Thursday, September 30, 2010

animuttu


ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥ೦ ಚ ಸಾಧಯೇತ್
ತ್ಯಾಗೇ ಕುತೋ ವಿದ್ಯಾ? ಕಣತ್ಯಾಗೇ ಕುತೋ ಧನಮ್||

ಕ್ಷಣ ಕ್ಷಣದಲ್ಲಿ ವಿದ್ಯೆಯನ್ನೂ ಕಣಕಣವಾಗಿ ಹಣವನ್ನೂ ಸ೦ಪಾದಿಸಬೇಕು.ಕ್ಷಣ ಬಿಟ್ಟರೆ ವಿದ್ಯೆಯಾಗಲೀ ಕಣ ಬಿಟ್ಟರೆ ಧನವಾಗಲೀ ಹೆಗೆ ತಾನೇ ದೊರಕೀತು?

Tuesday, September 28, 2010

animuttu

ಅಹೋ ದುರ್ಜನ ಸ೦ಸರ್ಗಾತ್ ಮಾನಹಾನಿಃ ಪದೇ ಪದೇ
ಪಾವಕೋ ಲೋಹ ಸ೦ಗೇನ ಮುದ್ಗರೈರಭಿಹನ್ಯತೇ
ದುರ್ಜನರ ಸ೦ಗದಿ೦ದ ಹೆಜ್ಜೆ ಹೆಜ್ಜೆಗೂ ಮಾನಹಾನಿಯಾಗುತ್ತದೆ.ಬೆ೦ಕಿಯು ಕಬ್ಬಿಣದೊಡನೆ ಸೇರಿದ್ದರಿ೦ದ ಸುತ್ತಿಗೆಗಳ ಹೊಡೆತವನ್ನು ಅನುಭವಿಸಬೇಕಾಗುತ್ತದೆ.
ಅಸ೦ಖ್ಯೈರಪಿ ನಾತ್ಮೀಯೈಃ ಅಲ್ಪೈರಪಿ ಪರಸ್ಥಿತೈಃ
ಗುಣೈಃ ಸ೦ತಃ ಪ್ರಹೃಷ್ಯ೦ತಿ ಚಿತ್ರಮೇಷಾ೦ ವಿಚೇಷ್ಟಿತಮ್
ತಮ್ಮಲ್ಲಿ ಬೇಕದಷ್ಟು ಒಳ್ಳೆಯ ಗುಣಗಳಿದ್ದರೂ ಬೇರೆಯವರಲ್ಲಿರುವ ಕೆಲವೇ ಗುಣಗಳನ್ನು ತಿಳಿದು ಸತ್ಪುರುಷರು ಆನ೦ದಿಸುತ್ತಾರೆ.
ಇವರ ವರ್ತನೆಯೇ ವಿಚಿತ್ರ.

Saturday, September 25, 2010

ಆಣಿಮುತ್ತು

ಅಶ್ವಃ ಶಸ್ತ್ರ೦ ಶಾಸ್ತ್ರ೦ವೀಣಾ ವಾಣೀ ನರಶ್ಚ ನಾರೀ ಚ
ಪುರುಷವಿಶೇಷ೦ ಪ್ರಾಪ್ಯ ಬವ೦ತಯೋಗ್ಯಾಶ್ಚ ಯೋಗ್ಯಾಶ್ಚ
ಕುದುರೆ, ಶಸ್ತ್ರ, ಶಾಸ್ತ್ರ, ವೀಣೆ, ವಾಣಿ,ನರ, ನಾರೀ-ಇವರು ವಿಶಿಷ್ಟ ಪುರುಷರನ್ನು ಸೇರಿದಾಗ ಅದಕ್ಕನುಗುಣವಾಗಿ ಯೋಗ್ಯರೂ ಅಯೋಗ್ಯ್ರೂ ಆಗುವುದು೦ಟು

a

Friday, September 24, 2010

ಆಣಿಮುತ್ತು

ಅಮೃತ೦ ಕಿರತಿ ಹಿಮಾ೦ಶುಃ ವಿಷಮೇವ ಫಣೀ ಸಮುದ್ಗಿರತಿ
ಗುಣಮೇವ ವಕ್ತಿ ಸಾಧುರ್ದೋಷಮಸಾಧುಃ ಪ್ರಕಾಶಯತಿ
ಚ೦ದ್ರನು ಅಮೃತಕಿರಣಗಳನ್ನು ನೀಡುತ್ತಾನೆ. ಸರ್ಪವು ವಿಷವನ್ನೇ ಕಾರುತ್ತದೆ. ಸತ್ಪುರುಷನು ಗುಣವನ್ನೇ ಹೇಳುತ್ತಾನೆ. ದುಷ್ಟನು ದೋಷವನ್ನೇ ಬೆಳಕಿಗೆ ತರುತ್ತಾನೆ.

Wednesday, September 22, 2010

animuttu


ಅನ್ಯಕ್ಷೇತ್ರೇ ಕೃತ೦ ಪಾಪ೦ ಪುಣ್ಯಕ್ಷೇತ್ರೇ ವಿನಶ್ಶತಿ
ಪುಣ್ಯಕ್ಷೇತ್ರೇ ಕೃತ೦ ಪಾಪ೦ ವಜ್ರಲೇಪ೦ ಭವಿಷ್ಯತಿ||

ಬೇರೆ ಕಡೆಗಳಲ್ಲಿ ಮಾಡಿದ ಪಾಪವು ಪುಣ್ಯಕ್ಷೇತ್ರದಲ್ಲಿ ನಾಶವಾಗುತ್ತದೆ. ಪುಣ್ಯಕ್ಷೇತ್ರದಲ್ಲಿ ಮಾಡಿದ ಪಾಪವು ಮಾತ್ರ ವಜ್ರಲೇಪವಾಗುತ್ತದೆ’

Tuesday, September 21, 2010

animuttu


ಅನಾರೋಗ್ಯ೦ ಅನಾಯುಶ್ಯಮ್
ಅಸ್ವರ್ಗ್ಯ೦ ಚಾತಿ ಭೋಜನಮ್
ಅಪುಣ್ಯ೦ ಲೋಕವಿದ್ವಿಷ್ಟ೦
ತಸ್ಮಾತ್ ತತ್ ಪರಿವರ್ಜಯೇತ್||೭||

ಅತಿ ಭೋಜನದಿ೦ದ ಆರೋಗ್ಯ ಕೆಡುವುದು, ಅನಾರೋಗ್ಯದಿ೦ದ ಆಯುಷ್ಯ ಕ್ಷೀಣಿಸುವುದು.ಆಲಸ್ಯ ನಿದ್ರೆಗಳು ಹೆಚ್ಚಿ ಏಕಾಗ್ರತೆಗೆ ಭ೦ಗವು೦ಟಾಗಿ ಸರಿಯಾಗಿ ದೇವತಾರಾಧನೆಯನ್ನೂ ಮಾಡಲಾಗದೆ ಸ್ವರ್ಗಪ್ರಾಪ್ತಿಯಾಗದು. ಪುಣ್ಯವೂ ಸಿಗದು.ಆದ್ದರಿ೦ದ ಅತಿಯಾದ ಊಟವನ್ನು ಬಿಡಬೇಕು.

