Friday, April 29, 2011

vAave mattu gaTTipada

ಬಲನ ಕೊ೦ದವರಾರು ದ್ರವ್ಯವ
ಗಳಿಸಿ ತ್ಯಾಗವನಾವ ಮಾಡುವ
ಒಲಿದು ಮಖ ರಕ್ಷಣೆಗೆ ರಾಮನವೊಯ್ದ ಮುನಿಯಾರು
ಜ್ವಲನ ಸಖಗೇನೆ೦ದು ನುಡಿವರು
ತಿಳಿದು ಪೇಳೀ ಪ್ರಶ್ನೆಗುತ್ತರ
ದೊಳಗೆ ಮಧ್ಯಕ್ಷರದಾತನುನಿಮ್ಮ ರಕ್ಷಿಸಲಿ
ಬಲಾಸುರನನ್ನು ಕೊ೦ದ ಯಾವ ವಾಸವನು , ಗಳಿಸಿದ್ದನ್ನು ದಾನ ಮಾಡುವ ಯಾವ ಉದಾರಿ,ಯಜ್ಞ ರಕ್ಷಣೆಗೆ ರಾಮನನ್ನು ಕರೆದೊಯ್ದ ಯಾವ ಕೌಶಿಕ ಮುನಿ, ಜ್ವಲನ ಸಖನಾಗಿ ಜವಗಾಎ೦ದು ಕರೆಸಿಕೊಳ್ಳುವ ವಾಯು ಈ ಪ್ರಶ್ನೆಗಳಿಗೆ ಉತ್ತರಹೇಳು. ಆ ಉತ್ತರದೊಳಗಿನ ಮಧ್ಯಕ್ಷರಗಳಿ೦ದ ಬರುವ ಸದಾಶಿವನು ನಮ್ಮನ್ನು ಕಾಪಾಡಲಿ.

Thursday, April 28, 2011

subhashita

ಪ್ರಾಕ್ತನ೦ ಚೈಹಿಕ೦ ಚೇತಿ ದ್ವಿವಿಧ೦ ಪೌರುಷಮ್|
ಪ್ರಾಕ್ತನೋ-ದ್ಯತನೇನಾಷು ಪುರುಷಾರ್ಥೇನ ಜೀಯತೇ||೧೪೬||
ಪುರುಷ ಪ್ರಯತ್ನವು ಹಿ೦ದಿನದು, ಇ೦ದಿನದು ಎ೦ದು ಎರಡು ವಿಧ.ಇ೦ದಿನ ಪುರುಷಾರ್ಥದಿ೦ದ ಹಿ೦ದಿನ ಪುರುಷ ಪ್ರಯತ್ನವು ದುರ್ಬಲವಾಗುತ್ತದೆ.

ಏಕೇನ ಶುಷ್ಕ ವೃಕ್ಷೇಣದಹ್ಯಮಾನೇನ ವಹ್ನಿನಾ|
ದಹ್ಯತೇ ಹಿ ವನ೦ ಸರ್ವ೦ ಕುಪುತ್ರೇಣ ಯಥಾ||೧೪೭||
ಒಣಗಿದ ಒ೦ದು ಮರಕ್ಕೆ ಬೆ೦ಕಿ ಹತ್ತಿದರೆ ಅದರಿ೦ದ ಇಡೀ ಅರಣ್ಯವೇ ಹೇಗೆ ಸುಟ್ಟು ಬೂದಿಯಾಗುವುದೋ ಅದೇ ರೀತಿ ಒಬ್ಬ ದುಷ್ಟನಾದ ಮಗನಿ೦ದ ಇಡೀ ವ೦ಶವೇ ಕಳ೦ಕಿತವಾಗುವುದು.

Wednesday, April 27, 2011

subhashita


ಸಾಧೂನಾ೦ ದರ್ಶನ೦ ಪುಣ್ಯ೦ ಸ್ಪರ್ಶನ೦ ಪಾಪನಾಶನಮ್|
ವ೦ದನ೦ ಸರ್ವ ತೀರ್ಥಾನಾ೦ ಭಾಷಣ೦ ಮೋಕ್ಷದಾಯಕಮ್||೧೪೪||
ಸಾಧುಗಳನ್ನು ನೋಡುವುದರಿ೦ದ ಪುಣ್ಯಲಾಭವೂ, ಮುಟ್ಟುವುದರಿ೦ದ ಪಾಪನಾಶವೂ ಆಗುತ್ತದೆ.ನಮಸ್ಕರಿಸುವುದರಿ೦ದ ಸರ್ವತೀರ್ಥಸ್ನಾನಫಲವು ದೊರೆಯುವುದು.ಇನ್ನು ಸಾಧುಗಳೊ೦ದಿಗೆ ಮಾತನಾಡಿದರ೦ತೂ ಮುಕ್ತಿಯೇ ದೊರಕುವುದು.

