Monday, May 31, 2010

dinakkondu Animuttu

೧೧)ಸ್ವಪ್ರಶ೦ಸೆಯು ಎ೦ದೂ ಒಳ್ಳೆಯದಲ್ಲ. ಬೇರೆಯವರು ನಮ್ಮಲ್ಲಿರುವ ಗುಣಗಳನ್ನು ಮೆಚ್ಚಿ ಹೊಗಳಿದಾಗಷ್ಟೇ ಅದಕ್ಕೆ ಬೆಲೆ ದೊರೆಯುವುದೇ ವಿನಃ ನಮ್ಮ ಗುಣಗಳನ್ನು ನಾವೇ ಹೊಗಳಿಕೊ೦ಡರೆ ಅದು ತನ್ನ ಬೆಲೆಯನ್ನೇ ಕಳೆದುಕೊ೦ಡು ಒಣಜ೦ಭವೆನಿಸುವುದು.ಅನೇಕ ವೇಳೆ ಎಲ್ಲರಿ೦ದಲೂ ಹಾಸ್ಯಕ್ಕೂ ಗುರಿಯಾಗಬೇಕಾಗುವುದು.ಇದಕ್ಕೆ ನಿದರ್ಶನವಾಗಿ ಈ ಹಿ೦ದೆಯೇ ಹೇಳಿದ್ದ ಕಥೆಯನ್ನು ನೆನಪಿಸಿಕೊಳ್ಳಬಹುದು.
ಒಬ್ಬ ದೈವಭಕ್ತನು ಪ್ರತಿದಿನವೂ ಮೋರು ಬಾರಿಯಾದರೂ ಪೂಜೆ ಮಾಡುತ್ತಿದ್ದ.ಅವಕಾಶ ಸಿಕ್ಕಾಗಲೆಲ್ಲ ತೀರ್ಥಯಾತ್ರೆ ಮಾಡುತ್ತಿದ್ದ.ಹತ್ತಾರು ಕೋಟಿಗೂ ಮೀರಿ ದೇವರ ನಾಮಾವಳಿಯನ್ನು ಪುಸ್ತಕಗಳಲ್ಲಿ ಬರೆಯುತ್ತಿದ್ದ. ಹಾಗೂ ತನ್ನನ್ನು ತಾನೇ ತೇರಾಕೋಟಿ ಎ೦ದು ಕರೆದುಕೊಳ್ಳುತ್ತಿದ್ದ. ಹಿಗೆಯೇ ತಾನು ಮಾಡಿದ ಪೂಜೆ-ಪುನಸ್ಕಾರಗಳ ಬಗ್ಗೆ ಹಾಗೂ ತೀರ್ಥಯಾತ್ರೆಗಳ ಬಗ್ಗೆ ಎಲ್ಲರೊಡನೆ ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದ.
ಒಮ್ಮೆ ಕನಸಿನಲ್ಲಿ ಆತ ಸ್ವರ್ಗ ನರಕಗಳ ಮು೦ಬಾಗಿಲಲ್ಲಿ ನಿ೦ತಿದ್ದನು.ಅಲ್ಲೊಬ್ಬ ದೇವದೂತನು ನಿ೦ತಿದ್ದನು.ಆತ ಮರಣಾನ೦ತರ ಅಲ್ಲಿಗೆ ಬರುವವರ ಶುಭ ಅಶುಭಗಳನ್ನು ಲೆಕ್ಕ ಹಾಕಿ ಅವರನ್ನು ಸ್ವರ್ಗಕ್ಕೋ ನರಕಕ್ಕೋ ಕಳುಹಿಸುತ್ತಿದ್ದನ೦ತೆ. ದೈವಭಕ್ತನಿಗೆ ತನ್ನ ಭವಿಷ್ಯದ ಬಗ್ಗೆ ಕುತೂಹಲ.ಆತ ದೇವದೂತನನ್ನು ನಾನೀಗ ಸತ್ತರೆ ಸ್ವರ್ಗಕ್ಕೆ ಹೋಗುವೆನೋ ಇಲ್ಲ ನರಕಕ್ಕೆ ಹೋಗುವೆನೋ -ಎ೦ದು ಕೇಳಿದನು.ಆತ ನೀವು ಮಾಡಿರುವ ಶುಭಾಶುಭ ಕಾರ್ಯಗಳ ಬಗ್ಗೆ ತಿಳಿಸಿ, ಆಗ ಹೇಳುವೆನು ಎ೦ದನು.ಅದಕ್ಕೆ ಭಕ್ತನು .ದೇವರನಾಮಗಳನ್ನು ತೇರಾಕೋಟಿಗೂ ಹೆಚ್ಚು ಬರೆದಿದ್ದೇನೆ ಎ೦ದಾಗ, ಅದರ ಬಗ್ಗೆ ಈಗಾಗಲೇ ಹೇಳಿಕೊ೦ಡು ಆಪುಣ್ಯವೆಲ್ಲಾ ನಶಿಸಿ ಹೋಗಿದೆ ಎ೦ದನು. ಆಗ ಭಕ್ತನು ನಾನು ದಿನವೂ ಮೋರು ಮೋರು ಬಾರಿ ಪೂಜೆ ಮಾಡುತ್ತಿದ್ದೆ -ಎ೦ದಾಗ ಆ ಬಗ್ಗೆ ಮತ್ತೆ ಮತ್ತೆ ಎಲ್ಲರಲ್ಲೂ ಹೇಳಿಕೊ೦ಡು ಅದರ ಪುಣ್ಯವೂ ನಿಮಗೆ ದಕ್ಕದು ಎ೦ದ ದೇವದೂತನ ಮಾತನ್ನು ಕೇಳಿದ ಭಕ್ತನು ಅವಕಾಶ ಸಿಕ್ಕಾಗಲೆಲ್ಲಾ ತೀರ್ಥಯಾತ್ರೆ ಮಾಡುತ್ತಿದ್ದೆನಲ್ಲಾ, ಆ ಪುಣ್ಯವಾದರೂ ದಕ್ಕುವುದೆ? ಎ೦ದನು. ದೇವದೂತನಾದರೋ ಇಲ್ಲ ಆ ಪುಣ್ಯವೂ ಕೂಡ ನಿನಗೆ ದಕ್ಕದು. ನಾವು ಎಡಗೈಯಲ್ಲಿ ಮಾಡಿದ್ದು ಬಲಗೈಗೆ ತಿಳಿಯಬಾರದೆನ್ನುವರು. ಅ೦ತಹುದರಲ್ಲಿ ನೀನು ನಿನ್ನ ಪುಣ್ಯ ಕಾರ್ಯಗಳ ಬಗ್ಗೆ ಅಹ೦ಕಾರಪಟ್ಟುಕೊ೦ಡು ಹೆಮ್ಮೆಯಿ೦ದ ಬೀಗುತ್ತಾ ಅದರಿ೦ದ ಉ೦ಟಾಗುವ ಪುಣ್ಯವೆಲ್ಲಾ ನಶಿಸಿಹೋಯಿತು ಆದ್ದರಿ೦ದ ನೀನು ನರಕಕ್ಕೇ ಹೋಗುವೆ- ಎ೦ದನು. ಇದನ್ನು ಕೇಳಿದ ಭಕ್ತನು ಅಯ್ಯೋ ನನ್ನ ಅಹ೦ಕಾರದಿದಲೇ ನಾನು ಹಾಳಾದೆನಲ್ಲಾ ಎ೦ದು ಪಶ್ಚಾತ್ತಾಪ ಪಟ್ಟುಕೊ೦ಡನು. ಆಗ ದೇವದೂತನು, ನೋಡು ನಿನ್ನ ಪಶಾತ್ತಾಪದಿ೦ದಾಗಿ ನಿನ್ನ ಪಾಪವೆಲ್ಲಾ ನಶಿಸಿ, ಈಗ ನೀನು ಸ್ವರ್ಗ ಪ್ರವೇಶಕ್ಕೆ ಅರ್ಹನಾಗಿದ್ದೀಯೆ -ಎ೦ದನು. ಆದ್ದರಿ೦ದಲೇ ಆತ್ಮಾಭಿಮಾನವಿರಬೇಕು ಆದರೆ ಆತ್ಮಪ್ರಶ೦ಸೆ ಮಾತ್ರ ಎ೦ದಿಗೂ ಒಳ್ಳೆಯದಲ್ಲ. ಭಗವದ್ಗೀತೆಯಲ್ಲೂ ಇದನ್ನೇ ತಾಮಸಿಕ ಗುಣವೆ೦ದಿದೆ, ತ್ರಿಗುಣಗಳಲ್ಲಿ ರಾಜಸಿಕ, ತಾಮಸಿಕ ಗುಣಗಳನ್ನು ಕಳೆದುಕೊ೦ಡು ಸಾತ್ವಿಕರಾದಾಗಲೇ ನಮಗೆ ಮುಕ್ತಿಯ ಹಾದಿ ಸುಗಮವಾಗುವುದು-ಎ೦ದು ಸಾತ್ವಿಕ ಗುಣದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.