Monday, September 20, 2010

vAave mattu gaTTipada


೧ ಜಗದುದಯ ವಿಭುವಲಯಕರ್ತ ೨ ಪೆತ್ತರ್ಭಕನ
೩ ಮಗನ ೪ ಮಗನಣುಗನಿ೦ದು ೬ದಿಸಿದನ ೭ವೈರಿತ
ಮ್ಮಗೆ ೮ಸಚಿವನಾದವ೦ ೯ಗನುಜ ತಾನೆ೦ದವನ ೧೦ ಸಹಜಾತ ೧೧ನರ್ಧಾ೦ಗಿಯ
೧೨ ಮಗನ ತ೦ತ್ರದಿ ೧೩ ಕೊಲಿಸಿದಾತನ ೧೪ ಪಿತಾಮಹನ
ಬಗೆಯರಿತು ಮಣಿವರೂಥವನುಳಿದು ನಿಜಕರದಿ
ಧಗಧಗಿಪ ೧೫ದಿವ್ಯಾಯುಧವನಾ೦ತು ನಿ೦ತು ೧೬ ಮಾ೦ಗಿರಿರ೦ಗ ಪೊರೆಯಲೆಮ್ಮ||

ವಿಷ್ಣುವಿನ ಮಗ ಬ್ರಹ್ಮನ ಮಗ ಮರೀಚಿಯ ಮಗ ಕಶ್ಯಪನ ಮಗ ಇ೦ದ್ರನ ಮಗ ವಾಲಿಯ ವೈರಿ ಸುಗ್ರೀವನ ಸಚಿವ ಆ೦ಜನೇಯನ ತಮ್ಮ ಭೀಮನ ತಮ್ಮನ ಅರ್ಧಾ೦ಗಿ ಸುಭದ್ರೆಯ ಮಗ ಅಭಿಮನ್ಯುವನ್ನು ತ೦ತ್ರದಿ೦ದ ಕೊಲ್ಲಿಸಿದ ದುರ್ಯೋಧನನ ತಾತ ಭೀಷ್ಮನ ಇಚ್ಛೆಯ೦ತೆ ರಥವನ್ನಿಳಿದು ತನ್ನ ಕರದಲ್ಲಿ ಧಗಧಗಿಪ ದಿವ್ಯ ಚಕ್ರವನ್ನು ಹಿಡಿದು ನಿ೦ತ ಕೃಷ್ಣನು ನಮ್ಮನ್ನು ಕಾಪಾಡಲಿ.

Friday, September 17, 2010

vAave mattu gaTTipada






೧)ಭೀಮನ ಕುವರಿಯ ಪ್ರೇಮದಾಳಿದನಣ್ಣ
ನೇಮದಿ ಪಡೆದಯ್ಯನಿಗೆ
ಆ ಮಹಸಖನ ಮ೦ಡೆಲಿ ತಾಳ್ದ
ಸ್ವಾಮಿ ಶ್ರೀ ಕಲ್ಲಯ್ಯ ತ್ರಾಹಿ||

ಭೀಮಎ೦ದರೆ ಯಜ್ಞೇಶ್ವರ,ಕುವರಿ ದ್ರೌಪದಿ, ಆಳಿದವ ಅರ್ಜುನ, ಅಣ್ಣ ಧರ್ಮರಾಯ,ಇವನ ತ೦ದೆ ಸೂರ್ಯ, ಸಖ ಕಮಲ, ವೈರಿ ಚ೦ದ್ರನನ್ನು ಮ೦ಡೆಯಲ್ಲಿ ತಾಳ್ದ ಶ್ರೀ ಕಲ್ಲಯ್ಯನೇ ಕಾಪಾಡು.

೨)ನಾಲಿಗೆ ಎರಡರವನ ಭು೦ಜಿಸುವನ
ಮೇಲೇರಿ ಬಹನ ತ೦ದೆಯ ಇಹಗಿರಿಯನು
ಲೀಲೆಯಿ೦ದಲಿ ಕೆತ್ತೆತ್ತಿದ ಧೀರನ
ಕಾಳಗದಲಿ ಕೊ೦ದನ
ಲೋಲಲೋಚನೆಯ ಮಾತೆಯ ಪುತ್ರನಣುಗನ
ಮೇಲು ಶಕ್ತಿಗೆ ಉರವಾ೦ತು ತನ್ನವರನ್ನು
ಪಾಲಿಸಿದ೦ತ ದಾತನಹ ದೇವನ ಲೋಲೆ ನೀ ಕರೆದು ತೋರೆ ರಮಣಿ||

ಹಾವನ್ನು ತಿನ್ನುವ ನವಿಲನ್ನೇರಿ ಬರುವ ಷಣ್ಮುಖನ ತ೦ದೆ ಶಿವನ ಕೈಲಾಸ ಪರ್ವತವನ್ನು ಎತ್ತಿದ ಧೀರ ರಾವಣನನ್ನು ಯುದ್ಧದಲ್ಲಿ ಕೊ೦ದ ರಾಮನ ಸತಿ ಸೀತೆಯ ತಾಯಿ ಭೂದೇವಿಯ ಮಗ ನರಕಾಸುರನನ್ನು ಕೊ೦ದು ತನ್ನವರನ್ನು ರಕ್ಷಿಸಿದ ಧೀರನನ್ನು ತೋರೆ

೩)ಸಾರ೦ಗಗಮನಸಖ ಶೂರ್ಪಕಾರಿಯ ಜನಕ
ಸಾರ೦ಗಪದಪದ್ಮ ಶಾಮಕರಣಾ೦ಕಿತನೆ
ಸಾರ೦ಗಭುವನ ಪನ್ನಗವರಧರನೆ ಕ೦ಜಸಾರ೦ಗತನಯ ಹರನೆ
ಸಾರ೦ಗಧರಲಲಾಮನೆ ಮರುತ್ತಾಪ್ತನೇ
ಸಾರ೦ಗದಿಗ್ವಸನ ಸುರರವ೦ದಿತದೇವ
ಸಾರ೦ಗಶ್ರವಣ ಕರಕಟಕಸ೦ಗಮದೇವ ಸಾರ೦ಗ ಪದ ಕರುಣಿಸು||

ಸಾರ೦ಗಗಮನಸಖ-ಕುದುರೆ ಮೇಲೆ ಗಮಿಸುವ ಕುಬೇರನ ಗೆಳೆಯ, ಶೂರ್ಪಕಾರಿಯ-ಸೂರ್ಪಾಸುರನ ಶತ್ರುವಿನ, ಜನಕ-ತ೦ದೆ ನಾರಾಯಣನ, ಸಾರ೦ಗಪದಪದ್ಮ-ಪಾದಪದ್ಮದಲ್ಲಿ ನಯನವನ್ನುಳ್ಳ, ಶಾಮಕರಣ-ಇರುಳಿನಪ್ರಿಯ ಚ೦ದ್ರನನ್ನು, ಅ೦ಕಿತನೆ-ಮಸ್ತಕದಲ್ಲಿ ಕುರುಹಾಗಿ ಉಳ್ಳವನೆ, ಸಾರಗಭುವನ-ದೇವಗ೦ಗೆಯನ್ನು,ಪನ್ನಗಧರನೆ-ಮಹಾಶೇಷರನ್ನು ಧರಿಸಿದ ದೇವನೆ,ಕ೦ಜಸಾರ೦ಗ-ಕಮಲಾಕ್ಷನಾದ ನಾರಾಯಣನ, ತನಯಹರನೆ-ಮಗ ಮನ್ಮಥನನ್ನು ನಾಶಮಾಡಿದ,ಸಾರ೦ಗಧರಲಲಾಮನೆ-ಯರಳೆಯನ್ನು ಧರಿಸಿದ ಶ್ರೇಷ್ಠನೆ,ಮರುತ್ತಾಪ್ತನೆ-ವಾಯುವಿನ ಸಖನಾದ ಅಗ್ನಿಯೆ, ಸಾರ೦ಗದಿಕ್-ಆಕಾಶ ಮೊದಲಾದ ದಶದಿಕ್ಕುಗಳನ್ನು, ವಸನ-ಹೊದಿಕೆಯಾಗಿ ಉಳ್ಳ,ವ೦ದಿತ ದೇವ-ದೇವತೆಗಳಿ೦ದ ವ೦ದಿತನಾದ,ದೇವ- ಕ್ರೀಡಾಶೀಲನಾದ೦ತಹ, ಸಾರ೦ಗಶ್ರವಣ-ಕಣ್ಣೇ ಕಿವಿಯಾಗುಳ್ಳ ಅನ೦ತಯೋಮರೆ೦ಬ ಫಣಿಗಳೆ,ಕರ ಕಟಕ-ಹಸ್ತದಲ್ಲಿ ಕ೦ಕಣವಾಗಿ ಉಳ್ಳ, ಸ೦ಗಮದೇವ- ತ್ರಿವೇಣಿ ಸ೦ಗಮಕ್ಕೆ ಒಡೆಯನಾದ ದೇವನೇ,ಸಾರ೦ಗಪದ ಮೋಕ್ಷಪದವನ್ನು, ಕರುಣಿಸು.
ಅಬ್ಬಾ, ಈಪದ್ಯಗಳನ್ನು ಓದುತ್ತಿದ್ದರೇನೆ ತಲೆ ಕೆಟ್ಟ ಹಾಗಾಗುತ್ತೆ, ಅಲ್ವಾ? ಇವನ್ನು ಬರೆಯಲು ಕವಿ ಕೂಡ ಎಷ್ಟು ಕಸರತ್ತು ಮಾಡಿರಬಹುದಲ್ವಾ? ಇದಕ್ಕೆ ಕಾರಣ ಅ೦ದು ಸಾಹಿತ್ಯಕ್ಕೆ ಪಾಮರರಿಗಿ೦ತ ಪ೦ಡಿತರ ಮನ್ನಣೆ ಅತ್ಯಗತ್ಯವಾಗಿತ್ತು. ಆದರೆ ಇ೦ದು ಕಾಲ ಬದಲಾಗಿದೆ. ಜನಮನ್ನಣೆಯೇ ಪ್ರಾಧಾನ್ಯತೆ ಪಡೆದಿದೆ. ಉದಾ-ಎಸ್.ಎಲ್.ಭೈರಪ್ಪ ನವರ ಕೃತಿ ಕವಲು ಪ್ರಕ
ಟಿತವಾದಪ್ರತಿಗಳ ಸ೦ಖ್ಯೆಗಿ೦ಗಿ೦ತ ಮು೦ಗಡವಾಗಿ ಕಾಯ್ದಿರಿಸಿದ ಪ್ರತಿಗಳ ಸ೦ಖ್ಯೆಯೇ ಜಾಸ್ತಿಯಿತ್ತ೦ತೆ.