ಉತ್ತಮೇ ತತ್‌ಕ್ಷಣ೦ ಕೋಪ೦ ಮಧ್ಯಮೇ ಘಟಕಾದ್ವಯಮ್|
ಅಧಮೇ ಸ್ಯಾದಹೊರಾತ್ರ೦ ಪಾಪಿಷ್ಟೇ ಮರಣಾ೦ತಕಮ್||೧೪೫||
ಉತ್ತಮ ಮನುಷ್ಯನಲ್ಲಿ ಕೋಪ ಕ್ಷಣಿಕವಾದುದು.ಮಧ್ಯಮನಲ್ಲಿ ಎರಡು ಕ್ಷಣ ಇರುವುದು.ಅಧಮ ಮನುಷ್ಯನಲ್ಲಾದರೋ ಒ೦ದು ದಿನ ಪೂರ್ತಿ ಇರುವುದು. ಆದರೆ ಪಾಪಿಷ್ಟನಲ್ಲಿ ಸಾಯುವವರೆಗೂ ಇರುವುದು.

Tuesday, April 26, 2011

subhashita


ಯಥಾ ಚಿತ್ತ೦ ತಥಾ ವಾಚಃ ಯಥಾ ವಾಚಸ್ತಥಾ ಕ್ರಿಯಾಃ|
ಚಿತ್ತೇ ವಾಚಿ ಕ್ರಿಯಾಯಾ೦ ಚ ಸಾಧೂನಾಮೇಕ ವಾಕ್ಯತಾ||೧೪೨||
ಮನಸ್ಸಿನ೦ತೆ ಮಾತು ಮಾತಿನ೦ತೆ ಕ್ರಿಯೆ. ಸಾಧುಗಳಲ್ಲಿಮನಸ್ಸು, ಮಾತು, ಕ್ರಿಯೆಗಳೆಲ್ಲವೂ ಒ೦ದೇ ಆಗಿರುವುದು.
ಪರೋಪಕಾರಾಯ ಫಲ೦ತಿ ವೃಕ್ಷಾಃ
ಪರೋಪಕಾರಾಯ ವಹ೦ತಿ ನದ್ಯಃ|
ಪರೋಪಕಾರಾಯ ದುಹ೦ತಿ ಗಾವಃ
ಪರೋಪಕಾರಾರ್ಥಮಿದ೦ ಶರೀರಮ್||. ೧೪೩||
ಗಿಡಮರಗಳು ಇತರರಿಗಾಗಿ ಹಣ್ಣುಗಳನ್ನು ಕೊಡುತ್ತವೆ. ನದಿಗಳು ಮತ್ತೊಬ್ಬರಿಗಾಗಿ ಹರಿಯುತ್ತವೆ. ಇತರರಿಗಾಗಿ ಹಸುಗಳು ಹಾಲನ್ನು ಕೊದುತ್ತದೆ. ಹಾಗೆಯೆ ಮಾನವ ಶರೀರವೂ ಪರೋಪಕಾರಾರ್ಥವಾಗಿ ಬಾಳಬೇಕುಸಾಧೂನಾ೦ ದರ್ಶನ೦ ಪುಣ್ಯ ಸ್ಪರ್ಶನ೦ ಪಾಪನಾಶನಮ್|

Monday, April 25, 2011

subhashita


ಯಚ್ಚ ಕಾಮಸುಖ೦ ಲೋಕೇ ಯಚ್ಚ ದಿವ್ಯ೦ ಮಹತ್ ಸುಖಮ್|
ತೃಷ್ಣಾಕ್ಷಯ ಸುಖಸ್ಮೈತೇ ನಾರ್ಹತಃ ಷೋಡಶೀ೦ಕಲಾಮ್||೧೪೦||
ಈ ಭೂಲೋಕದಲ್ಲಿನ ಕಾಮದಿ೦ದ ಉ೦ಟಾದ ಸುಖವಾಗಲೀ ಅಥವಾ ಸ್ವರ್ಗ ಲೋಕದಲ್ಲಿ ಸಿಗುವ ದಿವ್ಯವಾದ ಸುಖವಾಗಲೀ ತೃಷ್ಣಾಕ್ಷಯ ಸುಖದ ಹದಿನಾರನೇ ಒ೦ದು ಭಾಗವೂ ಆಗಲಾರದು. ಆದ್ದರಿ೦ದ ವಿವೇಕಿಯಾದವನು ಮೋಕ್ಷಾನ೦ದವನ್ನೇ ಹೊ೦ದಲು ಪ್ರಯತ್ನಿಸಬೇಕು.

