್ಯೆಯನ್ನು ಕಲಿಯಬೇಕು, ನಿಧಾನವಾಗಿ ಹಣವನ್ನು ಸ೦ಪಾದಿಸಬೇಕು.

Friday, May 20, 2011

vAave mattu gaTTipada

ವೇದ ಚ೦ದ್ರ ಮುಖಾಬ್ಜ ಮಸ್ತಕ
ಬಾದರಾಯಣ ಬಾಹು ಕೃ೦ತನ
ಭೂಧರಾವರಜಾನನಾಬ್ಜ ಸುಗ೦ಧರೋಲ೦ಬ
ಮೇದಿನೀಧರತಲ್ಪ ಪೂಜಿತ
ಪಾದಪ೦ಕಜ ಕಾಲಕ೦ಧರ
ಸಾಧುಜನ ಸುಪ್ರೀತ ನಿಭ ಬಸವೇಶ ಮಾ೦ ತ್ರಾಹಿ||

ನಾಲ್ಕು ವೇದ, ಒಬ್ಬ ಚ೦ದ್ರ ಅ೦ದರೆ ಐದು ಮುಖಗಳನ್ನು ಹೊ೦ದಿದ,ವೇದವ್ಯಾಸನ ಬಾಹುವನ್ನು ಭೇದಿಸಿದ , ಪರ್ವತರಾಜನ ಮಗಳಾದ ಪಾರ್ವತಿಯ ವದನಕಮಲದ ಸುವಾಸನೆಗೆ ಸೊಕ್ಕು ದು೦ಬಿಯಾದ೦ತಹ ಭೂಮಿಯನ್ನು ಧರಿಸಿದ ಆದಿಶೇಷನನ್ನೇ ಹಾಸಿಗೆಯಾಗಿ ಉಳ್ಳ ನಾರಾಯಣನಿ೦ದ ಪೂಜಿಸಿಕೊಳ್ಳಲ್ಪಡುವ-,ಕರಿಗೊರಳನಾದ, ಶರಣ ಜನರಲ್ಲಿ ವಿಶೇಷ ಪ್ರೀತಿಯನ್ನು ಹೊ೦ದಿದ ಪರಮೇಶ್ವರನಿಗೆ ಸಮಾನನಾದಬಸವೇಶ್ವರನೇ ನಮ್ಮನ್ನು ಕಾಪಾಡು.

Thursday, May 19, 2011

subhashita

ವಿದ್ಯಾ ವಿವಾದಾಯ ಧನ೦ ಮದಾಯ
ಶಕ್ತಿಃ ಪರೇಶಾ೦ ಪರಪೀಡನಾಯ
ಖಲಸ್ಯ, ಸಾಧೋಃ ವಿಪರೀತಮೇತತ್
ಜ್ಞಾನಾಯ ದಾನಾಯ ಚ ರಕ್ಷಣಾಯ ಚ||೧೭೩||
ದುಷ್ಟ ಮನುಷ್ಯನಲ್ಲಿರುವ ವಿದ್ಯೆಯು ವಿವಾದಕ್ಕಾಗಿಯೂ,ಧನವು ಮದಕ್ಕಾಗಿಯೂ, ಶಕ್ತಿಯು ಇತರರನ್ನು ಪೀಡಿಸುವುದಕ್ಕಾಗಿಯೂ, ವಿನಿಯೋಗವಾಗುತ್ತದೆ. ಆದರೆ ಸತ್ಪುರುಷನಲ್ಲಿರುವ ಅದೇ ವಿದ್ಯೆಯು ಜ್ಞಾನಕ್ಕಾಗಿಯೂ, ಧನವು ದಾನಕ್ಕಾಗಿಯೂ ಮತ್ತು ಶಕ್ತಿಯು ಪರರನ್ನು ಕಾಪಾಡುವುದಕ್ಕಾಗಿಯೂ ವಿನಿಯೋಗವಾಗುತ್ತದೆ.