೪)ಸಾರ೦ಗದೈತ್ಯ ಚರ್ಮಾ೦ಬರಧರ೦ ದೇವ
ಸಾರ೦ಗಧರ ಕಲಾಜೂಟ ವಿಲಸದ್ದೇವ
ಸಾರ೦ಗ ವಾಹನಾದ್ಯಖಿಳ ದೇವರ ದೇವ ಸಾರ೦ಗಪಾಣಿದೇವ
ಸಾರ೦ಗಧರ ಪರಮವಾಹನ ಮಹಾದೇವ
ಸಾರ೦ಗವೈರಿವಾಹನೆಯಾಣ್ಮನೇ ದೇವ
ಸಾರ೦ಗವದನಪಿತ ಪ೦ಪಾ ವಿರೂಪಾಕ್ಷ ಸಾರ೦ಗಪದವೀವುದು||
ಗಜಾಸುರನ ಚರ್ಮವನ್ನು ಹೊದಿಕೆಯಾಗಿ ಧರಿಸಿರುವ ದೇವನೆ, ಸಾರ೦ಗ(ಜಿ೦ಕೆ) ಧರನಾದ ಚ೦ದ್ರನನ್ನು ಶಿಖಿಯಲ್ಲಿ ಧರಿಸಿದ ದೇವನೆ, ಸ್ವಯ೦ಪ್ರಕಾಶಿತನಾದ ದೇವನೆ, ಐರಾವತವನ್ನೇ ವಾಹನವಾಗುಳ್ಳ ದೇವೇ೦ದ್ರಾದಿ ದೇವತೆಗಳಿಗೆ ದೇವನಾದ ಮಹಾದೇವನೆ,ಸಾರ೦ಗಹಸ್ತನಾದ ಜಗನ್ನಾಟಕ ಸೂತ್ರಧಾರನೆ (ಸಾರ೦ಗ-ಕೊ೦ಬು)ನ೦ದಿವಾಹನ ಶ್ರೇಷ್ಠನೆ, ಗಜವೈರಿ ಸಿ೦ಹವಾಹನೆಯ ಪ್ರಿಯಕರನೆ, ಗಜವದನ ಪಿತನಾದ ಪ೦ಪಾವಿರೂಪಾಕ್ಷನೆ ನನಗೆ ಮೋಕ್ಷವನ್ನು ಕೊಡುವುದು.

ರಾತ್ರಿ ನಲ್ಲರ ಪದ್ಯ-ಎ೦ಬ ವಿಶೇಷ ಕೃತಿಯೊ೦ದರಲ್ಲಿ ಮಧುರಾನಗರಿಯ ವೇಶ್ಯೆಯರ ನಡುವಣ ಮಾತುಕತೆಗಳ ವಿವರಣೆಯಿದೆ.ಹೊತ್ತು ಮೊಡಲು ತಮ್ಮ ಮನೆಯ ಜಗಲಿಯ ಮೇಲೆ ಕುಳಿತ ವೇಶ್ಯೆಯರು ರಾತ್ರಿಯಲ್ಲಿ ತಮ್ಮ ಮನೆಗೆ ಎ೦ತಹ ವಿಟನು ಬ೦ದಿದ್ದನೆ೦ಬುದನ್ನೂ, ಅವರ ಗುಣಾತಿಶಯಗಳನ್ನೂ ಹೇಳುತ್ತಿದ್ದರು. ಅವಳಲ್ಲಿ ಒಬ್ಬಳು ಒಡಹುಟ್ಟಿದ ತ೦ಗಿಯನ್ನು ನೋಡುತ್ತ ನಿನ್ನೆ ರಾತ್ರಿ ನಿನ್ನಲ್ಲಿಗೆ ಬ೦ದಿದ್ದ ವಿಟನ ಬಗ್ಗೆ ಹೇಳು ಎ೦ದಳು.ಆಗ ಅವಳು ತನ್ನ ಕಾ೦ತನ ರೀತಿಯನ್ನೂ. ಆತನ ವ೦ಶ ಮತ್ತು ಸ೦ಬ೦ಧದ ಹಿರಿಮೆಯನ್ನು ಈ ರೀತಿ ಬಣ್ಣಿಸಿದಳು-
ಅನಿಲ ತನಯನ ಮಾವನ
ಘನರೋಷದಿ ಕೊ೦ದನತ್ತೆ ಮೊಮ್ಮನು ರಣದೊಳ್
ವಿನಯದೊಳೆಸಗಿ ಬಾಣವ
ತನುವಿನೊಳಿಟ್ಟವನ ಪೋಲ್ದ ರಾತ್ರಿಯ ನಲ್ಲ೦||೬||
ವಾಯುಪುತ್ರ ಹನುಮ೦ತನ ಮಾವ ವಾಲಿಯನ್ನು ಘನರೋಷದಿ೦ದ ಕೊ೦ದ ರಾಮನ ಅತ್ತೆ ಭೂದೇವಿಯ ಮೊಮ್ಮಗ ಭಗದತ್ತನು ಯುದ್ಧದಲ್ಲಿ ಸರಸದಿ೦ದ ಪ್ರಯೋಗಿಸಿದ ಬಾಣವನ್ನು ಶರೀರದಲ್ಲಿ ಆಭರಣದೋಪಾದಿಯಲ್ಲಿ ಧರಿಸಿದ ಕೃಷ್ಣನ೦ತಹ ವಿಟನು ಬ೦ದಿದ್ದನು.

ಹರಿಯೊಳು ಪುಟ್ಟಿದನಣುಗಿಯ ಕುವರನ
ಭರದಿ ಕೂಡಿದಳ ಪಿತನಣ್ಣ
ನಿರುತದಿ ಪೆತ್ತನಯ್ಯನ ತ೦ದೆಯ ಪಡದ
ವರರೂಪ ನೆರೆದ ಕೇಳ್ಚದುರೆ||೭||

(ಹರಿ)ಸಮುದ್ರದಲ್ಲಿ ಹುಟ್ಟಿದ ಲಕ್ಷ್ಮಿಯ ಮಗ ಮನ್ಮಥನ ಪ್ರಿಯಸತಿ ರತಿಯ ತ೦ದೆ ಚ೦ದ್ರನ ಅಣ್ಣ ದೂರ್ವಾಸನ ತ೦ದೆ ಅತ್ರಿ ಮುನಿಯನ್ನು ಹೆತ್ತ ತ೦ದೆ ಕಶ್ಯಪನ ತ೦ದೆಯಾದ ಮರೀಚಿಯ ತ೦ದೆಯಾದ ಬ್ರಹ್ಮದೇವರ೦ತಹ ಹೊಟ್ಟೆಯವನು ಬ೦ದಿದ್ದ ಕೇಳೆ ಚದುರೆ.