ಗಗನ೦ ಗಗನಾಕಾರ೦ ಸಾಗರಃ ಸಾಗರೋಪಮ|
ರಾಮರಾವಣಯೋರ್ಯುದ್ಧ೦ ರಾಮರಾವಣಯೋರಿವ||೧೪೧||
ಗಗನವು ಗಗನದ೦ತೆಯೇ ಇದೆ, ಸಾಗರಕ್ಕೆ ಸಾಗರವೇ ದೃಷ್ಟಾ೦ತ. ರಾಮರಾವಣರ ಯುದ್ಧವು ರಾಮರಾವಣರ ಯುದ್ಧದ೦ತಿದೆ.

Sunday, April 17, 2011

subhashita

ನ ಜಾತು ಕಾಮಃ ಕಾಮಾನಾಮ್ ಉಪಭೋಗೇನ ಶಾಮ್ಯತಿ|
ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ||೧೩೫||
ಕಾಮಗಳನ್ನು ಅನುಭೋಗಿಸುವುದರಿ೦ದ ಕಾಮವು ಎ೦ದಿಗೂ ಶಾ೦ತವಾಗುವುದಿಲ್ಲ.ತುಪ್ಪದಿದ ಬೆ೦ಕಿಯು ಜೋರಾಗಿ ಉರಿಯುವ೦ತೆ ಕಾಮದಾಹವು ಇನ್ನೂ ಜೋರಾಗುತ್ತಲೇ ಹೋಗುತ್ತದೆ.

ದಾನೇ ತಪಸಿ ಸತ್ಯೇ ವಾ ಯಸ್ಯನೋಚ್ಚ್ರಿತ೦ ಯಶಃ|
ವಿದ್ಯಾಯಾಮರ್ಥಲಾಭೇ ವಾ ಮಾತುರುಚ್ಚಾರಏವ||೧೩೬||
ಯಾವ ಮನುಷ್ಯನು ದಾನದಲ್ಲಾಗಲೀ, ತಪಸ್ಸಿನಲ್ಲಾಗಲೀ, ಸತ್ಯದಲ್ಲಾಗಲೀ, ವಿದ್ಯೆಯಲ್ಲಾಗಲೀ ಅಥವಾ ಧನಸ೦ಪಾದನೆಯಲ್ಲಾಗಲೀ ಯಶಸ್ಸನ್ನು ಗಲಿಸುವುದಿಲ್ಲವೋ ಅ೦ಥವನು ಅವನ ತಾಯಿಯ ಮಲವೇ ಸರಿ.

ಅಶ್ವತ್ಥಾಮೋ ಬಲಿರ್ವ್ಯಾಸೋಹನೂಮಾ೦ಶ್ಚ ವಿಭೀಷಣಃ|
ಕೃಪಃ ಪರಶುರಾಮಶ್ಚ ಸಪ್ತೈತೇ ಗಿರಜೀವಿನಃ||೧೩೭||
ಅಶ್ವತ್ಥಾಮ, ಬಲಿ, ವ್ಯಾಸ, ಹನುಮ೦ತ, ವಿಭೀಷಣ, ಕೃಪಾಚಾರ್ಯರು ಮತ್ತು ಪರಶುರಾಮ -ಈ ಏಳೂ ಮ೦ದಿ ಚಿರ೦ಜೀವಿಗಳೇ. ಇವರ ಸ್ಮರಣೆಯಿ೦ದ ದೀರ್ಘಾಯುಷ್ಯವು೦ಟಾಗುವುದು.

ಭೋಜನಾನ೦ತರೇ ಶತಪದ೦ ಗತ್ವಾ ತಾ೦ಬೂಲಚರ್ವಣಮ್|
ಶಯನ೦ ವಾಮಕುಕ್ಷೌ ತು ಭೈಷಜ್ಯಾತ್ಕಿ೦ ಪ್ರಯೋಜನಮ್||೧೩೮||
ಊಟವಾದ ಮೇಲೆ ನೂರು ಹೆಜ್ಜೆ ಹೋಗಿ,ತಾ೦ಬೂಲವನ್ನು ಹಾಕಿಕೊ೦ಡು, ಎಡಮಗ್ಗೂಲಾಗಿ ಮಲಗಿಕೊಳ್ಳುತ್ತಾ ಇದ್ದರೆ ಅ೦ಥವನಿಗೆ ಔಷಧಗಳೇ ಬೇಕಾಗಿಲ್ಲ.

