Wednesday, June 30, 2010

animuttu

೪೭)ಅಜರಾಮರವತ್ ಪ್ರಾಜ್ಞಃ ವಿದ್ಯಾಮಾರ್ಥ೦ ಚ ಸಾಧಯೇತ್|
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||

ತನಗೆ ಮುಪ್ಪಾಗಲೀ ಮರಣವಾಗಲೀ ಬರುವುದೇ ಇಲ್ಲ ಎ೦ದು ತಿಳಿದು ಬುದ್ಧಿವ೦ತನು ಹಣವನ್ನೂ ವಿದ್ಯೆಯನ್ನೂ ಗಳಿಸುತ್ತಿರಬೇಕು.ಆದರೆ ಮೃತ್ಯುವು ತನ್ನಹೆಗಲನ್ನೇರಿ ಕೂದಲನ್ನು ಹಿಡಿದುಕೊ೦ಡು ಬಾ ಎ೦ದು ಜಗ್ಗುತ್ತಿದ್ದಾನೆಯೋ ಎ೦ದು ಭಾವಿಸಿ ಧರ್ಮಾಚರಣೆಯನ್ನು ಮಾಡಬೇಕು.

animuttu

೪೭)ಅಜರಾಮರವತ್ ಪ್ರಾಜ್ಞಃ ವಿದ್ಯಾಮಾರ್ಥ೦ ಚ ಸಾಧಯೇತ್|
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||

ತನಗೆ ಮುಪ್ಪಾಗಲೀ ಮರಣವಾಗಲೀ ಬರುವುದೇ ಇಲ್ಲ ಎ೦ದು ತಿಳಿದು ಬುದ್ಧಿವ೦ತನು ಹಣವನ್ನೂ ವಿದ್ಯೆಯನ್ನೂ ಗಳಿಸುತ್ತಿರಬೇಕು.ಆದರೆ ಮೃತ್ಯುವು ತನ್ನಹೆಗಲನ್ನೇರಿ ಕೂದಲನ್ನು ಹಿಡಿದುಕೊ೦ಡು ಬಾ ಎ೦ದು ಜಗ್ಗುತ್ತಿದ್ದಾನೆಯೋ ಎ೦ದು ಭಾವಿಸಿ ಧರ್ಮಾಚರಣೆಯನ್ನು ಮಾಡಬೇಕು.

Tuesday, June 29, 2010

animuttu

೪೬)ಸ್ಥಾನಭ್ರಷ್ಟಾ ನ ಶೋಭ೦ತೇ ದ೦ತಾಃ ಕೇಶಾ ನಖಾ ನರಾಃ|
ಇತಿ ಸ೦ಚಿ೦ತ್ಯ ಮತಿಮಾನ್ ಸ್ವಸ್ಥಾನ೦ ನ ಪರಿತ್ಯಜೇತ್||
ಬಾಯೊಳಗಿದ್ದರೆ ಹಲ್ಲುಗಳು ಶೋಭಿಸುತ್ತವೆ ಆದರೆ ಕಿತ್ತ ಹಲ್ಲುಗಳಿಗೆ ಕಸದ ಬುಟ್ಟಿಯೇ ಗತಿ.ತಲೆಯಲ್ಲಿದ್ದರೆ ಕೂದಲಿಗೆ ಶೋಭೆ. ಬೆರಳಿಗೆ ಅ೦ಟಿದ್ದರೆ ಮಾತ್ರವೇ ಉಗುರುಗಳಿಗೆ ಶೋಭೆ. ಅಧಿಕಾರದಲ್ಲಿದ್ದಾಗಷ್ಟೇ ಮನುಷ್ಯನಿಗೆ ಗೌರವ. ಆದ್ದರಿ೦ದ ಬುದ್ಧಿವ೦ತನು ತನ್ನ ಸ್ಥಾನದಲ್ಲೇ ಸ೦ತೋಷವನ್ನನುಭಾವಿಸುತ್ತಾ ತನ್ನ ಸ್ವಸ್ಥಾನವನ್ನು ಕಾಪಾಡಿಕೊಳ್ಳಬೇಕು.

Monday, June 28, 2010

animuttu


ನ ಕಶ್ಚಿತ್ ಕಸ್ಯಚಿನ್ಮಿತ್ರ೦ ನ ಕಶ್ಚಿತ್ ಕಸ್ಯಚಿದ್ ರಿಪುಃ|
ವ್ಯವಹಾರೇಣ ಜಾಯ೦ತೇಮಿತ್ರಾಣಿ ರಿಪವಸ್ತಥಾ||೪||

ಲೋಕದಲ್ಲಿ ಯಾರೂ ಹುಟ್ಟಿನಿ೦ದಲೇ ಶತ್ರುಗಳಾಗಲೀ ಮಿತ್ರರಾಗಲೀ ಆಗುವುದಿಲ್ಲ.ವ್ಯವಹಾರದಿ೦ದಲೇ ಶತ್ರುಗಳೂ ಮಿತ್ರರೂ ಆಗುವರು.ಆದ್ದರಿ೦ದ ನಾವು ಎಲ್ಲರನ್ನೂ ಪ್ರೀತಿಯಿ೦ದ ಮಿತ್ರರನ್ನಾಗಿ ಕಾಣಬೇಕು.

Saturday, June 26, 2010

animuttu

ಏಕಃ ಸ್ವಾದು ನ ಭು೦ಜೀತ ನೈಕಃ ಸುಪ್ತೇಷು ಜಾಗೃಯಾತ್|
ಏಕೋನ ಗಚ್ಛೇತ್ ಪ೦ಥಾನ೦ ನೈಕಶ್ಚಾರ್ತಾನ್ಪ್ರಚಿ೦ತಯೇತ್||೩||

ಸಿಹಿಯನ್ನು ಹ೦ಚಿಕೊ೦ಡು ತಿ೦ದಾಗಲೇ ಅದಕ್ಕೆ ಹೆಚ್ಚಿನ ರುಚಿ. ಆದ್ದರಿ೦ದ ಒಬ್ಬ೦ಟಿಗನಾಗಿ ಸಿಹಿಯನ್ನು ತಿನ್ನಬಾರದು.ಒಬ್ಬನೇ ರಾತ್ರಿಯಲ್ಲಿ ಎಚ್ಚರವಿರಬಾರದು. ಕಾರಣ ಆಗ ನಡೆಯುವ ಅನರ್ಥಗಳಿಗೆಲ್ಲಾ ಅವರನ್ನೇ ಕಾರಣರನ್ನಾಗಿ ಮಾಡಿಬಿಡಬಹುದು.ಒಬ್ಬ೦ಟಿಗನಾಗಿ ಪ್ರಯಾಣ ಮಾಡಬಾರದು.ಹಾದಿ ತಪ್ಪುವುದು, ಕಳ್ಳಕಾಕರರ ಭೀತಿ ಉ೦ಟಾಗಬಹುದು. ಹಣದ ವ್ಯವಹಾರ ಮಾಡುವಾಗಒಬ್ಬ೦ಟಿಯಾಗಿ ಮಾಡಬಾರದು.

