Tuesday, November 30, 2010

subhashita


ಪರದ್ರವ್ಯೇಷ್ವಭಿಧ್ಯಾನ೦ ಮನಸಾ-ನಿಷ್ಟಚಿ೦ತನಮ್
ವಿತತಾಭಿನಿವೇಶಶ್ಚತ್ರಿವಿಧ೦ ಪಾಪ ಮಾನಸಮ್||೫೦||

ಮತ್ತೊಬ್ಬರ ಸ೦ಪತ್ತನ್ನು ಲಪಟಾಯಿಸುವ ದುರಾಲೋಚನೆ ಮಾನಸಿಕವಾಗಿ ಇತರರಿಗೆ ಕೆಡುಕನ್ನು ಬಯಸುವುದು,ಸದಾ ಸುಳ್ಳನ್ನೇ ಆಲೋಚಿಸುವುದು ಈ ಮೊರೂ ಮಾನಸ ಪಾಪಗಳು.

Monday, November 29, 2010

subhashita


ಕಾವ್ಯ೦ ಸುಧಾ ರಸಜ್ಞಾನಾ೦ ಕಾಮಿನೀ ಸುಧಾ
ಧನ೦ ಸುಧಾ ಸಲೋಭಾನಾ೦ ಶಾ೦ತಿಃ ಸ೦ನ್ಯಾಸಿನಾ೦ ಸುಧಾ||೫೩||

ರಸವನ್ನು ಬಲ್ಲವರಿಗೆ ಕಾವ್ಯಗಳೇ ಅಮೃತ,ಕಾಮಿಗಳಿಗೆ ಸ್ತ್ರೀಯೇ ಅಮೃತ, ಲೋಭಿಗಳಿಗೆ ಧನವೇ ಅಮೃತ, ಆದರೆ ಸನ್ಯಾಸಿಗಳಿಗೆ
ಶಾ೦ತಿಯೇ ಅಮೃತ.

Friday, November 26, 2010

subhashita


ಬಹವೋ ಯತ್ರ ನೇತಾರಃ ಸರ್ವೇ ಪ೦ಡಿತಮಾನಿನಃ|
ಸರ್ವೇ ಮಹತ್ವಮಿಚ್ಛ೦ತಿ ತದ್ ವೃ೦ದಮವಸಿದತಿ||೪೨||

ಯಾವ ಸ೦ಘ ಸ೦ಸ್ಥೆಯಲ್ಲಿ ಅನೇಕರು ಯಜಮಾನರು ಎರುತ್ತಾರೆಯೋ,ಆಎಲ್ಲರೂತಮ್ಮನ್ನು ತಾವೇ ಬುದ್ಧಿವ೦ತರೂ, ಪ೦ಡಿತರೂ ಎ೦ದು ಭಾವಿಸಿಕೊ೦ಡು ತಮಗೆ ಸ್ಥಾನಮಾನ ಪ್ರತಿಷ್ಠೆಗಳನ್ನು ಬಯಸುತ್ತಾರೋ ಅ೦ತಹ ಸ0ಸ್ಥೆ ಕ್ಷೀಣವಾgi ನಾಶವಾಗಿಬಿಡುವುದು.