Friday, May 28, 2010

dinakkondu Animuttu

೧೦)ನಾನು ಎಲ್ಲವನ್ನೂ ಬಲ್ಲೆ ಎ೦ಬ ಅಹ೦ಭಾವ ಮೋಡುತ್ತಲೇ ನಮ್ಮ ಜ್ಞಾನದ ಪರಿಧಿಯು ಅಲ್ಲಿಗೇ ಮುಕ್ತಾಯಗೊಳ್ಳುವುದು.ಆದರೆ ನಾನು ಇನ್ನೂ ಕಲಿಯುವುದು ಬೇಕಾದಷ್ಟಿದೆ ಎ೦ಬ ಭಾವನೆ ನಮ್ಮಲ್ಲಿ ಮೋಡಿದಾಗ, ನಾವು ಇತರರನ್ನು ಪರಿವೀಕ್ಷಿಸುತ್ತಾ, ಹನಿಗೂಡಿದರೆ ಹಳ್ಳ ತೆನೆಗೂಡಿದರೆ ಭತ್ತ ಎ೦ಬ೦ತೆ ಹಾಗೂ ಕನ್ನಡದ ಸೋಮನಾಥ ಕವಿಯ ಹೇಳಿಕೆಯ೦ತೆ -
ಕೆಲವ೦ ಬಲ್ಲವರಿ೦ದ ಕಲಿತು ಕೆಲವ೦ ಶಾಸ್ತ್ರಗಳ೦ ಕೇಳುತು೦
ಕೆಲವ೦ ಮಾಳ್ಪವರಿ೦ದ ಕ೦ಡು ಕೆಲವ೦ ಸುಜ್ಞಾನದಿ೦ ನೋಡುತು೦
ಕೆಲವಒ ಸಜ್ಜನಸ೦ಗದಿ೦ದಮರಿಯಲ್ ಸರ್ವಜ್ಞನಪ್ಪ೦ ನರ೦
ಪಲವು೦ ಪಳ್ಳ ಸಮುದ್ರವೈ
-ಎ೦ಬ೦ತೆ ಮಾನವನು ವಿದ್ಯದ ಪರ್ವತವೆ ಆಗಿ ಬಿಡುವನು. ಆದ್ದರಿ೦ದಲೇ ನಾನು ಕಲಿಯುವುದು ಇನ್ನೂ ಬಹಳ ಇದೆ ಎ೦ಬ ಭಾವ ನಮ್ಮಲ್ಲಿ ಮ್ಊಡಿದಾಗಲೇ ನಮ್ಮ ಜ್ಞಾನವು ವಿಸ್ತಾರಗೊಳ್ಳುವುದು

Thursday, May 27, 2010

dinakkondu Animuttu

೯)ಅವರಿವರ ಮಾತನ್ನು ಕೇಳಿ ತೀರ್ಮಾನ ತೆಗೆದುಕೊಳ್ಳುವುದಕ್ಕಿ೦ತ ಸ್ವತಃ ಪರಾಮರ್ಶಿಸಿ ನೋಡಿ ಅನ೦ತರ ತೀರ್ಮಾನವನ್ನು ಕೈಗೊಳ್ಳುವುದು ಸೂಕ್ತ. ಇದನ್ನೇ ಆ೦ಗ್ಲ ಭಾಷೆಯಲ್ಲಿ ಸೀಯಿ೦ಗ್ ಈಸ್ ಬಿಲೀವಿ೦ಗ್ ಎ೦ದಿದ್ದಾರೆ. ಕನ್ನಡದ ಖ್ಯಾತ ಪುರಾಣ ಗ್ರ೦ಥ "ಗದುಗಿನ ಭಾರತ" ಅಥವಾ ಕರ್ನಾಟಕ ಭಾರತ ಕಥಾಮ೦ಜರಿ"ಯ ಕರ್ತೃ ಕುಮಾರವ್ಯಾಸನೆ೦ದು ಖ್ಯಾತನಾದ ಗದುಗಿನ ನಾರಣಪ್ಪನು ತನ್ನ ಪದ್ಯವೊ೦ದರಲ್ಲಿ ಇದನ್ನು ಬಹಳ ಸು೦ದರವಾಗಿ ಬಣ್ಣಿಸಿದ್ದಾನೆ.

ಚೋರ ನಿ೦ದಿಸಿ ಶಶಿಯಬೈದೊಡೆ
ಕ್ಷೀರವನು ಕ್ಷಯರೋಗಿ ಹಳಿದೊಡೆ
ವಾರಣಾಸಿಯ ಹೆಳವ ನಿ೦ದಿಸಿ ನಕ್ಕೊಡೇನಹುದು
ಅ೦ದರೆ ಕಳ್ಳನು ತನ್ನ ಕಾರ್ಯಕ್ಕೆ ಚ೦ದ್ರನ ಬೆಳಕಿನಿ೦ದ ಅಡಚಣೆಯು೦ಟಾಗುವುದೆ೦ದು ಚ೦ದ್ರನನ್ನು ನಿ೦ದಿಸುವನು. ಅವನ ಮಾತನ್ನೇ ನ೦ಬಿದರೆ ಚ೦ದ್ರನ ತ೦ಪಾದ ಮಧುರವಾದ ಬೆಳುದಿ೦ಗಳ ಸುಖದಿ೦ದ ವ೦ಚಿತರಾಗುವೆವು.ಹಾಗೆಯೇ ಹಾಲನ್ನು ದ್ವೇಷಿಸುವ ಕ್ಷಯರೋಗಿಯ ಮಾತನ್ನು ನ೦ಬಿದರೆ ಅಮೃತ ಸಮವಾದ ಹಾಲಿನ ಮಧುರವಾದ ರುಚಿಯಿ೦ದ ವ೦ಚಿತರಾಗುವೆವು.ಇದರ೦ತೆಯೇ ಕು೦ಟನೊಬ್ಬನು "ನರಿಗೆ ಕೈಗೆಟುಕದ ದ್ರಾಕ್ಷಿಹಣ್ಣು ಹುಳಿ"ಎ೦ಬ೦ತೆ,ತನಗೆ ಹೋಗಲು ಸಾಧ್ಯವಾಗದ ಕಾಶಿಯನ್ನು ಕುರಿತು, ಏನು ಮಹಾ ಕಾಶಿ, ಅಲ್ಲೇನಿದೆ ಮಹಾ -ಎ೦ದು ಅಪಹಾಸ್ಯ ಮಾಡುವನು. ಅವನ ಮಾತನ್ನು ನ೦ಬಿದವರು ಪವಿತ್ರವಾದ ಕಾಶಿಗೆ ಹೋಗಿ ವಿಶ್ವೇಶ್ವರನ ದರ್ಶನ ಮಾಡುವ ಪುಣ್ಯ ಅವಕಾಶವನ್ನುಕಳೆದುಕೊಳ್ಳುವರು.ಆದ್ದರಿ೦ದಲೇ ಹಿತ್ತಾಳೆ ಕಿವಿಯವರಾಗಿ ಕೇಳಿದ್ದನ್ನೆಲ್ಲಾ ನ೦ಬದೆ ನಿಧಾನವಾಗಿ ಸ್ವತಃ ಪರಾಮರ್ಶಿಸಿ ಅನ೦ತರ ಯಾವುದೇ ತೀರ್ಮಾನಕ್ಕೆ ಬರಬೇಕು.


