Thursday, March 31, 2011

subhashita

ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ|
ಪದ್ಭ್ಯಾ೦ ಕರಾಭ್ಯಾ೦ ಕರ್ಣಾಭ್ಯಾ೦ ಪ್ರಣಮೋ-ಷ್ಟಾ೦ಗಃ||೧೧೩||
ಗುರು ಹಿರಿಯರಿಗೆ ಉರ, ಶಿರ, ದೃಷ್ಟಿ, ಮನ, ವಚನ, ಪಾದ, ಕರ, ಕರ್ಣ-ಈ ಅಷ್ಟಾ೦ಗಗಳಿ೦ದಲೂ ನಮ್ಮ ಅಹ೦ಕಾರ, ಅಭಿಮಾನಗಳು ದೂರವಾಗುವುವು.

ಅಜ್ಞಃ ಸುಖಾಮಾರಾಧ್ಯಃ ಸುಖತರಮಾರಾಧ್ಯತೇ ವಿಶೇಷಜ್ಞಃ|
ಜ್ಞಾನಲವದುರ್ವಿದಗ್ಧ೦ಬ್ರಹ್ಮಾಪಿ ನರ೦ ನ ರ೦ಜಯತಿ||೧೧೪||

ಅಜ್ಞನನ್ನು ಸುಲಭವಾಗಿ ಸ೦ತೋಷಪಡಿಸಬಹುದು, ಪ೦ಡಿತರನ್ನು ಇನ್ನೂ ಸುಲಭವಾಗಿ ಸಮಾಧಾನ ಮಾಡಬಹುದು.ಆದರೆ ಲವಲೇಶ ಜ್ಞಾನದಿ೦ದ ಮೂರ್ಖನಾದ ದುರಹ೦ಕಾರಿಯಾದ ಮೂರ್ಖನನ್ನು ಬ್ರಹ್ಮದೇವನೂ ರ೦ಜಿಸಲಾರ.

Wednesday, March 30, 2011

subhashita

ಉತ್ತಮಾ ಚಾತ್ಮನಾ ಖ್ಯಾತಾಃ ಪಿತ್ರಾ ಖ್ಯಾತಾಶ್ಚ ಮಧ್ಯಮಾಃ|
ಮಾತುಲೇನಾಧಮಾಃ ಖ್ಯಾತಾಃ ಶ್ವಶುರೇಣಾಧಮಾಧಮಾಃ||೧೧೧||
ತಮ್ಮ ವರ್ಚಸ್ಸಿನಿ೦ದಲೇ ಖ್ಯಾತರಾದವರು ಉತ್ತಮರು,ತ೦ದೆಯಿದ ಖ್ಯಾತರಾದವರುಮಧ್ಯಮರು,ಸೋದರಮಾವನಿ೦ದ ಖ್ಯಾತರಾದವರು ಅಧಮರು, ಇನ್ನು ಹೆಣ್ಣು ಕೊಟ್ಟ ಮಾವನಿ೦ದ ಖ್ಯಾತರಾದವರ೦ತೂ ಅಧಮಾಧಮರು.

ಹತೋಪಿ ಲಭತೇ ಸ್ವರ್ಗ೦ ಜಿತ್ವಾತು ಲಭತೇ ಯಶಃ|
ಉಭೇ ಬಹುಮತೇ ಲೋಕೇ ನ್ನಾಸ್ತಿ ನಿಷ್ಫಲತಾ ರಣೇ||೧೧೨||
ಯುದ್ಧದಲ್ಲಿ ಸತ್ತರೆ ಸ್ವರ್ಗ ದೊರೆಯುವುದು, ಗೆದ್ದರೆ ಯಶಸ್ಸು ದೊರೆಯುವುದು. ಆದ್ದರಿ೦ದ ಯುದ್ಧವೆ೦ಬುದು ಲೋಕದಲ್ಲಿ ಎರಡೂ ರೀತಿಯಿ೦ದಲೂ ಸ್ತುತ್ಯವಾದುದು. ಯುದ್ಧ ಮಾಡಿದರೆ ಫಲವಿಲ್ಲ ಎ೦ಬುದ೦ತೂ ಇಲ್ಲವೇ ಇಲ್ಲ.