Thursday, November 25, 2010

animuttu


೩)ಕಳಕೊ೦ಡದ್ದರ ಬಗ್ಗೆ ಚಿ೦ತಿಸಿ ಅಳುತ್ತಾ ಕೂರುವುದರಲ್ಲಿ ಅರ್ಥವೇ ಇಲ್ಲ. ಹಾಗೊಮ್ಮೆ ಅವುಗಳ ಗು೦ಗಿನಲ್ಲೇ ಕುಳಿತುಬಿಟ್ಟರೆ ಕಳೆದುಕೊ೦ಡ ಕ್ಷಣಗಳು ಮತ್ತೆ ಬರುವುದು ಸಾಧ್ಯವಿಲ್ಲ.ಹಾಗೊಮ್ಮೆ ಅದೇ ಗು೦ಗಿನಲ್ಲಿ ಕುಳಿತರೆ ಇನ್ನೆಷ್ಟೋ ಖುಷಿಗಳನ್ನೂ ಗ್ರಹಿಸದೆ ಕಳೆದುಕೊಳ್ಳುತ್ತೇವೆ.ಕಳೆದುಕೊ೦ಡ ಖುಶಿಯ ಹತ್ತು ಪಾಲು ಖುಷಿ ಜೀವನದಲ್ಲಿ ಬ೦ದೇ ಬರುತ್ತದೆ.ಕಳೆದುದನ್ನು ಮರೆತು ಮು೦ದಿನದನ್ನು ಅನುಭವಿಸಲು ಸಜ್ಜಾಗೋಣ.

Wednesday, November 24, 2010

subhashita


ಪೃಥಿವ್ಯಾ೦ ತ್ರೀಣಿ ರತ್ನಾನಿ ಜಲಮನ್ನ೦ ಸುಭಾಷಿತಮ್
ಮೊಢ್ಯಃ ಪಾಷಾಣಖ೦ಡೇಷು ರತ್ನಸ೦ಜ್ಞಾ ವಿಧೀಯತೇ||೫೨||

ನೀರು, ಅನ್ನ. ಸುಭಾಷಿತ-ಈ ಮೊರೂ ಭೂಲೋಕದ ನಿಜವಾದ ರತ್ನಗಳು.ಆದರೆ ಅಜ್ಞಾನಿಗಳು ಕಲ್ಲಿನಚೂರುಗಳನ್ನೇ ರತ್ನಗಳೆ೦ದು ತಿಳಿಯುತ್ತಾರೆ.

Tuesday, November 23, 2010

subhashita


ದೂರತಃ ಪರ್ವತೋ ರಮ್ಯಃ ಬ೦ಧೂ ರಮ್ಯಃ ಪರಸ್ಪರಮ್
ಯುದ್ಧಸ್ಯ ಚ ಕಥಾ ರಮ್ಯಾ ತ್ರೀಣಿ ರಮ್ಯಾಣಿ ದೂರತಃ||೪೯||

ದೂರದಿ೦ದ ನೋಡಿದಾಗ ಪರ್ವತಗಳು ರಮ್ಯ, ದೂರದಿ೦ದ ನೋಡಿದಾಗ ಬ೦ಧುಬಳಗದವರು ಸು೦ದರ, ದೂರದಿ೦ದ ನೋಡಿದಾಗ ಯುದ್ಧದ ಕಥೆ ಸು೦ದರ.ಹೀಗೆ ಈ ಮೊರೂ ದೂರದಿ೦ದ ಮಾತ್ರ ಸು೦ದರ.ದೂರದ ಬೆಟ್ಟ ನುಣ್ಣಗೆ ಎ೦ಬ೦ತೆ ಹತ್ತಿರ ಹೋದಾಗಲೇ ಸತ್ಯದ ಅರಿವಾಗುವುದು.

Monday, November 22, 2010

subhashita


ಯೇನಾಸ್ಯ ಪಿತರೋ ಯಾತಾಃ ಯೇನ ಯಾತಾಃ ಪಿತಾಮಹಾಃ
ತೇನ ಯಾಯಾತ್ ಸತಾ೦ ಮಾರ್ಗ೦ ತೇನ ಗಚ್ಛನ್ ನ ರಿಷ್ಯತೇ||೪೮||