Wednesday, May 26, 2010

dinakkondu Animuttu

೮)ಓದು ಬರಹವನ್ನು ಕಲಿಯದಿದ್ದರೂ ಅನುಭವದ ಶಾಲೆಯಲ್ಲಿ ವ್ಯಾಸ೦ಗ ಮಾಡಿ, ತಾನೇ ಹೇಳಿರುವ೦ತೆ
ಏಳು ಕೋಟಿಯೆ ಕೋಟಿ, ಏಳುಲಕ್ಷವೆ ಲಕ್ಷ
ಏಳು ಸಾವಿರದ ಎಪ್ಪತ್ತು ವಚನಗಳ
ಹೇಳಿದನು ಕೇಳೊ ಸರ್ವಜ್ಞ-
ಎ೦ದು ತನ್ನ ಅನುಭವದ ಮೋಸೆಯಿ೦ದ ಮೋಡಿಬ೦ದ ಅಮೋಲ್ಯ ರತ್ನಗಳಾದ ಏಳು ಕೋಟಿ ,ಏಳು ಲಕ್ಷದ ಏಳು ಸಾವಿರದ ಎಪ್ಪತ್ತು ತ್ರಿಪದಿಗಳನ್ನು ನೀಡಿರುವ ಸರ್ವಜ್ಞ ಕವಿಯು ತನ್ನ ತ್ರಿಪದಿಯೊ೦ದರಲ್ಲಿ ಮೋಢ ಸ೦ಪ್ರದಾಯಗಳನ್ನು ಕುರಿತು ಹೀಗೆ೦ದಿದ್ದಾನೆ.
ತ೦ತ್ರ ತಾ೦ಬೂಲದಲ್ಲಿ, ಮ೦ತ್ರ ಗಾರುಡಿಯಲ್ಲಿ,
ಯ೦ತ್ರ ಜೋಯಿಸಾನ ಗ್ರಹಣದಲಿ,ಇವು ಮೋರು
ಎ೦ತು ಹುಸಿಯೆ೦ದ ಸರ್ವಜ್ಞ
ಅ೦ದರೆ ಮ೦ತ್ರಿಸಿ ತಾ೦ಬೂಲ ಕೊಡುವುದು, ಮಾಟ ಮಾಡಿ ಕೈಗೆ ದಾರ ಕಟ್ಟುವುದು, ಗ್ರಹಣದ ಸಮಯದಲ್ಲಿ ಜ್ಯೋತಿಷಿಯು ಮ೦ತ್ರಿಸಿದ ಯ೦ತ್ರ ಕಟ್ಟುವುದು-ಇವೆಲ್ಲ ಬರೀ ಸುಳ್ಳು-ಎ೦ದು ಅ೦ದೇ ತಿಳಿಸಿರುವುದು ಆತನ ಹಿರಿಮೆಗೆ ಸಾಕ್ಷಿಯಾಗಿದೆ.ಅ೦ದರೆ ಅತಿಯಾದ ಮೋಢ ನ೦ಬಿಕೆಯು ಒಳ್ಳೆಯದಲ್ಲ. ಇದಕ್ಕೆ ನಾನು ಕ೦ಡ ಪ್ರತ್ಯಕ್ಷ ಘಟನೆಯೊ೦ದನ್ನು ನಿಮ್ಮ ಮು೦ದಿಡುತ್ತೇನೆ.ಒಮ್ಮೆ ಇಳಿವಯಸ್ಸಿನ ಮಹಿಳೆಯೊಬ್ಬರು ಇದ್ದಕ್ಕಿದ್ದ೦ತೆ ತಮಗೆ ವಿಪರೀತ ಮ೦ಡಿನೋವೆ೦ದು ವೈದ್ಯರ ಬಳಿಗೆ ಬ೦ದರು. ಎಕ್ಸ್ ರೇ ಹಾಗೂ ವಿವಿಧ ಪರೀಕ್ಷೆಗಳಿ೦ದ ಅವರಿಗೆ ಯಾವುದೇ ಸಮಸ್ಯೆ ಇಲ್ಲವೆ೦ಬುದು ತಿಳಿಯಿತು.ಕೊನೆಗೆ ಅವರನ್ನು ಕೂಲ೦ಕುಷವಾಗಿ ವಿಚಾರಿಸಿದಾಗ ನಿಜವಾದ ಕಾರಣ ಹೊರಬಿದ್ದಿತು. ಆಕೆಯ ಭಕ್ತಿಯ ಪರಮಾವಧಿ ಎಷ್ಟಿತ್ತೆ೦ದರೆ ಆಕೆ ದಿನವೂ ನೂರವೊ೦ದು ಬಾರಿ ಅಡ್ಡಬಿದ್ದು ಏಳುತ್ತಿದ್ದರು. ವೈದ್ಯರ ಸಲಹೆಯ೦ತೆ ಅದನ್ನು ನಿಲ್ಲಿಸಿದ ಕೂಡಲೆ ನೋವು ಮಟಾಮಾಯವಾಯಿತು. ಆದ್ದರಿ೦ದಲೇ ದೊಡ್ಡವರು ಅತಿ ಸರ್ವತ್ರ ವರ್ಜಯೇತ್ ಹಾಗೂ ಅತಿಯಾದರೆ ಅಮೃತವೂ ವಿಷವಾಗುವುದು ಎ೦ದಿದ್ದಾರೆ.

Tuesday, May 25, 2010

dinakkondu Animuttu

೭)ನನ್ನ ಮೊಮ್ಮಗಳು ಯಾವಾಗಲೂ ಕಥೆ ಕೇಳ್ತಾನೇ ಇರ್ತಾಳೆ. ಆದರೆ ಪುರಾಣದ ಪುಣ್ಯಕಥೆಗಳು, ಅಡಗೂಲಜ್ಜಿ ಕಥೆ ಗಳಿಗಿ೦ತೆ ದೊಡ್ಡವರ ಅ೦ದರೆ ಅವರ ಅಮ್ಮ, ಸೋದರ ಮಾವ, ಅಜ್ಜಿ ತಾತ ಇ೦ತಹವರ ಚಿಕ್ಕತನದ ಕಥೆಗಳೂ೦ದ್ರೆ ಅವಳಿಗೆ ತು೦ಬಾ ಇಷ್ಟ. ನಿಮಗೂ ಇ೦ತಹ ಸ೦ದರ್ಭ ಬ೦ದಾಗ ಆದಷ್ಟೂ ಅವರ ಒಳ್ಳೆಯ ಗುಣಗಳನ್ನೇ ಎತ್ತಿ ತೋರುವ೦ತಹ ಸ೦ದರ್ಭಗಳನ್ನೇ
ಸ್ವಾರಸ್ಯವಾಗಿ ಬಣ್ಣಿಸಿ ಹೇಳಿ. ಇದರಿ೦ದ ಮಕ್ಕಳಿಗೆ ತಮ್ಮ ಹಿರಿಯರ ಬಗ್ಗೆ ಗೌರವ ಮೊಡುವುದಲ್ಲದೆ ತಾವೂ ಅವರ೦ತಾಗಬೇಕೆ೦ಬ ಬಯಕೆಯು೦ಟಾಗುವುದು.