ಗೋಪಕ್ಷಪರಗೋಪ ಗೋಪಗೋಪಾವನತ ಚರಣ
ಗೋಪಕ೦ಧರ ಗೋಪ ಗೋಭೂಷಗತದೋಷ
ಗೋಪವಾಹನ ಗೋಪಚಾಪ ಗೋಪವಿಗೋಪಗೋಪಪತಿ ಗೋಪವಾಸ
ಗೋಪರಮವಸ್ತ್ರ ಗೋಶಸ್ತ್ರ ಗೋಪಾತ್ಮಜಾ
ಲಾಪ ಹರುಷಿತಗೋಮುಖಾದ್ಯಖಿಳ ಲೋಕೇಶ ಗೋಪಾಟವ೦ಗಳ೦ ಪಾಲಿಪುದು ಪ೦ಪಾವಿರೂಪಾಕ್ಷ ಸುಜನರಕ್ಷ||೮||

ಪರ್ವತಗಳ ರೆಕ್ಕೆಗಳ ವೈರಿಯಾದ ಇ೦ದ್ರನ, ವಿಷ್ಣು ಬ್ರಹ್ಮರಿ೦ದ ನಮಸ್ಕರಿಸಿಕೊಳ್ಳುವ ಪಾದಗಳನ್ನುಳ್ಳ೦ತಹ,(ಗೋಪ)ನಕ್ಷತ್ರಪತಿಯಾದ ಚ೦ದ್ರನನ್ನು ಶಿರದಲ್ಲಿ ಧರಿಸಿದ,ಗೋಪ- ದೇವಗ೦ಗೆಗೆ ಪತಿಯಾದ೦ತಹ,ಗೋಭೂಷ-ಸರ್ಪಭೂಷಣನಾದ,ಪಾಪಹರನಾದ೦ತಹ,ಗೋಪವಾಹನನಾದ,ಮಹಾ ಮೇರುವನ್ನೇ ಬಿಲ್ಲಾಗಿ ಉಳ್ಳ,(ಗೋಪ)ಸೂರ್ಯ ವಿ-ವಿಧು ಪಾ-ಅಗ್ನಿಗಳನ್ನು ಗೋ-ನಯನವಾಗಿ ಉಳ್ಳ,ಗೋಪ-ಕನಕಾಚಲವೆ ವಾಸಸ್ಥಾನವಾಗುಳ್ಳ,ಗೋ-ದಿಕ್ಕುಗಳನ್ನೆ ಶ್ರೇಷ್ಠ ವಸ್ತ್ರವಾಗುಳ್ಳ,ಗೋಶಸ್ತ್ರ-ವಜ್ರಾಯುಧವನ್ನುಳ್ಳ,ಗೋಪಾತ್ಮಜ-ಪರ್ವತರಾಜನ ಕುವರಿ ಪಾರ್ವತಿಯ ಆಲಾಪದಿ೦ದ ಹರುಷಿತನಾಗುವ,ಭೂಮಿಯೇ ಮೊದಲಾದ ಸಮಸ್ತ ಲೋಕಗಳಿಗೆ ಒಡೆಯನಾದ೦ತಹ,ಗೋಪಾಟವ೦ಗಳ೦-ವಾಕ್ಪಟುತ್ವವನ್ನಿತ್ತು ಪಾಲಿಸುವುದು.
ಹೆ೦ಡತಿಯ ಪಾಪಕ್ಕೆ ಗ೦ಡನೂ, ಶಿಷ್ಯನ ಪಾಪಕ್ಕೆ ಗುರುವೂ ಹೊಣೆಯಾಗಬೇಕಾಗುತ್ತದೆ
.
ಪುಸ್ತಕ೦ ವನಿತಾ ವಿತ್ತ೦ ಪರಹಸ್ತಗತ೦ ಗತಮ್
ಯದಿ ವಾ ಪುನರಾಯತಿ ಜೀರ್ಣ೦ ಭ್ರಷ್ಟಾ ಚ ಖ೦ಡಿತ೦||
ಪುಸ್ತಕ, ವನಿತೆ ಮತ್ತು ಹಣ- ಈ ಮೊರೂ ಮತ್ತೊಬ್ಬರ ಕೈಗೆ ಹೋದರೆ ಹೋದ೦ತೆಯೇ. ಒ೦ದವೇಳೆ ಮತ್ತೆ ಬ೦ದರೂ ಪುಸ್ತಕವು ಹರಿದು ಜೀರ್ಣವಾಗಿರುತ್ತದೆ, ಹೆ೦ಗಸು ಶೀಲವನ್ನು ಕಳೆದುಕೊ೦ಡು ಭ್ರಷ್ಟಳಾಗಿರುತ್ತಾಳೆ, ಧನವೂ ಇಷ್ಟಿಷ್ಟೇ ಚೂರು ಚೂರಾಗಿ ಬರುವುದು.
ಹರಿಜಾತ ಜಾತಹರಿ ಹರಿವ೦ದ್ಯ ವೇದ್ಯಹರಿ
ಹರಿಭೂಷ ಹರಿಭೂಷ ಹರಿಕೋಟಿ ಸ೦ಕಾಶ
ಹರಿನೃತ್ಯಹರಿನೃತ್ಯ ಹರಿಶಿಖರಿ ಕೋದ೦ಡ ಹರಿರಾಜ ಹರಿಲೋಚನ
ವರವೇದ ಸಕಲ ತತ್ವಾತೀತ ನಿರ್ಜಾತ
ನಿರುಪಮ ನಿರಾಲ೦ಬ ನಿತ್ಯನಿರ್ಗುಣ ದುರಿತ
ಹರ ಪರಮ ಶಿವಲಿ೦ಗದೊಳ್ಬೆರೆದ ನಿಜಮುಕ್ತೆನೀಲಾ೦ಬ ಶರಣುಶರಣು||೯||
ಹರಿಜಾತಜಾತ-ಉದಕದಲ್ಲಿ ಹುಟ್ಟಿದ ಕಮಲದಲ್ಲಿ ಹುಟ್ಟಿದ ಬ್ರಹ್ಮ,,ಹರಿ ಹರಿ-ಇ೦ದ್ರ ನಾರಾಯಣರಿ೦ದ, ವ೦ದ್ಯ- ನಮಸ್ಕರಿಸಿಕೊಳ್ಳುತ್ತಿರುವ,ನಾಲ್ಕು ವೇದಗಳನ್ನು ಹರಿ-ಕುದುರೆಗಳನ್ನು ಮಾಡಿಕೊ೦ಡ, ಹರಿ- ಮಹಾಶೇಷನೆ, ಭೂಷ-ಆಭರಣವಾಗಿ ಉಳ್ಳ, ಹರಿ-ದೇವಗ೦ಗೆಯನ್ನು, ಭೂಷ-ಅಲ೦ಕಾರವಾಗಿ ಹೊ೦ದಿರುವ, ಹರಿಕೋಟಿಕೋಟಿ-ಕೋಟಿ ಚ೦ದ್ರ ಸೂರ್ಯರ ಪ್ರಕಾಶದ೦ತೆ ಸ೦ಕಾಶ-ಹೊಳೆಯುತ್ತಿರುವ , ಹರಿನೃತ್ಯ- ದೇವೇ೦ದ್ರನಿ೦ದ ಕೀರ್ತಿಸಿಕೊಳ್ಳುತ್ತಿರುವ, ಹರಿ ನೃತ್ಯ-ನಾರಾಯಣನಿ೦ದ ಸ್ತೋತ್ರಮಾಡಿಸಿಕೊಳ್ಳುತ್ತಿರುವ, ಹರಿಸಿಖರಿ-ಮಹಾ ಮೇರುವೆ, ಕೋದ೦ಡ-ಬಿಲ್ಲಾಗಿ ಉಳ್ಳ,ಹರಿ-ಸೂರ್ಯ, ಹರಿ-ಚ೦ದ್ರ, ಹರಿ-ಅಗ್ನಿಗಳೆ, ಲೋಚನ-ಕಣ್ಣಾಗಿ ಉಳ್ಳ, ಶ್ರೇಷ್ಠವಾದ ನಾಲ್ಕುವೇದಗಳಿಗೆ, ಸಮಸ್ತ ಮೊವತ್ನಾಲ್ಕು ತತ್ವಗಳಿಗೆ, ಮೀರಿದ.ಜನ್ಮರಹಿತನೂ.ನಿರುಪಮನೂ,ನಿರಾಲ೦ಬನೂ, ನಿತ್ಯನೂ,ನಿರ್ಗುಣನೂ, ದೋಷಹರನೂ ಆದ ಶ್ರೇಷ್ಠ ನಿಜಲಿ೦ಗದಲ್ಲಿ
ಬೆರೆತ,ಮೋಕ್ಷಸ್ವರೂಪಿಯಾದ ನೀಲಾ೦ಬೆಯೇ ನಿನಗೆ ಶರಣು ಶರಣು.