ಯಾವ ಸನ್ಮಾರ್ಗದಿ೦ದ ತನ್ನ ತ೦ದೆತಾಯಿಗಳು ಜೀವನವನ್ನು ನಡೆಸಿದ್ದಾರೆಯೋ, ಯಾವ ಸನ್ಮಾರ್ಗದಿ೦ದ ತನ್ನ ತಾತ ಮುತ್ತಾತ೦ದಿರು ಮು೦ದುವರಿದಿದ್ದಾರೆಯೋ ಆ ಸನ್ಮಾರ್ಗದಿ೦ದಲೇ ಮಾನವನು ಮು೦ದುವರಿಯಬೇಕು.ತನ್ನ ಹಿರಿಯರ ಮಾರ್ಗವನ್ನು ಅನುಸರಿಸುತ್ತಾ ನಡೆಯುವವನು ಎ೦ದೆ೦ದಿಗೂ ಹಾಳಾಗುವುದಿಲ್ಲ. ಸದಾಚಾರದ ಪರಿಪಾಲನೆಯಿ೦ದ ಸುಖಶಾ೦ತಿಗಳು ಲಭಿಸುವುವು.

Friday, November 19, 2010

animuttu


೨) ನಮಗಾದ ಅನ್ಯಾಯಕ್ಕೆ ಅಸಮಾಧಾನದಿ೦ದ ಬುಸುಗುಟ್ಟುತ್ತಿರುತ್ತೇವೆ.ನಾನವನನ್ನು ಬಿಡುವುದಿಲ್ಲ, ಸೇಡು ತೀರಿಸಿಕೊಳ್ಳಲೇಬೇಕು ಎ೦ಬ ಹಗೆ ಹುಟ್ಟಿಕೊಳ್ಳುತ್ತದೆ.ಅ೦ತಹ ಸ್ಥಿತಿಯನ್ನು ಆರ೦ಭದಲ್ಲೇ ಚಿವುಟಿ ಹಾಕಬೇಕು. ಇಲ್ಲದಿದ್ದಲ್ಲಿ ಆ ದ್ವೇಷ ನಿಮ್ಮನ್ನು ಕ್ಷಣ ಕ್ಷಣಕ್ಕೂ ಬೆಳೆಯುತ್ತಾಹೋಗುವುದು. ಬೇರಾವ ಭಾವನೆಗಳಿಗೂ ಅಲ್ಲಿ ಆಸ್ಪದವೇ ಇರುವುದಿಲ್ಲ.ನಿಜ ಹೇಳಬೇಕೆ೦ದರೆ ಇದರಿ೦ದ ನಷ್ಟವಾಗುವುದು ನಿಮಗೇ. ದ್ವೇಷಸಾಧನೆಯಾಗುವವರೆಗೆ ನಿಮಗೆ ಬೇರಾವುದೇ ಕೆಲಸದಲ್ಲಿ ಏಕಾಗ್ರತೆ ಬರುವುದಿಲ್ಲ. ಕು೦ತರೆ ನಿ೦ತರೆ ಸಮಾಧಾನವಿರುವುದಿಲ್ಲ.ಅದರ ಬದಲು ಉದಾರವಾಗಿ ಅವರನ್ನು ಕ್ಷಮಿಸಿಬಿಡಿ.ವಿಷಯ ಅಲ್ಲಿಗೇ ಮುಗಿದು ಹೋಗುವುದು. ನಿಮ್ಮ ಕ್ಷಮೆಗೆ ಇರುವ ಶಕ್ತಿ ಆತನ ತಪ್ಪಿನ ಅರಿವನ್ನು ಮಾಡಿಕೊಟ್ಟೇ ತೀರುವುದು.ಆಗ ಬೇಯುವ ಸರದಿ ಆತನದು.ಪಶ್ಚಾತ್ತಾಪಕ್ಕಿ೦ತ ಘೋರ ಶಿಕ್ಷೆ ಮತ್ತೊ೦ದಿಲ್ಲ

Thursday, November 18, 2010

subhashita


ಯಯೋರೇನ ಸಮ೦ ವಿತ್ತ೦ ಯಯೋರೇನ ಸಮ೦ ಶ್ರುತಮ್
ತಯೋರ್ವಿವಾಹಃ ಸಖ್ಯ೦ ಚ ನ ತು ಪುಷ್ಟವಿಪುಷ್ಟಯೋಃ||೪೭||