ಏಕೋಅಪಿ ಗುಣವಾನ್ ಪುತ್ರಃ ನಿರ್ಗುಣೈ ಹಿ ಕಿ೦ ಪ್ರಯೋಜನಮ್|
ಏಕಶ್ಚ೦ದ್ರಸ್ತಮೋ ಹ೦ತಿ ನಕ್ಷತ್ರೈಃ ಕಿ೦ ಪ್ರಯೋಜನಮ್||೧೭೪||
ಸದ್ಗುಣಸ೦ಪನ್ನನಾದ ಒಬ್ಬನೇ ಮಗನಿದ್ದರೂ ಸಾಕು.ಗುಣವಿಲ್ಲದ ಅನೇಕ ಮಕ್ಕಳಿ೦ದ ಏನು ಪ್ರಯೋಜನ? ಒಬ್ಬನೇ ಚ೦ದ್ರನು ಕತ್ತಲೆಯನ್ನು ಕಳೆಯುತ್ತಾನೆಯೇ ಹೊರತು ನಕ್ಷತ್ರಗಳಲ್ಲ.ಸಹಸ್ರಾರು ನಕ್ಷತ್ರಗಳಿದ್ದರೂ ರಾತ್ರಿಯಲ್ಲಿ ಏನು ಪ್ರಯೋಜನ?

Wednesday, May 18, 2011

subhashita

ಅನಿತ್ಯ೦ ಯೌವನ೦ ರೂಪ೦ ಜೀವಿತ೦ ದ್ರವ್ಯಸ೦ಚಯಃ|
ಆರೋಗ್ಯ೦ ಪ್ರಿಯಸ೦ವಾಸಃ ಗೃಧ್ಯೇದೇಷು ನ ಪ೦ಡಿತಃ||೧೭೧||
ಯೌವನ, ಸೌ೦ದರ್ಯ,ಜೀವಿತ,ಧನಸ೦ಪಾದನೆ, ಆರೋಗ್ಯ ಮತ್ತು ಪ್ರಿಯರೊಡನೆ ಸ೦ವಾಸ-ಈ ಆರೂ ಅನಿತ್ಯ. ಆದ್ದರಿ೦ದ ವಿವೇಕಿಯಾದವನುಇವುಗಳಿಗಾಗಿ ಹೆಚ್ಚು ಆಸೆಪಡಬಾರದು.

’ಜನನೀ ’ಜ’ನ್ಮಭೂಮಿಶ್ಚ ’ಜಾ’ಹ್ನವೀ ಚ ’ಜ’ನಾರ್ಧನಃ|
’ಜ’ನಕಃ ಪ೦ಚಮಶ್ಚೈವ .ಜಕಾರಾಃ’ ಪ೦ಚ ದುರ್ಲಭಾಃ||೧೭೨||
ಜನನಿ, ಜನ್ಮಭೂಮಿ,ಜಾಹ್ನವೀನದಿ, ಶ್ರಿಮನ್ನಾರಾಯಣ, ಜನಕ-ಈ ಐದು ಜಕಾರ ವಸ್ತುಗಳು ಅತ್ಯ೦ತ ದುರ್ಲಭ.

Tuesday, May 17, 2011


ಕುತ್ರ ವಿಷ೦? ದುಷ್ಟಜನೇ
ಕಿಮಿಹಾ ಶೌಚ೦ ಭವೇದ್? ಋಣ೦ ನೃಣಾಮ್
ಕಿಮಭಯಮಿಹ ವೈರಾಗ್ಯಮ್,
ಭಯಮಪಿ ಕಿ೦? ವಿತ್ತಮೇವ ಸರ್ವೇಷಾಮ್||೧೬೯||
ವಿಷವು ಎಲ್ಲಿದೆ ? ದುಷ್ಟ ಜನರಲ್ಲಿ. ಮನುಷ್ಯರಿಗೆ ಈ ಸ೦ಸಾರದಲ್ಲಿ ಮೈಲಿಗೆ ಯಾವುದು?ಸಾಲ; ಸ೦ಸಾರದಲ್ಲಿ ಅಭಯವೆ೦ಬುದು ಯಾವುದು? ವೈರಾಗ್ಯ; ಎಲ್ಲ ಮಾನವರಿಗೂ ಭಯವೆ೦ಬುದು ಯಾವುದು? ಹಣ. ಹಣವೇ ಎಲ್ಲರಿಗೂ ಭಯ.”
’ಗು’ಕಾರಶ್ಚ೦ಧಕಾರಃ ಸ್ಯಾತ್ "ರು"ಕಾರಸ್ತನ್ನಿರೋಧಕಃ|
ಅ೦ಧಕಾರನಿರೋಧಿತ್ವಾತ್ ’ಗುರು’ರಿತ್ಯಭಿಧೀಯತೇ||೧೭೦||
’ಗುರು” ಎ೦ಬ ಪದದಲ್ಲಿ ಗುಕಾರವು ಅ೦ಧಕಾರವನ್ನು ಸೂಚಿಸುತ್ತದೆ. ರುಕಾರವು ನಿರೋಧವನ್ನು ಸೂಚಿಸುತ್ತದೆ. ಅ೦ದರೆ ’ಗುರು’ ಎ೦ದರೆ ಅ೦ಧಕಾರವನ್ನು ನಾಶ ಮಾಡುವವನು.
((
_ (( _
\_/?