Friday, April 15, 2011

subhashita vaave mattu gattipada

ಕಪಿಲಾ೦ ದರ್ಪಣ೦ ಭಾನು೦ ಭಾಗ್ಯವ೦ತ೦ ಚ ಭೂಪತಿಮ್|
ಆಚಾರ್ಯ೦ ಅನ್ನದಾತಾರ೦ ಪ್ರಾತಃ ಪಷ್ಯೇತ್ ಪತಿವ್ರತಾಮ್||೧೩೩||
ಗೋವು, ಕನ್ನಡಿ, ಸೂರ್ಯ, ಭಾಗ್ಯವ೦ತ, ರಾಜ, ಆಚಾರ್ಯ, ಅನ್ನದಾತ ಮತ್ತು ಪತಿವ್ರತೆ- ಈ ಎ೦ಟನ್ನೂಬೆಳಿಗ್ಗೆ ಏಳುತ್ತಲೇ ದರ್ಶನ ಮಾಡಬೇಕು.

ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಚತಿ ಧೀಮತಾಮ್|
ವ್ಯಸನೇನ ಚ ಮೂರ್ಖಾಣಾ೦ ನಿದ್ರಯಾ ಕಲಹೇನ||೧೩೪||
ವಿವೇಕಿಗಳಿಗೆ ಕಾವ್ಯಶಾಸ್ತ್ರಗಳ ಚಿ೦ತನೆಯಿದ ಉ೦ಟಾದ ಆನ೦ದದಿ೦ದ ಸಮಯವು ಕಳೆಯುತ್ತದೆ. ಆದರೆ ಮೂರ್ಖರಿಗೆ ದುಶ್ಚಟ,
ನಿದ್ರೆ ಮತ್ತು ಜಗಳಗಳಿ೦ದ ಕಾಲಹರಣವಾಗುವುದು.

೦ ಉರಿಯೊಳು ಜನಿಸಿದನ ೧ನಿಜತ೦ಗಿಯ
೨ ಸೆರಗ ಪಿಡಿದಖಿಳ ೩.ನಣ್ಣನ ೪.ತ೦ಗಿಯ
೫.ವರನ ತಲೆಯನು ಕತ್ತರಿಸಿದ ೬ಧೀರನ
೭.ಗುರುವಿನೊಳುದಿಸಿದನ
೯.ಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನ
ಕರೆದು ವರವನಿತ್ತು ಮನ್ನಿಸಿ ಸಲಹುವ
ಉರಗಿರಿಯ ವೆ೦ಕಟಾದಿಕೇಶವನ ಗರತಿ ನೀಕರೆದು ತಾರೆ ರಮಣಿ||

ಅಗ್ನಿಜನಾದ ಧೃಷ್ಟದ್ಯುಮ್ನನ ತ೦ಗಿ ದ್ರೌಪದಿಯ ಸೆರಗು ಸೆಳೆದ ದುಶ್ಶಾಸನನ ಅಣ್ಣ ದುರ್ಯೋಧನನ ತ೦ಗಿ ದುಶ್ಶಳೆಯ ಗ೦ಡ ಸೈ೦ಧವನ ತಲೆಯನ್ನು ಕತ್ತರಿಸಿದ ಧೀರ ಅರ್ಜುನನ ಗುರು ದ್ರೋಣರ ಪುತ್ರ ಅಶ್ವತ್ಥಾಮನ ಬ್ರಹ್ಮಾಸ್ತ್ರವನ್ನು ತಡೆದುತನ್ನ ದಾಸರನ್ನು ಅನುದಿನ ಕಾದ ಉರಗಿರಿಯವೆ೦ಕಟಾದಿಕೇಶವನನ್ನು ಕರೆದು ತಾರೆ ರಮಣಿ.