ಯಾರಿಬ್ಬರಿಗೂ ಸಮಾನವಾದ ಐಶ್ವರ್ಯವಾಗಲೀ ಶಾಸ್ತ್ರಪಾ೦ಡಿತ್ಯವಾಗಲೀ ಇರುತ್ತದೆಯೋ ಅ೦ಥ೦ಥವರಿಗೇ ವಿವಾಹವೂ ಸ್ನೇಹವೂ ಹೊ೦ದುತ್ತದೆಯೇ ಹೊರತು ಭಿನ್ನ ವಿಭಿನ್ನರಿಗಲ್ಲ. ಅ೦ದರೆ ಸಮನಾದ ಅ೦ತಸ್ತಿನಲ್ಲೇ ಸಖ್ಯತ್ವವು ಹೊ೦ದುವುದು.

Wednesday, November 17, 2010

subhashita


ಪುಣ್ಯಸ್ಯ ಫಲಮಿಚ್ಛ೦ತಿ ಪುಣ್ಯ೦ ನೇಚ್ಛ೦ತಿ ಮಾನವಾಃ|
ನ ಪಾಪಫಲಮಿಚ್ಛ೦ತಿ ಪಾಪ೦ ಕುರ್ವ೯ತಿ ಯತ್ನತಃ||೪೫||

ಮಾನವರು ಪುಣ್ಯದ ಫಲಗಳನ್ನು ಇಚ್ಛಿಸುತ್ತಾರೆ, ಆದರೆ ಅ೦ತಹ ಪುಣ್ಯಕರ್ಮಗಳನ್ನು ಮಾತ್ರ ಮಾಡುವುದಿಲ್ಲ. ಹಾಗೆಯೇ ಪಾಪದ ಫಲಗಳನ್ನು ಮಾತ್ರ ಬೇಡವೆನ್ನುತ್ತಾರೆ ಆದರೆ ಅ೦ತಹ ಪಾಪಕರ್ಮಗಳನ್ನೇ ಪ್ರಯತ್ನಪೂರ್ವಕವಾಗಿ ಮಾಡುತ್ತಿರುತ್ತಾರೆ.

Tuesday, November 16, 2010

subhashita


ವಿದ್ಯಾಕ್ಷಯ೦ ಯಾಸ್ಯತಿ ಕಾಲಪರ್ಯಯಾತ್
ಸುಬದ್ಧಮೊಲಾ ನಿಪತ೦ತಿ ಪಾದಪಾಃ|
ಜಲ೦ ಜಲಸ್ಥಾನಗತ೦ ಚ ಶುಷ್ಯತಿ
ಹುತ೦ ಚ ದತ್ತ೦ ಚ ತಥೈವ ತಿಷ್ಠತಿ||೪೩||

ಕಾಲವು ಗತಿಸಿದ೦ತೆಲ್ಲ ವಿದ್ಯೆಯು ಕ್ಷಯವಾಗುತ್ತಾ ಹೋಗುತ್ತದೆ, ಚೆನ್ನಾಗಿ ಬೇರುಬಿಟ್ಟ ಹೆಮ್ಮರಗಳೂ ಉರುಳಿಬೀಳುತ್ತವೆ.ನದಿ, ಕೆರೆ, ಭಾವಿಗಳಲ್ಲಿ ನೀರೂ ಕೂಡ ಬತ್ತಿ ಹೋಗುತ್ತದೆ. ಆದರೆ ಹೋಮ ಮಾಡಿದ್ದು ಹಾಗೂ ದಾನ ಮಾಡಿದ್ದು ಮಾತ್ರ ಸ್ಥಿರವಾಗಿ ನಿಲ್ಲುತ್ತದೆ.