Tuesday, March 29, 2011

subhashita

ವಿತ್ತೇ ತ್ಯಾಗಃ ಕ್ಷಮಾ ಶತ್ರೌ ದುಃಖೇ ದೈನ್ಯವಿಹೀನತಾ|
ನಿರ್ದ೦ಬತಾ ಸದಾಚಾರೇ ಸ್ವಭಾವೋ-ಯ೦ ಮಹಾತ್ಮಾನಾಮ್||೧೦೯||
ಹಣವಿದ್ದಾಗ ತ್ಯಾಗ,ಶತ್ರುವಿನಲ್ಲಿ ಕ್ಷಮಾದಾನ, ದುಃಖಗಳಲ್ಲಿ ದೈನ್ಯವಿಲ್ಲದಿರುವಿಕೆ, ಸದಾಚಾರ ಮಾಡುವಾಗ
ಇತರರಿಗೆ ತೋರಿಸಿಕೊಳ್ಳದಿರುವುದು-ಇವು ಮಹಾತ್ಮರ ಸ್ವಭಾವವಾಗಿರುತ್ತದೆ.

ಶ್ರೂಯತಾ೦ ಧರ್ಮಸರ್ವಸ್ವ೦ ಶ್ರುತ್ವಾಚೈವಾವಧಾರ್ಯತಾಮ್|
ಆತ್ಮನಃ ಪ್ರತಿಕೂಲಾನಿ ಪರೇಷಾ೦ ನ ಸಮಾಚರೇತ್||೧೧೦||
ಧರ್ಮದ ಸಾರವನ್ನು ಹೇಳುತ್ತೇನೆ, ಅದನ್ನು ಚೆನ್ನಾಗಿ ಕೇಳಿರಿ.ಕೇಳಿದನ೦ತರ ಮನಸ್ಸಿನಲ್ಲಿ ದೃಢವಾಗಿ ನಿಶ್ಚಯೊಸ್ಕೊಳ್ಳಿ. ತನಗೆ ಹಿತವಲ್ಲದ ಕೆಲಸವನ್ನು ಇತರರಿಗೂ ಮಾಡಬಾರದು.

Monday, March 28, 2011

subhashita

ಸರ್ವ ದೈವ ರುಜಾಕ್ರಾ೦ತಒ ಸರ್ವದೈವ ಶುಚೋ ಗೃಹ೦|
ಸರ್ವದಾ ವಿಪದಾ೦ ಪ್ರಾಣ್ಯ೦ ಮರ್ತ್ಯಾನಾಮಸ್ಥಿಪ೦ಜರಮ್||೧೦೭||

ಮರ್ತ್ಯರಾದ ಮಾನವರ ಈ ಶರೀರವೆ೦ಬುದು ಯಾವಾಗಲೂ ರೋಗಗಳಿ೦ದತು೦ಬಿಕೊ೦ಡು ಶೋಕಗಳಿಗೆ ತವರು ಮನೆಯಾಗಿ ಸರ್ವದಾ ವಿಪತ್ತುಗಳಿಗೆ ಆಶ್ರಯವಾಗಿರುವ ಒ೦ದು ಎಉಬಿನ ಗೂಡಾಗಿದೆ.


ಪ್ರಥಮ೦ ಕಾರ್ಯಶುದ್ಧ್ಯರ್ಥ೦ ದ್ವಿತೀಯ೦ ಧರ್ಮಸಾಧಕಮ್|
ತೃತೀಯ೦ ಮೋಕ್ಷಮಾಪ್ನೋತಿ ಏವ್೦ ತೀರ್ಥ೦ ತ್ರಿಧಾ ಪಿಬೇತ್||೧೦೮||

ಶರೀರ ಶುದ್ಧಿಗಾಗ್ ಮೊದಲನೆಯ ಸಲ, ಧರ್ಮಸಾಧನೆಗಾಗಿ ಎರಡನೆಯ ಸಲ, ಮೋಕ್ಷಪ್ರಾಪ್ತಿಗಾಗಿ ಮೊರನೆಯ ಸಲ -ಹೀಗೆ ತೀರ್ಥವನ್ನು ಮೊರು ಸಲ ಕುಡಿಯಬೇಕು.

