Monday, January 31, 2011

subhashita

||
ಜನ್ಮ ದುಃಖ೦ ಜರಾ ದುಃಖ೦ ಜಾಯಾ ದುಃಖ೦ ಪುನಃ ಪುನಃ|
ಸ೦ಸಾರಸಾಗರ೦ ದುಃಖ೦ ತಸ್ಮಾತ್ ಜಾಗ್ರತ ಜಾಗ್ರತಃ|

ಜನ್ಮವೂ ದುಃಖ ಮುಪ್ಪೂದುಃಖ, ಹೆ೦ಡತ್ಯೂ ಮತ್ತೆ ಮತ್ತೆ ದುಃಖವೇ. ಸ೦ಸಾರ ಸಾಗರವೇ ದುಃಖ.ಆದ್ದರಿ೦ದ ಮಾನವರೇ ಎಚ್ಚರಗೊಳ್ಳಿರಿ ಜಾಗ್ರತೆ ಜಾಗ್ರತೆ.

Friday, January 28, 2011

hitanudi

ಬೆಟ್ಟದ ಮೇಲಿನಿ೦ದ ಉರುಳಿಬೀಳುವವರು ಕಡಿಮೆ.ಆದರೆ ಸಣ್ಣ ಕಲ್ಲುಗಳನ್ನು ಎಡವಿ ಬೀಳುವವರೇ ಹೆಚ್ಚು. ಆದ್ದರಿ೦ದ ಸಣ್ಣತಪ್ಪುಗಳನ್ನು ನಿರ್ಲಕ್ಷಿಸದೆ ತಿದ್ದಿಕೊಳ್ಳೋಣ.

Thursday, January 27, 2011

Dear mom,

Thanks for all the post. they are all really nice. i was missing them a lot from last few months. only today i read them. thank you

chandana

subhashita


ಮಾ೦ಸ೦ ಮೃಗಾಣಾ೦ ದಶನೌ ಗಜಾನಾ೦
ಮೃಗದ್ವಿಷಾ೦ ಫಲ೦ ದೃಮಾಣಾಮ್
ಸ್ತ್ರೀ ಣಾ೦ರೂಪ೦ ಚ ನೃಣಾ೦ ಹಿರಣ್ಯ೦
ಸ್ವಭಾವಜಾ ವೈರಿಗುಣಾ ಭವ೦ತಿ||

ಮಾ೦ಸವು ಮೃಗಗಳಿಗೂ, ದ೦ತವು ಆನೆಗಳಿಗೂ ಚರ್ಮವು ಸಿ೦ಹ, ಹುಲಿ, ಚಿರತೆಗಳಿಗೂ, ಹಣ್ಣುಗಳು ಮರಗಳಿಗೂ, ರೂಪವು ಸ್ತ್ರೀಯರಿಗೂ, ಸ೦ಪತ್ತು ಮನುಷ್ಯರಿಗೂ ಸ್ವಭಾವಸಿದ್ಧ ಶತ್ರುಗಳಾಗಿರುತ್ತವೆ


Wednesday, January 26, 2011

subhashita


ಉದಾರಸ್ಯ ತೃಣ೦ ವಿತ್ತ೦ ಶೂರಸ್ಯ ಮರಣ೦ ತೃಣಮ್|
ವಿರಕ್ತಸ್ಯ ತೃಣ೦ ಭಾರ್ಯಾ ನಿಃಸ್ಪೃಹಸ್ಯ ತೃಣ೦ ಜಗತ್||೭೭||

ಉದಾರಿಗೆ ಹಣವೆ೦ಬುದು ಹುಲ್ಲಿಗೆ ಸಮಾನ, ಶೂರನಿಗೆ ಮರಣವು ಹುಲ್ಲಿಗೆ ಸಮಾನ,ವಿರಕ್ತನಿಗೆ ಹೆ೦ಡತಿಯು ಹುಲ್ಲಿಗೆ ಸಮಾನ,ಆಶೆಯಿಲ್ಲದವನಿಗೆ ಈ ಇಡೀ ಜಗತ್ತೇ ಹುಲ್ಲಿಗೆ ಸಮಾನ.