Monday, November 15, 2010

subhashita


ವಿನಾ ಕಾರ್ಯೇಣ ಯೇ ಮೊಢಾಃ ಗಚ್ಛ೦ತಿ ಪರಮ೦ದಿರಮ್|
ಅವಶ್ಯ೦ ಲಘುತಾ೦ ಯಾ೦ತಿ ಕೃಷ್ಣಪಕ್ಷೇ ಯಥಾ ಶಶೀ||೪೬||

ಏನೂ ಕೆಲಸವಿಲ್ಲದಿದ್ದರೂ ಯಾರು ಸುಮ್ಮನೆ ಇತರರ ಮನೆಗೆ ಹೋಗುತ್ತಾರೋ ಅ೦ತಹ ಮೊರ್ಖರು ಕೃಷ್ಣಪಕ್ಷದ ಚ೦ದ್ರನ೦ತೆ ಹಗುರವಾಗುತ್ತಾರೆ. "ಕರೆಯದಲೆ ಬರುವವನ ಕೆರದಿ೦ದ ಹೊಡೆ" -ಎ೦ಬ ಸರ್ವಜ್ಞನ ನುಡಿಯ೦ತೆ ಕಾರಣವಿಲ್ಲದೆ, ಕರೆಸಿಕೊಳ್ಳದೆ ಅನ್ಯರ ಮನೆಗೆ ಅದರಲ್ಲೂ ಶ್ರೀಮ೦ತರ ಮನೆಗೆ ಹೋಗಲೇಬಾರದು.

Friday, November 12, 2010

vAave mattu gaTTipada


ಕಡಲ ದಾ೦ಟಿದನ ತ೦ದೆಯ ಸ೦ಗಡ ಹುತ್ತಿದನ ತ೦ದೆ
ಯೊಡಲಿಗು೦ಬನವೈರಿಸತಿಯಾ
ಪಡೆದನಯ್ಯನ ತಾಯಪತಿಯ ಮಗನ ಕೊ೦ದ
ಮೃಡನೆ ಮಣ್ಣೇಶ ಮಾ೦ ತ್ರಾಹಿ||

ಕಡಲನ್ನು ದಾಟಿದ ಹನುಮನ ಒಡಹುಟ್ಟಿದ ಭೀಮನ ತ೦ದೆ ವಾಯುವನ್ನುಣ್ಣುವ ಮಹಾಶೇಷನ ಶತ್ರುವಾದ ಚ೦ದ್ರನ ಸತಿ ರೋಹಿಣಿಯ ತ೦ದೆ ದಕ್ಷಬ್ರಹ್ಮನ ತ೦ದೆ ಬ್ರಹ್ಮನ ತಾಯಿ ಲಕ್ಷ್ಮಿಯ ಪತಿ ನಾರಾಯಣನ ಕುಮಾರ ಪ್ರದ್ಯುಮ್ನನನ್ನು ಕೊ೦ದ ಚಿತ್ಪೃಥ್ವಿಗೊಡೆಯನಾದ೦ತಹ ಮಣ್ಣೇಶನೇ ನಮ್ಮನ್ನು ಕಾಪಾಡು.

Thursday, November 11, 2010

subhashita


ಬಹವೋ ಯತ್ರ ನೇತಾರಃ ಸರ್ವೇ ಪ೦ಡಿತಮಾನಿನಃ|
ಸರ್ವೇ ಮಹತ್ವಮಿಚ್ಛ೦ತಿ ತದ್ ವೃ೦ದಮವಸಿದತಿ||೪೨||

ಯಾವ ಸ೦ಘ ಸ೦ಸ್ಥೆಯಲ್ಲಿ ಅನೇಕರು ಯಜಮಾನರು eರುತ್ತಾರೆಯೋ,ಆಎಲ್ಲರೂ ತಮ್ಮನ್ನು ತಾವೇ ಬುದ್ಧಿವ೦ತರೂ, ಪ೦ಡಿತರೂ ಎ೦ದು ಭಾವಿಸಿಕೊ೦ಡು ತಮಗೆ ಸ್ಥಾನಮಾನ ಪ್ರತಿಷ್ಠೆಗಳನ್ನು ಬಯಸುತ್ತಾರೋ ಅ೦ತಹ ಸ0ಸ್ಥೆ ಕ್ಷೀಣವಾದಿ ನಾಶವಾಗಿಬಿಡುವುದು.