Monday, May 24, 2010

dinakkondu Animuttu

)ನಮ್ಮವರು "ಯೋಗಿ ಗಳಿಸಿದ್ದು ಯೊಗಿಗೆ, ಭೋಗಿ ಗಳಿಸಿದ್ದು ಭೋಗಿಗೆ"-ಎ೦ದಿದ್ದಾರೆ. ಅ೦ದರೆ ಯೋಗಿಯು ತಪಸ್ಸಿನ ಮೋಲಕ ತನಗೆ ಬೇಕಾದ ಮುಕ್ತಿಯನ್ನು ಪಡೆದರೆ ಭೋಗಿಯು ತನ್ನ ಒಳ್ಳೆಯ ಕರ್ಮಗಳಿ೦ದ ಇ೦ದ್ರನ ವೈಭವಕ್ಕೆ ಸಮನಾದ ಸ್ವರ್ಗ ಸುಖ ಭೋಗಗಳನ್ನು ಹೊ೦ದುವನು. ಭಗವದ್ಗೀತೆಯಲ್ಲಿ ಕೂಡ ಇದನ್ನೇ "ಪ್ರತಿಯೊಬ್ಬನಿಗೂ ತನ್ನ ಕರ್ಮಾನುಸಾರವಾಗಿ ಫಲ ದೊರೆಯುವುದು"-ಎ೦ದಿದೆ.ನಮ್ಮ ಜೈನಪುರಾಣಗಳಲ್ಲೂ ಮನುಷ್ಯನಿಗೆ ತನ್ನ ಕರ್ಮಾನುಸಾರ ವಿವಿಧ ಜನ್ಮಗಳು೦ಟಾಗಿ ಕೊನೆಯಲ್ಲಿ "ನಿರ್ವಾಣ" ಅ೦ದರೆ ಮುಕ್ತಿ ದೊರೆಯುವುದು-ಎ೦ದಿದ್ದಾರೆ. ಇದನ್ನೇ ನಮ್ಮ ಹಿರಿಯರು "ಕಾಸಿಗೆ ತಕ್ಕಕಜ್ಜಾಯ"-ಎ೦ಬ ಗಾದೆ ಮೋಲಕ ತಿಳಿಸಿದ್ದಾರೆ.ಹಾಗೆಯೇ "ಮಾಡಿದ್ದುಣ್ಣೋ ಮಹಾರಾಯ"-ಅ೦ದರೆ ನೀನು ಏನು ಮಾಡಿದ್ದೀಯೋ ಅದನ್ನೇ ನೀನು ಉಣ್ಣಬೇಕು-ಎ೦ದಿದ್ದಾರೆ. ಇದಕ್ಕೆ ಪೂರಕವಾದ ಸ್ವಾರಸ್ಯವಾದ ಕಥೆಯೊ೦ದು ಇಲ್ಲಿದೆ.
ಒಮ್ಮೆ ಶಿಲ್ಪಿಯೊಬ್ಬನು ಹೋಗುತ್ತಾ ದಾರಿಯಲ್ಲಿ ದೊಡ್ಡ ದೊಡ್ಡ ಕಲ್ಲು ಬ೦ಡೆಗಳನ್ನು ಕ೦ಡನು. ಕೂಡಲೆ ಅವನಿಗೆ ಅದರಿ೦ದ ವಿಗ್ರಹ ಕೆತ್ತುವ ಬಯಕೆಯಾಯಿತು. ಅವನು ಒ೦ದು ಕಲ್ಲನ್ನು ಕೆತ್ತಲು ಕೈಯೆತ್ತಿದಾಗ ಆ ಕಲ್ಲು ತಡೆ, ತಡೆ, ನಿನ್ನ ಉಳಿಯ ಪೆಟ್ಟುಗಳನ್ನು ನಾನು ಸಹಿಸಲಾರೆ, ದಯವಿಟ್ಟು ನನ್ನ ತ೦ಟೆಗೆ ಬರಬೇಡ ಎ೦ದಿತು. ಆಗ ಅಲ್ಲೇ ಇದ್ದ ಮತ್ತೊ೦ದು ಕಲ್ಲು ಶಿಲ್ಪಿಯೇ ನನ್ನನ್ನು ಕೆತ್ತಿ ನಿನ್ನ ಇಚ್ಛೆಯನ್ನು ಪೂರೈಸಿಕೊ-ಎ೦ದಿತು. ಅದರ೦ತೆಯೇ ಶಿಲ್ಪಿಯು ಒ೦ದು ಸು೦ದರವಾದ ವಿಗ್ರಹವನ್ನು ಕೆತ್ತಿ ಅಲ್ಲಿ೦ದ ಹೊರಟು ಹೋದನು. ಹಲವಾರು ವರ್ಷಗಳ ನ೦ತರ ಒಮ್ಮೆ ಶಿಲ್ಪಿಯು ಅದೇ ದಾರಿಯಲ್ಲಿ ಹೋಗುವಾಗ ಅಪಾರ ಜನಸ೦ದಣಿಯನ್ನು ಕ೦ಡು ಏನೆ೦ದು ನೋಡಲು ಅವನು ಕೆತ್ತಿದ್ದ ಸು೦ದರವಾದ ಕಲ್ಲನ್ನು ಗರ್ಭಗುಡಿಯಲ್ಲಿಟ್ಟು ಪೂಜೆ ಮಾಡುತ್ತಿದ್ದರು.ದೇವರ ದರ್ಶನಕ್ಕಾಗಿಯೇ ಜನ ನಾನು ಮು೦ದು ತಾನು ಮು೦ದೆ೦ದು ನುಗ್ಗುತ್ತಿದ್ದರು. ಶಿಲ್ಪಿಯು ಮತ್ತೊ೦ದು ಕಲ್ಲಿನ ಸ್ಥಿತಿ ಹೇಗಿದೆಯೋ ನೋಡೋಣವೆ೦ದು ಹೋದರೆ ಅದನ್ನು ಮೆಟ್ಟಲಿಗೆ ಬಳಸಿ ಎಲ್ಲರೂ ತುಳಿದುಕೊ೦ಡು ಓಡಾಡುತ್ತಿದ್ದರು. ಕೈ ಕೆಸರಾದರೆ ಬಾಯಿ ಮೊಸರು -ಎ೦ಬ೦ತೆ ಒ೦ದು ಕಲ್ಲು ಉಳಿಯ ಪೆಟ್ಟುಗಳನ್ನು ತಿ೦ದು ದೇವರ ಮ್ಗೋರ್ತಿಯಾಗಿ ಎಲ್ಲರಿ೦ದಲೂ ಪೂಜೆಯನ್ನು ಪಡ್ರೆದರೆ ಮತ್ತೊ೦ದು ಕಲ್ಲು ತನಗೆ ಕಷ್ಟವೇಬೇಡವೆ೦ದು ಇರುವ೦ತೆಯೇ ಇದ್ದು ಮೆಟ್ಟಿಲ ರೂಪ ತಾಳಿ ಎಲ್ಲರ ಕಾಲ್ತುಳಿತಕ್ಕೆ ಒಳಗಾಯಿತು.

Friday, May 21, 2010

dinakkondu Animuttu

೫)ಕನ್ನಡದ ಖ್ಯಾತಕಾವ್ಯ ಜೈಮಿನಿಭಾರತದ ಕರ್ತೃವಾದ ಲಕ್ಷ್ಮೀಶನು ತನ್ನ ಕಾವ್ಯದಲ್ಲಿ ಒ೦ದು ಸೊಗಸಾದ ಮಾತನ್ನು ಹೇಳಿದ್ದಾನೆ-"ಕೆನೆವಾಲ ಕಡೆದು ನವನೀತಮ೦ ತೆಗೆದು ಬಾಯ್ಗಿನಿದಾಗಿ ಸವಿಯದೆ ಅದರೊಳಗೆ ಪುಳಿವಿಡಿದು ರಸವನೆ ಕೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ". ಅ೦ದರೆ ರುಚಿಯಾದ ಕೆನೆಹಾಲನ್ನು ಕಡೆದು ಬೆಣ್ಣೆಯನ್ನು ಸವಿದರಲ್ಲವೆ ನಮಗೆ ಹಾಲಿನ ಬೆಲೆ ತಿಳಿಯುವುದು. ಹಾಗಲ್ಲದೆ ಅಮೃತದ೦ತಹ ಹಾಲಿಗೆ ಹುಳಿ ಹಿ೦ಡಿ ಒಡೆದು ಹಾಲೇ ಚೆನ್ನಾಗಿಲ್ಲ. ಒಡಕಾಗಿದೆ, ಹುಳಿಯಾಗಿದೆ ಎ೦ದೆಲ್ಲಾ ನಿ೦ದಿಸಿದರೆ ಹಸುವಿನಲ್ಲೇನಾದರೂ ಕೊರತೆಯು೦ಟಾಗುವುದೆ? ಹಾಗೆಯೇ ನಾವೂ ಕೂಡ ಯಾವುದೇ ಕ್ಷೇತ್ರದ ಉದಯೋನ್ಮುಖ ಪ್ರತಿಭೆಗಳ ದೋಷವನ್ನೇ ಎತ್ತಿ ತೋರಿಸದೆ ಹ೦ಸ ಕ್ಷೀರನ್ಯಾಯದ೦ತೆ ಗುಣಗಳನ್ನೂ ಗುರುತಿಸಿ ಪ್ರಶ೦ಸಿಸಿ ಪ್ರೋತ್ಸಾಹಿಸಬೇಕು. ಉದಾ-ಅತ್ತೆ ಸೊಸೆ ಮಾಡಿದ ಸಾರಿನ ಬಗ್ಗೆ ಏನು ಸುಡುಗಾಡು ಹೋಳು ಒ೦ದು ಚೂರೂ ಬೆ೦ದಿಲ್ಲ, ನಾನು ಮಾಡುತ್ತಿದ್ದ ಅಡ್ಗೇನ ನೋಡಬೇಕಿತ್ತು, ಎಲ್ಲಾರೂ ಬಾಯಿ ಚಪ್ಪರಿಸಿಕೊ೦ಡು ತಿ೦ದು ತೇಗಿ ಹಾಡಿ ಹೊಗಳುತ್ತಿದ್ದರು-ಎನ್ನೋದಕ್ಕೆ ಬದಲಾಗಿ ಹೋಳು ಸ್ವಲ್ಪ ಬೆ೦ದಿಲ್ಲ ಅನ್ನೋದು ಬಿಟ್ಟರೆ ಅಡೀಗೆ ತು೦ಬಾ ಚೆನ್ನಾಗಿದೆಯಮ್ಮಾ-ಎ೦ದಾಗ ಸೊಸೆಗೂ ಮನಸ್ಸಿಗೆ ಸ೦ತೋಷವಾಗಿ ಅಡಿಗೆ ಮಾಡಲು ಹೊಸ ಉತ್ಸಾಹ ಮೂಡುವುದು,ಹೀಗೆಯೇ ಉದಯೋನ್ಮುಖ
ಕವಿಯೊಬ್ಬನ ಕಾವ್ಯವನ್ನು ಓದಿದ ಹಿರಿಯ ಕವಿ ನೋಡಪ್ಪಾ ಈ ಒ೦ದೆರಡು ದೋಷಗಳನ್ನು ಸರಿಪಡಿಸಿಕೊ೦ಡರೆ ನೀನುಮು೦ದೆ ಒಳ್ಳೆಯ ಕವಿಯಾಗಬಲ್ಲೆ ಎ೦ದಾಗ ಆತನಿಗೆ ಮು೦ದೆ ಇನ್ನೂ ಚೆನ್ನಾಗಿ ಬರೆಯಬೇಕೆ೦ಬ ಉತ್ಸಾಹವು೦ಟಾಗುವುದು.ಆದ್ದರಿ೦ದ ಪ್ರತಿಯೊಬ್ಬರೂ ಗುಣಗ್ರಾಹಿಗಳಾಗುವುದನ್ನು ಕಲಿಯಬೇಕು.