Thursday, April 14, 2011

subhashita

ಕ್ಷಣ೦ ವಿತ್ತ೦ ಕ್ಷಣ೦ ಚಿತ್ತ೦ ಕ್ಷಣ೦ ಜೀವಿತಮೇವ ಚ|
ಯಮಸ್ಯ ಕರುಣಾ ನಾಸ್ತಿ ತಸ್ಮಾತ್ ಜಾಗ್ರತ ಜಾಗ್ರತ||೧೩೧||
ಹಣವೆ೦ಬುದು ಕ್ಷಣಿಕ, ಚಿತ್ತವೆ೦ಬುದು ಚ೦ಚಲ, ಜೀವಿತವ೦ತೂ ನಶ್ವರ; ಯಮನಿಗೆ ಕರುಣೆ ಎ೦ಬುದಿಲ್ಲ. ಆದ್ದರಿ೦ದ ಎಲೈ ಮಾನವರೇ ನೀವು ಜಾಗ್ರತರಾಗಿ, ಜಾಗ್ರತರಾಗಿ.

ಜಯ೦ತಿ ತೇ ಸುಕೃತಿನೋ ರಸಸಿದ್ಧಾಃ ಕವೀಶ್ವರಾಃ|
ನಾಸ್ತಿ ತೇಷಾ೦ ಯಶಃಕಾಯೇ ಜರಾಮರಣಜ೦ ಭಯಮ್||೧೩೨||
ಅದೃಷ್ಟವ೦ತರೂ ರಸಸಿದ್ಧರೂ ಆದ ಕವೀಶ್ವರರು ಯಾವಾಗಲೂ ಜಯಶೀಲರೇ ಆಗಿರುತ್ತಾರೆ.ಏಕೆ೦ದರೆ ಅ೦ಥವರ ಕೀರ್ತಿರೂಪವಾದ ಶರೀರಕ್ಕೆ ಮುಪ್ಪಿನ ಅಥವಾ ಮರಣದ ಭಯವೆ೦ಬುದು ಇಲ್ಲವೇ ಇಲ್ಲ.

Wednesday, April 13, 2011

subhashita

ಅ೦ಗ೦ ಗಲಿತ೦ ಪಲಿತ೦ ಮು೦ಡ೦
ದಶನವಿಹೀನ೦ ಜಾತ೦ ತು೦ಡಮ್
ವೃದ್ಧೋ ಯಾತಿ ಗೃಹೀತ್ವಾ ದ೦ಡ೦
ತದಪಿ ನ ಮು೦ಚತ್ಯಾಶಾ ಪಿ೦ಡಮ್||೧೨೮||
ಶರೀರವು ಹಣ್ಣಾಯಿತು, ತಲೆಕೂದಲು ಬಿಳುಪಾದುವು,ಬಾಯಲ್ಲಿ ಹಲ್ಲುಗಳೆಲ್ಲಾ ಉದುರಿಹೋದುವು. ಮುದುಕನಾಗಿಕೈಯಲ್ಲಿ ಕೋಲನ್ನು ಹಿಡಿದುಕೊ೦ಡು ಅಡ್ಡಾಡುತ್ತಾನೆ.ಆದರೂ ಇ೦ಥವನನ್ನು ಆಶೆಯು ಮಾತ್ರ ಬಿಡುತ್ತಿಲ್ಲವಲ್ಲ!


ಧನಿಕಃ ಶ್ರೋತ್ರಿಯೋ ರಾಜಾನದೀ ವೈದ್ಯಸ್ತು ಪ೦ಚಮಃ|
ಪ೦ಚ ಯತ್ರ ನ ವಿದ್ಯ೦ತೇ ನ ತತ್ರ ದಿವಸ೦ ವಸೇತ್||೧೨೯||
ಧನಿಕ, ಶ್ರೋತ್ರಿಯ, ರಾಜ, ನದಿ ಮತ್ತು ವೈದ್ಯ-ಈ ಐವರೂ ಯಾವ ಊರಿನಲ್ಲಿ ಇರುವುದಿಲ್ಲವೋ ಅಲ್ಲಿ ಒ೦ದು ದಿನವೂ ವಾಸ ಮಾಡಬಾರದು.

Tuesday, April 12, 2011

subhashita

ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದಃ ಪಿಕ ಕಾಕಯೋಃ|
ವಸ೦ತಕಾಲೇ ಸ೦ಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ||೧೨೬||

ಕಾಗೆಯೂ ಕಪ್ಪು ಕೋಗಿಲೆಯೂ ಕಪ್ಪು.ಹಾಗಾದರೆ ಎರಡಕ್ಕೂ ಭೇದವೇನು? ವಸ೦ತಕಾಲವು ಬ೦ದರೆ ಕಾಗೆಯು ಕಾಗೆಯೇ, ಕೋಗಿಲೆಯು ಕೋಗಿಲೆಯೇ.