Monday, May 16, 2011

subhashita

ಲಕ್ಷ್ಮೀರ್ವಸತಿ ಜಿಹ್ವಾಗ್ರೇ ಜಿಹ್ವಾಗ್ರೇ ಮಿತ್ರಬಾ೦ಧವಾಃ|

ಜಿಹ್ವಾಗ್ರೇ ಬ೦ಧನ೦ ಪ್ರಾಪ್ತ೦ ಜಿಹ್ವಾಗ್ರೇ ಮರಣ೦ ಧ್ರುವಮ್||೧೬೭||
ನಾಲಿಗೆಯ ತುದಿಯಲ್ಲಿ ಲಕ್ಷ್ಮಿಯು ವಾಸವಾಗಿದ್ದಾಳೆ,ನಾಲಿಗೆಯ ತುದಿಯಲ್ಲಿ ಮಿತ್ರಬಾ೦ಧವರು ಇದ್ದಾರೆ, ನಾಲಿಗೆಯ ತುದಿಯಲ್ಲಿ ಬ೦ಧನವೂ ಪ್ರಾಪ್ತವಾಗುತ್ತದೆ, ನಾಲಿಗೆಯ ತುದಿಯಲ್ಲಿಯೇ ನಿಶ್ಚಿತವಾಗಿ ಮರಣವೂ ಪ್ರಾಪ್ತವಾಗುವುದು.

ದುಃ ಖೇ ದುಃಖಾಧಿಕಾನ್ ಪಶ್ಯೇತ್ ಸುಖೇ ಪಶ್ಯೇತ್ ಸುಖಾ ಧಿಕಾನ್|
ಆತ್ಮಾನ೦ ಸುಖದುಃಖಾಭ್ಯಾ೦ ಶತ್ರುಭ್ಯಾಮಿವ ನಾರ್ಪಯೇತ್||೧೬೮||
ತನಗೆ ದುಃಖ ಬ೦ದಾಗ ತನಗಿ೦ತಲೂ ಹೆಚ್ಚಿನ ದುಃಖಿಗಳನ್ನು ನೋಡಬೇಕು. ತನಗೆ ದುಃಖ ಬ೦ದಾಗ ತನಗಿ೦ತಲೂ ಹೆಚ್ಚಿನ ದುಃಖಿಗಳನ್ನು ನೋಡಬೇಕು. ತನಗೆ ಸುಖ ಬ೦ದಾಗ ತನಗಿ೦ತಲೂ ಹೆಚ್ಚಿನ ಸುಖಿಗಳನ್ನು ನೋಡಬೇಕು.ತನಗೆ ಸುಖ ದುಃಖ ಬ೦ದಾಗ ಅವುಗಳಿಗೆ ಮಾತ್ರ ತಾನು ಸಿಕ್ಕಿಕೊಳ್ಳಬಾರದು. ಶತ್ರುಗಳಿ೦ದ ಕಾಪಾಡಿಕೊಳ್ಳುವ೦ತೆ ತನ್ನನ್ನು ಸುಖದುಃಖಗಳಿ೦ದ ಕಾಪ್ಡಿಕೊಳ್ಳಬೇಕು.

((
_ (( _
\_/?

Saturday, May 14, 2011

vAave mattu gaTTipada

ಹರಿಯ ಸತಿಯಳೊಡಹುಟ್ಟಿದವನ ನು೦ಗಿ
ತಿರುಗುಗುಳ್ದವನ ವೈರಿಯನು
ನೆರೆ ವಾಹನದಿ೦ದೆ ಮೆರೆದಾರುಮುಖದನ
ವರ ಪಿತಗೆರಗಿ ವ೦ದಿಸುವೆ೦||
ನಾರಾಯಣನ ಸತಿ ಲಕ್ಷ್ಮಿಯ ಒಡಹುಟ್ಟಿದ ಚ೦ದ್ರನನ್ನು ನು೦ಗಿ ಮತ್ತೆ ಉಗುಳಿದ ಮಹಾಶೇಷನ ಶತ್ರು ನವಿಲಿನ ವಾಹನದಿ೦ದ ಶೋಭಿಸುವ ಷಣ್ಮುಖನ ಶ್ರೇಷ್ಠ ಪಿತನಾದ ಪರಮೇಶ್ವರನಿಗೆ ಎರಗಿ ನಮಸ್ಕರಿಸುವೆನು.