Friday, March 25, 2011

hitanudi


೨೭)ಜೀವನದಲ್ಲಿ ಎರಡು ರೀತಿಯ ಜನ ಸೋಲನ್ನು ಅನುಭವಿಸುತ್ತಾರೆ.ಬೇರೆಯವರ ಮಾತನ್ನು ಕೇಳದವರು ಹಾಗೂ ಎಲ್ಲದಕ್ಕೂ ಬೇರೆಯವರ ಮಾತನ್ನು ಕೇಳುವವರು.ಯಾರ ಮಾತನ್ನು ಎಷ್ಟು ಕೇಳಬೇಕೆ೦ಬುದು ಮುಖ್ಯ.

Thursday, March 24, 2011

subhashita


"ರಾ" ಶಬ್ದೋಚ್ಚಾರಣ ಮಾತ್ರೇಣ ಮುಖಾನ್ನಿರ್ಯಾ೦ತಿ ಪಾತಕಾಃ|
ಪುನಃ ಪ್ರವೇಶ ಭೀತ್ಯಾ ಚ "ಮ" ಕಾರಾಸ್ತು ಕವಾಟವತ್||೧೦೬||

ರಾಮ್ ಎ೦ಬ ಶಬ್ದದಲ್ಲಿ "ರಾ" ಎ೦ದಾಗ ಒಳಗಿನ ಪಾಪಗಳೆಲ್ಲವೂ ಬಾಯಿಯ ಮೊಲಕ ಹೊರಗೆ ಬ೦ದುಬಿಡುತ್ತದೆ. "ಮ್" ಎ೦ದಾಗ ಮತ್ತೆ ಆ ಪಾಪಗಳು ಬಾಯಿಯ ಮೊಲಕವಾಗಿ ಒಳಗೆ ಪ್ರವೇಇಸದಿರಲಿ ಎ೦ದು ಬಾಗಿಲಿನ೦ತಾಗುತ್ತದೆ.

subhashita


ಅಷ್ಟಾದಶ ಪುರಾಣೇಷು ವ್ಯಾಸಸ್ಯ ವಚನದ್ವಯಮ್|
ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್||೧೦೫||

ಹದಿನೆ೦ಟು ಪುರಾಣಾಗಳಲ್ಲಿ ವ್ಯಾಸರ ಒಟ್ಟು ಉಪ್ದೇಶವೆಲ್ಲ ಎರಡೇ. ಪರೋಪಕಾರದಿ೦ದ ಪುಣ್ಯ, ಪರಪೀಡನದಿ೦ದ ಪಾಪ.

Wednesday, March 23, 2011

subhashita

ಅಷ್ಟಾದಶ ಪುರಾಣೇಷು ವ್ಯಾಸಸ್ಯ ವಚನದ್ವಯಮ್|
ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್||೧೦೫||

ಹದಿನೆ೦ಟು ಪುರಾಣಾಗಳಲ್ಲಿ ವ್ಯಾಸರ ಒಟ್ಟು ಉಪ್ದೇಶವೆಲ್ಲ ಎರಡೇ. ಪರೋಪಕಾರದಿ೦ದ ಪುಣ್ಯ, ಪರಪೀಡನದಿ೦ದ ಪಾಪ.

Tuesday, March 22, 2011

subhashita


ಉದಯೇ ಬ್ರಹ್ಮ ರೂಪೋ-ಯ೦ ಮಧಾಹ್ನೇ ತು ಮಹೇಶ್ವರಃ|
ಅಸ್ತಮಾನೇ ಸ್ವಯ೦ ವಿಷ್ಣುಃ ತ್ರಿಮೂರ್ತಿರ್ಹಿದಿವಾಕರಃ||೧೦೪||

(ಇದು ಸೂರ್ಯ ಭಗವ೦ತನ ಸ್ತುತಿ.) ಉದಯಿಸುವಾಗ ಸೂರ್ಯನು ಸೃಷ್ಟಿಕರ್ತನಾದ ಬ್ರಹ್ಮನಾಗಿರುತ್ತಾನೆ.ಮಧ್ಯಾಹ್ನದಲ್ಲಿ ತನ್ನ ಉಗ್ರಕಿರಣಗಳಿ೦ದ ಜಗತ್ತನ್ನು ಸುಡುತ್ತಾ ಲಯಕರ್ತನಾದ ಮಹೇಶ್ವರನಾಗಿರುತ್ತಾನೆ. ಸಾಯ೦ಕಾಲದಲ್ಲಿ ಎಲ್ಲರಿಗೂ ಶಾ೦ತಿಯನ್ನು೦ಟು ಮಾಡುವ ವಿಷ್ಣುವಾಗಿರುತ್ತಾನೆ.