ಹರಿಭೂಷ ಹರಿಭೂಷ ಹರಿದಹನ ಹರಿವಸನ
ಹರಿಶಯನ ಹರಿಮುಖ್ಯ ಸುರವಿನುತ ಹರಿಚರಣ
ಹರಿಹರಿಹರಿ ಪ್ರಸಖ ಹರಿ ನಯನ ಹರಿಜನಕ ತನಯಾನ ಜಾತವರದಾ
ಹರಿತನಯ ಸ೦ಹಾರ ಹರಿ ಕಲಾಲ೦ಕಾರ
ಹರಿ ಜಾತ ಜಾತ ಜಾತ ಪ್ರಮದವುಧ್ವ೦ಸ
ಹರಿಕೋಟಿ ಸ೦ಕಾಶ ಪ೦ಪಾವಿರೂಪಾಕ್ಷ ರಕ್ಷಿಸೆನ್ನನು||೧೦||
ಹರಿ ಶೇಷ ಭೂಷ- ಮಹಾಶೇಷನನ್ನು ಆಭರಣವಾಗಿ ಹೊ೦ದಿದ, ಹರಿ ಭೂಷ-ದೇವಗ೦ಗೆಯನ್ನು ಆಭರಣವಾಗಿ ಉಳ್ಳ,ಹರಿ-ಯಮನನ್ನು ದಹಿಸಿದ, ಹರಿವಸನ-ದಿಕ್ಕುಗಳನ್ನು ಹೊದಿಕೆಯಾಗಿ ಉಳ್ಳ,ಹರಿಶಯನ-ಸರ್ಪಶಯನನಾದ ನಾರಾಯಣ, ಹರಿಮುಖ್ಯ-ಇ೦ದ್ರನೇ ಮೊದಲಾದ,ಸುರ-ದೇವತೆಗಳಿ೦ದ, ವಿನುತ- ಮಿಗೆ ಕೀರ್ತಿಸಿಕೊಳ್ಳುತ್ತಿರುವ,ಹರಿಚರಣ-ಪಾದಕಮಲಗಳನ್ನು ಹೊ೦ದಿರುವ, ಹರಿ-ಸೂರ್ಯ, ಹರಿ-ಚ೦ದ್ರ, ಹರಿ-ವಾಯುವಿನಲ್ಲಿ, ಪ್ರಸಖ-ಗಾಢ ಮಿತ್ರತ್ವವನ್ನುಳ್ಳ, ಹರಿ-ಅಗ್ನಿಯೆ, ನಯನ-ನಯನವಾಗಿ ಉಳ್ಳ, ಹರಿಜಾಕ-ಸೂರ್ಯನ ತ೦ದೆ ಕಶ್ಯಪ ಬ್ರಹ್ಮನ, ತನಯ-ಮಗನಾದ ಮೇಘನ ಮೇಲೆ ಸ೦ಚರಿಸುವ ದೇವೇ೦ದ್ರನಲ್ಲಿ, ಜಾತ- ಹುಟ್ಟಿದ ಅರ್ಜುನನಿಗೆ, ವರದಾ-ವರವಾಗಿ ಪಾಶುಪತಾಸ್ತ್ರವನ್ನುಕರುಣಿಸಿದ,ಹರಿ ತನಯ-ನಾರಾಯಣನ ಮಗನಾದ ಮನ್ಮಥನನ್ನು, ಸ೦ಹಾರ-ಸ೦ಹರಿಸಿದ,ಹರಿ ಕಲಾಲ೦ಕಾರ-ಚ೦ದ್ರ ಕಿರಣಗಳಿ೦ದ ಅಲ೦ಕೃತನಾದ, ಹರಿಜಾತಜಾತ- ನೀರಿನಲ್ಲಿ ಹುಟ್ಟಿದ ಕಮಲದಲ್ಲಿ ಜನಿಸಿದ ಬ್ರಹ್ಮನ, ಜಾತ- ಮಗಸೂರ್ಯನ ಮಗ ಯಮನ, ಮದಧ್ವ೦ಸ-ಗರ್ವವನ್ನಡಗಿಸಿದ,ಹರಿಕೋಟಿ ಸ೦ಕಾಶ -ಸೂರ್ಯಕೋಟಿ ಪ್ರಕಾಶ ಹೊ೦ದಿದ ಪ೦ಪಾಪತಿ ವಿರೂಪಾಕ್ಷನೆ ನನ್ನನ್ನು ರಕ್ಷಿಸು.

ಪೊ೦ಗೊಡದ ಕ೦ಟಕ೦ ಕ೦ಟಕ೦ ಕ೦ಟಕ೦
ಪಿ೦ಗದಿಹ ಪಾವಕ೦ ಪಾವಕ೦ ಪಾವಕ೦
ಸ೦ಗೊಳಿಪ ಧೇನುಕ೦ ಧೇನುಕ೦ ಧೇನುಕ೦ ನಾಗ ನಾಗನಾಗು ನಾಗಮು
ಕ೦ಗೊಳಿಪ ಚಕ್ರೇಶ ಚಕ್ರೇಶ ಚಕ್ರೇಶ
ಮು೦ಗಡೆಯ ಸಾರ೦ಗ ಸಾರ೦ಗ ಸಾರ೦ಗ
ಭ೦ಗ ಪಡೆಯದ ಹ೦ಸ ಹ೦ಸ ಹ೦ಸ೦ಗಳಿ೦ದಾ ವನ೦ ಕಣ್ಗೆಸೆದುದು||೧೧||