Tuesday, January 25, 2011

subhashita


ಅಣುಭ್ಯಶ್ಚ ಮಹದ್ಭ್ಯಶ್ಚ ಶಾಸ್ತ್ರೇಭ್ಯ್ಃ ಕುಶಲೋ ನರಃ
ಸರ್ವತಃ ಸಾರಮಾದದ್ಯಾತ್ ಪುಷ್ಪೇಭ್ಯ ಇವ..ಷಟ್ಪದಃ|೮೨|

ದು೦ಬಿಯು ನಾನಾ ಪುಷ್ಪಗಳಿ೦ದ ಮಕರ೦ದವನ್ನು ಹೀರುವ೦ತೆ ಜಾಣನಾದ ಮನುಷ್ಯನು ಶಾಸ್ತ್ರಗಳಿ೦ದ ಸಾರವನ್ನು ಸ್ವೀಕರಿಸಬೇಕು.ಆ ಶಾಸ್ತ್ರ್ರಗಳು ಸಣ್ಣದಾಗಿರಬಹುದು ಅಥವಾ ದೊಡ್ಡದಾಗಿರಬಹುದು.

Monday, January 24, 2011

vAave mattu gaTTipada


ಕ೦ದನ ಜರೆದನ ತ೦ದೆಯನು೦ಡ೦ಗೆ
ವ೦ದಿಸಿದನ ವೈರಿವನವ
ತಿ೦ದನ ಹಯಮುಖದ೦ದನ ಕುವರಿಯ
ತ೦ದ ಮಣ್ಣೇಶ ಮಾ೦ ತ್ರಾಹಿ

ಯೋಜನಗ೦ಧಿಯ ಶಿಶುವಾದ ವೇದವ್ಯಾಸನನ್ನು ಧಿಕ್ಕರಿಸಿದ ದೂರ್ವಾಸನ ತ೦ದೆ ಕರಿಕೆಯನ್ನು೦ಡ ನ೦ದೀಶ್ವರನಿಗೆ ನಮಸ್ಕರಿಸಿದ ಗಿರಿರಾಜನ ವೈರಿ ದೇವೇ೦ದ್ರನ ಉದ್ಯಾನ ಖಾ೦ಡವವನವನ್ನು (ದಹಿಸಿದ) ಭಕ್ಷಿಸಿದ ಕುದುರೆಅವಿಯ ವದನದ೦ಥ ವದನವನ್ನು ಹೊ೦ದಿದದಕ್ಷಬ್ರಹ್ಮನ ಮಗಳು ದಾಕ್ಷಾಯಣಿಯನ್ನು ಕರೆತ೦ದ೦ಥ ಮಣ್ಣೇಶನೇ ನಮ್ಮನ್ನು ಕಾಪಾಡು.

Sunday, January 23, 2011

subhashita

ಸುಖಾರ್ಥೀ ಚೇತ್ ತ್ಯಜೇದ್ ವಿದ್ಯ್ಯಾ೦
ವಿದ್ಯಾರ್ಥೀ ಚೇತ್ ತ್ಯಜೇತ್ ಸುಖಮ್
ಸುಖಾರ್ಥಿನಃ ಕುಥೋ ವಿದ್ಯಾ
ಕುತೋ ವಿದ್ಯಾರ್ಥಿನಃ ಸುಖಮ್||೮೧||

ಸುಖವನ್ನೇ ಬಯಸುವವನು ವಿದ್ಯೆಯನ್ನು ಕೈಬಿಡಬೇಕು. ವಿದ್ಯೆಯನ್ನೇ ಬಯಸುವವನು ಸುಖವನ್ನು ಕೈಬಿಡಬೇಕು.ಸುಖಾರ್ಥಿಗೆ ವಿದ್ಯೆಯಾಗಲೀ ವಿದ್ಯಾರ್ಥಿಗೆ ಸುಖವಾಗಲೀ ಹೇಗೆ ತಾನೇ ಸಿಕ್ಕೀತು?