Thursday, May 20, 2010

dinakkondu Animuttu

೪)ನಾವು ಜೀವನದಲ್ಲಿ ಬರುವ ಕಷ್ಟಗಳನ್ನು ಹಾ! ಅಯ್ಯೋ ಎನ್ನದೆ ಅಹ್ಹ ಹ್ಹ ಹ್ಹಾಎ೦ದು ನಗುತ್ತಾ ಸ್ವೀಕರಿಸಿದರೆ ನಮ್ಮ ದುಃಖದ ಭಾರವು ಕಡಿಮೆಯಾಗುವುದು.ಸದಾ ನಮ್ಮ ಕಷ್ಟಗಳನ್ನೇ ನೆನೆಯದೆ ಜೋರಾಗಿ ನಕ್ಕು ಮರೆಯುವುದೇ ನಮ್ಮ ಇ೦ದಿನ ನಗೆಕೂಟಗಳ ಉದ್ದೇಶವಾಗಿದೆ.ಇದನ್ನೇ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಸುಖದುಃಖಗಳನ್ನು ಸಮನಾಗಿ ಸ್ವೀಕರಿಸುವವನೇ ಸ್ಥಿತಪ್ರಜ್ನ ಎ೦ದಿದ್ದಾನೆ.ಇದಕ್ಕೆ ಜೈನ ಭಿಕ್ಷುವೊಬ್ಬರ ನಿದರ್ಶನವನ್ನು ಕೊಡಬಹುದು.ಆಗ ತಾನೇ ದೀಕ್ಷೆವಹಿಸಿದ್ದ
ಭಿಕ್ಷುವೊಬ್ಬರು ದಿನವೂ ಅಧ್ಯಯನಕ್ಕಾಗಿ ದೂರ ಸ್ಥಳವೊ೦ದಕ್ಕೆ ಹೋಗಬೇಕಾಗುತ್ತಿತ್ತು.ಹಳ್ಳಕೊಳ್ಳಗಳ ರಸ್ತೆಯಲ್ಲಿ ನಿತ್ಯವೂ ಹಳೆಯ ವ್ಯಾನೊ೦ದರಲ್ಲಿ ಹೋಗಬೇಕಾಗುತ್ತಿತ್ತು.ಮೊದಲ ದಿನ ಪ್ರಯಾಣಿಸುವಾಗ ಪ್ರತಿ ಬಾರಿ ಹಳ್ಳ ಇಳಿದು ಮೇಲೇರುವಾಗ ತಲೆ ಮೇಲಿನ ಕ೦ಬಿಗೆ ತ್ಡಲ್ದೆ ಈ ಭಿಕ್ಷುಗಳು ನೋವಿನಿ೦ದ ಅಯ್ಯಯ್ಯೋ-ಎ೦ದರೆ ಮಿಕ್ಕವರು ನಗುತ್ತಾ ಅಹ್ಹಹ್ಹಾ ಎನ್ನುತ್ತಿದ್ದರು ಇವರು ಕಾರಣ ಕೇಳಿದಾಗ ತಮ್ಮಾ ತಲೆ ಕ೦ಬಿಗೆ ತಾಗಿದಾಗ ನಮಗೂ ನಿನ್ನಷ್ಟೇ ನೋವಾಗುವುದು.ಅಯ್ಯಯ್ಯೋ ಎ೦ದರೆ ನೋವು ಇನ್ನೂ ಹೆಚ್ಚಾಗುವುದೇ ವಿನಃ ಕಡಿಮೆಯಾಗದು. ಅದಕ್ಕೆ ಬದಲಾಗಿ ಅಹ್ಹಹ್ಹಾ ಎ೦ದು ಗಟ್ಟಿಯಾಗಿ ನಕ್ಕರೆ ನಮ್ಮೊ೦ದಿಗೆ ಇತರರೂ ನಗುತ್ತಾರೆ. ಹಾಗೆ ನಕ್ಕಾಗ ನಮ್ಮ ನೋವೂ ಕಡಿಮೆಯಾಗುತ್ತದೆ. ಕ್ರಮೇಣ ಮಾಯವೂ ಆಗಿಬಿಡುವುದು.ಬೇಕಾದರೆ ನೀನೂ ಪ್ರಯತ್ನಿಸಿ ನೋಡು ಎ೦ದರು.

Wednesday, May 19, 2010

dinakkondu Animuttu

೩)ನಮ್ಮ ಹಿರಿಯರು ಮಾತು ಆಡಿದರೆ ಹೋಯಿತು, ಮುತ್ತು ಜಾರಿದರೆ ಹೋಯಿತು- ಎ೦ದಿದ್ದಾರೆ.ಬಸವಣ್ಣನವರ೦ತೂ ಅಯ್ಯಾ ಎ೦ದಡೆ ಸ್ವರ್ಗ ಎಲವೋ ಎ೦ದರೆ ನರಕ- ಎ೦ದು ಮಾತಿನಲ್ಲಿರಬೇಕಾದ ಮಾರ್ದವತೆ ಅದುಇಲ್ಲದಿದ್ದರೆ ಆಗುವ ಅನಾಹುತವನ್ನು ತಿಳಿಸಿದ್ದಾರೆ.ಇನ್ನು ಸರ್ವಜ್ನನ ಮಾತಿನಲ್ಲಿ ಹೇಳುವುದಾದರೆ
ಮಾತಿನಿ೦ ನಡೆನುಡಿಯು ಮಾತಿನಿ೦ ಹಗೆ ಕೊಲೆಯು
ಮಾತಿನಿ೦ ಸರ್ವ ಸ೦ಪದವು ಲೋಕಕ್ಕೆ
ಮಾತೇ ಮಾಣಿಕ-ಎ೦ದು ಮಾತಿನಿ೦ದಾಗುವ ಸತ್ಪರಿಣಾಮ ಹಾಗೂ ದುಷ್ಪರಿಣಾಮಗಳನ್ನು ತಿಳಿಸಿದ್ದಾನೆ. ಆದ್ದರಿ೦ದ ನಾವು ಯಾವುದೇ ಮಾತನಾಡುವಾಗ ಅದರಲ್ಲೂ ಕೋಪಗೊ೦ಡಿರುವಾಗ ಯೋಚಿಸಿ ನಿಧಾನವಾಗಿ ಮಾತನಾಡಿದರೆ ಮು೦ದಾಗುವ
ಅನೇಕ ಅನಾಹುತಗಳನ್ನು ತಪ್ಪಿಸಬಹುದು.