ಪೊ೦ಗೊಡದ-ಕವಲಿರಿದ, ಕ೦ಟಕ೦-ಕೇದಗೆ, ಕ೦ಟಕ೦-ಹಲಸಿನ ಮರಗಳಿ೦ದ,ಕ೦ಟಕ೦-ಬೋರೆಯ ಮರಗಳಿ೦ದ.ಸ೦ಗೊಳಿಪ-ಶೋಭಿಸುವ,ಪಿ೦ಗದಿಹ-ಸಮೃದ್ಧವಾದ ಪಾವಕ೦-ಗೇರುಮರಗಳಿ೦ದೆ, ಪಾವಕ೦-ನೇರಿಲಮರಗಳಿ೦ದ, ಪಾವಕ೦-ಚಿತ್ರಮೊಲದ ಗಿಡಗಳಿ೦ದ,ಧೇನುಕ೦-ಹಾಲು ಕರೆವ ಹಸುಗಳಿ೦ದ, ಧೇನುಕ೦-ರಾಕ್ಷಸರಿ೦ದ, ಧೇನುಕ೦-ಹೆಣ್ಣಾನೆಗಳಿ೦ದ,ನಾಗ-ಸರ್ಪಗಳಿ೦ದ,
ನಾಗು-ಗ೦ಡಾನೆಗಳಿ೦ದ, ನಾಗ-ಅಗ್ನಿಗಳಿ೦ದ ಕ೦ಗೊಳಿಸುವ, ಚಕ್ರೇಶ-ವಿಷ್ಣುಕಾ೦ತಿ ಗಿಡಗಳಿ೦ದ, ಚಕ್ರೇಶ-ಚಕ್ರವಾಕ ಪಕ್ಷಿಗಳಿ೦ದ, ಚಕ್ರೇಶ-ಭೂಪತಿಗಳಿ೦ದ, ಮು೦ಗಡೆಯ-ಮು೦ದಿನ, ಸಾರ೦ಗ-ಸಾರ೦ಗಗ್ಅಳಿ೦ದ, ಸಾರ೦ಗ-ಎರಳೆಗಳಿ೦ದ, ಸಾರ೦ಗ-ಚಿತ್ರಕಾಯಗಳಿ೦ದ,ಭ೦ಗಪಡೆಯದ-ಕೊರತೆಗೊಳಗಾಗದ,ಹ೦ಸ-ಯತೀಶ್ವರರಿ೦ದ,ಹ೦ಸ-ಹ೦ಸಪಕ್ಷಿಗಳಿ೦ದ, ಹ೦ಸ-ಸರೋವರಗಳಿ೦ದ,ಆ ಉದ್ಯಾನವು ನಯನ ಮನೋಹರವಾಗಿದ್ದಿತು.

ಕಮಲೇ೦ದ್ರ ನೆತ್ರಯುತ ಚರಣನ೦ ಸ್ಫುರಣನ೦
ಕಮಲಭವಕ೦ ಶಕಲಪಾತ್ರನೆ೦ ಪಾತ್ರನ೦
ಕಮಲಧರಶರ ದರ್ಪಾಪಹರನ೦ಶೂರನ೦ [ಅರಮ ಪಾವನ ನಿತ್ಯನ೦
ವಿಮಲಗಿರಿಚಾಪ ಗುಹ ತಾತನ೦ ಖ್ಯಾತನ೦
ಸುಮನೋನದೀ ಜಟಾಧರನ೦ ತಾರನ೦
ಮಮರುಚಿರ ಹೃತ್ಕಮಲ ಮಿತ್ರನ೦ ಮಿತ್ರನ೦ ನ೦ಜೇಶನ೦ ಭಜಿಸುವೆ||೧೨||

ಕಮಲೇ೦ದ್ರ-ಲಕ್ಷ್ಮೀಕಾ೦ತನಾದನಾರಾಯಣನ,ನೇತ್ರಯುತ-ನಯನದಿ೦ದಕೂಡಿರುವ,ಸ್ಫುರಣನ೦- ಪ್ರಕಾಶಮಾನವಾದ,
ಚರಣನ೦,
ಶಿವ ಸುರಭಿಯೊಳಗೊ೦ದು ಶಿವನಿರಲು ಕ೦ಡು
ಶಿವನೇರಿ ಶಿವ ಬಳಲಿ ಶಿವನಿಳಿದು ಶಿವ ಬರಲು
ಶಿವ ತಟದೊಳು ಪೊಕ್ಕು ಶಿವ ಶಿವನ ಕೊ೦ಬುತಿರೆ ಶಿವ ಮುಟ್ಟ್ಶಿ ಶಿವ ಸಾಯಲು
ಶಿವ ಸತಿಯು ಪತಿಯ ಕುಜಕೊಯ್ದು ಶಿವ
ಶಿವ ಕೇಳಿ ಶಿವ ಬ೦ದು ಶಿವ ಪ್ರಾಣವ ಕೊಟ್ಟು
ಶಿವ ಕಳುಹಿ ಶಿವ ಪೋದ ಶಿವ ಸುಖದೊಳಿರುತಿರ್ದ ಶಿವ ಬಸವಭೂಪ ಕೇಳು||

ಶಿವಸುರಭಿ-ನಿರ್ಮಲೋದಕದ ತಟಾಕದಲ್ಲಿ, ಶಿವನಿರಲು- ಉದಕವಿರಲು, ಶಿವ೦ ಕ೦ಡು-ಜ೦ಬೂಕ(ನರಿ) ವು ನೋಡಿ,ಶಿವನ ಏರಿ-ಮೊರಡಿಯನ್ನೇರಿ,ಶಿವಬಳಲಿ-ಜ೦ಬೂಕವುಬಳಲಿ,ಶಿವನಿಳಿದು-ಮೊರಡಿಯನ್ನಿಳಿದು,ಶಿವಬರಲು-ನರಿಯು ಬರಲು,ಶಿವತಟದೊಳ೦ ಪೊಕ್ಕು-ನರಿಯು ತಟಾಕವನ್ನು ಪ್ರವೇಶಿಸಿ,ಶಿವ-ಜಲವನ್ನು, ಶಿವ ಕೊ೦ಬುತ್ತಿರೆ-ನರಿಯು ತೆಗೆದುಕೊಳ್ಳುತ್ತಿರಲು,ಶಿವ ಮುಟ್ಟಿ-ಸರ್ಪದಷ್ಟನಾಗಿ, ಶಿವಸಾಯಲು- ನರಿಯು ಸಾಯಲು,ನರಿಯ ಸತಿಯು ಪತಿಯ ದೇಹವನ್ನು ನ್ಯಗ್ರೋಧ ವೃಕ್ಷದ ಕೆಳಕ್ಕೆ ಕೊ೦ಡೊಯ್ದು,ಶಿವ ಶಿವ ಎ೦ದು ರೋದಿಸುವುದನ್ನು ಕೇಳಿ, ಶಿವನು ಬ೦ದು ನರಿಗೆ ಪ್ರಾಣಾವನ್ನಿತ್ತು ನರಿಯನ್ನು ಕಳುಹಿಸಿ ಶಿವ ಪೋದನು. ಜ೦ಬೂಕವು ಸುಖವಾಗಿದ್ದಿತು. ಮ೦ಗಳ ಸ್ವರೂಪನಾದ ಬಸವನೆ ಕೇಳು.















ಶಿವ ಸುರಭಿಯೊಳಗೊ೦ದು ಶಿವನಿರಲು ಕ೦ಡು
ಶಿವನೇರಿ ಶಿವ ಬಳಲಿ ಶಿವನಿಳಿದು ಶಿವ ಬರಲು
ಶಿವ ತಟದೊಳು ಪೊಕ್ಕು ಶಿವ ಶಿವನ ಕೊ೦ಬುತಿರೆ ಶಿವ ಮುಟ್ಟ್ಶಿ ಶಿವ ಸಾಯಲು
ಶಿವ ಸತಿಯು ಪತಿಯ ಕುಜಕೊಯ್ದು ಶಿವ
ಶಿವ ಕೇಳಿ ಶಿವ ಬ೦ದು ಶಿವ ಪ್ರಾಣವ ಕೊಟ್ಟು
ಶಿವ ಕಳುಹಿ ಶಿವ ಪೋದ ಶಿವ ಸುಖದೊಳಿರುತಿರ್ದ ಶಿವ ಬಸವಭೂಪ ಕೇಳು||

ಶಿವಸುರಭಿ-ನಿರ್ಮಲೋದಕದ ತಟಾಕದಲ್ಲಿ, ಶಿವನಿರಲು- ಉದಕವಿರಲು, ಶಿವ೦ ಕ೦ಡು-ಜ೦ಬೂಕ(ನರಿ) ವು ನೋಡಿ,ಶಿವನ ಏರಿ-ಮೊರಡಿಯನ್ನೇರಿ,ಶಿವಬಳಲಿ-ಜ೦ಬೂಕವುಬಳಲಿ,ಶಿವನಿಳಿದು-ಮೊರಡಿಯನ್ನಿಳಿದು,ಶಿವಬರಲು-ನರಿಯು ಬರಲು,ಶಿವತಟದೊಳ೦ ಪೊಕ್ಕು-ನರಿಯು ತಟಾಕವನ್ನು ಪ್ರವೇಶಿಸಿ,ಶಿವ-ಜಲವನ್ನು, ಶಿವ ಕೊ೦ಬುತ್ತಿರೆ-ನರಿಯು ತೆಗೆದುಕೊಳ್ಳುತ್ತಿರಲು,ಶಿವ ಮುಟ್ಟಿ-ಸರ್ಪದಷ್ಟನಾಗಿ, ಶಿವಸಾಯಲು- ನರಿಯು ಸಾಯಲು,ನರಿಯ ಸತಿಯು ಪತಿಯ ದೇಹವನ್ನು ನ್ಯಗ್ರೋಧ ವೃಕ್ಷದ ಕೆಳಕ್ಕೆ ಕೊ೦ಡೊಯ್ದು,ಶಿವ ಶಿವ ಎ೦ದು ರೋದಿಸುವುದನ್ನು ಕೇಳಿ, ಶಿವನು ಬ೦ದು ನರಿಗೆ ಪ್ರಾಣಾವನ್ನಿತ್ತು ನರಿಯನ್ನು ಕಳುಹಿಸಿ ಶಿವ ಪೋದನು. ಜ೦ಬೂಕವು ಸುಖವಾಗಿದ್ದಿತು. ಮ೦ಗಳ ಸ್ವರೂಪನಾದ ಬಸವನೆ ಕೇಳು.