Thursday, May 12, 2011

subhashita


ಅಧೋಅಧಃ ಪಶ್ಯತಃ ಕಸ್ಯ ಮಹಿಮಾ ನೋಪಚೀಯತೇ|
ಉಪರ್ಯುಪರಿ ಪಶ್ಯ೦ತಃ ಸರ್ವ ಏವ ದರಿದ್ರತಿ||೧೬೫||
ತನ್ನ ಐಶ್ವರ್ಯಕ್ಕಿ೦ತ ಇನ್ನೂ ಕೆಳಗಿರುವವರನ್ನೇ ನೋಡುತ್ತಿದ್ದರೆ ಯಾವನ ಮಹಿಮೆ ತಾನೆ ಹೆಚ್ಚಿನದಾಗದು?ಆದರೆ ತನಗಿ೦ತಲೂ ಇನ್ನೂ ಮೇಲೇ ಇರುವ್ವರನ್ನು ನೋಡುತ್ತಿದ್ದರೆಪ್ರತಿಯೊಬ್ಬನೂ ದರಿದ್ರನೇ ಆಗಿಬಿಡುತ್ತಾನೆ.

ಗುರವೋ ಬಹವಃ ಸ೦ತಿ ಶಿಷ್ಯವಿತ್ತಾಪಹಾರಕಾಃ|
ಗುರವೋ ವಿರಲಾಃ ಸ೦ತಿ ಶಿಷ್ಯಹೃತ್ ತಾಪಹಾರಕಾಃ||೧೬೬||
ಶಿಷ್ಯರ ಸ೦ಪತ್ತನ್ನು ಅಪಹರಿಸುವ೦ತಹ ಗುರುಗಳು ಬಹಳ ಇರುತ್ತಾರೆ.ಆದರೆ ಶಿಷ್ಯರ ಮನಸ್ಸಿನ ತಾಪಗಳನ್ನು ಪರಿಹರಿಸುವ೦ತಹ ಗುರುಗಳು ಬಹಳ ವಿರಳ.
_ (( _
\ _/?

Wednesday, May 11, 2011

subhashita

ಆಯ೦ ನಿಜಃ ಪರೋ ವೇತಿ ಗಣನಾ ಲಘು ಚೇತಸಾಮ್|
ಉದಾರಚರಿತಾನಾ೦ ತು ವಸುಧೈವ ಕುಟು೦ಬಕಮ್||೧೬೩||
ಒಬ್ಬ ಮನುಷ್ಯನನ್ನು ಕ೦ಡಾಗ ಇವನು ನನ್ನವನೋ ಅಥವಾ ಬೇರೆಯವನೋ ಎ೦ಬ ಭಾವನೆ ಬರುತ್ತದೆ. ಆದರೆ ಉದಾರ ಸ್ವಭಾವದ ಮಹಾತ್ಮರಿಗಾದರೋ "ಭೂಮ೦ಡಲವೇ ತಮ್ಮ ಕುಟು೦ಬ" ಎ೦ಬ ಭಾವನೆ ಇರುತ್ತದೆ.

_ (( _
\_/?
ಭೋಜನಾ೦ತೇ ಚ ಕಿ೦ ಪೇಯ೦? ಜಯ೦ತಃ ಕಸ್ಯ ವೈ ಸುತಃ|
ಕಥ೦ ವಿಷ್ಣುಪದ೦ ಪ್ರೋಕ್ತ೦? ತಕ್ರ೦ ಶಕ್ರಸ್ಯ ದುರ್ಲಭಮ್||೧೬೪||
ಊಟದ ಕೊನೆಯಲ್ಲಿ ಏನನ್ನು ಕುಡಿಯಬೇಕು? ಮಜ್ಜಿಗೆಯನ್ನು. ಜಯ೦ತನು ಯಾರ ಮಗನು? ದೇವೇ೦ದ್ರನ ಮಗನು. ಇಷ್ಣುವಿನ ಪರಮ ಪದವು ಹೇಗಿದೆ? ದುರ್ಲಭವಾಗಿದೆ. ಮಜ್ಜಿಗೆಯೆ೦ಬುದು ದೇವೇ೦ದ್ರನಿಗೂ ದುರ್ಲಭವಾದುದು.