Tuesday, May 18, 2010

dinakkondu Animuttu

೨) ವಿದ್ಯಾ ವಿನಯ೦ ದದಾತಿ -ಎ೦ದರೆ ವಿದ್ಯೆಯು ವಿನಯವನ್ನು ಕೊಡುತ್ತದೆ -ಎ೦ದಿದ್ದಾರೆ. ಹಾಗೆಯೇ ವಿನಯದಿ೦ದ ನಮ್ಮ ಜ್ನಾನಾರ್ಜನೆಯೂ ವೃದ್ಧಿಗೊಳ್ಳುವುದು.ಆದರೆ ನನಗೇ ಎಲ್ಲಾ ಗೊತ್ತು ಎ೦ಬ ಅಹ೦ಭಾವವನ್ನು ತೋರಿದರೆ ನಮ್ಮ ಗ್ನಾನಾರ್ಜನೆಯು ಅಲ್ಲಿಗೇ ಸೀಮಿತಗೊಳ್ಳುವುದು. ಇದನ್ನೇ ಸರ್ವಜ್ನ ಕವಿಯು
ಸರ್ವಜ್ನನೆ೦ಬುವನು ಗರ್ವದಿ೦ದಾದವನೆ
ಸರ್ವರೊಳಗೊ೦ದೊ೦ದು ನುಡಿಗಲಿತುವಿದ್ಯೆಯ
ಪರ್ವತವೆ ಆದ-ಎ೦ದು ತಾನು ಸರ್ವಜ್ನನಾದ ಬಗೆಯನ್ನು ತಿಳಿಸಿದ್ದಾನೆ

Monday, May 17, 2010

dinakkondu Animuttu

೪೦)ನಾವು ನಿರೀಕ್ಷಿಸಿದ೦ತೆ ಫಲಿತಾ೦ಶ ಬರುವುದಿಲ್ಲವೆ೦ಬುದು ಖಾತ್ರಿಯಾದಾಗ, ಆತ್ಮವಿಶ್ವಾಸ ಕಳೆದುಕೊಳ್ಳಬಾರದು.ಮತ್ತಷ್ಟು ಪ್ರಯತ್ನಿಸಬೇಕು.ಆಗ ಯಶಸ್ಸು ನಮ್ಮ ಕೈತಪ್ಪಿಹೋಗುವುದಿಲ್ಲ.

Friday, May 14, 2010

dinakkondu Animuttu

ಪಾಲಿಗೆ ಬ೦ದಿದ್ದು ಪ೦ಚಾಮೃತ-ಎ೦ದು ನಮಗೆ ಸಿಕ್ಕಿರುವುದರ ಗುಣಾಸ್ವಾದನೆ ಮಾಡಿಕೊ೦ಡು ಸ೦ತಸದಿ೦ದ ಬಾಳುವುದರಲ್ಲೇ ಜೀವನದ ಸುಖ ಅಡಗಿದೆ. ಅದನ್ನುಳಿದು ಇತರರನ್ನು ಕ೦ಡು ಕರುಬುತ್ತಾ ನನ್ನಲ್ಲಿ ಅದು ಇಲ್ಲವಲ್ಲಾ!-ಎ೦ದುಕೊರಗುವುದರಿ೦ದ ನಮ್ಮ ಜೀವನದ ಸುಖವನ್ನು ನಾವೇ ಕಳೆದುಕೊಳ್ಳುತ್ತೇವೆ.ಅನೇಕ ವೇಳೆ ಅದರ ಪ್ರಾಪ್ತಿಗಾಗಿ ವ್ಯರ್ಥಸಾಲಸೋಲಗಳನ್ನು ಮಾಡಿಕೊ೦ಡು ಅತಿ ಆಸೆ ಗತಿಗೇಡು ಎ೦ಬ೦ತೆ ನಮ್ಮ ಸುಖಜೀವನವನ್ನು ನಾವೇ ನಮ್ಮ ಕಯ್ಯಾರೆ ಹಾಳುಮಾಡಿಕೊಳ್ಳುತ್ತೇವೆ. ಆದ್ದರಿ೦ದಲೇ ಪ್ರಪ೦ಚದಲ್ಲಿ ಅಲ್ಪತೃಪ್ತನೇ ಮಹಾಸುಖಿಎ೦ಬುದನ್ನು ನಾವೆಲ್ಲರೂ ಅರಿತು ಬಾಳಬೇಕು.

Thursday, May 13, 2010

dinakkondu Animuttu

೩೧)ನಾನ್ಯಾಕೆ ಬೇರೆಯವರ೦ತಲ್ಲ ಎ೦ದು ಎ೦ದೂ ಯೋಚಿಸಬಾರದು.ನಾನ್ಯಾಕೆ ಅವನ೦ತಲ್ಲ ಎ೦ದು ಎಲ್ಲರೂ ನಿಮ್ಮನ್ನು ಕುರಿತು ಯೋಚಿಸಬೇಕು, ಹಾಗಿರಬೇಕು ನೀವು.ಈ ಯೋಚನೆಯ ವ್ಯತ್ಯಾಸವನ್ನೇ ನಿಮ್ಮ ಚಿ೦ತನೆಯ ನೆಲೆಗಟ್ಟಾಗಿಸಿಕೊ೦ಡರೆ ನೀವು ವಿಭಿನ್ನರಾಗಿರುತ್ತೀರಿ. ಸ೦ದೇಹ ಬೇಡ.

dinakkondu Animuttu

೩೧)ನಾನ್ಯಾಕೆ ಬೇರೆಯವರ೦ತಲ್ಲ ಎ೦ದು ಎ೦ದೂ ಯೋಚಿಸಬಾರದು.ನಾನ್ಯಾಕೆ ಅವನ೦ತಲ್ಲ ಎ೦ದು ಎಲ್ಲರೂ ನಿಮ್ಮನ್ನು ಕುರಿತು ಯೋಚಿಸಬೇಕು, ಹಾಗಿರಬೇಕು ನೀವು.ಈ ಯೋಚನೆಯ ವ್ಯತ್ಯಾಸವನ್ನೇ ನಿಮ್ಮ ಚಿ೦ತನೆಯ ನೆಲೆಗಟ್ಟಾಗಿಸಿಕೊ೦ಡರೆ ನೀವು ವಿಭಿನ್ನರಾಗಿರುತ್ತೀರಿ. ಸ೦ದೇಹ ಬೇಡ.

Wednesday, May 12, 2010

dinakkondu Animuttu

೩೦)ನೀವುನಡೆಯುವಾಗ ಜನ ದಾರಿಗೆ ಕಲ್ಲನ್ನೆಸೆಯುತ್ತಾರೆ.ಅಡ್ಡಿಪಡಿಸುತ್ತಾರೆ.ನೀವು ಆ ಕಲ್ಲನ್ನೆಸೆದವರ ಜತೆ ಜಗಳ ಕಾಯುತ್ತೀರೋ ಅಥವ ಆ ಕಲ್ಲನ್ನು ಆಯ್ದು ಗೋಡೆಯನ್ನೋ ಕಟ್ಟೆಯನ್ನೋ ಕಟ್ಟುತ್ತೀರೋ ಎ೦ಬುದು ನಿಮಗೇ ಬಿಟ್ಟಿದ್ದು. ನೆನಪಿರಲಿ ನಿಮ್ಮ ಬದುಕಿನ ಮೇಸ್ತ್ರಿ ನೀವೇ.

Tuesday, May 11, 2010

dinakkondu Animuttu

೨೮)ನಾಳೆ ಎ೦ಬುದು ನಾಳೆಯೂ ಬರುತ್ತದೆ ಮತ್ತು ಬರುತ್ತಲೇ ಇರುತ್ತದೆ. ಆದರೆ ಇ೦ದು ಬರೋದು ಇ೦ದು ಮಾತ್ರ. ಆದ್ದರಿ೦ದ ಅದನ್ನು ಚೆನ್ನಾಗಿ ಬಳಸಿಕೊಳ್ಳಿ.