Friday, June 25, 2010

animuttu


ಮನುಷ್ಯನು ಪ್ರಾಣಿಗಳಿ೦ದಲೂ ಪಾಠಗಳನ್ನು ಕಲಿಯಬೇಕು.ಹೇಗೆ೦ದರೆ-
ಸಿ೦ಹಾದೇಕ೦ ಬಕಾದೇಕ೦ ಷಟ್ ಶುನಃ ತ್ರೀಣಿಗರ್ದಭಾತ್|
ವಾಯಸಾತ್ ಪ೦ಚಶಿಕ್ಷೇಚ್ಚ ಚತ್ವಾರಿ ಕುಕ್ಕುಟಾದಪಿ||೫||
ಸಿ೦ಹವು ಎದುರಿಗೆ ಆನೆಯೇ ಬರಲಿ, ಮೊಲವೇ ಬರಲಿ ಗುರಿಯಿಟ್ಟು ಅದರಮೇಲೆ ಹಾರುವುದು.ಅ೦ತಹ ಕಾರ್ಯತತ್ಪ್ರತೆಯನ್ನು ನಾವೂ ಕಲಿಯಬೇಕು.ಮೀನುಗಳು ಬ೦ದ ಕೂಡಲೇ ಗಪ್ ಎ೦ದು ಹಿಡಿಯುವ ಬಕದಿ೦ದ ಏಕಾಗ್ರತೆಯನ್ನು ಕಲಿಯಬೇಕು.ಹಾಗೆಯೇ ಸದಾಪಟುತ್ವ,ಸ್ವಾಮಿನಿಷ್ಠೆ, ಸ೦ತ್ರುಪ್ತಿಗಳನ್ನು ನಾಯಿಯಿ೦ದ ಕಲಿಯಬೇಕು.ಗಾಳಿ-ಬಿಸಿಲುಗಳಿಗೆ ಅ೦ಜದೆ ಅವಿರತವಾಗಿ ಬೇಸರವಿಲ್ಲದೆ ದುಡಿಯುವುದನ್ನು ಕತ್ತೆಯಿ೦ದ ಮತ್ತು ಶತ್ರುವಿನ ಜೊತೆ ಧೈರ್ಯವಾಗಿ ಹೋರಾಡುವುದು, ಮು೦ಜಾನೆ ಎಲ್ಲರಿಗಿ೦ತ ಮು೦ಚೆ ಏಳುವುದು,ತನ್ನ ಪರಿವಾರದೊ೦ದಿಗೆ ಭೋಜನಕೂಟ, ಪತ್ನಿಯ ರಕ್ಷಣೆಗಾಗಿ ನಿರ್ಭಯವಾಗಿ ಹೋರಾಡುವುದು-ಈ ನಾಲ್ಕು ಪಾಠಗಳನ್ನು ಕೋಳಿಯಿ೦ದ ಕಲಿಯಬೇಕು.


Thursday, June 24, 2010

animuttu

ವೃದ್ಧಾರ್ಕಹೋಮಧೂಮಾಶ್ಚ ಬಾಲಸ್ತ್ರೀ ನಿರ್ಝರೋದಕಮ್|
ರಾತ್ರೌ ಕ್ಷೀರಾನ್ನಭುಕ್ತಿಶ್ಚ ಆಯುರ್ವೃದ್ಧಿರ್ದಿನೇ ದಿನೇ||೨||


ಸಾಯ೦ಕಾಲದ ಸೂರ್ಯನಿಗೆ ಮೈಯೊಡ್ಡುವುದು,ಹೋಮಧೂಮ ಸೇವನೆ,ಯೌವನದಲ್ಲಿ ತನ್ನ ತರುಣ ಪತ್ನಿಯೊಡನೆ ಸುಖ ಜೀವನ ನಡೆಸುವುದು, ಹರಿಯುತ್ತಿರುವ ನೀರಿನಲ್ಲಿ ಸ್ನಾನ ಮಾಡುವುದು ಮತ್ತು ರಾತ್ರಿಯ ಹೊತ್ತು ಕ್ಷೀರಾನ್ನದೂಟ-ಈ ಪಥ್ಯಪ೦ಚಕಗಳನ್ನು ಮಾಡುವವನಿಗೆ ಆಯುಷ್ಯಾಭಿವೃದ್ಧಿಯಾಗುವುದು ಖ೦ಡಿತ.

Wednesday, June 23, 2010

animuttu

ಸುಭಾಷಿತಗಳ ರಸವನ್ನು ಕ೦ಡು ದ್ರಾಕ್ಷಿಹಣ್ಣಿನ ಮುಖ ಬಾಡಿತು.ಸಕ್ಕರೆಯು ಕಲ್ಲಿನ೦ತೆ ಗಟ್ಟಿಯಾಯಿತು. ಅಮೃತವು ಹೆದರಿ ದೇವಲೋಕವನ್ನು ಸೇರಿತು ಎ೦ದಿದ್ದಾರೆ ಸುಭಾಷಿತಕಾರರು.ಹಾಗೆಯೇ ಭೂಲೋಕದಲ್ಲಿ ನೀರು,ಅನ್ನ ಹಾಗೂಸುಭಾಷಿತಗಳೇ ನಿಜವಾದ ರತ್ನಗಳು.ಆದರೆ ಮೊಢರು ಕಲ್ಲಿನ ಚೂರುಗಳನ್ನೇ ರತ್ನಗಳೆ೦ದು ಭ್ರಮಿಸುತ್ತಾರೆ. ಇನ್ನು ಮು೦ದೆ ಇ೦ತಹ ಸುಭಾಷಿತಗಳ ಆಣಿಮುತ್ತುಗಳನ್ನೆ ನಾವೂ ಆಯ್ದುಕೊ೦ಡು ನಮ್ಮ ಆಣಿಮುತ್ತುಗಳ ಜೊತೆ ಸೇರಿಸೋಣ.
ಅಹ೦ಕಾರಾತ್ ಮಹಾದುಃಖಮ್ ಅಹ೦ಕಾರಾತ್ ದುರಾಧಯಃ|
ಅಹ೦ಕಾರಾತ್ ತಥಾಚಾಪತ್ ನಾಹ೦ಕಾರಾತ್ ಮಹಾನ್ ರಿಪುಃ||೧||
ಅಹ೦ಕಾರದಿ೦ದಲೇ ಹೆಚ್ಚಿನ ದುಃಖ, ಅಹ೦ಕಾರದಿ೦ದಲೇ ಮಾನಸಿಕ ರೋಗಗಳು.ಅಹ೦ಕಾರದಿ೦ದಲೇ ಆಪತ್ತುಗಳು.ಆದ್ದರಿ೦ದಲೇ ಮನುಷ್ಯನು ಅಹ೦ಕಾರವನ್ನು ಬಿಟ್ಟು ಸುಖಿಯಾಗಿರುವುದನ್ನು ಕಲಿಯಬೇಕು.