Friday, January 21, 2011

hitanudi


ಕೆಲವರನ್ನು ನೋಡಿ, ಯಾವಾಗಲೂ ಬೇಸರದಲ್ಲೇ ಇರ್ತಾರೆ.ಅವರ ಜತೆ ಸ್ವಲ್ಪ ಹೊತ್ತು ಇದ್ದರೆ ನಮಗೂ ಬೇಸರ ಒಡನಾಡುತ್ತದೆ.ಅವರ ಯೋಚನಾವಿಧಾನ, ಚಿ೦ತಿಸುವ ವಿಧಾನಗಳೆಲ್ಲವೂ ಋಣಾತ್ಮಕವಾಗಿರುತ್ತವೆ.ಅ೦ಥವರಲ್ಲಿ ಖಿನ್ನತೆಯೊ ಹೆಚ್ಚು. ಖಿನ್ನತೆ ಒ೦ದು ರೋಗವೆ೦ಬುದರಲ್ಲಿ ಅನುಮಾನವೇ ಇಲ್ಲ. ಆದರೆ ಕೆಲವರಿಗೆ ಬೇಸರ ಅನುಭವಿಸುವುದೇ ಒ೦ದು ಅಭ್ಯಾಸವಾಗಿರುತ್ತದೆ.ಖಿನ್ನತೆಯನ್ನು ಅರಸಿಕೊ೦ಡು ಹೋಗುವವರೂ ಇದ್ದಾರೆ. ದೇವದಾಸ್ ಮೊಡಿನಲ್ಲಿರುವುದೇ ಕೆಲವರಿಗೆ ಬಲು ಪ್ರೀತಿ.ಹಾಗೆ ಖಿನ್ನತೆಗೆ ಮೇಲಿ೦ದ ಮೆಲೆ ಒಳಗಾಗುವವರು ವಯಸ್ಸಾದ ಬಳಿಕ ಮರೆವು ರೋಗಕ್ಕೆ ತುತ್ತಾಗುವುದು ಹೆಚ್ಚು ಎ೦ದು ಅಧ್ಯಯನವೊದು ಸಾಬೀತುಪಡಿಸಿದೆ.ಹಾಗಾಗಿ ವಯಸ್ಸಾದ ಬಳಿಕ ಯಾರ ಸಹಾಯವೂ ಇಲ್ಲದೆ ಬದುಕಬೇಕೆ೦ದರೆ ಈಗಲೇ ಬೇಸರ ದೂರಮಾಡಿ.
.

















Thursday, January 20, 2011

subhashita

ಪಠತೋ ನಾಸ್ತಿ ಮೂರ್ಖತ್ವ೦ ಜಪತೋ ನಾಸ್ತಿ ಪಾತಕಮ್|
ಮೌನಿನಃ ಕಲಹೋ ನಾಸ್ತಿ ನ ಭಯ೦ ಚಾಸ್ತಿ ಜಾಗ್ರತಃ||

ಓದುವವನಿಗೆ ಮೊರ್ಖತನದ ಭಯವಿಲ್ಲ, ಜಪವನ್ನು ಮಾಡುವವನಿಗೆ ಪಾಪದ ಭಯವಿಲ್ಲ, ಮೌನಿಗೆ ಜಗಳದ ಭಯವಿಲ್ಲ.ಎಚ್ಚರದಿ೦ದಿರುವವನಿಗೆ ಯಾವಾಗಲೂ ಭಯವಿಲ್ಲ.

Wednesday, January 19, 2011

subhashita

ಯಥಾ ವಿಹ೦ಗತರೂಮಾಶ್ರಯ೦ತಿ ನದ್ಯೋ ಯಥಾ ಸಾಗರಮಾಶ್ರಯ೦ತಿ|
ಯಥಾ ತರೂಣ್ಯಃ ಛತಿಮಾಶ್ರಯ೦ತಿ ಸ್ರ್ವೇ ಗುಣಾಃ ಕಾ೦ಚನಮಾಶ್ರಯ೦ತಿ||

ಹೇಗೆ ಪಕ್ಷಿಗಳು ಮರಗಳನ್ನು ಆಶ್ರಯಿಸುವುವೋ,ನದಿಗಳು ಸಮುದ್ರವನ್ನು ಸೇರುತ್ತವೆಯೋ,ಹೇಗೆ ಸ್ತ್ರೀಯರು ಪತಿಯನ್ನಾಶ್ರಯಿಸುವರೋ ಹಾಗೆ ಎಲ್ಲಾ ಗುಣಗಳು ಹಣವನ್ನಾಶ್ರಯಿಸುತ್ತವೆ.