Monday, May 10, 2010

೨೮)ನಮ್ಮ ಭಕ್ತಿ ಸಾಧನೆ ನಿರಹ೦ಕಾರದಿ೦ದ ಕೂಡಿರಬೇಕು. ಇಲ್ಲದಿದ್ದರೆ ಫಲ ಸಿಗುವುದಿಲ್ಲ. ಇದಕ್ಕೆ ನಿದರ್ಶನ ಒಬ್ಬ ದೈವಭಕ್ತನು ಪ್ರತಿದಿನವೂ ಮೋರು ಬಾರಿಯಾದರೂ ಪೂಜೆ ಮಾಡುತ್ತಿದ್ದ.ಅವಕಾಶ ಸಿಕ್ಕಾಗಲೆಲ್ಲ ತೀರ್ಥಯಾತ್ರೆ ಮಾಡುತ್ತಿದ್ದ.ಹತ್ತಾರು ಕೋಟಿಗೂ ಮೀರಿ ದೇವರ ನಾಮಾವಳಿಯನ್ನು ಪುಸ್ತಕಗಳಲ್ಲಿ ಬರೆಯುತ್ತಿದ್ದ. ಹಾಗೂ ತನ್ನನ್ನು ತಾನೇ ತೇರಾಕೋಟಿ ಎ೦ದು ಕರೆದುಕೊಳ್ಳುತ್ತಿದ್ದ. ಹಿಗೆಯೇ ತಾನು ಮಾಡಿದ ಪೂಜೆ-ಪುನಸ್ಕಾರಗಳ ಬಗ್ಗೆ ಹಾಗೂ ತೀರ್ಥಯಾತ್ರೆಗಳ ಬಗ್ಗೆ ಎಲ್ಲರೊಡನೆ ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದ.
ಒಮ್ಮೆ ಕನಸಿನಲ್ಲಿ ಆತ ಸ್ವರ್ಗ ನರಕಗಳ ಮು೦ಬಾಗಿಲಲ್ಲಿ ನಿ೦ತಿದ್ದನು.ಅಲ್ಲೊಬ್ಬ ದೇವದೂತನು ನಿ೦ತಿದ್ದನು.ಆತ ಮರಣಾನ೦ತರ ಅಲ್ಲಿಗೆ ಬರುವವರ ಶುಭ ಅಶುಭಗಳನ್ನು ಲೆಕ್ಕ ಹಾಕಿ ಅವರನ್ನು ಸ್ವರ್ಗಕ್ಕೋ ನರಕಕ್ಕೋ ಕಳುಹಿಸುತ್ತಿದ್ದನ೦ತೆ. ದೈವಭಕ್ತನಿಗೆ ತನ್ನ ಭವಿಷ್ಯದ ಬಗ್ಗೆ ಕುತೂಹಲ.ಆತ ದೇವದೂತನನ್ನು ನಾನಿಗ ಸತ್ತರೆ ಸ್ವರ್ಗಕ್ಕೆ ಹೋಗುವೆನೋ ಇಲ್ಲ ನರಕಕ್ಕೆ ಹೋಗುವೆನೋ -ಎ೦ದು ಕೇಳಿದನು.ಆತ ನೀವು ಮಾಡಿರುವ ಶುಭಾಶುಭ ಕಾರ್ಯಗಳ ಬಗ್ಗೆ ತಿಳಿಸಿ ಎ೦ದನು.ಹಾಗೆಯೇ ದೇವರನಾಮಗಳನ್ನು ತೇರಾಕೋಟಿಗೂ ಹೆಚ್ಚು ಬರೆದಿದ್ದೇನೆ

Friday, May 7, 2010

dinakkondu Animuttu

೨೬)ಕತ್ತಲೆಯಾಗುತ್ತದೆ೦ದು ಮನೆಯೊಳಗೆ ಕುಳಿತುಕೊ೦ಡರೆ ನಕ್ಷತ್ರಗಳನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳುತ್ತೀ-ಎ೦ದಿದ್ದಾರೆ ಹಿರಿಯರೊಬ್ಬರು. ನಮ್ಮ ಜೀವನದಲ್ಲೇ ಅನೇಕ ಸಮಸ್ಯೆಗಳು ಎದುರಾಗುತ್ತವೆ.ಗಾಢಾ೦ಧಕಾರದ೦ತೆ ಇವು ನಮ್ಮನ್ನು ಎದುರಿಸುವುದು೦ಟು.ಆದರೆ ಈ ಕತ್ತಲೆಯಲ್ಲೂ ತಾರೆಗಳು ಹೊಳೆಯುತ್ತವೆ ಎ೦ಬುದನ್ನು ನಾವು ಮರೆಯುತ್ತೇವೆ.ಆ ತಾರೆಗಳನ್ನು ಹಿಡಿದು ಹೋದರೆ ನಮಗೆ ಮು೦ದೆ ಕ್ಷೀರಪಥವೇ ಸಿಗಬಹುದು. ಕೆಲವೊಮ್ಮೆ ಇದ್ದಕ್ಕಿದ್ದ೦ತೆ ಜೀವನದ ತುತ್ತತುದಿಗೆ ಬ೦ದತೆನಿಸುತ್ತದೆ. ಅಲ್ಲಿ೦ದ ಪಾರಾಗಲು ಮಾರ್ಗವೇ ಇಲ್ಲ ಎ೦ದು ತೋರುತ್ತದೆ. ಆದರೆ ಇದು ನಿಜವಲ್ಲ ಎ೦ತಹ ಪರ್ವತದ ತುದಿಯಿ೦ದಲೂ ಇಳಿದು ಬರಲು ಹಾದಿಯಿರುವುದು.ಎ೦ಥ ಸಮುದ್ರದ ಮಧ್ಯದಿ೦ದಲೂ ದ೦ಡೆ ಸೇರಲು ಅವಕಾಶವಿರುವುದು.ಆದರೆ ಅದನ್ನು ಆಗು ಮಾಡಲು ಇಚ್ಛಾಶಕ್ತಿಯೊ೦ದಿರಬೇಕು. ಹಾಗೆ ಇಚ್ಛಾಶಕ್ತಿ ಮೋಡಬೇಕಾದರೆಅಸಾಧ್ಯದಲ್ಲೂ ಸಾಧ್ಯತೆಯನ್ನು ಕಾಣುವ ಬುದ್ಧಿಯೂ ಇರಬೇಕು. ಮನೆಯಿ೦ದ ಹೊರಬ೦ದು ನಕ್ಷತ್ರಗಳನ್ನು ಕಾಣುವ ಆಶಾವಾದಿಯ ಮನಸ್ಸಿರಬೇಕು.ಈ ಜಗತ್ತಿನಲ್ಲಿ ಆಶಾವಾದಿಗಳಿಗೆ ನೂರೆ೦ಟು ಹಾದಿಗಳಿವೆ. ಬದುಕೇ ಆತನ ಮು೦ದೆ ಮ೦ಡಿಯೂರುತ್ತದೆ.ಏಕೆ೦ದರೆ ಗಾಢಾ೦ಧಕಾರದಲ್ಲೂ ಆತ ಹೊರಗೆ ಬ೦ದು ನಕ್ಷತ್ರಗಳನ್ನು ಕಾಣುವ ಕನಸು ಕ೦ಡಿದ್ದಾನೆ.ಆ ಧೈರ್ಯ ಮಾಡಿದ್ದಾನೆ. ಅದೇ ಆತನ ಬಲ.

Thursday, May 6, 2010

dinakkondu Animuttu

೨೫)ನಿಮ್ಮ ಮಕ್ಕಳು ನಿಮ್ಮ೦ತಲ್ಲ, ನಿಮಗಿ೦ತಲೂ ವೇಗವಾಗಿ ಹೊಸ ಯುಗದನಡವಳಿಕೆ, ಭಾಷೆ.
, ಚಹರೆಗಳನ್ನು ರೂಢಿಸಿಕೊ೦ಡಿರುತ್ತಾರೆ. ನಿಮಗೆ ಒಗ್ಗದಿದ್ದರೂ ಬದಲಾವಣೆಯ ಹೊಸ ಗಾಳಿಯೊ೦ದು ನಿಮ್ಮ ಮನೆಯೊಳಗೂ ಬೀಸುತ್ತಿರುತ್ತದೆ. ನೀವು ಕ೦ಪ್ಯೂಟರಿಗೆ ಹಾಕಿಸಿದ ವಿ೦ಡೋಸ್ ವ್ಯವಸ್ಥೆ ಕೂಡ ತನ್ನಷ್ಟಕ್ಕೇ ಅಪ್ ಡೇಟ್ ಆಗುವ ವ್ಯವಸ್ಥೆ ಇತ್ತೀಚೆಗೆ ಬ೦ದಿದೆ.ಈ ವರ್ಷಹೊಸದಾಗಿ ಖರೀದಿಸಿದ ಮೊಬೈಲ್ ಕೂಡ ಮು೦ದಿನ ವರ್ಷಕ್ಕಾಗಲೇ ಹಳತೋ ಹಳತು.ಹೀಗೆಯೇ ಬದುಕಿನಲ್ಲೂ ಚಲನಶೀಲತೆಯಿದೆ. ಇದರಿ೦ದ ಒಳಿತು ಕೆಡುಕುಗಳೆರಡೂ ಆಗಬಹುದು. ಆದರೆ ಅಪ್ ಡೇಟ್ ಆಗುವುದ೦ತೂ ಖಚಿತ.ಆದ್ದರಿ೦ದ ನೀವೂ ನಿಮ್ಮ ಹಳೆಯ ನ೦ಬಿಕೆಗಳು,ಕ೦ದಾಚಾರಗಳನ್ನು ಬಿಟ್ಟು ಹೊಸ ವೈಚಾರಿಕತೆಯನ್ನು ಅಳವಡಿಸಿಕೊಳ್ಳಿ. ನಮ್ಮ ಕಾಲವಾಯ್ತು, ಇವೆಲ್ಲ ನಮಗೇಕೆ ಎ೦ಬ ಉದಾಸೀನ-ಉಡಾಫೆ ಬೇಡ.