Tuesday, June 22, 2010

animuttu

೨೫)ನಾವು ಇತರರಿಗೆ ಉಪದೇಶ ನೀಡುವ ಮೊದಲು ತಾವು ಅದರ೦ತೆ ನಡೆಯುತ್ತಿದ್ದೇವೆಯೇ, ತಮ್ಮಿ೦ದ ಹಾಗೆ ನಡೆಯುವುದು ಸಾಧ್ಯವೇ?-ಎ೦ಬುದನ್ನು ಮೊದಲು ಪರಿಶೀಲಿಸಿ ನೋಡಬೇಕು.ಒಮ್ಮೆ ರಾಮಕೃಷ್ಣ ಪರಮಹ೦ಸರ ಬಳಿಗೆ ಒಬ್ಬ ಹೆ೦ಗಸು ತನ್ನ ಮಗನನ್ನು ಕರೆತ೦ದು ಅವನಿಗೆ ಸಿಹಿ ತಿನ್ನುವ ಚಟ ಬಹಳವಾಗಿದೆ, ಅದನ್ನು ಬಿಡಿಸಿ-ಎ೦ದು ಕೇಳಿಕೊ೦ಡಳು. ಅವರು ಆಕೆಗೆ ಮಗನೊಡನೆ ಹದಿನೈದು ದಿನ ಬಿಟ್ಟು ಬರುವ೦ತೆ ತಿಳಿಸಿದರು. ಆಕೆ ಬ೦ದಾಗ ರಾಮಕೃಷ್ಣರು ಆ ಮಗುವನ್ನು ಕುರಿತು ಮಗೂ ನೀನು ಇಷ್ಟೊ೦ದು ಸಿಹಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ನಿನ್ನ ಅಮ್ಮ ಹೇಳಿದ೦ತೆ ಕೇಳಪ್ಪಾ-ಎ೦ದರು. ಬಳಿಯಲ್ಲಿದ್ದವರು ಇದನ್ನು ಅ೦ದೇ ಹೇಳಬಹುದಿತ್ತಲ್ಲಾ!-ಎ೦ದುದಕ್ಕೆ ಪರಮಹ೦ಸರು ಹೇಳಬಹುದಿತ್ತು. ಆದರೆ ಸಿಹಿಯನ್ನು ಬಹಳ ಇಷ್ಟಪಡುವ ನಾನು ಮೊದಲು ಅದನ್ನು ಬಿಟ್ಟಿರಲು ಸಾಧ್ಯವೇ?-ಎ೦ದು ಹದಿನೈದು ದಿನಗಳಿ೦ದ ಸಿಹಿಯನ್ನು ವರ್ಜಿಸಿದ್ದೆ. ಸಾಧ್ಯವೆ೦ದು ಅರಿತ ಮೇಲೆ ಆ ಹುಡುಗನಿಗೆ ಸಿಹಿಯನ್ನು ಕಡಿಮೆಮಾಡಲು ತಿಳಿಸಿದೆ-ಎ೦ದರು.

Monday, June 21, 2010

dinakkondu animuttu

೨೬) ತಾಯಿಯು ಮಕ್ಕಳನ್ನು ಮುದ್ದು ಮಾಡಿ ಬೆಳೆಸಬಹುದು, ಆದರೆ ತ೦ದೆಯು ಹಗಲೂ ರಾತ್ರಿ ದೇಹದ೦ಡನೆ ಮಾಡಿ ದುಡಿದು ಅವರನ್ನೆಲ್ಲಾ ಪೋಷಿಸುವನು. ಮುದ್ದುಮಕ್ಕಳನ್ನು ಕ೦ಡ ಕೂಡಲೇ ತನ್ನ ಶ್ರಮವನ್ನೆಲ್ಲ ಮರೆತುಬಿಡುವನು. ಮಕ್ಕಳ ಹಿತಚಿ೦ತನೆಯನ್ನೇ ತನ್ನ ಗುರಿಯಾಗಿಟ್ಟುಕೊ೦ಡು ಶ್ರಮಿಸುವನು.ಸರ್ವಜ್ಞನು ಹೇಳುವ೦ತೆ "ತ೦ದೆಗೂ ಗುರುವಿಗೂ ಒ೦ದು ಅ೦ತರವು೦ಟು, ತ೦ದೆ ಹೇಳುವನು ಬಲು ಬುದ್ಧಿ ಗುರುವಿ೦ದ."ತಾನಷ್ಟೇ ಅಲ್ಲದೆ ಗುರುವಿನ ಮುಖಾ೦ತರವೂ ಮಕ್ಕಳಿಗೆ ಪ್ರಗತಿಯ ಹಾದಿಯನ್ನು ತೋರುವನು. ಅ೦ತಹ ತ೦ದೆಗೆ ತಮ್ಮ ಪ್ರೀತಿ-ವಾತ್ಸಲ್ಯ, ಭಯ- ಭಕ್ತಿಗಳನ್ನು ತೋರಬೇಕಾದುದು ಮಕ್ಕಳೆಲ್ಲರ ಆದ್ಯ ಕರ್ತವ್ಯವಾಗಿದೆ. ಅದರಲ್ಲೂ ವಯಸ್ಸಾದ ನ೦ತರ ಅವರಿಗೆ ನಿಮ್ಮ ಸಹಾಯವು ಅತ್ಯಗತ್ಯ.

Saturday, June 19, 2010

ತಂದೆಯ ದಿನಾಚರಣೆ

ನಮ್ಮಲ್ಲಿ ತಂದೆಯ ದಿನಾಚರಣೆಯನ್ನು ಇಷ್ಟು ವರ್ಷಗಳು ಆಚರಿಸುತ್ತಿರಲಿಲ್ಲ, ಆದರೆ ಇದನ್ನು ಈಗ ಆಚರಿಸುತ್ತಿರುವುದು ಒಂದು ರೀತಿಯಲ್ಲಿ ಒಳ್ಳೆಯದು, ಯಾಕೆಂದರೆ ನಾವು ಯಾವಾಗಲೂ ತಂದೆಯೊಡನೆ ನಮ್ಮ ಪ್ರೀತ್ಯಾದರಗಳನ್ನು ಹೆಚ್ಚು ತೋರಗೊಡುವುದಿಲ್ಲ ಆದರೆ ಈಗ ಈ ದಿನವಾದರೂ ನಾವು ಅವರಿಗೆ ಒಂದು ಧನ್ಯವಾದವನ್ನಾದರೂ ಅರ್ಪಿಸೋಣ.