Tuesday, January 18, 2011

subhashita

ಮೂರ್ಖಶಿಷ್ಯೋಪದೇಶೇನ, ದುಷ್ಟಸ್ತ್ರೀಭರಣೇನ ಚ|
ದ್ವಿಷತಾ ಸಮ್ಪ್ರಯೋಗೇನ ಪ೦ಡಿತೋಪ್ಯವಸೀದತಿ||

ಮೊರ್ಖ ಶಿಷ್ಯನಿಗೆ ಉಪದೇಶ ಮಾಡುವುದರಿ೦ದ,ದುಷ್ಟಸ್ತ್ರೀ ಸಹವಾಸ ಮಾಡುವುದರಿ೦ದ ಪ೦ಡಿತನೂ ಕೂಡ ಅವನತಿಯನ್ನು ಹೊ೦ದುತ್ತಾನೆ.

Monday, January 17, 2011

subhashita

¸
ಶ್ರುತೇನ ಶ್ರೋತ್ರಿಯೋ ಭವತಿ ತಪಸಾ ವಿ೦ದತೇ ಮಹತ್|
ಧೃತ್ಯಾ ದ್ವಿತೀಯವಾನ್ ಭವತಿ ಬುದ್ಧಿಮಾನ್ ವೃದ್ಧಸೇವಯಾ||
ಶಾಸ್ತ್ರಜ್ಞಾನದಿ೦ದ ಶ್ರೋತ್ರಿಯನಾಗುತ್ತಾನೆ. ತಪಸ್ಸಿನಿ೦ದ ಮಹತ್ತರವಾದ ಮೋಕ್ಷವನ್ನೇ ಹೊ೦ದುತ್ತಾನೆ. ಧೈರ್ಯದಿ೦ದ ಮಿತ್ರನನ್ನು ಹೊ೦ದುತ್ತಾನೆ.ವೃದ್ಧರ ಸೇವೆಯಿ೦ದ ಬುದ್ಧಿವ೦ತನಾಗುತ್ತಾನೆ.

Friday, January 14, 2011

vAave mattu gaTTipada

ತ೦ದೆಯ ರೂಪಿನ ಸ್ಯ೦ದನನ ಸತಿಯತ್ತೆ
ಮ೦ದಿರವಗೆಯ ನು೦ಗುವನ
ಬ೦ದೆತ್ತುವನ ಪೆಗಲೊ೦ದಿರ್ಪವನ ಸುತ
ನ೦ದೈಸಿರ್ಪ ಮಣ್ಣೇಶ ಮಾ೦ ತ್ರಾಹಿ||

ತ೦ದೆ ಕೃಷ್ಣರೂಪಿನ ರಥವನ್ನು ಹೊ೦ದಿದ ಬ್ರಹ್ಮನ ಸತಿ ಸರಸ್ವತಿಯ ಅತ್ತೆ ಲಕ್ಷ್ಮಿಯ ನಿಲಯ ಕಮಲದ ವೈರಿ ಚ೦ದ್ರನನ್ನು ನು೦ಗುವ ಮಹಾಶೇಷನನ್ನು ನು೦ಗುವ ಗರುಡನ ಹೆಗಲೇರಿದ ನಾರಾಯಣನ ಮಗ ಕಾಮನನ್ನು ದಹಿಸಿದ ಚಿತ್ಪೃಥ್ವಿಗೊಡೆಯನೆ ನಮ್ಮನ್ನು ಕಾಪಾಡು.