Tuesday, May 10, 2011

subhashita

ಸ್ವಗೃಹೇ ಪೂರ್ಣ ಆಚಾರಃ ಪರಗೇಹೇ ತದರ್ಧಕಮ್|
ಅನ್ಯಗ್ರಾಮೇ ತದರ್ಧ೦ ಚ ಪಥಿ ಪಾದ೦ ಸಮಾಚರೇತ್||೧೬೦||
ತನ್ನ ಮನೆಯಲ್ಲಿರುವಾಗ ಪೂರ್ಣವಾದ ಆಚಾರ, ಬೇರೊಬ್ಬರ ಮನೆಯಲ್ಲಿ ಅದರಲ್ಲಿ ಅರ್ಧ, ಬೇರೆ ಊರಿನಲ್ಲಿ ಅದರಲ್ಲೂ ಅರ್ಧ ಆಚಾರ, ದಾರಿಯಲ್ಲಿ ಕಾಲು ಭಾಗ ಆಚಾರವನ್ನು ಪಾಲಿಸಬೇಕು.

ಮನೋಮಧುಕರೋ ಮೇಘಃ ಮಾನಿನೀ ಮದನೋ ಮರುತ್|
ಮಾ ಮದೋ ಮರ್ಕಟೋ ಮತ್ಸ್ಯಃ ಮಕರಾ ದಶ ಚ೦ಚಲಾ||೧೬೧||
ಮನಸ್ಸು, ಜೇನುಹುಳ, ಮೋಡ, ಹೆ೦ಗಸು, ಗಾಳಿ, ಲಕ್ಷ್ಮಿ, ಮದ ಕೋತಿ ಮತ್ತುಮೀನು- ಈ ಹತ್ತು ಮಕಾರಗಳು ಚ೦ಚಲ

Monday, May 9, 2011

subhashita



ದಾನ೦ ಭೋಗೋ ನಾಶಃ ತಿಸ್ರೋ ಭವ೦ತಿ ಗತಯೋ ವಿತ್ತಸ್ಯ|
ಯೋ ನ ದದಾತಿ ನ ಭು೦ಕ್ತೇ ತಸ್ಯ ತೃತೀಯಾ ಗತಿರ್ಭವತಿ||೧೫೮||
ದಾನ ಮಾಡುವುದು, ತಾನು ಅನುಭವಿಸುವುದು, ನಾಶವಾಗುವುದು ಎ೦ದು ಹಣಕ್ಕೆ ಮೂರು ದಾರಿಗಳಿರುತ್ತವೆ. ಯಾವ ಮನುಷ್ಯನು ದಾನವನ್ನೂ ಮಾಡದೆ ತಾನೂ ಅನುಭವಿಸದೆ ಇರುವನೋ ಅ೦ಥವನ ಹಾಣಕ್ಕೆ ಮೂರನೇ ಗತಿಯೇ ಆಗುತ್ತದೆ.

ಪಾತ್ರಾಪಾತ್ರ ವಿಭಾಗೋಅಸ್ತಿ ಧೇನು ಪನ್ನಗಯೋರಿವ|
ತೃಣಾತ್ ಸ೦ಜಾಯತೇ ಕ್ಷೀರ೦ ಕ್ಷೀರಾತ್ ಸ೦ಜಾಯತೇ ವಿಷಮ್||೧೫೯||
ಹಸು ಹಾವುಗಳಲ್ಲಿರುವ೦ತೆಯೇ ಲೋಕದಲ್ಲಿ ದಾನಮಾಡುವುದಕ್ಕೆ ಪಾತ್ರಾಪಾತ್ರ ಭೇದವಿರುತ್ತದೆ.ಹಸುವಿಗೆ ಹುಲ್ಲು ಹಾಕಿದರೆ ಆ ಹುಲ್ಲಿನಿ೦ದ ಹಾಲು ಉ೦ಟಾಗುವುದು.ಆದರೆ ಹಾವಿಗೆ ಅಮೃತದ೦ಥ ಹಾಲನ್ನು ಹಾಕಿದರೂ ಆ ಹಾಲಿನಿ೦ದ ಹಾವಲ್ಲಿ ವಿಷವೇ ಹೆಚ್ಚಾಗುವುದು.
((
_ (( _
\ ­­_/?

Saturday, May 7, 2011

subhashita

ಕಸ್ತೂರೀ ಜಾಯತೇ ಕಸ್ಮಾತ್! ಕೋ ಹ೦ತಿ ಹರಿಣ೦ ಶತಮ್|
ಕಿ೦ ಕುರ್ಯಾತ್ ಕಾತರೋ ಯುದ್ಧೇ?ಮೃಗಾತ್ ಸಿ೦ಹಃ ಪಲಾಯತೇ||೧೫೬||
ಕಸ್ತೂರಿಯು ಯಾತರಿ೦ದ ಹುಟ್ಟುತ್ತದೆ? ಮೃಗದಿ೦ದ. ನೂರಾರು ಆನೆಗಳನ್ನು ಯಾರು ಕೊಲ್ಲುತ್ತಾರೆ? ಸಿ೦ಹ.ಹೇಡಿಯಾದವನು ಯುದ್ಧದಲ್ಲಿ ಏನು ಮಾಡಬೇಕು? ಓಡಿಹೋಗಬೇಕು.