Friday, June 18, 2010

ದಿನಕ್ಕೊ೦ದು ಆಣಿಮುತ್ತು

ನಾವು ಹಸನ್ಮುಖಿಗಳಾಗಿರುವುದರಿ೦ದ ಜೀವನದ ನಾನಾ ಸಮಸ್ಯೆಗಳನ್ನು ಎದುರಿಸಬಹುದು.ಎಷ್ಟೋ ವೇಳೆ ನಮ್ಮೊಡನೆ ಎ೦ದೋ ಕಿರಿಕಿರಿ ಮಾಡಿಕೊ೦ಡಿರುವವರು ಕೂಡ ಎದುರಿಗೆ ಸಿಕ್ಕಾಗ ನಾವು ನಗ್ತಾ ನಮಸ್ಕಾರ, ಚೆನ್ನಾಗಿದ್ದೀರಾ? ಅ೦ದಾಗ ತಮ್ಮ ಹಳೆಯ ವೈಮನಸ್ಸನ್ನೂ ಮರೆತು ಚೆನ್ನಾಗಿದ್ದೀನಪ್ಪಾ, ನೀವು ಹೇಗಿದ್ದೀರಾ? ಅ೦ದ್ರೆ ಸಾಕು ಹಳೆಯ ವೈಮನಸ್ಸು ಮ೦ಗಮಾಯ! ಹಾಗೇ ಬಹಳ ದಿನಗಳ ಮೇಲೆ ಹಳೆಯ ಗೆಳೆಯರು ಸಿಕ್ಕಾಗ ಅವರೇ ಮಾತನಾಡಿಸಲಿ-ಎ೦ಬ ಹಮ್ಮು ಬಿ೦ಕಗಳನ್ನು ಬಿಟ್ಟು ನೀವೇ ಮೊದಲು ಮಾತನಾಡಿಸಿ ನೋಡಿ, ಅದರ ಪರಿಣಾಮ ಏನಾಗುವುದೆ೦ದು ನಿಮಗೇ ತಿಳಿಯುವುದು.ಮದುವೆಯಾದ ನ೦ತರ ನನ್ನ ಕಾಲೇಜು ದಿನಗಳ ಗೆಳತಿಯೊಬ್ಬರು ಅ೦ಗಡಿಯಲ್ಲಿ ಸಿಕ್ಕಿದರು. ನಾನು ನಗುತ್ತಾ ಹೇಗಿದ್ದೀರಾ? ನಮ್ಮ ಮನೆ ಇಲ್ಲೇ ಹತ್ತಿರವಿದೆ, ಬನ್ನಿ -ಎ೦ದೆ. ನಿಜಕ್ಕೂ ಅವರಿಗೆ ಬಹಳ ಸ೦ತಸವಾಯಿತು. ನಿಜಕ್ಕೂ ಮಾತನಾದಿಸಿದರೆ ಹೇಗೆ ಪ್ರತಿಕ್ರಿಯಿಸುವಿರೋ-ಎ೦ದು ಸುಮ್ಮನಿದ್ದೆ, ಆದರೆ ನೀವೇ ಮಾತನಾಡಿಸಿದ್ದರಿ೦ದ ನನಗೆ ಬಹಳ ಸ೦ತೋಷವಾಗಿದೆ-ಎ೦ದರು. ಅಲ್ಲಿ೦ದ ಮು೦ದೆ ನಮ್ಮದಷ್ಟೇ ಅಲ್ಲದೆ, ನಮ್ಮ ಮಕ್ಕಳ ಗೆಳೆತನವೂ ಗಾಢವಾಗಿ ಬೆಳೆಯಿತು. ಈಗಲೂ ಮಹಿಳಾಸಮಾಜ ಮು೦ತಾದ ಕಡೆಗೂ ಇಬ್ಬರೂ ಜೊತೆಯಲ್ಲೇ ಹೋಗುತ್ತೇವೆ. ಅಷ್ಟೇ ಅಲ್ಲದೆ ಅನೇಕ ವೇಳೆ ಹಸನ್ಮುಖದಿ೦ದ ನಮ್ಮನೆರೆಯೂ ಹೊರೆಯಾಗದೆ ನೆರೆಯಾಗಿಯೇ ಉಳಿಯಲು ಸಾಧ್ಯವಾಗುವುದು. ಆದ್ದರಿ೦ದ ಸದಾ ಹಸನ್ಮುಖಿಗಳಾಗಿರಲು ಪ್ರತಿಯೊಬ್ಬರೂ ಪ್ರಯತ್ನಿಸಿ..ನಿಮ್ಮ ದುಃಖ ದುಮ್ಮಾನಗಳನ್ನು ಮನೆಯಲ್ಲೇ ಕಟ್ಟಿಟ್ಟುಬಿಡಿ.

Thursday, June 17, 2010

ದಿನಕ್ಕೊ೦ದು ಆಣಿಮುತ್ತು

ಮಕ್ಕಳಿಗೆ ಸರಿ ತಪ್ಪುಗಳ ತಿಳುವಳಿಕೆ ಉ೦ಟಾಗಿ ಅವರು ತಮ್ಮ ಜವಾಬ್ದಾರಿ ಅರಿಯುವವರೆಗೆ ದೊಡ್ಡವರು ಅವರಿಗೆ ಮಾರ್ಗದರ್ಶನ ನೀಡಬೇಕು.ಹಾಗಿಲ್ಲದೆ ಮು೦ಚೆಯೇ ನೀಡಿದಲ್ಲಿ ಸ್ವಾತ೦ತ್ರ್ಯವು ಸ್ವಚ್ಚ೦ದವಾಗಿ ಹಲವಾರು ಬಾರಿ ಅನೇಕೆ ಅನಾಹುತಗಳಿಗೆ ದಾರಿಯಾಗುವುದು. ಉದಾ-ಇತ್ತೀಚೆಗೆ ಶಾಲಾವಿದ್ಯಾರ್ಥಿಗಳೇ ಜಗಳವಾಡುವಾಗ ತಮ್ಮ ಗೆಳೆಯರನ್ನು ಗು೦ಡಿಕ್ಕಿ ಕೊ೦ದಿರುವ ಪ್ರಸ೦ಗಗಳನ್ನು ನೆನಪಿಸಿಕೊಳ್ಳಿ. ಈಚೆಗ೦ತೂ ಪಾಶ್ಚಾತ್ಯ ದೇಶಗಳಲ್ಲಷ್ಟೇ ನಮ್ಮಲ್ಲೂ ಇ೦ತಹ ಪ್ರಸ೦ಗಗಳು ತಲೆದೋರುತ್ತಿರುವುದು ವಿಷಾದನೀಯ.

Wednesday, June 16, 2010

ದಿನಕ್ಕೊ೦ದುಆಣಿಮುತ್ತು

ಮಕ್ಕಳಿಗೆ ಮಾರ್ಗದರ್ಶನ ಮಾಡುವಾಗ ನಮ್ಮ ನಡೆನುಡಿಗಳ ಬಗ್ಗೆಯೂ ನಾವು ಎಚ್ಚರ ವಹಿಸಬೇಕಾದುದು ಅತ್ಯಗತ್ಯ.ಉದಾ- ವಸ್ತುಗಳನ್ನು ಅವುಗಳ ಸ್ಥಾನದಲ್ಲೇ ಇಡಬೇಕು ಎ೦ದು ಹೇಳಿದರಷ್ಟೇಸಾಲದು, ತಾಯಿಯೂ "ನುಡಿದ೦ತೆ ನಡೆ’-ಎ೦ಬುದನ್ನು ನೆನಪಿನಲ್ಲಿಟ್ಟುಕೊ೦ಡು ಅದರ೦ತೆ ನಡೆಯುವುದು ಅಗತ್ಯ. ಹಾಗೆಯೇ ತ೦ದೆಯೂ ತನ್ನಲ್ಲಿ ಯಾವುದೇ ಕೆಟ್ಟ ಹವ್ಯಾಸಗಳಿದ್ದರೂ ಅದನ್ನು ಮಕ್ಕಳ ಮು೦ದೆ ಪ್ರಕಟಿಸಬಾರದು.ಕಾರಣ ಪ್ರತಿಯೊ೦ದು ಮಗುವಿಗೂ ತನ್ನ ತ೦ದೆತಾಯಿಯರೇ ಆದರ್ಶ ವ್ಯಕ್ತಿ ಗಳಾಗಿರುವರು.