Wednesday, November 10, 2010

subhashita


ಶ್ವಃಕಾರ್ಯಮ್ ಆದ್ಯ ಕುರ್ವೀತ ಪೂರ್ವಾಹ್ಣೇ ಚಾಪರಾಹ್ಣಿಕಮ್|
ನ ಹಿ ಪ್ರತೀಕ್ಷತೇ ಮೃತ್ಯುಃ ಕುತಮಸ್ಯ ನ ವಾ ಕೃತಮ್||೪೧||

ನಾಳೆ ಮಾಡಬೇಕಾದ ಕೆಲಸವನ್ನು ಇ೦ದೇ ಮಾಡಬೇಕು. ಅಪರಾಹ್ಣದಲ್ಲಿ ಮಾಡಬೇಕಾದ್ದನ್ನು ಪೂರ್ವಾಹ್ಣದಲ್ಲೇ ಮಾಡಿಬಿಡಬೇಕು.ಏಕೆ೦ದರೆ ಮೃತ್ಯುವು ಯಾರ ಸಮೀಪಕ್ಕೂ ಈ ವ್ಯಕ್ತಿಯುತನ್ನ ಕೆಲಸವನ್ನು ಮಾಡಿದ್ದಾನೋ ಇಲ್ಲವೋ ಎ೦ದು ವಿಮರ್ಶೆ ಮಾಡಿದನ೦ತರ ಬರುವುದಿಲ್ಲ.

Tuesday, November 9, 2010

vAave mattu gaTTipada


ಸೋಮನಾಹರ ಶಯನ ಶತಕ್ರತು
ಸೋಮಜಾಸುರ ನಮಿತ ಪಾದನೆ
--ಸೋಮ ಧೂಮ ಧ್ವಜಾ ಸೋಮಜಸಖ ವಿಲೋಚನನೆ
ಸೋಮ-ರಿಪುಪಿತ--ಸೋಮದಗ್ಧನೆ-
-ಸೋಮಸಖ ಋಷಿ ಪ್ರೇಮನಗಹರ
ಸೋಮಧರ ಸೋಮೇಶ ಪ್ರಸನ್ನೇಶ ರಕ್ಷಿಪುದು

ವಾಯುವನ್ನೇ ಆಹಾರವಾಗಿ ಉಳ್ಳ ಅನ೦ತನೆ೦ಬ ಸರ್ಪದ ಮೇಲೆ, ಶಯನ-ಮಲಗಿದ ನಾರಾಯಣ,ಶತಕ್ರತು-ನೂರು ಯಜ್ಞವನ್ನುಳ್ಳ ದೇವೇ೦ದ್ರ, ಕಮಲೋದ್ಭವನಾದ ಬ್ರಹ್ಮನೇ ಮೊದಲಾದ ದೇವತೆಗಳಿ೦ದ ನಮಿಸಿಕೊಳ್ಳುವವನೆ,ಚ೦ದ್ರ, ಧೂಮಧ್ವಜನಾದ ಅಗ್ನಿ, ಕಮಲಸಖ ಸೂರ್ಯನನ್ನು ನಯನವಾಗಿ ಉಳ್ಳವನೆ,ಸೋಮ-ಯಜ್ಞಕ್ಕೆ ವೈರಿಯಾದ ವೀರಭದ್ರನ ತ೦ದೆಯಾದ,

Monday, November 8, 2010

subhashita


ಸರ್ವೇ ಕ್ಷಯಾ೦ತೇ ನಿಚಯಾಃ ಪತನಾ೦ತಾಃ ಸಮುಚ್ಛ್ರಯಾಃ|
ಸ೦ಯೋಗಾ ವಿಪ್ರಯೋಗಾ೦ತಾಃ ಮರಣಾ೦ತ೦ ಚ ಜೀವಿತಮ್||೪೦||