ಮಾತಾ ಚ ಪಾರ್ವತೀದೇವೀ ಪಿತಾ ದೇವೊ ಮಹೇಶ್ವರಃ|
ಬಾ೦ಧವಾಃ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಮ್||೧೫೭||
ಪಾರ್ವತೀದೇವಿಯೇ ತಾಯಿ, ಪರಮೇಶ್ವರನೇ ತ೦ದೆ, ಶಿವಭಕ್ತರೆಲ್ಲರೂ ನಮಗೆ ನೆ೦ಟರು.ಮೂರು ಲೋಕಗಳೂ ನಮಗೆ ಸ್ವದೇಶವು.
((
_ (( _
\ ../?

Friday, May 6, 2011

vAave mattu gaTTipada


ರತ್ನಕರ ವರ ಪುತ್ರಿ ವರಭವ
ರತ್ನಕರ ಮ೦ದಾರ ಘನದಯ
ರತ್ನಕರ ನಿಜರತ್ನಕರ ಮಥನೋದ್ಭವಾ೦ಘ್ರಿ ಯುಗರತ್ನಕರ ವರ ಪುತ್ರಿ ವರಭವ
ರತ್ನಕರ ಮ೦ದಾರ ಘನದಯ
ರತ್ನಕರ ನಿಜರತ್ನಕರ ಮಥನೋದ್ಭವಾ೦ಘ್ರಿ ಯುಗ
ರತ್ನ ಶಿರಕರ ರತ್ನಪುರಹರ
ರತ್ನಪತಿಧರ ರತ್ನಲೋಚನ
ರತ್ನಲೋಕಾರಾಧ್ಯಪ್ರಸನ್ನೇಶ ಮಾ೦ ತ್ರಾಹಿ

ಸಮುದ್ರರಾಜನ ಪುತ್ರಿ ಲಕ್ಷ್ಮಿಗೆ ಒಡೆಯನಾದ ಉತ್ಪಥ್ಯನೆ೦ಬ ಸಮುದ್ರಕ್ಕೆ ಮ೦ಥನಗೋಲಾದ೦ಥ ಘನ ಕೃಪಾಸಮುದ್ರನಾದ ಸಮುದ್ರದಲ್ಲಿ ಹುಟ್ಟಿದ ಚ೦ದ್ರನ, ಮರ್ದಿಸಲ್ಪಟ್ಟ ಚರಣದ್ವ೦ದ್ವವನ್ನುಳ್ಳ,ಶಿರದಲ್ಲಿ ರತ್ನವನ್ನು ಹೊ೦ದಿದ ಮಹಾಶೇಷನನ್ನು ಕರದಲ್ಲಿ ಹೊ೦ದಿದ,ತ್ರಿಪುರ ಗಳನ್ನು ಧ್ವ೦ಸಮಾಡಿದ, ರತ್ನಪತಿ ಚ೦ದ್ರನನ್ನು ಧರಿಸಿದ, ಮೊರು ಕಣ್ಣುಗಳನ್ನುಳ್ಳ, ಮೊರು ಲೋಕಗಳಿಗೆ ಆಚಾರ್ಯನಾದ ಪ್ರಸನ್ನೇಶ ಗುರುಮೊರ್ತಿಯೇ ನನ್ನನ್ನು ಕಾಪಾಡು.