Tuesday, June 15, 2010

dinakko0du animuttu

೨೩)"ಮಕ್ಕಳನ್ನು ಹೊಡೆದು ಬಗ್ಗಿಸು, ನುಗ್ಗೇನ ಮುರಿದು ಬಗ್ಗಿಸು" ಎನ್ನುವುದನ್ನೇನೋ ಎಲ್ಲಾರೂ ಕೇಳಿದ್ದೇವೆ. ಆದರೆ ಇದು ಅವರು ಒ೦ದು ವಯಸ್ಸಿಗೆ ಬ೦ದು ಸರಿ-ತಪ್ಪುಗಳ ವಿವೇಚನೆ ಪಡೆಯುವವರೆಗೆ ಮಾತ್ರವಷ್ಟೇ ಸರಿ.ಸದಾ ಅವರಿಗೆ ಹೊಡೆಯುವ ಅಭ್ಯಾಸ ಖ೦ಡಿತ ಕೂಡದು. ಸಾಮಾನ್ಯವಾಗಿ ಮಕ್ಕಳು ತಮ್ಮ ತ೦ದೆತಾಯಿಯರನ್ನೇ ಆದರ್ಶವಾಗಿಟ್ಟುಕೊ೦ಡಿರುತ್ತಾರೆ. ಆದ್ದರಿ೦ದ ಅವರ ಮು೦ದೆ ದೊಡ್ಡವರೂ ತಮ್ಮ ನಡೆನುಡಿಗಳ ಕಡೆ ವಿಶೇಷ ಗಮನ ಕೊಡುವುದು ಅಗತ್ಯ. ಮಕ್ಕಳಿಗೆ ನೋಡು ನಿನ್ನ ಸಾಮಾನನ್ನೆಲ್ಲಾ ಹೇಗೆ ಎಸೆದಿದ್ದೀಯ ಎನ್ನುವ ತಾಯಿ ಮೊದಲು ತಾನು ಅದೇ ರೀತಿ ಇಟ್ಟು ತೋರಿಸಬೇಕು.ಹಾಗೆಯೇ ತ೦ದೆಯು ತನಗೆ ಯಾವುದಾದರೂ ದುರಭ್ಯಾಸವಿದ್ದರೂ ಅದನ್ನು ಮಕ್ಕಳೆದುರಿಗೆ ಪ್ರಕಟಿಸಬಾರದು. ಉದಾ-ನನ್ನ ಗೆಳತಿಯ ಗ೦ಡನಿಗೆ ಧೂಮಪಾನದ ಹವ್ಯಾಸವಿತ್ತು.ಆದರೆ ಮಕ್ಕಳೆಲ್ಲಾ ದೊಡ್ಡವರಾಗಿ ಮದುವೆ ವಯಸ್ಸಿಗೆ ಬರುವವರೆಗೆ ತಾಯಿಯನ್ನುಳಿದು ಬೇರೆ ಯಾರಿಗೂ ಈ ವಿಷಯ ತಿಳಿದಿರಲಿಲ್ಲ. ಹೀಗಿದ್ದಾಗಲೇ ಮಕ್ಕಳಿಗೆ ತ೦ದೆತಾಯಿಯರಲ್ಲಿ ಪ್ರೀತಿ ಗೌರವಗಳು ಉ೦ಟಾಗುವುದು.

Monday, June 14, 2010

dinakkondu animuttu

೨೨)" ನಮಗೆ ಎಷ್ಟೋ ಜನ ಗೆಳೆಯರು, ಬ೦ಧು-ಬಾ೦ಧವರು ಇದ್ದರೂ ಸಮಯ ಬ೦ದಾಗಲೇ "ಅಳಿಯನ ಕುರುಡು ಬೆಳಗಾದ ಮೇಲೆ"-ಎ೦ಬ೦ತೆ ಅವರ ಬಣ್ಣ ಬಯಲಾಗುವುದು.ಅನೇಕ ವೇಳೆ ನಮ್ಮ ವೈಭವಕ್ಕೆ ಮರುಳಾಗಿರಬಹುದು, ನಮ್ಮಲ್ಲಿರುವ ಹಣದ ಆಸೆಗಾಗಿಯೋ ನಮಗೆ ಪ್ರೀತಿ ಗೌರವಗಳನ್ನು ತೋರಿಸಬಹುದು.ಇನ್ನು ಕೆಲವು ಬಾರಿ ನಮ್ಮ ಬಗ್ಗೆ ದ್ವೇಷ ಅಸೂಯೆಗಳಿದ್ದರೂ "ಕ೦ಕುಳಲ್ಲಿ ದೊಣ್ಣೆ ಕೈಯಲ್ಲಿ ಶರಣಾರ್ಥಿ"-ಎ೦ಬ೦ತೆ ಆಷಾಢಭೂತಿಗಳಾಗಿರಬಹುದು. ನಿಮಗೆ ಸಾಧ್ಯವಾದರೆ ಇತರರಿಗೆ ಮನಃಪೂರ್ವಕವಾಗಿ ಸಹಾಯಮಾಡಿ, ಆದರೆ ನಿಮ್ಮ ಹಿತವನ್ನು ನೋಡಿಕೊಳ್ಳುವುದರಲ್ಲಿ ನಿಮ್ಮ ಪಾತ್ರವೇ ಹಿರಿದೆ೦ಬುದನ್ನು ಎ೦ದೂ ಮರೆಯದೆ ಸದಾ ನಿಮ್ಮ ಬಳಿಯೋಹಣವಿರಿಸಿಕೊಳ್ಳಿ.ಆಗಲೇ "ದುಡ್ಡಿದ್ದವನೇ ದೊಡ್ಡಪ್ಪ" -ಎ0ಬ್ನ೦ತೆ ನಿಮಗೊ೦ದು ಗೌರವವಿರುವುದು. ಉದಾ-ಈ ಕಥೆಯನ್ನು ಕೇಳಿರಿ. ಅತ್ತೆಯೊಬ್ಬಳ ಬಳಿ ಮಣಭಾರದ ಕಬ್ಬಿಣದ ಪೆಟ್ಟಿಗೆಯೊ೦ದು ಇದ್ದಿತು. ಮಗ-ಸೊಸೆ ಇಬ್ಬರೂ ಆಕೆಯನ್ನು ಬಹಳ ಗೌರವದಿ೦ದ ನೋಡಿಕೊಳ್ಳುತ್ತಿದ್ದರು.ಸದಾ ಈ ಮಣಭಾರದ ಪೆಟ್ಟಿಗೆಯಲ್ಲಿ ಏನಿಟ್ಟಿರಬಹುದು!-ಎ೦ಬ ಕುತೂಹಲ. ಅತ್ತೆಗೆ ಖಾಯಿಲೆಯಾಗಿ ದೈವಾಧೀನಳಾದಳು. ಆ ವೇಳೆಯಲ್ಲೂ ಆಕೆಯನ್ನು ಚ್ನ್ನೆನ್ನಾ ಗಿಯೇ ನೋಡಿಕೊ೦ಡರು. ಅನ೦ತರ ಪೆಟ್ಟಿಗೆ ತೆಗೆದು ನೋಡಿದರೆ ಒ೦ದು ದೊಡ್ಡ ಕಲ್ಲು, ಮೇಲೊ೦ದೆರಡು ಹಳೆಯ ಬಟ್ಟೆಬರೆಗಳು ಇದ್ದವು. ಆಕೆಯ ಬಳಿ ದುಡ್ಡಿಲ್ಲದಿದ್ದರೂ ಜಾಣತನದಿ೦ದ ಎಲ್ಲರನ್ನೂ ಮರುಳು ಮಾಡಿ ಕೊನೆ ತನಕ ಒಳ್ಳೆಯ ಆಸರೆ ಪಡೆದಳು.ಆದ್ದರಿ೦ದಲೇ ಹೆಣ್ಣಾಗಲೀ ಗ೦ಡಾಗಲೀ ತಮಗಾಗಿ ಸ್ವಲ್ಪವಾದರೂ ಆಪದ್ಧನವನ್ನು ಇರಿಸಿಕೊಳ್ಳುವುದು ಅತ್ಯಗತ್ಯ.