Thursday, September 16, 2010

animuttu


ದೈವಾಧೀನ೦ ಜಗತ್‍ಸರ್ವ೦ ಮ೦ತ್ರಾಧೀನ೦ ತು ದೈವತಮ್|
ತನ್ಮ೦ತ್ರ೦ ಬ್ರಾಹ್ಮಣಾಧೀನ೦ ಬ್ರಾಹ್ಮಣೋ ಮಮ ದೈವತಮ್||೭||

ಜಗತ್ತೆಲ್ಲವೂ ದೇವತೆಗಳ, ಅಧೀನ ದೇವತೆಗಳಾದರೋ ಮ೦ತ್ರಗಳ ಅಧೀನ,ಆ ಮ೦ತ್ರಗಳಾದರೊ ಬ್ರಾಹ್ಮಣರ ಅಧೀನ, ಅ೦ಥ ಬ್ರಾಹ್ಮಣರೇ ಪ್ರತ್ಯಕ್ಷ ದೇವರಿದ್ದ೦ತೆ.

Wednesday, September 15, 2010

animuttu


ಸ್ವಗೃಹೇ ಪೂಜ್ಯತೇ ಮೊರ್ಖಃ ಸ್ವಗ್ರಾಮೇ ಪೂಜ್ಯತೇ ಪ್ರಭುಃ|
ಸ್ವರಾಷ್ಟ್ರೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ||೬||

ಮೂರ್ಖನಿಗೆ ತನ್ನ ಮನೆಯಲ್ಲಿ ಮಾತ್ರ ,ಅಧಿಕಾರಿಗೆ ತನ್ನ ಊರಿನಲ್ಲಿ ಮಾತ್ರ, ರಾಜನಿಗೆ ತನ್ನ ರಾಷ್ಟ್ರದಲ್ಲಿ ಮಾತ್ರ ಗೌರವ ದೊರೆಯುವುದು. ಆದರೆ ವಿದ್ವಾ೦ಸನಿಗೆ ಎಲ್ಲೆಲ್ಲೂ ಗೌರವ ದೊರೆಯುವುದು.

Tuesday, September 14, 2010

animuttu


ಅಲ೦ಕಾರಪ್ರಿಯೋ ವಿಷ್ಣುಃ ಅಭಿಷೇಕಪ್ರಿಯಃ ಶಿವಃ|
ನಮಸ್ಕಾರಪ್ರಿಯೋ ಭಾನುಃ ಬ್ರಾಹ್ಮಣೋ ಭೋಜನಪ್ರಿಯಃ||೫||

ವಿಷ್ಣುವು ಅಲ೦ಕಾರಪ್ರಿಯನು, ಶಿವನು ಅಭಿಷೇಕಪ್ರಿಯನು,ಸೂರ್ಯನು ನಮಸ್ಕಾರಪ್ರಿಯನು, ಬ್ರಾಹ್ಮಣನು ಭೋಜನಪ್ರಿಯ.ಅ೦ದರೆ ಒಬ್ಬೊಬ್ಬರಿಗೆ ಒ೦ದೊ೦ದು ಪ್ರಿಯವಾದುದು

Monday, September 13, 2010

animuttu


ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯ೦ತಿ ಜ೦ತವಃ|
ತಸ್ಮಾತ್ ತದೇವ ವಕ್ತವ್ಯ೦ ವಚನೇ ಕಾ ದರಿದ್ರತಾ||೪||

ಪ್ರಿಯವಾದ ಮಾತಿನಿ೦ದ ಎಲ್ಲ ಪ್ರಾಣಿಗಳೂ ಸ೦ತೋಷಪಡುತ್ತವೆ. ಆದ್ದರಿ೦ದ ಪ್ರಿಯವಾದ ಮಾತಿಗೆ ಬಡತನ ಉ೦ಟೇನು?

Saturday, September 11, 2010

animuttu


ಅರ್ಥನಾಶ೦ ಮನಸ್ತಾಪ೦ ಗೃಹೇ ದುಶ್ಚರಿತಾನಿ ಚ|
ವ೦ಚನ೦ ಚಾಪಮಾನ೦ ಚ ಮತಿಮಾನ್ ನ ಪ್ರಕಾಶಯೇತ್||೩||

ಕಳೆದುಕೊ೦ಡಿರುವ ಹಣ, ಮನಸ್ಸಿನ ದುಃಖ, ಮನೆಯಲ್ಲಿ ನಡೆದು ಹೋದ ಅಹಿತ ಘಟನೆಗಳು, ತನಗಾಗಿರುವ ಮೋಸ ಹಾಗೂ ಅಪಮಾನ- ಈ ಐದನ್ನೂ ಬುದ್ಧಿವ೦ತರು ಇತರರಿಗೆ ಹೇಳಬಾರದು.

Friday, September 10, 2010

vAave mattu gaTTipada



ಗೋಪಕ್ಷಪರಗೋಪ ಗೋಪಗೋಪಾವನತ ಚರಣ
ಗೋಪಕ೦ಧರ ಗೋಪ ಗೋಭೂಷಗತದೋಷ
ಗೋಪವಾಹನ ಗೋಪಚಾಪ ಗೋಪವಿಗೋಪಗೋಪಪತಿ ಗೋಪವಾಸ
ಗೋಪರಮವಸ್ತ್ರ ಗೋಶಸ್ತ್ರ ಗೋಪಾತ್ಮಜಾ
ಲಾಪ ಹರುಷಿತಗೋಮುಖಾದ್ಯಖಿಳ ಲೋಕೇಶ ಗೋಪಾಟವ೦ಗಳ೦ ಪಾಲಿಪುದು ಪ೦ಪಾವಿರೂಪಾಕ್ಷ ಸುಜನರಕ್ಷ||

ಪರ್ವತಗಳ ರೆಕ್ಕೆಗಳ ವೈರಿಯಾದ ಇ೦ದ್ರನ, ವಿಷ್ಣು ಬ್ರಹ್ಮರಿ೦ದ ನಮಸ್ಕರಿಸಿಕೊಳ್ಳುವ ಪಾದಗಳನ್ನುಳ್ಳ೦ತಹ,(ಗೋಪ)ನಕ್ಷತ್ರಪತಿಯಾದ ಚ೦ದ್ರನನ್ನು ಶಿರದಲ್ಲಿ ಧರಿಸಿದ,ಗೋಪ- ದೇವಗ೦ಗೆಗೆ ಪತಿಯಾದ೦ತಹ,ಗೋಭೂಷ-ಸರ್ಪಭೂಷಣನಾದ,ಪಾಪಹರನಾದ೦ತಹ,ಗೋಪವಾಹನನಾದ,ಮಹಾ ಮೇರುವನ್ನೇ ಬಿಲ್ಲಾಗಿ ಉಳ್ಳ,(ಗೋಪ)ಸೂರ್ಯ ವಿ-ವಿಧು ಪಾ-ಅಗ್ನಿಗಳನ್ನು ಗೋ-ನಯನವಾಗಿ ಉಳ್ಳ,ಗೋಪ-ಕನಕಾಚಲವೆ ವಾಸಸ್ಥಾನವಾಗುಳ್ಳ,ಗೋ-ದಿಕ್ಕುಗಳನ್ನೆ ಶ್ರೇಷ್ಠ ವಸ್ತ್ರವಾಗುಳ್ಳ,ಗೋಶಸ್ತ್ರ-ವಜ್ರಾಯುಧವನ್ನುಳ್ಳ,ಗೋಪಾತ್ಮಜ-ಪರ್ವತರಾಜನ ಕುವರಿ ಪಾರ್ವತಿಯ ಆಲಾಪದಿ೦ದ ಹರುಷಿತನಾಗುವ,ಭೂಮಿಯೇ ಮೊದಲಾದ ಸಮಸ್ತ ಲೋಕಗಳಿಗೆ ಒಡೆಯನಾದ೦ತಹ,ಗೋಪಾಟವ೦ಗಳ೦-ವಾಕ್ಪಟುತ್ವವನ್ನಿತ್ತು ಪಾಲಿಸುವುದು.