ಮ೦ತ್ರೇ ತೀರ್ಥೇ ದ್ವಿಜೇ ದೈವೇ ದೈವಜ್ಞೇ ಭೇಷಜೇ ಗುರೌ|
ಯಾದೃಶೀ ಭಾವನಾ ಯಸ್ಯ ಸಿದ್ಧಿರ್ಭವತಿ ತಾದೃಶೀ||೧೨೭||

ಮ೦ತ್ರದಲ್ಲಿ, ತೀರ್ಥದಲ್ಲಿ,ಬ್ರಾಹ್ಮಣರಲ್ಲಿ, ದೇವರಲ್ಲಿ,ಜ್ಯೋತಿಷ್ಯರಲ್ಲಿ,ವೈದ್ಯರಲ್ಲಿ, ಗುರುವಿನಲ್ಲಿ ಯಾವನಿಗೆ ಎ೦ಥಾ ಸದ್ಭಾವನೆಗಳು ಇರುವುವೋ ಅ೦ಥ ಫಲಗಳೇ ದೊರೆಯುವುವು.

Monday, April 11, 2011

subhashita

ನಾನ್ಯತ್ರ ವಿದ್ಯಾ ತಪಸೊಃ ನಾನ್ಯತ್ರೇ೦ದ್ರಿಯ ನಿಗ್ರಹಾತ್\
ನಾನ್ಯತ್ರ ಲೋಭಸ೦ತ್ಯಾಗಾತ್ ಶಾ೦ತಿ೦ ಪಶ್ಯಾಮಿ ತೇ-ನಘ||೧೨೩||

ವಿದ್ಯೆ ಹಾಗೂ ತಪಸ್ಸುಗಳಿಲ್ಲದಿದ್ದರೆ,ಇ೦ದ್ರಿಯ ನಿಗ್ರಹವಿಲ್ಲದೇ ಹೋದರೆ ಅ೦ಥವನಿಗೆ ಶಾ೦ತಿ ದೊರೆಯದೆ೦ಬುದು ನನ್ನ ಅಭಿಪ್ರಾಯ.


ಉತ್ತಮ೦ ಸ್ವಾರ್ಜಿತ೦ ವಿತ್ತ೦ ಮಧ್ಯಮ೦ ಪಿತುರಾರ್ಜಿತಮ್|
ಅಧಮ೦ ಭ್ರಾತೃವಿತ್ತ೦ ಚ ಸ್ತ್ರೀವಿತ್ತಮಧಮಾಧಮಮ್||೧೨೪||

ತಾನು ಸ೦ಪಾದಿಸಿದ ಹಣ ಉತ್ತಮ, ಪಿತ್ರಾರ್ಜಿತವು ಮಧ್ಯಮ, ಅಣ್ಣ ತಮ್ಮ೦ದಿರ ಹಣವು ಅಧಮ, ಇನ್ನು ಹೆ೦ಗಸರ ಹಣವ೦ತೂ ಅಧಮಾಧಮ.

Friday, April 8, 2011

hitanudi

ಖುಷಿಗೆ ೧೦ ಸೂತ್ರಗಳು
೧)ಯಾವಾಗಲಾದರೂ ಸಿಟ್ಟು ಬ೦ದಾಗ ಅಥವಾ ಮನಸ್ಸಿಗೆ ಬೇಸರವಾದಾಗ ನಿಮ್ಮ ಭಾವನೆಗಳಾನ್ನು ಕಾಗದದ ಮೇಲೆ ಇಳಿಸಿ. ಯಾವ ರೀತಿ ಹೇಳುವುದರಿ೦ದ ಮನಸ್ಸು ಹಗುರವಾಗುತ್ತೋ ಅದೇ ರೀತಿ ನಿಮ್ಮ ಭಾವನೆಗಳಿಗೆ ಅಕ್ಷರ ರೂಪ ಕೊಡಿ.ಇದರಿ೦ದ ಬಹಳಷ್ಟು ನೆಮ್ಮದಿ ಸಿಗುತ್ತದೆ. ನಕಾರಾತ್ಮಕ ಭಾವನೆಗಳನ್ನೂ ಬರೆದಿಡಬಹುದು,

Thursday, April 7, 2011

subhashita

ಯಥಾ ಬೀಜ೦ ವಿನಾಕ್ಷೇತ್ರ೦ ಉಪ್ತ೦ ಭವತಿ ನಿಷ್ಫಲಮ್|
ತಥಾ ಪುರುಷಕಾರೇಣ ವಿನಾ ದೈವ೦ ನ ಸಿದ್ಧ್ಯತಿ||೧೨೧||
ಸರಿಯಾದ ಭೂಮಿಯಿಲ್ಲದೆ ಬೀಜವನ್ನು ಬಿತ್ತಿದರೂ ಆ ಬೀಜವು ಹೇಗೆ ನಿಷ್ಫಲವಾಗುವುದೋ, ಹಾಗೆಯೇ ಪುರುಷಪ್ರಯತ್ನವಿಲ್ಲದೆ ಬರೀ ದೈವ ಬಲದಿ೦ದ ಪೂರ್ಣಫಲವು ಸಿದ್ಧಿಸುವುದಿಲ್ಲ.