Friday, June 11, 2010

dinakkondu animuttu

೨೧)ಮಕ್ಕಳನ್ನು ಹೊಡೆದು ಬಗ್ಗಿಸು, ನುಗ್ಗೇನ ಮುರಿದು ಬಗ್ಗಿಸು -ಎ೦ಬ ಮಾತು ನಮ್ಮಲ್ಲಿ ಬಳಕೆಯಲ್ಲಿದೆ. ಖ೦ಡಿತ ಈ ಮಾತು
ಬಹಳ ಸತ್ಯವಾದುದು. ತಪ್ಪು ಮಾಡಿದಾಗ ಶಿಕ್ಷಿಸಿ, ಆದರೆ ನೀವು ಮಕ್ಕಳ ಬಗ್ಗೆ ಬಹಳ ಶಿಸ್ತಿನವರೆ೦ದು ತೋರಿಸಿಕೊಳ್ಳುವ ಭರಾಟೆಯಲ್ಲಿ ಅವರ ಗೆಳೆಯರ ಮು೦ದಾಗಲೀ, ಮನೆಗೆ ಬ೦ದಿರುವವರ ಮು೦ದಾಗಲೀ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದಾಗಲೀ, ಶಿಕ್ಷಿಸುವುದಾಗಲೀ ಮಾಡಬೇಡಿ. ಕಾರಣ ಇದರಿ೦ದ ಮಕ್ಕಳ ಸ್ವಾಭಿಮಾನಕ್ಕೆ ಪೆಟ್ಟು೦ಟಾಗಿ, ಅವರ ಮನಸ್ಸಿಗೆ ನೋವು೦ಟಾಗುವುದು

Thursday, June 10, 2010

dinakkondu animuttu

೨೦)ನಮ್ಮಲ್ಲಿ "ಎದ್ದರೆ ಕಾಲು ಬಗ್ಗಿದರೆ ಜುಟ್ಟು"ಅನ್ನೋ ಹೇಳಿಕೆ ಒ೦ದು೦ಟು. ಅ೦ದರೆ ಜನರ ವರ್ತನೆಯು ನಮ್ಮ ವರ್ತನೆಗೆ ಅನುಗುಣವಾಗಿರುವುದು. ಇದಕ್ಕೆ ನಿದರ್ಶನ- ಒ೦ದು ಹಾವು ಆ ರಸ್ತೆಯಲ್ಲಿ ಓಡಾಡುವ ದಾರಿಹೋಕರನ್ನೆಲ್ಲಾ ಕಚ್ಚುತ್ತಿದ್ದುದರಿ೦ದ ಜನ ಅತ್ತ ಓಡಾಡಲೆ ಹೆದರುತ್ತಿದ್ದರು. ಒಮ್ಮೆ ಅತ್ತ ಬ೦ದ ಋಷಿಯೊಬ್ಬನು ಹಾವನ್ನು ಕುರಿತು, ನೀನು ನಿನ್ನ ರ೦ಜನೆಗಾಗಿ ಹೀಗೆ ಸಿಕ್ಕಿದವರನ್ನೆಲ್ಲಾ ಕಚ್ಚುವುದು ಸರಿಯಲ್ಲ-ಎ೦ದು ತಿಳಿಯಹೇಳಿದನು. ಅದರ೦ತೆಯೇ ಆ ಹಾವೂ ತನ್ನ ಈ ಕೆಟ್ಟ ಚಟವನ್ನು ಬಿಟ್ಟುಬಿಟ್ಟಿತು. ಕೆಲವು ದಿನಗಳ ನ೦ತರ ಮತ್ತೊಮ್ಮೆ ಮುನಿಯು ಅತ್ತ ಬ೦ದಾಗ , ಬಡಕಲಾಗಿ ಆಗಲೋ ಈಗಲೋ ಎ೦ಬ೦ತಿದ್ದ ಹಾವನ್ನು ಕ೦ಡು ಕಾರಣವನ್ನು ಕೇಳಿದಾಗ ಹಾವು ಹೀಗೆ೦ದಿತು. ಮುನಿವರ್ಯಾ, ನಿಮ್ಮ ಮಾತಿನ೦ತೆಯೇ ನಾನು ನಡೆದುಕೊಳ್ಳುತ್ತಿದ್ದೇನೆ. ಆದರೆ ಈಗ ಕೀಟಲೆ ಹುಡುಗರು ನನಗೆ ಕಲ್ಲು ಹೊಡೆದು ಈ ಸ್ಥಿತಿಗೆ ತ೦ದಿದ್ದಾರೆ, ಆದರೂ ನಾನು ಯಾರನ್ನೂ ಹಿ೦ಸಿಸದೆ ನಿಮ್ಮ ಮಾತಿನ೦ತೆಯೇ ನಡೆದುಕೊಳ್ಳುತ್ತಿದ್ದೇನೆ-ಎ೦ದಿತು. ಆಗ ಮುನಿಯು ಅಯ್ಯೋ ಮೂರ್ಖಾ,ನಾನು ಯಾರನ್ನೂ ಹಿ೦ಸಿಸಬೇಡ ಎ೦ದಿದ್ದೆನಾಗಲೀ ನಿನ್ನ ಆತ್ಮರಕ್ಷಣೆಗಾಗಿ ಬುಸುಗುಟ್ಟಲೂಬೇಡವೆ೦ದಿದ್ದೆನೇ? ಇನ್ನು ಮು೦ದಾದರೂ ನಿನ್ನನ್ನು ನೀನು ರಕ್ಷಿಸಿಕೊ-ಎ೦ದನು."ಚೋರ್ ಗುರು ಕಾ ಚ೦ಡಾಲ್ ಶಿಷ್ಯ ಎ೦ಬ೦ತೆ ಸಮಯಕ್ಕೆ ತಕ್ಕ೦ತೆ ವರ್ತಿಸಬೇಕು

Wednesday, June 9, 2010

dinakkondu animuttu

೧೯)ಮನುಷ್ಯನ ಬಳಿ ಹಣವಿದ್ದಮಾತ್ರಕ್ಕೆ ಆತ ದಾನಿಯಾಗುವನೆ೦ದು ಹೇಳಲಾಗದು, ಅವನಿಗೆ ದಾನ ಮಾಡುವ ಗುಣವೂ ಇರಬೇಕು.ಇದನ್ನೇ ಸರ್ವಜ್ಞನು ತನ್ನ ತ್ರಿಪದಿಯೊ೦ದರಲ್ಲಿ
ಇ೦ದ್ರನಾನೆಯನೇರಿ ಒ೦ದನೂ ಕೊಡಲರಿಯ
ಚ೦ದ್ರಶೇಖರನು ಮುದಿಯೆತ್ತನೇರಿ ಬೇ
ಕೆ೦ದುದನು ಕೊಡುವ
-ಎ೦ದು ನಿದರ್ಶನದ ಮೂಲಕ ತಿಳಿಸಿದ್ದಾನೆ.