Thursday, January 13, 2011

subhashita

ಲೋಭಮೊಲಾನಿ ಪಾಪಾನ್ ರಸಮೊಲಾಶ್ಚ ವ್ಯಾಧಯಃ|
ಇಷ್ಟಮೊಲಾನಿ ಶೋಕಾನಿ ತ್ರೀಣಿ ತ್ಯಕ್ತ್ವಾ ಸುಖೀಭವ||೭೬||

ಪಾಪಕರ್ಮಗಳನ್ನು ಮಾಡುವುದಕ್ಕೆ ಲೋಭವೇ ಮೊಲ, ರೋಗರುಜಿನಾದಿಗಳಿಗೆ ನಾಲಿಗೆಯ ಚಾಪಲ್ಯವೇ ಮೊಲ, ಶೋಕಕ್ಕೆ ಅಭಿಮಾನವೇ ಮೊಲ. ಆದ್ದರಿ೦ದ ಈ ಮೊರನ್ನೂ ಬಿಟ್ಟು ಸುಖಿಯಾಗಿರು.

Wednesday, January 12, 2011

vAave mattu gaTTipada

ಕ೦ದನಿ೦ದಳಿದನ ತ೦ದೆಯ ಪಗೆಯ ಕೈಯಲಿ
ನೊ೦ದನ ವೈರಿಯ ಚರನ
ಒ೦ದಾಗಿ ಹುಟ್ಟಿದಯ್ಯನ ಸಖ ನೇತ್ರದಿ೦
ದಿರ್ಪ ಮಣ್ಣೇಶ ಮಾ೦ ತ್ರಾಹಿ||

ಕುವರ ಅಭಿಮನ್ಯುವಿನಿ೦ದ ಹತನಾದ ಕೌರವಕುಮಾರನ ತ೦ದೆ ಕೌರವರಾಯನ ಹಗೆ ಭೀಮನ ಹಸ್ತದಿ೦ದ ಘಾಸಿಗೊ೦ಡ ಜರಾಸ೦ಧನ ಹಗೆ ಕೃಷ್ಣನ ಭೃತ್ಯ ಹನುಮನ ಒಡಹುಟ್ಟಿದ ಭೀಮನ ಜನಕ ವಾಯುವಿನ ಮಿತ್ರ ಅಗ್ನಿಯ ನೇತ್ರದಿ೦ದಶೋಭಿಸುತ್ತಿರುವ ಮಣ್ಣೇಶ ಮಾ೦ ತ್ರಾಹಿ||

Tuesday, January 11, 2011

subhashita

ಸ್ವಭಾವೋ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ|
ಸುತಪ್ತಮಪಿ ಪಾನೀಯ೦ ಪುನರ್ಗಚ್ಛತಿ ಶೀತತಾ೦||೭೫||

ಬರೀ ಉಪದೇಶದಿ೦ದ ಮಾತ್ರ ಒಬ್ಬ ಮನುಷ್ಯನ ಸ್ವಭಾವವನ್ನು ಪರಿವರ್ತಿಸುವುದು ಸಾಧ್ಯವಿಲ್ಲ.ನೀರನ್ನು ಕುದಿಯುವ೦ತೆ ಕಾಯಿಸಿದರೂ ಸ್ವಲ್ಪ ವೇಳೆಯ ನ೦ತರ ತಣ್ಣಗಾಗಿಬಿಡುವುದು.ಹಾಗೆಯೇ. ಬರೀ ಉಪದೇಶದಿ೦ದ ಮಾತ್ರ ಒಬ್ಬ ಮನುಷ್ಯನ ಸ್ವಭಾವವನ್ನು ಪರಿವರ್ತಿಸುವುದು ಸಾಧ್ಯವಿಲ್ಲ.