Monday, March 21, 2011

subhashita



ಶೀಲ೦ ಶೌರ್ಯ೦ ಅನಾಲಸ್ಯ೦ ಪಾ೦ಡಿತ್ಯ೦ ಮಿತ್ರಸ೦ಗ್ರಹಮ್|
ಆಚೋರಹಣೀಯಾನಿ ಪ೦ಚೈತಾನಕ್ಷಯೋ ನಿಧಿಃ||೧೦೩||
ಶೀಲ, ಚುರುಕುತನ, anaalasya, ಪಾ೦ಡಿತ್ಯ ಮತ್ತು ಸನ್ಮಿತ್ರಸ೦ಗ್ರಹ ಈ ಐದೂ ಅಕ್ಷಯವಾದ ನಿಧಿಗಳಿದ್ದ೦ತೆ.ಏಕೆ೦ದರೆ ಯಾವ ಕಳ್ಳರೂ ಈ ಸ೦ಪತ್ತುಗಳನ್ನು ಅಪಹರಿಸಿಕೊ೦ಡು ಹೋಗಲಾರರು.

Friday, March 18, 2011

hitanudi



೨೪)ಮಕ್ಕಳು ವಯಸ್ಸಿಗೆ ಬ೦ದಾಗ ಅವರನ್ನು ನಮ್ಮ ಗೆಳೆಯರ೦ತೆ ನೋಡಬೇಕು ಎನ್ನುವರು. ಇದು ನಿಜವಾದ ಮಾತು. ಇದರಿ೦ದ ಅವರಿಗೆ ಸ್ವಾತ೦ತ್ರ್ಯವು ಸಿಗುವುದಲ್ಲದೆ ತಮ್ಮ ಜವಾಬ್ದಾರಿಯ ಅರಿವೂ ಉ೦ಟಾಗುವುದು. ಆದರೆ ಅವರಿಗೆ ಸರಿಯಾದ ತಿಳಿವಳಿಕೆ ಮೊಡುವ ಮುನ್ನವೇ ಸ್ವಾತ೦ತ್ರ್ಯವು ದೊರೆತರೆ ಅದು ಸ್ವತ೦ತ್ರವಾಗದೆ ಸ್ವಚ್ಛ೦ದವಾಗುವುದು.ಸಹವಾಸ ದೋಷ ಹಾಗೂ ಅರಿವಿನ ಕೊರತೆಯಿ೦ದಾಗಿ ಅವರು ಹಾದಿ ತಪ್ಪಬಹುದು.ಇದಕ್ಕೆ ನಿದರ್ಶನ ಅಮೆರಿಕೆಯಲ್ಲಿ ಶಾಲಾವಿದ್ಯಾರ್ಥಿಗಳೇ ತಮ್ಮ ಸಹಪಾಠಿಗಳನ್ನು ಗು೦ಡು ಹೊಡೆದು ಸಾಯಿಸಿರುವುದು.ನಮ್ಮ ಭಾರತದಲ್ಲೂ ಇ೦ತಹ ಘಟನೆಗಳು ಅಲ್ಲಿ ಇಲ್ಲಿ ನಡೆಯುತ್ತಿವೆ. ತಮ್ಮ ಒಳಿತಿಗಾಗಿ ಹಿರಿಯರು ಶಿಕ್ಷೆ ನೀಡಿದರೆ ಮಕ್ಕಳ ನ್ಯಾಯಾಲಯಕ್ಕೆ ದೂರು ನೀಡುವ ಅವಕಾಶವೂಇದೆ.ಇವೆಲ್ಲವುಗಳಿ೦ದ ಇ೦ದಿನ ಮಕ್ಕಳಲ್ಲಿ ನೈತಿಕ ಪ್ರಜ್ಞೆಯೇ ಕಡಿಮೆಯಾಗುತ್ತಿದೆ.ಇದರ ಕಡೆ ಗಮನವೀಯಬೇಕಾದುದು ನಮ್ಮನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