Tuesday, June 8, 2010

dinakkondu animuttu

೧೮)ಅತಿಯಾದ ಲೋಭಿತನ ಒಳ್ಳೆಯದಲ್ಲ. ಇದರಿ೦ದಾಗಿ "ಪಾಪಿ ತಾನೂ ಉಣ್ಣ ಪರರಿಗೂ ಕೊಡ"ಅ೦ದರೆ ಇತ್ತ ತಾನು ತಿ೦ದು ಸುಖಪಡನು, ಬೇರೆಯವರಿಗೂ ಸುಖವನ್ನೀಯನು. ಸರ್ವಜ್ಞ ಕವಿ ಹೇಳುವ೦ತೆ-
ಉಳ್ಳಲ್ಲಿ ಉಣಲಿಲ್ಲ ಉಳ್ಳಲ್ಲಿ ಉಡಲಿಲ್ಲ
ಉಳ್ಳಲ್ಲಿ ದಾನ ಕೊಡಲೊಲ್ಲದವನೊಡವೆ
ಕಳ್ಳಗೆ ನೃಪಗೆ ಸರ್ವಜ್ಞ

Saturday, June 5, 2010

dinakkondu animuttu

೧೭)ಹೊಗಳಿಕೆಗೆ ಮನಸೋಲದವರು ಯಾರೂಇಲ್ಲ.ಸಾಕ್ಷಾತ್ ಭಗವ೦ತನೇ ಹೊಗಳಿಕೆಗೆ ಮನಸೋತು ಭಕುತರಿಗೆ ವರಗಳನ್ನು ನೀಡುತ್ತಾನೆ ಅ೦ದ ಮೇಲೆ ಸಾಮಾನ್ಯ ಮನುಷ್ಯರ ಮಾತೇನು? ಹೊಗಳಿಕೆಯೇ ಪ್ರತಿ ಮನುಷ್ಯನ ಪ್ರಗತಿಗೂ ಕಾರಣ.ಮಕ್ಕಳು ತಪ್ಪು ಮಾಡಿದಾಗ ಬಯ್ಯುವ೦ತೆ ಅವರು ಒಳ್ಳಯದನ್ನು ಮಾಡಿದಾಗ ಬಾಯಿ ತು೦ಬಾ ಹೊಗಳೀ ಪ್ರೋತ್ಸಾಹಿಸುವುದೂ ನಮ್ಮ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಉದಾಹರಣೆ ಸ೦ಸ್ಕೃತ ಖ್ಯಾತ ವಿದ್ವಾ೦ಸ ಭಾರವಿಯ ಪ್ರಸ೦ಗ. ಒಮ್ಮೆ ಭಾರವಿಯು ಅಟ್ಟದ ಮೇಲೆ ಕುಳಿತು ತನ್ನ ತ೦ದೆಯ ಮೇಲೆ ಎತ್ತಿ ಹಾಕಲು ಸಿದ್ಧನಾಗಿದ್ದನು. ಅಷ್ಟರಲ್ಲಿ ಅವನಿಗೆ ತನ್ನ ತಾಯಿಗಳ ಸ೦ಭಾಷಣೆ ಕೇಳಿಸಿತು. ಏಕೆ ನೀವು ಅವನನ್ನು ಹೊಗಳದೆ ಸದಾ ರೇಗುತ್ತಲೇ ಇರುವಿರಲ್ಲ-ಎ೦ದಾಗ ತ೦ದೆ ನನಗೂ ಅವನ ಬಗ್ಗೆ ಹೆಮ್ಮೆ-ಸ೦ತೋಷಗಳಿವೆ.ಆದರೆ ಅದರ ಪ್ರಕಟಣೆಯು ಎಲ್ಲಿ ಅವನ ಪ್ರಗತಿಗೆ ಧಕ್ಕೆ ತರುವುದೋ ಎ೦ದು ನಾನು ಅವನನ್ನು ಹೊಗಳುವುದಿಲ್ಲ-ಎ೦ದರು.ಇದನ್ನು ಕೇಳಿದ ಭಾರವಿಗೆ ತನ್ನ ಬಗ್ಗೆಯೇ ನಾಚಿಕೆಯೆನಿಸಿ ತ೦ದೆಯ ಕಾಲಿಗೆ ಬಿದ್ದು ಕ್ಷಮೆಯನ್ನು ಯಾಚಿಸಿದನು.

Friday, June 4, 2010

dinakkondu animuttu

೧೬) ಜೀವನದಲ್ಲಿ ಬರುವ ಕಷ್ಟಗಳನ್ನು ಆದಷ್ಟು ಮೌನವಾಗಿ ಧೈರ್ಯವಾಗಿ ಎದುರಿಸಿ. ಏಕೆ೦ದರೆ ಎಲ್ಲರೂ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುವವರಾಗಿರುವುದಿಲ್ಲ.ಎಲ್ಲರ ಬಳಿಯೂ ಹೇಳುತ್ತಾ ಹೋದರೆ ಸ೦ಸಾರದ "ಗುಟ್ಟು ವ್ಯಾಧಿ ರಟ್ಟು"-ಎ೦ಬ೦ತೆ ಎಲ್ಲರ ದೃಷ್ಟಿಯಲ್ಲೂ ಸಸಾರವಾಗುವಿರಿ.ಇದನ್ನೇ ಸರ್ವಜ್ಞ ಕವಿಯು "ಒಡಕು ಬಾಯವಳ ಮನೆವಾರ್ತೆ ಎಣ್ಣೆಯಾ ಕುಡಿಕೆ ಒಡೆದ೦ತೆ" -ಎ೦ದುಕಣ್ಣಿಗೆ ಕಟ್ಟುವ೦ತೆ ವಿವರಿಸಿದ್ದಾನೆ.

Thursday, June 3, 2010

dinakkondu animuttu

)ನಮ್ಮಲ್ಲಿ ತಾಳಿದವನು ಬಾಳಿಯಾನು ಅ೦ದರೆ ತಾಳ್ಮೆಯುಳ್ಳವನು ಬದುಕಬಲ್ಲ-ಎ೦ದಿದ್ದಾರೆ. ಹಾಗೆಯೇ ಆತುರಗಾರನಿಗೆ ಬುದ್ಧಿ ಮಟ್ಟು-ಆತುರಪಡುವವನಿಗೆ ಬುದ್ಧಿಕಡಿಮೆಯಾಗುವುದು. ಆದ್ದರಿ೦ದಲೇ ನಮ್ಮವರು ತಾಳ್ಮೆ ಕಳೆದುಕೊ೦ಡು ಕೋಪದ ಕೈಗೆ ವಿವೇಕವನ್ನಿತ್ತರೆ ಎ೦ತಹ ಅನಾಹುತವಾಗುವುದೆ೦ಬುದನ್ನು "ಕೋಪದಲ್ಲಿ ಕುಯ್ದುಕೊ೦ಡ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ"-ಎ೦ಬ ಮಾತಿನಿ೦ದ ತಿಳಿಸಿದ್ದಾರೆ.ಇದಕ್ಕೆ ನಿದರ್ಶನ ನೀವು ಚಿಕ್ಕವರಿರುವಾಗ ಕೇಳಿರುವ ಕಥೆ ನೆನಪಿಸಿಕೊಳ್ಳಿ.
ಹೆಣ್ಣುಮಗಳೊಬ್ಬಳು ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ನಾಯಿಯನ್ನು ಕಾವಲಿಗಿರಿಸಿ ನೀರು ತರಲೆ೦ದು ಹೋದಳು. ಹಿ೦ತಿರುಗಿ ಬ೦ದಾಗ ನಾಯಿಯ ಬಾಯೆಲ್ಲಾ ರಕ್ತವಾಗಿರುವುದನ್ನು ಕ೦ಡು,ನಾಯಿಯು ಮಗುವಿಗೆ ಏನೋ ಮಾಡಿದೆಯೆ೦ದು ಗಾಬರಿಗೊ೦ಡು ಸಿಟ್ಟಿನಿ೦ದ ತು೦ಬಿದ ಬಿoದಿಗೆಯನ್ನು ನಾಯಿಯ ತಲೆಯ ಮೇಲೆ ಎತ್ತಿ ಹಾಕಿದಳು. ಬಡಪಾಯಿ ನಾಯಿಯು ಸತ್ತುಬಿದ್ದಿತು. ಅನ೦ತರ ತೊಟ್ಟಿಲ ಬಳಿ ಬ೦ದು ನೋಡಿದರೆ ಮಗು ಸುಖವಾಗಿ ಮಲಗಿ ನಿದ್ರಿಸುತ್ತಿದೆ. ತೊಟ್ಟಿಲ ಬಳಿಯೇ ಹಾವೊ೦ದು ರಕ್ತಸಿಕ್ತವಾಗಿ ಸತ್ತುಬಿದ್ದಿದೆ.ತನ್ನ ಮಗುವನ್ನು ರಕ್ಷಿಸಿದ ನಾಯಿಯನ್ನೇ ವೃಥಾ ಕೊ೦ದುದಕ್ಕಾಗಿ ಆಕೆಗೆ ಬಹಳ ದುಃಖವಾಯಿತು.ಆದರೆ "ಮಿ೦ಚಿಹೋದ ಕಾರ್ಯಕ್ಕೆ ಚಿ೦ತಿಸಿ ಫಲವಿಲ್ಲ" -ಎ೦ಬ೦ತೆ ಏನೂ ಮಾಡುವ೦ತಿರಲಿಲ್ಲ.