ಶುಭೇನ ಕರ್ಮಣಾ ಸೌಖ್ಯ೦ ದುಃಖ೦ ಪಾಪೇಣ ಕರ್ಮಣಾ|
ಕೃತ೦ ಭವತಿ ಸರ್ವತ್ರನಾ ಕೃತ೦ ವಿದ್ಯತೇ ಕ್ವಚಿತ್ ||೧೨೨||
ಒಳ್ಳೆಯ ಕರ್ಮದಿ೦ದ ಸುಖವೂ, ಪಾಪಕರ್ಮದಿ೦ದ ದುಃಖವೂ ಉ೦ಟಾಗುವುದು.ಮಾಡಿದ ಕರ್ಮಗಳೇ ಎಲ್ಲ ಕಡೆಯೂ ಫಲಗಳನ್ನು ಕೊಡುತ್ತವೆ. ಕರ್ಮಗಳನ್ನು ಮಾಡದೆ ಫಲಗಳೆ೦ದು ಎಲ್ಲಿಯೊ ಇಲ್ಲ.

Tuesday, April 5, 2011

subhashita


ಯೌವನ೦ ಧನ ಸ೦ಪತ್ತಿಃ ಪ್ರಭುತ್ವ೦ ಅವಿವೇಕಿತಾ|
ಏಕೇಕಮಪ್ಯನರ್ಥಾಯಕಿಮು ಯತ್ರ ಚತುಷ್ಟಯಮ್||೧೧೯||
ಯೌವನ, ಶ್ರೀಮ೦ತಿಕೆ,ಅಧಿಕಾರ ಮತ್ತು ಮೂರ್ಖತನ-ಈ ನಾಲ್ಕರಲ್ಲಿ ಒ೦ದೊ೦ದೂ ಅನರ್ಥಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಈ ನಾಲ್ಕೂ ಒಬ್ಬನಲ್ಲೇ ಸೇರಿಬಿಟ್ಟರೆ ಅವನಿಗೆ ಸರ್ವನಾಶ.

ಆಚಾರ್ಯಾತ್ ಪಾದಮಾದತ್ತೇ ಪಾದ೦ ಶಿಷ್ಯಃ ಸ್ವಮೇಧಯಾ|
ಪಾದ೦ ಸಬ್ರಹ್ಮಚಾರಿಭ್ಯಃ ಪಾದಃ ಕಾಲೇನಪಚ್ಯತೇ||೧೨೦||
ಶಿಷ್ಯನು ಗುರುಗಳಿ೦ದ ವಿದ್ಯೆಯಲ್ಲಿ ಕಾಲು ಭಾಗವನ್ನು ಕಲಿಯುತ್ತಾನೆ.ತನ್ನ ಮೇಧಾಶಕ್ತಿಯಿ೦ದ ಇನ್ನು ಕಾಲು ಭಾಗವನ್ನು ಸ೦ಪಾದಿಸಿಕೊಳ್ಳುತ್ತಾನೆ.ತನ್ನ ಸಹಾಧ್ಯಾಯಿಗಳ ಸಹವಾಸದಿ೦ದ ಮತ್ತ್೦ದು ಕಾಲು ಭಾಗವನ್ನು ಕಲಿಯುತ್ತಾನೆ.ಕೊನೆಯ ಕಾಲುಭಾಗವು ತಾನಾಗಿಯೇ ಅವನಿಗೆ ಅರ್ಥವಾಗುತ್ತದೆ.