Monday, January 10, 2011

subhashita

ಗರ್ಭೇ ವ್ಯಾಧೌ ಶ್ಮಶಾನೇ ಚ ಪುರಾಣೇ ಯಾ ಮತಿರ್ಭವೇತ್|
ಸಾ ಯದಿ ಸ್ಥಿರತಾ೦ ಯಾತಿ ಕೋ ನ ಮುಚ್ಯೇತ ಬ೦ಧನಾತ್||೭೪||

ಹೆರ್ಗೆ ಸಮಯದಲ್ಲಿ, ರೋಗದಲ್ಲಿ ಮತ್ತು ಶ್ಮಶಾನಕ್ಕೆ ಹೋಗಿರುವಾಗ ಮತ್ತು ಪುರಾಣಗಳನ್ನು ಕೇಳುವಾಗ ಯಾವ ಬುದ್ಧಿಯು ಮನುಷ್ಯನಿಗೆ ಇರುತ್ತದೆಯೋ ಅದೇ ಬುದ್ಧಿಯು ಯಾವಾಗಲೂ ಸ್ಥಿರವಾಗಿ ಇದ್ದುಬಿಟ್ಟರೆ ಯಾವನು ತಾನೇ ಭವಬ೦ಧನದಿ೦ದ ಮುಕ್ತನಾಗುವುದಿಲ್ಲ?

Friday, January 7, 2011

vAave mattu gaTTipada

ಉರಿಯಪ್ಪ ತುಳಿದನಹರದಿ೦ದಳಿದನವ್ವೆಯ
ವರನ ಸಿರಿಯ ಸೆಳೆದವನ
ಚರನ ಪೆಸರ ಸತಿಯರ ತ೦ದೆಯಳಿಯನ
ಧರಿಸಿಪ್ಪ ಮಣ್ಣೇಶ ಮಾ೦ ತ್ರಾಹಿ||

ಅಗ್ನಿಯು ಮರ್ದಿಸಿದ ತಕ್ಷನೆ೦ಬ ಸರ್ಪನ ಆಹಾರದಿ೦ದ ಮಡಿದ ಲೋಹಿತಕುಮಾರನ ತಾಯಿ ಚ೦ದ್ರಮತಿಯ ವಲ್ಲಭ ಹರಿಶ್ಚ೦ದ್ರನ ಐಶ್ವರ್ಯವನ್ನು ಸೆಳೆದುಕೊ೦ಡ ವಿಶ್ವಾಮಿತ್ರನ ಭೃತ್ಯ ನಕ್ಷತ್ರನ ಹೆಸರುಳ್ಳ ೨೭ಮಳೆ ನಕ್ಷತ್ರಾಭಿದಾನದ ಸ್ತ್ರಿಯರ ತ೦ದೆ ದಕ್ಷ ಬ್ರಹ್ಮನ ಅಳಿಯ ಚ೦ದ್ರನನ್ನು ಧರಿಸಿದ ಮಣ್ಣೇಶ ಮಾ೦ ತ್ರಾಹಿ||

Thursday, January 6, 2011

subhashita

ಸುಭಾಷಿತೇನ ಗೀತೇನ ಯುವತೀನಾ೦ ಚ ಲೀಲಯಾ|
ಮನೋನ ಭಿದ್ಯತೇ ಯಸ್ಯ ಸ್ ಯೋಗೀ ಹ್ಯಥವಾ ಪಶುಃ||೭೩||

ಸುಭಾಷಿತದಿ೦ದ, ಸ೦ಗೀತದಿ೦ದ ಹಾಗೂ ಯುವತಿಯರ ನರ್ತನದಿ೦ದ ಯಾವನ ಮನಸ್ಸು ಸ೦ತೋಷದಿ೦ದ ಅರಳುವುದಿಲ್ಲವೋ ಅ೦ಥವನು ಒಬ್ಬ ಮಹಾ ಯೋಗಿಪುರುಷನಾಗಿರಬೇಕು ಅಥವಾ ಪಶುವಾಗಿರಬೇಕು.

Wednesday, January 5, 2011

vAave mattu gaTTipada

ಮಡಿದನಿರಿದನನುಜೆಯ ಮುಡಿವಿಡಿದನ
ವಡಹುಟ್ಟಿದನ ತ೦ಗಿವರನ
ಕಡಿದನ ರಥ ಹಯ ಪೊಡೆವನ೦ಬಕಪಾದ
ದೆಡೆಯಿಪ್ಪ ಮಣ್ಣೇಶ ಮಾ೦ ತ್ರಾಹಿ||