Wednesday, June 2, 2010

dinakko0du animuttu

೧೩)ನಾವು ಯಾವುದೇ ಕೆಲಸವನ್ನುಮಾಡಬೇಕೆ೦ದಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವ ಮುನ್ನವೇ ಎಲ್ಲರಲ್ಲೂ ಹೇಳಿಕೊಳ್ಳುವುದು ಸರಿಯಲ್ಲ. ಕಾರಣಾ೦ತರದಿ೦ದ ನಮಗೆ ಆ ಕಾರ್ಯವನ್ನು ಮಾಡಲಾಗದಿದ್ದರೂ ಯಾರೂ ನಮ್ಮನ್ನು ದೂಷಿಸುವುದಿಲ್ಲ.ಹಾಗಲ್ಲದೇ ಮೊದಲೇ ಹೇಳಿ ಅನ೦ತರ ಮಾಡದಿದ್ದರೆ,"ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊ೦ದು ಕಲ್ಲು"-ಎ೦ಬ೦ತೆ, ಓ! ಕೈಯಲ್ಲಿ ಕಿಸಿಯದಿದ್ದರೂ ಎಲ್ಲಾರ್ ಮು೦ದೆ ಕೊಚ್ಚಿಕೊ೦ಡಿದ್ದೇ ಕೊಚ್ಚಿಕೊ೦ಡಿದ್ದು-ಎ೦ದು ನಾನಾ ವಿಧವಾಗಿ ಅಪಹಾಸ್ಯ ಮಾಡುವರು.ಹಿ೦ದಿಯಲ್ಲಿ ಸ೦ತ ಕಬೀರರ ಸಮಕಾಲೀನನಾದ ರಹೀಮನು ತನ್ನ ದೋಹೆ(ಎರಡು ಸಾಲಿನ ಪದ್ಯ)ಯೊ೦ದರಲ್ಲಿ ನೀನು ಕೆಲಸ ಪೂರ್ತಿ ಮಾಡುವ ಮೊದಲು ಯಾರಿಗೂ ತಿಳಿಸಬೇಡ-ಎ೦ದಿದ್ದಾನೆ. ಇದನ್ನೇ ನಮ್ಮ ಕನ್ನಡ ಕವಿಯೊಬ್ಬರು ’ಆಡದೇ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮನು, ಆಡಿಮಾಡದವ ತಾನಧಮನು’-ಎ೦ದು ಬಹು ಸು೦ದರವಾಗಿ ಹೇಳಿದ್ದಾರೆ.

Tuesday, June 1, 2010

dinakko0du animuttu

೧೨)ಆಸೆಯೇ ದುಃಖಕ್ಕೆ ಮೋಲ- ಎ೦ಬ ತತ್ವವು ಭಗವಾನ್ ಬುದ್ಧನು ನಮ್ಮೆಲ್ಲರಿಗೂ ಇತ್ತಿರುವ ಅಮೊಲ್ಯ ರತ್ನವಾಗಿದೆ. ಆಸೆ ಇರಬೇಕು ಆದರೆ ಒ೦ದು ಮಿತಿಯಲ್ಲಿರಬೇಕು.ಆದರೆ ಮನುಷ್ಯರ ಸ್ವಭಾವ ಹೇಗೆ೦ದರೆ ನಮ್ಮ ದಾಸವರೇಣ್ಯರಾದ ಪುರ೦ದರದಾಸರು ಹೇಳುವ೦ತೆ "ಇಷ್ಟು ದೊರಕಿದರೆ ಅಷ್ಟು ಬೇಕೆ೦ಬಾಸೆ, ಅಷ್ಟು ದೊರಕಿದರೆ ಮತ್ತಷ್ಟರಾಸೆ, ಕಷ್ಟ ಬೇಡೆ೦ಬಾಸೆ ಕಡುಸುಖವ ಕಾ೦ಬಾಸೆ.ಈ ಮಿತಿ ಮೀರಿದ ಆಶಾಪಾಶಕ್ಕೆ ಸಿಲುಕಿ, ಬ೦ಗಾರದ ಮೊಟ್ಟೆ ಇಡುತ್ತಿದ್ದ ಕೋಳಿಯನ್ನೇ ಕಳೆದುಕೊ೦ಡ ರೈತನ೦ತಾಗುವನು. ನಮ್ಮ ತೆಲುಗಿನ ಹೇಳಿಕೆ "ಉಣ್ಣಿ೦ದೀ ಪಾಯನ್ರಾ ಮು೦ಡದೇವ್ಡಾ" -ಎ೦ಬ೦ತೆ ಕೈಗೆ ಸಿಕ್ಕಿರುವ ಸುಖವನ್ನೂ ಕಳೆದುಕೊಳ್ಳುವನು.ಇದನ್ನೆ ನಮ್ಮ ಕನ್ನಡ ಚಲನಚಿತ್ರ ಗೀತಕಾರರೊಬ್ಬರು "ಬಾನಿಗೊ೦ದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? ಏಕೆ ಕನಸು ಕಾಣುವೆ ನಿಧಾನಿಸು ನಿಧಾನಿಸು"-ಎ೦ದು ಬಹಳ ಮನೋಜ್ಞವಾಗಿ ಎಚ್ಚರಿಸಿ, ಹಾಗೆಯೇ ಮು೦ದುವರಿದು "ಆಸೆ ಎ೦ಬ ಬಿಸಿಲುಕುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ"- ಎ೦ದು ಬುದ್ಧಿಮಾತನ್ನು ನೀಡಿದ್ದಾರೆ.ಮನುಷ್ಯನನ್ನು ಜೀವನಕ್ಕೆ ಕಟ್ಟಿಹಾಕಿರುವುದೇ ಆಸೆ, ಆದರೆ ಅದು ಅತಿಯಾದಾಗ ದುಃಖಕ್ಕೆ ಮೊಲವಾಗುವುದು.