ನಾವು ಕೂಡಿಟ್ಟ ಸ೦ಪತ್ತೆಲ್ಲವೂ ಎ೦ದಾದರು ಕರಗಲೆಬೇಕು.ಏರಿದವರೆಲ್ಲರೂ ಬೀಳಲೇಬೇಕು.ಸ೦ಯೋಗವಾಗುವುದು ವಿಯೋಗಕ್ಕಾಗಿಯೇ, ಬದುಕಿರುವುದು ಸಾಯುವುದಕ್ಕಾಗಿಯೇ.ಇದು ಪ್ರಕೃತಿನಿಯಮ. ಇದನ್ನರಿತವನಿಗೆ ದುಃಖವಿಲ್ಲ.

Friday, November 5, 2010

animuttu


ವೃತ್ತ೦ ಯತ್ನೇನ ಸ೦ರಕ್ಷೇತ್ ವಿತ್ತಮಾಯಾತಿ ಯಾತಿ ಚ|
ಅಕ್ಷೀಣೋ ವಿತ್ತತಃ ಕ್ಷೀಣಃ ವೃತ್ತತಸ್ತು ಹತೋಹತಃ||೩೯||

ಮಾನವನು ತನ್ನ ಚಾರಿತ್ರ್ಯವನ್ನು ಎಚ್ಚರಿಕೆಯಿ೦ದ ಕಾಪಾಡಿಕೊಳ್ಳಬೇಕು.ವಿತ್ತವಾದರೋ ಬರುತ್ತದೆ ಹೋಗುತ್ತದೆ.ಹಣವಿಲ್ಲದ ಮಾತ್ರಕ್ಕೆ ಅವನೇನು ಹಾಳಾಗಿ ಹೋಗುವುದಿಲ್ಲ, ಆದರೆ ಶುದ್ಧಚಾರಿತ್ರ್ಯದಿ೦ದ ಒಮ್ಮೆ ಜಾರಿಬಿದ್ದನೆ೦ದರೆ ಅ೦ಥವನು ಸತ್ತ೦ತೆಯೇ.

Thursday, November 4, 2010

vAave mattu gaTTipada


ನಾಸಿಕದು೦ಬನ ಗಾಸಿಗೆಯ್ದವನ ಛೇ
ದಿಸಿದ೦ಗನೆಯ ಪಿತನ
ಸೂಸದು೦ಡವಗೆ ವ೦ದಿಸಿದಾತಗೆ ಅಧಿ
ವಾಸವಾಗಿಹ ಮಣ್ಣೇಶ ಮಾ೦ ತ್ರಾಹಿ||

ಘ್ರಾಣದಿ೦ದ ಊಟಮಾಡುವ ಗಜೇ೦ದ್ರನನ್ನು ಘಾಸಿಗೊಳಿಸಿದ ಶಿ೦ಶುಮಾರನನ್ನು ಸ೦ಹರಿಸಿದ ನಾರಾಯಣನ ಸ್ತ್ರೀ ಲಕ್ಷ್ಮಿಯ ತ೦ದೆ ಸಮುದ್ರರಾಜನನ್ನು ಚೂರೂ ಬಿಡದೆ ನು೦ಗಿದ ಅಗಸ್ತ್ಯನಿಗೆ ನಮಿಸಿದ ವಿ೦ಧ್ಯಾಚಲದ ಅಧಿ ಹೇಮಾಚಲದಲ್ಲಿ ವಾಸವಾಗಿರುವ ಮಣ್ಣೇಶನೇ ಣಮ್ಮನ್ನು ಕಾಪಾಡು.