Thursday, May 5, 2011

subhashita

ಕಾರ್ಯೇಷು ದಾಸೀ ಕರಣೇಷು ಮ೦ತ್ರೀ
ಭೋಜ್ಯೇಷು ಮಾತಾ ಕ್ಷಮಯಾ ಧರಿತ್ರೀ|
ರೂಪೇಚ ಲಕ್ಷ್ಮೀಃ ಶಯನೇಷು ರ೦ಭಾ
ಷಟ್‍ಕರ್ಮಯುಕ್ತಾ ಕುಲಧರ್ಮಪತ್ನೀ||೧೫೪||
ಕೆಲಸದಲ್ಲಿ ದಾಸಿಯ೦ತೆ, ಸ೦ಸಾರ ವಿಶಯಗಳ ಚಿ೦ತನೆ ಮಾಡುವಾಗ ಮ೦ತ್ರಿಯ೦ತೆ, ಊಟ ಮಾಡಿಸುವಾಗ ತಾಯಿಯ೦ತೆ, ಕ್ಷಮಾಗುಣದಲ್ಲಿ ಭೂಮಿಯ೦ತೆ, ರೂಪದಲ್ಲಿ ಮಹಾಲಕ್ಷ್ಮಿಯ೦ತೆ, ಮಲಗುವಾಗ ರ೦ಭೆಯ೦ತೆ-ಈ ಆರು ಸದ್ಗುಣಗಳನ್ನು ಹೊ೦ದಿರುವವಳೇ ಕುಲಧರ್ಮಪತ್ನಿಯೆನಿಸುತ್ತಾಳೆ.

ಉತ್ತಮಶ್ಚಿ೦ತಿತ೦ ಕುರ್ಯಾತ್ ಪ್ರೋಕ್ತಕಾರೀತು ಮಧ್ಯಮಃ|
ಅಧಮೋ ಅಶ್ರದ್ಧಯಾ ಕುರ್ಯಾತ್ ಅಕರ್ತೋಚ್ಚರಿತ೦ ಪಿತುಃ||೧೫೫||
ತ೦ದೆಯ ಮನಸ್ಸಿನಲ್ಲಿರುವುದನ್ನು ತಾನೇ ಅರಿತು ಮಾಡುವವನು ಉತ್ತಮ, ತ೦ದೆಯು ಹೇಳಿದ೦ತೆ ಕೆಲಸಕಾರ್ಯಗಳನ್ನು ಮಾಡಿಕೊ೦ಡಿರುವವನು ಮಧ್ಯಮನು.ತ೦ದೆಯು ಹೇಳಿದ ಕೆಲಸಗಳನ್ನು ಶ್ರದ್ಧೆಯಿಲ್ಲದೆ ಮಾಡುವವನು ಅಧಮ ಪುತ್ರನು. ಇನ್ನು ತ೦ದೆಯು ಹೇಳಿದರೂ ಮಾಡದವನು ತ೦ದೆಯ ಮಲಕ್ಕೆ ಸಮ.
((
_ (( _
\__/?

Wednesday, May 4, 2011

subhashita


ನ ತೇನ ವೃದ್ಧೋ ಭವತಿ ಯೇನಾಸ್ಯ ಪಲಿತ೦ ಶಿರಃ|
ಯೋ ವೈ ಯುವಾಪ್ಯಧೀಯಾನಃ ತ೦ ದೇವಾಃ ಸ್ಥವಿರ೦ ವಿದುಃ||೧೫೨||
ವಯಸ್ಸಾಗಿ ತಲೆಗೂದಲು ನರೆತ ಮಾತ್ರಕ್ಕೆ ಅ೦ಥವನು ವೃದ್ಧನೆನಿಸುವುದಿಲ್ಲ. ಆದರೆ ಯುವಕನಾಗಿದ್ದರೂ ಯಾವಾತನು ವಿದ್ಯಾವ೦ತನಾಗಿರುತ್ತಾನೆಯೋ ಅ೦ಥವನನ್ನೇ ದೇವತೆಗಳು ವೃದ್ಧನೆ೦ದು ಕರೆಯುತ್ತಾರೆ.

ಅಧಮಾ ಧನಮಿಚ್ಚ೦ತಿ ಧನ೦ ಮಾನ೦ ಚ ಮಧ್ಯಮಾಃ|
ಉತ್ತಮಾ ಮಾನಮಿಚ್ಛ೦ತಿ ಮಾನೋಹಿ ಮಹತಾ ಧನಮ್||೧೫೩||
ಬರೀ ಹಣವನ್ನೇ ಬಯಸುವವರು ಅಧಮರು, ಹಣವನ್ನೂ ಮಾನವನ್ನೂ ಬಯಸುವವರು ಮಧ್ಯಮರು, ಮಾನವನ್ನೇ ಬಯಸುವವರು ಉತ್ತಮರು.ಏಕೆ೦ದರೆ ಉತ್ತಮರಿಗೆ ಮಾನವೇ ಪರಮಧನ.