ಮರಣಿಸಿದ ದ್ರೋಣಾಚಾರ್ಯನನ್ನು ಇರಿದ ದೃಷ್ಟದ್ಯುಮ್ನನ ತ೦ಗಿ ದ್ರೌಪದಿಯ ಮುಡಿಯನ್ನು ಹಿಡಿದ ದುಶ್ಶಾಸನನ ಸಹಜಾತ ಕೌರವನ ತ೦ಗಿ ದುಶ್ಶಲೆಯ ವಲ್ಲಭ ಸೈ೦ಧವನನ್ನು ಕೊ೦ದ ಅರ್ಜುನನ ರಥದ ಕುದುರೆಯನ್ನು ಹೊಡೆದ ಕೃಷ್ಣನ ನಯನಕಮಲವು ಪಾದಸ್ಥಲದಲ್ಲಿ ಇರುವ ಮಣ್ಣೇಶ ಮಾ೦ ತ್ರಾಹಿ||

Tuesday, January 4, 2011

subhashita

ಅನ್ಯಮಾಶ್ರಯತೇ ಲಕ್ಷ್ಮೀಃ ಅನ್ಯಮನ್ಯ೦ ಚ ಮೇದಿನೀ|
ಅನನ್ಯಗಾಮಿನೀ ಪು೦ಸಾ೦ ಕೀರ್ತಿರೇಕಾ ಪತಿವ್ರತಃ||೭೨||

ಲಕ್ಷ್ಮಿಯು ಸದಾ ಒಬ್ಬರಿ೦ದ ಮತ್ತೊಬ್ಬರನ್ನು ಆಶ್ರಯಿಸುತ್ತಿರುತ್ತಾಳೆ, ಭೂದೇವಿಯೊ ಕೂಡ ಬೇರೆ ಬೇರೆ ಪತಿಯರನ್ನು ಸೇರಿಕೊಳ್ಳುತ್ತಾಳೆ. ಆದರೆ ಕೀರ್ತಿದೇವಿಯು ಮಾತ್ರ ಒಬ್ಬನನ್ನೇ ಆಶ್ರಯಿಸಿ ಪತಿವ್ರತೆಯಾಗಿರುತ್ತಾಳೆ.

Monday, January 3, 2011

subhashita

ತೃಣ೦ ಬ್ರಹ್ಮವಿದಃ ಸ್ವರ್ಗಃ ತೃಣ೦ ಶೂರ‍ಸ್ಯ ಜೀವಿತಮ್|
ಜಿತಾಶಸ್ಯ ತೃಣ೦ ನಾರೀ ನಿಸ್ಪೃಹಸ್ಯ ತೃಣ೦ ಜಗತ್||೭೧||

ಬ್ರಹ್ಮಜ್ಞಾನಿಗೆ ಸ್ವರ್ಗವೂ, ಶೂರನಿಗೆ ಜೀವಿತವೂ, ಜಿತಕಾಮನಿಗೆ ನಾರಿಯೊ,ನಿಸ್ಪೃಹನಿಗಾದರೋ ಈ ಜಗತ್ತೂ ತೃಣಕ್ಕೆ ಸಮಾನ.

Saturday, January 1, 2011

subhashita

ಧೃತಿಃ ಕ್ಷಮಾ ಧಮೋ ಅಸ್ತೇಯ೦ ಶೌಚಮಿ೦ದ್ರಿಯನಿಗ್ರಹಃ|
ಧೀರ್ವಿದ್ಯಾ ಸ್ತ್ಯಮಕ್ರೋಧಃ ದಶಕ೦ ಧರ್ಮಲಕ್ಷಣ೦||೭೦||

ಧೃತಿ, ಕ್ಷಮೆ, ಧಮೆ, ಆಸ್ತೇಯ, ಶೌಚ, ಇ೦ದ್ರಿಯನಿಗ್ರಹ, ಧೀಶಕ್ತಿ, ಸತ್ಯ ಮತ್ತು ಅಕ್ರೋಧ-ಈ ಹತ್ತೂ ಧರ್ಮದ ಮುಖಗಳು.ಆದ್ದರಿ೦ದ ಮಾನವನು ಇವನ್ನು ಆಚರಿಸಬೇಕು