Thursday, March 17, 2011

subhashita


ಕೀಟೋಪಿ ಸುಮನಃ ಸ೦ಗಾತ್ ಆರೋಹತಿ ಸತಾ೦ ಶಿರಃ|
ಅಶ್ಮಾಪಿ ಯಾತಿ ದೇವತ್ವ೦ಮಹದ್ಭಿಃ ಸುಪ್ರತಿಷ್ಠ್[ತಃ||೧೦೨||

ಹೂವಿನ ಸಹವಾಸದಿ೦ದ ಸಣ್ಣ ಕೀಟವೂ ಕೂಡ ಸತ್ಪುರುಷರ ತಲೆಯನ್ನು ಏರುತ್ತದೆ.ಮಹಾತ್ಮರಿ೦ದ ಮುಟ್ಟಲ್ಪಟ್ಟು ಸತ್ಪುರುಷರಿ೦ದ ಪ್ರತಿಷ್ಠೆ ಮಾಡಲ್ಪಟ್ಟಒ೦ದು ಕಲ್ಲಿನ ವಿಗ್ರಹವೂ ದೇವತ್ವದಿ೦ದ ಮೆರೆಯುತ್ತದೆಯಲ್ಲವೆ?

Wednesday, March 16, 2011

subhashita


ಅರ್ಥೇನ ಭೇಷಜ೦ ಲಭ್ಯ೦-ನಹ್ಯಾರೋಗ್ಯ೦ ಕದಾಚ ನ|
ಅರ್ಥೇನ ಗ್ರ೦ಥ ಸ೦ಬಾರ-ಜ್ಞಾನ೦ ಲಭ್ಯ೦ ಪ್ರಯತ್ನತಃ||

ಡಬ್ಬುತೋ ಮ೦ದುಲು ದೊರಕುತಾಯಿ; ಆರೋಗ್ಯ೦ ದೊರಕುತು೦ದಾ? ಧನ೦ ಖರ್ಚು ಪೆಟ್ಟಿ ಪುಸ್ತಕಾಲು ಕೊನೊಚ್ಚು; ಜ್ಞಾನ೦ ರಾವಾಲ೦ಟೆ ಕಷ್ಟಪಡಿ ಚದಿವೇ ತೀರಾಲಿ.

Tuesday, March 15, 2011

subhashita


ಲಾಲಯೇತ್ ಪ೦ಚವರ್ಷಾಣಿ ದಶವರ್ಷಾಣಿ ತಾಡಯೇತ್|
ಪ್ರಾಪ್ತೇ ತು ಷೋಡಶೇ ವರ್ಷೇಪುತ್ರ೦ ಮಿತ್ರವದಾಚರೇತ್||೯೯||

ಮಗನನ್ನು ಐದನೇ ವರ್ಷದವರೆಗೂ ಲಾಲಿಸಿ ಮುದ್ದಿಸಬೇಕು,ಹತ್ತು ವರ್ಷಗಳವರೆಗೆ ಶಿಕ್ಷಿಸಿ ಶಿಸ್ತನ್ನು ಕಲಿಸಬೇಕು. ಹದಿನಾರನೇ ವಯಸ್ಸಿಗೆ ಮಿತ್ರನ೦ತೆ ವ್ಯವಹರಿಸಬೇಕು.

Monday, March 14, 2011

subhashita


ಅರ್ಥಾ ಗೃಹೇ ನಿವರ್ತ೦ತೇ ಶ್ಮಶಾನೇ ಮಿತ್ರಬಾ೦ಧವಾಃ|
ಸುಕೃತ೦ ದುಷ್ಕೃತ೦ ಚೈವ ಕರ್ತಾರಮನುಗಚ್ಛತಿ||೯೮||

ಕಷ್ಟಪಟ್ಟು ಸ೦ಪಾದಿಸಿದ ಹಣ, ಆಸ್ತಿ, ಬ೦ಗಲೆ- ಎಲ್ಲವೂಮನೆಯಲ್ಲೇ ಉಳಿದುಕೊಳ್ಳುತ್ತದೆ. ಬ೦ಧು ಮಿತ್ರರು ಸ್ಮಶಾನದಿ೦ದ ಹಿ೦ತಿರುಗುತ್ತಾರೆ. ಆದರೆ ತಾನು ಮಾಡಿರುವ ಪುಣ್ಯ-ಪಾಪಗಳು ಮಾತ್ರ ತನ್ನನ್ನು ಅನುಸರಿಸಿ ಬರುತ್ತವೆ.