Wednesday, May 5, 2010

dinakkondu Animuttu

೪೫)ಸು೦ದರವಾದುದೆಲ್ಲವೂ ಸತ್ಯ ಎನ್ನುವುದಕ್ಕಾಗುವುದಿಲ್ಲ.ಹಾಗೆಯೆ ರುಚಿಯಾದುದೆಲ್ಲವೂ ಹಿತವಲ್ಲ. ಮ್ರದುವಾದುದು ಮನಕ್ಕೊಪ್ಪಬಹುದು, ಆದರೆ ಅದು ಮಾರಕವಾಗಿಯೂ ಇರಬಹುದು.ಜೀವನದ ವೈವಿಧ್ಯ ಅ೦ದರೆ ಇದೇ ಇರಬಹುದು.ಮೇಲ್ನೋಟಕ್ಕೆ ಕ೦ಡದ್ದೇ ಸತ್ಯಎ೦ಬ ಭ್ರಮೆಗೆ ಬಿದ್ದ೦ತೆ ಬಹುತೇಕ ಸ೦ದರ್ಭದಲ್ಲಿನಾವು ವರ್ತಿಸುತ್ತಿರುತ್ತೇವೆ. ಆದ್ದರಿ೦ದ ಸನ್ನಿವೇಶಕ್ಕನುಗುಣವಾಗಿ ಗುಣಾವಗುಣಗಳನ್ನು ಅರ್ಥೈಸಬೇಕಾಗುತ್ತದೆ.ಉದಾ- ಕಳ್ಳಿಗಿಡದಲ್ಲಿ ಅತ್ಯ೦ತ ಸು೦ದರವಾದ ಹೂ ಬಿಡುತ್ತದೆ.ಫಕ್ಕನೆ ನೋಡಿದರೆ ತಾವರೆಯ೦ತೆಯೇ ಕ೦ಗೊಳಿಸುತ್ತದೆ. ಸ್ವಲ್ಪಮಟ್ಟಿಗೆ ಸುವಾಸನೆಯನ್ನೂ ಹೊ೦ದಿರುತ್ತದೆ.ಆದರೆ ಎ೦ದಿಗೂ ನಾವು ಅದನ್ನು ಪೂಜಾಪುಷ್ಪವಾಗಿ ಸ್ವೀಕರಿಸುವುದೇ ಇಲ್ಲ. ಗಿಡದಿ೦ದ ಕಿತ್ತ ಮರುಕ್ಷಣವೇ ಅದು ಬಾಡಲಾರ೦ಭಿಸುತ್ತದೆ.ಇದಕ್ಕಿ೦ತ ಹೆಚ್ಚಾಗಿ ಈ ಹೂವಿನಿ೦ದ ಒಡಮೂಡುವ ಹೀಚು ವಿಷಕಾರಕ ಫಲವೊ೦ದಕ್ಕೆ ಬುನಾದಿಯಾಗುತ್ತದೆ. ಹೀಗಾಗಿಯೇಆ ಹೂವು ಎಷ್ಟು ಸು೦ದರವಾಗಿದ್ದರೂ ಅದನ್ನು ಆದರಿಸುವುದಿಲ್ಲ.ಸೌ೦ದರ್ಯವೆ೦ಬುದು ಗುಣಗ್ರಾಹಿಯಾಗಿರಬೇಕು.ಆಗಲೇ ಅದರ ಸೌ೦ದರ್ಯದ ಸಾರ್ಥಕತೆ.

Tuesday, May 4, 2010

dinakkondu Animuttu

೪೭)ವಾದದಲ್ಲಿ ಗೆದ್ದು ಸ್ನೇಹಿತರನ್ನು ಕಳೆದುಕೊಳ್ಳಬಾರದು.ಕಾರಣ ಸ್ನೇಹಿತರು ಮುಖ್ಯವೇ ಹೊರತು ವಾದವಲ್ಲ.

೪೮)ಇತರರಿಗೆ ಉಪಕಾರ ಮಾಡಲು ಆಗದಿದ್ದರೂ ಪರವಾಗಿಲ್ಲ, ಅಪಕಾರ ಮಾತ್ರ ಮಾಡಬೇಡಿ.

Monday, May 3, 2010

dinakkondu Animuttu

೪೩)ಪ್ರತಿದಿನ ನೀವು ಮಾಡುವ ಕೆಲಸ ನಿಮ್ಮ ಗುರಿ ಈಡೇರಿಕೆಗೆ ಸಹಾಯವಾಗಲಿ.ಒ೦ದೇ ದಿನ ಗೆಲುವು ಸಾಧಿಸಿ ಗುರಿಮುಟ್ಟಲು
ಸಾಧ್ಯವಿಲ್ಲ. ಚೀನಾದ ಮಹಾಗೋಡೆಯನ್ನು ಕೂಡ ಒ೦ದೊ೦ದು ಇಟ್ಟಿಗೆಯನ್ನು ಜೋಡಿಸಿಯೇ ಕಟ್ಟಿದ್ದು ಎ೦ಬುದು ನೆನಪಿರಲಿ.

೪೪)ಇತರರೊ೦ದಿಗೆ ಸ್ಪರ್ಧೆಯಿರಲಿ, ಆದರೆ ಅದು ಇತರರನ್ನು ಘಾಸಿಗೊಳಿಸಬಾರದು.

Saturday, May 1, 2010

ವರ್ಣ ವೈಭವ

ಪ್ರಿಯ ಬಾ೦ಧವರೆ,

" ವರ್ಣ ವೈಭವ" , ಇದು ಒ೦ದು ವಿಭಿನ್ನವಾದ, ವರ್ಣಿಸಲಾರದ ಅನುಭವ, ಅನುಭೂತಿ. ನಾನು ಇಲ್ಲಿಯವರೆಗೂ ನೋಡಿರದ ಒ೦ದು ಪ್ರಯೋಗ. ೩-ಡಿ ಪರಿಣಾಮ ಅದ್ಭುತವಾಗಿ ಮೂಡಿ ಬ೦ದಿದೆ. ಅದರಲ್ಲೂ ಮಾನೊಕ್ರೊಮ್ಯಾಟಿಕ್ (ಏಕ ವರ್ಣ, i think this word should be correct) ಬಹಳ ಅದ್ಭುತವಾಗಿದೆ, ಕಲಾತ್ಮಕವಾಗಿದೆ.

ನನಗೆ ಬಹಳ ಹಿಡಿಸಿದವುಗಳೆ೦ದರೆ ‘ನವನಾರಿ ಕು೦ಜರ’, ‘ಪ೦ಚನಾರಿ ತುರಗ’, ‘ಬಸವ ಕು೦ಜರ’ . ಇದಲ್ಲದೆ ಮತ್ತಷ್ಟು , ಬಹಳಷ್ತು ನೋಡುವುದಿದೆ.

ಒಟ್ಟಿನಲ್ಲಿ ವರ್ಣ ವೈಭವ ಅತ್ಯಮೂಲ್ಯವಾದ ಕಲಾಕೃತಿಗಳ ಮೇಳವಾಗಿದೆ.

dinakkondu Animuttu

೪೬) ಕ್ರೋಧ ಎ೦ಬುದು ಒ೦ದು ವಾಸಿಯಾಗದ ಖಾಯಿಲೆ. ಕಹಿ ಪ್ರವಚನಗಳು ಈ ರೋಗಕ್ಕೆ ಮದ್ದಾಗಿದೆ.ಇದರ ಪರಿಣಾಮ ಖ೦ಡಿತ ಆಗುತ್ತದೆ, ಆದರೆ ಅಡ್ಡ ಪರಿಣಾಮ ಆಗುವುದಿಲ್ಲ.ಕಹಿ ಪ್ರವಚನಗಳು ಔಷಧವೂ ಹೌದು, ಆಶೀರ್ವಚನವೂ ಹೌದು.ಪ್ರವಚನಗಳು ನೀರಿನ೦ತೆ ಗಟಗಟ ಕುಡಿಯುವ ವಸ್ತುವಲ್ಲ, ಚಹಾದ೦ತೆ ಇದನ್ನು ಒ೦ದೊ೦ದೇ ಗುಟುಕಾಗಿ ಸೇವಿಸಬೇಕು.