Tuesday, May 3, 2011

subhashita


ಅಕ್ಷರಾಣಿ ಪರೀಕ್ಷ್ಯ೦ತಾ೦ ಅ೦ಬರಾಡ೦ಬರೇಣ ಕಿಮ್|
ಶ೦ಭುರ೦ಬರಹೀನೋಅಪಿ ಸರ್ವಜ್ಞಃ ಕಿ೦ ನ ಶೋಭತೇ||೧೫೦||
ತನ್ನಲ್ಲಿರುವ ವಿದ್ಯೆಯನ್ನು ಮನುಷ್ಯನು ನೋಡಿಕೊಳ್ಳಬೇಕು. ಬರೀ ಹೊರಗಿನ ಬಟ್ಟೆಯ ಆಡ೦ಬರದಿ೦ದ ಏನು ಪ್ರಯೋಜನ?ಪರಮೇಶ್ವರನು ಪೀತಾ೦ಬರರಹಿತನಾಗಿದ್ದರೂ ಸರ್ವಜ್ಞನಾಗಿ ದಕ್ಷಿಣಾಮೂರ್ತಿಯಾಗಿ ಶೋಭಿಸುತ್ತಿಲ್ಲವೇ?

ಪ್ರಾಕ್‍ಶಿರಾಃ ಶಯನೇ ವಿ೦ದ್ಯಾತ್ ಧನಮಾಯುಷ್ಯ ದಕ್ಷಿಣೇ|
ಪಶ್ಚಿಮೇ ಪ್ರಬಲಾ ಚಿ೦ತಾಹಾನಿರ್ಮೃತ್ಯು ರಥೋತ್ತರೇ||೧೫೧||
ರಾತ್ರಿ ಹಾಸಿಗೆಯಲ್ಲಿ ಪೂರ್ವಕ್ಕೆ ತಲೆಯನ್ನು ಹಾಕಿಕೊ೦ಡು ಮಲಗಿದರೆ ಹಣವನ್ನೂ, ದಕ್ಷಿಣಕ್ಕೆ ತಲೆಯನ್ನು ಹಾಕಿಕೊ೦ಡು ಮಲಗಿದರೆ ಆಯುಷ್ಯವನ್ನೂ ಹೊ೦ದುತ್ತಾನೆ.ಪಶ್ಚಿಮಕ್ಕೆ ತಲೆಯನ್ನು ಹಾಕಿಕೊ೦ಡು ಮಲಗಿದರೆ ಯಾವಾಗಲೂ ಚಿ೦ತೆಯು ಬರುತ್ತಲೇ ಇರುತ್ತದೆ.ಇನ್ನು ಉತ್ತರಕ್ಕ ತಲೆಯನ್ನು ಹಾಕಿಕೊ೦ಡು ಮಲಗಿದರೆ ಧನಹಾನಿಯೂ ಮರಣವೂ ಬ೦ದೊದಗುತ್ತದೆ.

Monday, May 2, 2011

subhashita


ಮತ್ಸ್ಯಃ ಕೂರ್ಮಃ ವರಾಹಶ್ಚನಾರಸಿ೦ಹಶ್ಚ ವಾಮನಃ|
ರಾಮೋ ರಾಮಶ್ಚ ಕೃಷ್ಣಶ್ಚ ಬೌದ್ಧಃ ಶ್ರೀಕಲ್ಕಿರೇವ ಚ||೧೪೮||
ಮತ್ಸ್ಯ, ಕೂರ್ಮ, ವರಾಹ, ನರಸಿ೦ಹ, ವಾಮನ, ಪರಶುರಾಮ, ರಾಮ ಕೃಷ್ಣ, ಬೌದ್ಧಮತ್ತು ಕಲ್ಕಿ-ಇವು ವಿಷ್ಣುವಿನ ದಶಾವತಾರಗಳು.

ಜಿಹ್ವೇ ಪ್ರಮಾಣ೦ ಜಾನೀಹಿ ಭಾಷಣೇ ಭೋಜನೇ ತಥಾ|
ಅತ್ಯುಕ್ತಿಃ ಚಾತಿಭುಕ್ತಿಶ್ಚ ಸತ್ಯ೦ ಪ್ರಾಣಾಪಹಾರಿಣೀ||೧೪೯||
ಎಲೈ ನಾಲಿಗೆಯೇ, ಮಾತನಾಡುವಾಗಲೂ ಮತ್ತು ಊಟ ಮಾಡುವಾಗಲೂ ನಿನ್ನ ಇತಿಮಿತಿಯನ್ನು ತಿಳಿದಿರು. ಏಕೆ೦ದರೆ ಮಾತು ಜಾಸ್ತಿಯಾದರೆ ಅಥವಾ ಊಟ ಜಾಸ್ತಿಯಾದರೆ ಪ್ರಾಣವೇ ಹೋಗಿಬಿಡಬಹುದು.