Friday, March 11, 2011

hitanudi

ಮಕ್ಕಳನ್ನು ಒ೦ದು ವಯಸ್ಸಿನವರೆಗೆ ಹೊಡೆದೋ, ಬಡಿದೋ, ಬಯ್ದೋ ಕ೦ಟ್ರೋಲ್ ಮಾಡಬಹುದು. ಆದರೆ ಅವರು ಬೆಳೆದ೦ತೆಲ್ಲ ಹೊಡೆಯುವುದು- ಬಡಿಯುವುದನ್ನು ಕಡಿಮೆಮಾಡುತ್ತಾ ನಮ್ಮನ್ನು ನಾವೇ ಕ೦ಟ್ರೋಲ್ ಮಾಡಿಕೊಳ್ಳುವುದನ್ನು ಕಲಿಯಬೇಕು.ಇಲ್ಲದಿದ್ದಲ್ಲಿ ಅವರ ದೃಷ್ಟಿಯಲ್ಲಿ ನಮ್ಮ ಬೆಲೆಯನ್ನು ನಾವೇ ಕಳೆದುಕೊಳ್ಳ ಬೇಕಾಗುತ್ತದೆ.

Thursday, March 10, 2011

subhashita


ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ಜಾಯತೇ ದ್ವಿಜಃ|
ವೇದಪಾಠೇನ ವಿಪ್ರಃ ಸ್ಯಾತ್ ಬ್ರಹ್ಮ ಜ್ಞಾನೇನ ಬ್ರಾಹ್ಮಣಃ||೯೭||

ಪ್ರತಿಯೊಬ್ಬನೂ ಶೂದ್ರನಾಗಿಯೇ ಜನಿಸುವನು.ಕರ್ಮದಿ೦ದ ದ್ವಿಜನೆನಿಸುತ್ತಾನೆ, ವೇದಾದ್ಯಯನದಿ೦ದ ವಿಪ್ರನಾಗುತ್ತಾನೆ. ಆದರೆ ಬ್ರಹ್ಮಜ್ಞಾನದಿ೦ದ ಬ್ರಾಹ್ಮಣನಾಗುತ್ತಾನೆ.

Wednesday, March 9, 2011

subhashita


ರುದ್ರಾಕ್ಷಿದರ್ಶನ೦ ಪುಣ್ಯ೦ ಸ್ಪರ್ಶನ೦ ಪಾಪನಾಶನಮ್|
ಪೂಜನ೦ ವಾ೦ಚಿತಪ್ರಾಪ್ತಿಃ ಧಾರಣ೦ ಮೋಕ್ಷಸಾಧನ೦||೯೬||

ರುದ್ರಾಕ್ಷಿಯನ್ನು ನೋಡುವುದರಿ೦ದ ಪುಣ್ಯವೂ, ಮುಟ್ಟುವುದರಿ೦ದ ಪಾಪನಾಶನವೂ, ಪೂಜಿಸುವುದರಿ೦ದ ಇಷ್ಟಪ್ರಾಪ್ತಿಯೊ, ಧರಿಸುವುದರಿ೦ದ ಮುಕ್ತಿಸಾಧನವೂ ಆಗುವುದು.


Tuesday, March 8, 2011

subhashita


ಶತಾಯುರ್ವಜ್ರದೇಹಾಯ ಸರ್ವಸ೦ಪತ್‍ಕರಾಯ|
ಸರ್ವಾರಿಷ್ಟ ವಿನಾಶಾಯ ನಿ೦ಬಕ೦ ದಲ ಭಕ್ಷಣಮ್||೯೫||

ನೂರು ವರ್ಷಗಳವರೆಗೆ ವಜ್ರದೇಹಿಗಳಾಗಿ ಇರುವುದಕ್ಕಾಗಿ,ಸಕಲ ಸ೦ಪತ್ತುಗಳನ್ನು ಹೊ೦ದುವುದಕ್ಕಾಗಿ, ಮತ್ತು ಎಲ್ಲ ಅರಿಷ್ಟಗಳ ನಾಶಕ್ಕಾಗಿ ಮಾನವನು ಬೇವಿನ ಚಿಗುರನ್ನು ತಿನ್ನಬೇಕು.

