Thursday, March 14, 2013

ಹ೦ಗಿನರಮನೆಗಿ೦ತ ವಿ೦ಗಡದ ಗುಡಿ ಲೇಸು
ಭ೦ಗಬಟ್ಟು೦ಬ ಬಿಸಿ ಅನ್ನಕಿ೦ತ
ತ೦ಗುಳವೆ ಲೇಸು ಸರ್ವಜ್ಞ||||
ಬೇರೆಯವರ ಹ೦ಗಿನಲ್ಲಿ ಬದುಕುತ್ತಾ  ವೈಭವದ ಅರಮನೆಯಲ್ಲಿ ಬಾಳುವುದಕ್ಕಿ೦ತಲೂ ಸ್ವಚ್ಛ೦ದವಾಗಿ ಯಾವುದೋ ಹಾಳುಗುಡಿಯಲ್ಲಿ ಇರುವುದೇ ವಾಸಿ. ಹಾಗೆಯೇ ಅವಮಾನಪಟ್ಟುಕೊ೦ಡು ತಿನ್ನುವ ಬಿಸಿಯೂಟಕ್ಕಿ೦ತ  ಆರಿದ್ದರೂ ಸರಿ ತ೦ಗಳೂಟವೇ ವಾಸಿ.

Thursday, January 24, 2013

ಕೊಡುವಾತನೇ ಮೃಡನು ಪಡೆವಾತನೇ ನರನು
ಒಡಲು-ಒಡವೆಗಳನು ಕೆಡೆದು ಹೋಗುವ ಮುನ್ನ
ಕೊಡು ಪಾತ್ರವರಿದು ಸರ್ವಜ್ಞ||೬||
 "ದೀನ ನಾನು ಸಮಸ್ತ ಲೋಕಕೆ ದಾನಿ ನೀನು"-ಎ೦ಬ ದಾಸವಾಣಿಯ೦ತೆ,  ಕೊಡುವವನೇ ಶಿವನು ಪಡೆವವನೇ ನರನು. ಆದ್ದರಿ೦ದ ನಾವು ನಮ್ಮ ಶರೀರದ ಶಕ್ತಿ ಕು೦ದುವ ಮುನ್ನ ನಮ್ಮ ಆಸ್ತಿಯು ಹಾಳಾಗುವ ಮುನ್ನ ಯೋಗ್ಯರಿಗೆ ಅದನ್ನು ವಿನಿಯೋಗಿಸಿ ಸದುಪಯೋಗ ಪಡಿಸಿಕೊಳ್ಳಬೇಕು.