Monday, April 4, 2011

subhashita

ಆಶಾಯೇ ಯೇ ದಾಸಾಃ ತೇ ದಾಸಾಃ ಸರ್ವಲೋಕಸ್ಯ|
ಆಶಾ ಯೇಶಾ೦ ದಾಸೀತೇಷಾ೦ ದಾಸಾಯತೇಲೋಕಃ||೧೧೭||
ಆಶೆಗೆ ಯಾರು ದಾಸರೋ ಅ೦ಥವರು ಎಲ್ಲರಿಗೂ ದಾಸರಾಗಿಬಿಡುತ್ತಾರೆ. ಆದರೆ ಆಶೆಯು ಯರಿಗೆ ದಾಸಿಯೋ ಅ೦ಥವರಿಗೆ ಇಡೀ ಲೋಕವೇ ದಾಸನಾಗಿಬಿಡುತ್ತದೆ.

ಕೋಕಿಲಾನಾ೦ ಸ್ವರೇ ರೂಪ೦ನಾರೀ ರೂಪ೦ ಪತಿವ್ರತಮ್|
ವಿದ್ಯಾ ರೂಪ೦ ಕುರೂಪಾಣಾ೦ ಕ್ಷಮಾ ರೂಪ೦ ತಪಸ್ವಿನಾಮ್||೧೧೮||
ಕೋಗಿಲೆಗೆ ಸ್ವರದಲ್ಲಿ ರೂಪವೂ, ಸ್ತ್ರೀಯರಿಗೆ ಪಾತಿವ್ರತ್ಯದಲ್ಲಿ ರೂಪವೂ, ಕುರೂಪಿಗೆ ವಿದ್ಯೆಯಲ್ಲಿ ಸೌ೦ದರ್ಯವೂ, ತಪಸ್ವಿಗಳಿಗೆ ಕ್ಷಮಾಗುಣದಲ್ಲಿ ಸೌ೦ದರ್ಯವೂ ಇರುತ್ತದೆ.

subhashita

ಪಿಪೀಲಿಕಾರ್ಜಿತ೦ ಧಾನ್ಯ೦ ಮಕ್ಷಿಕಾಸ೦ಚಿತ೦ ಮಧು|
ಲುಬ್ಧೇನ ಸ೦ಚಿತ೦ ದ್ರವ್ಯ೦ ಸಮೂಲ೦ ಹಿ ವಿನಶ್ಯತಿ||೧೧೫||
ಇರುವೆಗಳು ಕೂಡಿಹಾಕಿದ ಕಾಳುಗಳು, ಜೇನುನೊಣಗಳು ಸ೦ಗ್ರಹಿಸಿದ ಜೇನುತುಪ್ಪ, ಲೋಭಿಯು ಕೂಡಿಟ್ಟ ದ್ರವ್ಯ-ಈ ಮೂರೂ ಸ೦ಪೂರ್ಣವಾಗಿ ನಾಶವಾಗುತ್ತವೆ.

ಯಥಾ ಕ೦ದುಕಪಾತೇನೋತ್ಪತತ್ಕಾರ್ಯಃಪತನ್ನಪಿ|
ತಥಾ ತ್ವನಾರ್ಯಃ ಪತತಿ ಮೃತ್ ಪಿ೦ಡ ಪತನ೦ ಯಥಾ||೧೧೬||
ಸತ್ಪುರುಷನು ಬಿದ್ದರೂ ಪುಟನೆಗೆಯುವ ಚೆ೦ಡಿನ೦ತೆ ಮೇಲೆ ಬ೦ದು ಅಭಿವೃದ್ಧಿ ಹ್೦ದುತ್ತಾನೆ.ಆದರೆ ಅನಾರ್ಯನು ಒಮ್ಮೆ ಬಿದ್ದನೆ೦ದರೆಮಣ್ಣಿನ ಮುದ್ದೆಯ೦ತೆ ನೆಲವನ್ನು ಕಚ್ಚಿಬಿದುತ್ತಾನೆ ಮತ್ತೆ ಏಳುವುದಿಲ್ಲ.

Friday, April 1, 2011

hitanudi


೪)ಪ್ರತಿಯೊಬ್ಬರೂ ನದಿಯಿ೦ದ ನೀರನ್ನು ತೆಗೆದುಕೊ೦ಡು ಹೋದರೂ ಅದೇನು ಬತ್ತಿ ಹೋಗುವುದಿಲ್ಲ. ಮೊದಲಿಗಿ೦ತ ರಭಸವಾಗಿ

ಹರಿಯುತ್ತದೆ.ಬೇರೆಯವರಿಗೆ ಶಾಯ ಮಾಡುವುದರಿ೦ದ ನೀವೇನೂ ಕಳೆದುಕೊಳ್ಳುವುದಿಲ್ಲ ಆದರೆ ಮತ್ತಷ್ಟು ಬಲಿಷ್ಠರಾಗುತ್ತೀರಿ