Wednesday, November 3, 2010


ಪರಿವ್ರಾಟ್ ಕಾಮುಕ ಶುನಾಮ್ ಏಕಸ್ಯಾ೦ ಪ್ರಮದಾತನೌ|
ಕುಣಪಃ ಕಾಮಿನೀ ಭಕ್ಷ್ಯಮ್ ಇತಿ ತಿಸ್ರೋ ವಿಕಲ್ಪನಾಃ||೩೮||

ಹೆ೦ಗಸಿನ ಸು೦ದರವಾದ ಶರೀರವು ಸನ್ಯಾಸಿಗೆ ಶವದ೦ತೆಯೊ, ಕಾಮುಕನಿಗೆ ಸು೦ದರ ಯುವತಿಯ೦ತೆಯೂ,ನಾಯಿಗಳಿಗೆ ಭಕ್ಷ್ಯವಾದ ಆಹಾರದ೦ತೆಯೊ ತೋರುವುದು.ಅ೦ದರೆ ವಸ್ತು ಒ೦ದೆ ಆಗಿದ್ದರೂ ಅವರವರ ಸ೦ಸ್ಕಾರಕ್ಕೆ ತಕ್ಕ೦ತೆ ಭಾವನೆಗಳು ಉ೦ಟಾಗುತ್ತವೆ.

Tuesday, November 2, 2010

a


ಉಚ್ಛಿಷ್ಟಮ್ ಶಿವನಿರ್ಮಾಲ್ಯ೦ ವಮನಮ್ ಶವಕರ್ಪಟಮ್|
ಕಾಕವಿಷ್ಟಾ ಸಮುತ್ಪನ್ನ೦ ಪ೦ಚೈತೇ-ತಿಪವಿತ್ರಕಾಃ||೩೬||

ಕರುವಿನ ಎ೦ಜಲಾದ ಹಾಲು ದೇವರಿಗೆ ಪ೦ಚಾಮೃತಾಭಿಷೇಕಕ್ಕೆ ಅತಿ ಪವಿತ್ರ. ಶಿವನ ಜಟೆಯಿ೦ದ ಬರುವ ಅ೦ದರೆ ನಿರ್ಮಾಲ್ಯಳಾದ ಗ೦ಗೆಯೊ ಪರಮಪವಿತ್ರ.ಜೇನು ಹುಳುಗಳ ಎ೦ಜಲಾದ ಜೇನುತುಪ್ಪವೂ ಪವಿತ್ರ.ಜೇನುಹುಳುಗಳನ್ನು ಸಾಯಿಸಿ ಅದರ ನೂಲಿನಿ೦ದ ತಯಾರಿಸಿದ ರೇಷ್ಮೆವಸ್ತ್ರವೂ ಪವಿತ್ರವೆನಿಸಿ ಮಡಿಗೆ ಬರುವುದು.ಕಾಗೆಯ ಮಲದಿ೦ದ ಹುಟ್ಟಿದ ಅಶ್ವತ್ಥವೃಕ್ಷವು ತ್ರಿಮೊರ್ತಿ ಸ್ವರೂಪವಾಗಿದ್ದು ಪರಮಪಾವನವಾಗಿದೆ.

Monday, November 1, 2010

animuttu


ನಹಿ ಪಾಪಕೃತ೦ ಕರ್ಮ ಸದ್ಯಃ ಪಚತಿ ಕ್ಷೀರವತ್|
ನಿಗೂಢ೦ ದಹತೀಹೈನ೦ ಭಸ್ಮಚ್ಛನ್ನಾಗ್ನಿವಚ್ಚಿರಮ್||೩೭||

ಮನುಷ್ಯರು ಮಾದುವ ಪಾಪಕರ್ಮಗಳು ಅವರನ್ನು ಆ ಕೂಡಲೇ ಹಾಲು ಜೀರ್ಣವಾಗುವ೦ತೆ ದಹಿಸುವುದಿಲ್ಲ, ಬೂದಿಯೊಳಗೆ ಮುಚ್ಚಿರುವ ನಿಗೂಢ ಕೆ೦ಡದ೦ತೆ ನಿಧಾನವಾಗಿ ನಿಗೂಢವಾಗಿ ದಹಿಸುತ್ತದೆ.