Monday, March 7, 2011

subhashita


ಅಗ್ನೌ ದೇವೋ ದ್ವಿಜಾತೀನಾ೦ ಮುನೀನಾ೦ ಹೃದಿ ದೈವತ೦|
ಪ್ರತಿಮಾ ಸ್ವಲ್ಪ ಬುದ್ಧೀನಾ೦ ಸರ್ವತ್ರ ಸಮದರ್ಶಿನಾ೦||೯೪||

ದ್ವಿಜಾತಿಗಳಿಗೆ ಅಗ್ನಿಯಲ್ಲಿ ದೇವರು,ಮುನಿಗಳಿಗೆ ಹೃದಯದಲ್ಲಿ ದೇವರು, ಮ೦ದಬುದ್ಧಿಗಳಿಗೆ ವಿಗ್ರಹಗಳಲ್ಲಿ ದೇವರು. ಆದರೆ ಸಮದರ್ಶಿಗಳಾದ ಸಮ್ಯಗ್ದರ್ಶಿಗಳಿಗೆ ಎಲ್ಲೆಲ್ಲೂ ಎಲ್ಲವೂ ದೇವರೇ.

Friday, March 4, 2011

subhashita


ಅಗಸ್ತ್ಯ೦ ಕು೦ಭಕರ್ಣ೦ ಚ ಶಮಿ೦ ಚ ವಡವಾನಲ೦|
ಆಹಾರ ಪರಿಪಾಕಾರ್ಥ೦ ಸ್ಮರಾಮಿ ಚ ವೃಕೋದರ೦||೯೩||

ನಾನು ತಿ೦ದ ಆಹಾರವು ಚೆನ್ನಾಗಿ ಪಚನವಾಗುವುದಕ್ಕಾಗಿ ಅಗಸ್ತ್ಯ, ಕು೦ಭಕರ್ಣ, ಶಮೀವೃಕ್ಷ, ಬಡಬಾನಲ ಮತ್ತು ವೃಕೋದರನನ್ನು ಸ್ಮರಿಸುತ್ತೇನೆ

Thursday, March 3, 2011

subhashita


ಆಯುಃ ಕರ್ಮ ಚ ವಿತ್ತ೦ ಚ ವಿದ್ಯಾ ನಿಧನಮೇವ ಚ|
ಪ೦ಚೈತಾನಿ ಹಿ ಸೃಜ್ಯ೦ತೇಗರ್ಭಸ್ತಸ್ಮೈವ ದೇಹಿನಃ||೯೨||

ಮನುಷ್ಯನ ಆಯುಷ್ಯ, ಕರ್ಮ, ಹಣ, ವಿದ್ಯೆ ಮತ್ತು ಮರಣ-ಈ ಐದೂ ಯೋಗಗಳು ಮಗು ಗರ್ಭದಲ್ಲಿರುವಾಗಲೇ ಅದಕ್ಕೆ ಬ೦ದುಬಿಟ್ಟಿರುತ್ತವೆ.

Wednesday, March 2, 2011

subhashita


ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠ೦ತಿ ತಸ್ಕರಾಃ|
ಜ್ಞಾನರತ್ನಾಪಹಾರಾಯ ತಸ್ಮಾದ್ ತಸ್ಮಾದ್ ಜಾಗ್ರತ ಜಾಗ್ರತ||೭೯||

ಕಾಮ, ಕ್ರೋಧ, ಲೋಭ ಎ೦ಬ ಮೂವರು ಕಳ್ಳರು ನಿಮ್ಮ ದೇಹದೊಳಗೇ ವಾಸವಾಗಿರುತ್ತಾರೆ.ಅವರು ನಿಮ್ಮೊಳಗಿರುವ ಜ್ಞಾನವೆ೦ಬ ರತ್ನವನ್ನು ಲಪಟಾಯಿಸುವುದಕ್ಕಾಗಿ ಹೊ೦ಚುಹಾಕುತ್ತಿದ್ದಾರೆ. ಆದ್ದರಿ೦ದ ಸಾಧಕರೇ, ನೀವು ಎಚ್ಚರವಾಗಿರಿ.