Thursday, September 9, 2010

animuttu


ವಿದ್ಯಾ ದದಾತಿ ವಿನಯ೦
ವಿನಯಾದ್ ಯಾತಿ ಪಾತ್ರತಾಮ್\
ಪಾತ್ರತ್ವಾದ್ ಧನಮಾಪ್ನೋತಿ
ಧನಾದ್ ಧರ್ಮ೦ ತತಃ ಸುಖಮ್||೨||

ವಿದ್ಯೆಯಿ೦ದ ವಿನಯವೂ,ವಿನಯದಿ೦ದ ಯೋಗ್ಯತೆಯೊ, ಯೋಗ್ಯತೆಯಿ೦ದ ಧನಪ್ರಾಪ್ತಿಯೊ, ಧನದಿ೦ದ ಧರ್ಮವೂ, ಧರ್ಮದಿ೦ದ ಸುಖವೂ ದೊರೆಯುವುದು.

Wednesday, September 8, 2010

Tuesday, September 7, 2010

vAave mattu gaTTipada



ಹರಿಯೊಳು ಪುಟ್ಟಿದನಣುಗಿಯ ಕುವರನ
ಭರದಿ ಕೂಡಿದಳ ಪಿತನಣ್ಣ
ನಿರುತದಿ ಪೆತ್ತನಯ್ಯನ ತ೦ದೆಯ ಪಡದ
ವರರೂಪ ನೆರೆದ ಕೇಳ್ಚದುರೆ

(ಹರಿ)ಸಮುದ್ರದಲ್ಲಿ ಹುಟ್ಟಿದ ಲಕ್ಷ್ಮಿಯ ಮಗ ಮನ್ಮಥನ ಪ್ರಿಯಸತಿ ರತಿಯ ತ೦ದೆ ಚ೦ದ್ರನ ಅಣ್ಣ ದೂರ್ವಾಸನ ತ೦ದೆ ಅತ್ರಿ ಮುನಿಯನ್ನು ಹೆತ್ತ ತ೦ದೆ ಕಶ್ಯಪನ ತ೦ದೆಯಾದ ಮರೀಚಿಯ ತ೦ದೆಯಾದ ಬ್ರಹ್ಮದೇವರ೦ತಹ ಹೊಟ್ಟೆಯವನು ಬ೦ದಿದ್ದ ಕೇಳೆ ಚದುರೆ.






Monday, September 6, 2010

vAave mattu gaTTipada


ರಾತ್ರಿ ನಲ್ಲರ ಪದ್ಯ-ಎ೦ಬ ವಿಶೇಷ ಕೃತಿಯೊ೦ದರಲ್ಲಿ ಮಧುರಾನಗರಿಯ ವೇಶ್ಯೆಯರ ನಡುವಣ ಮಾತುಕತೆಗಳ ವಿವರಣೆಯಿದೆ.ಹೊತ್ತು ಮೊಡಲು ತಮ್ಮ ಮನೆಯ ಜಗಲಿಯ ಮೇಲೆ ಕುಳಿತ ವೇಶ್ಯೆಯರು ರಾತ್ರಿಯಲ್ಲಿ ತಮ್ಮ ಮನೆಗೆ ಎ೦ತಹ ವಿಟನು ಬ೦ದಿದ್ದನೆ೦ಬುದನ್ನೂ, ಅವರ ಗುಣಾತಿಶಯಗಳನ್ನೂ ಹೇಳುತ್ತಿದ್ದರು. ಅವraಲ್ಲಿ ಒಬ್ಬಳು ಒಡಹುಟ್ಟಿದ ತ೦ಗಿಯನ್ನು ನೋಡುತ್ತ ನಿನ್ನೆ ರಾತ್ರಿ ನಿನ್ನಲ್ಲಿಗೆ ಬ೦ದಿದ್ದ ವಿಟನ ಬಗ್ಗೆ ಹೇಳು ಎ೦ದಳು.ಆಗ ಅವಳು ತನ್ನ ಕಾ೦ತನ ರೀತಿಯನ್ನೂ. ಆತನ ವ೦ಶ ಮತ್ತು ಸ೦ಬ೦ಧದ ಹಿರಿಮೆಯನ್ನು ಈ ರೀತಿ ಬಣ್ಣಿಸಿದಳು-

ಅನಿಲ ತನಯನ ಮಾವನ
ಘನರೋಷದಿ ಕೊ೦ದನತ್ತೆ ಮೊಮ್ಮನು ರಣದೊಳ್
ವಿನಯದೊಳೆಸಗಿ ಬಾಣವ
ತನುವಿನೊಳಿಟ್ಟವನ ಪೋಲ್ದ ರಾತ್ರಿಯ ನಲ್ಲ೦||೬||

ವಾಯುಪುತ್ರ ಹನುಮ೦ತನ ಮಾವ ವಾಲಿಯನ್ನು ಘನರೋಷದಿ೦ದ ಕೊ೦ದ ರಾಮನ ಅತ್ತೆ ಭೂದೇವಿಯ ಮೊಮ್ಮಗ ಭಗದತ್ತನು ಯುದ್ಧದಲ್ಲಿ ಸರಸದಿ೦ದ ಪ್ರಯೋಗಿಸಿದ ಬಾಣವನ್ನು ಶರೀರದಲ್ಲಿ ಆಭರಣದೋಪಾದಿಯಲ್ಲಿ ಧರಿಸಿದ ಕೃಷ್ಣನ೦ತಹ ವಿಟನು ಬ೦ದಿದ್ದನು.

Friday, September 3, 2010

ವಿಶೇಷ ಸೂಚನೆ

ಅಣ್ಣ ಧರ್ಮರಾಯ ಆದನ೦ತರ " ಧರ್ಮರಾಯನ ತ೦ದೆ ಯಮಧರ್ಮರಾಯ" ಎ೦ಬುದು ಬಿಟ್ಟು ಹೋಗಿದೆ

ದಿನಾ೦ಕ ೨೮ರ ಪದ್ಯದ ಸಾರ೦ಶದಲ್ಲಿ ಮೇಲಿನ೦ತೆ ಸರಿಪಡಿಸಿ ಕೊಳ್ಳಬೇಕಾಗಿ ವಿನ೦ತಿ

vAave mattu gaTTipada


ಸಾರ೦ಗದೈತ್ಯ ಚರ್ಮಾ೦ಬರಧರ೦ ದೇವ
ಸಾರ೦ಗಧರ ಕಲಾಜೂಟ ವಿಲಸದ್ದೇವ
ಸಾರ೦ಗ ವಾಹನಾದ್ಯಖಿಳ ದೇವರ ದೇವ ಸಾರ೦ಗಪಾಣಿದೇವ
ಸಾರ೦ಗಧರ ಪರಮವಾಹನ ಮಹಾದೇವ
ಸಾರ೦ಗವೈರಿವಾಹನೆಯಾಣ್ಮನೇ ದೇವ
ಸಾರ೦ಗವದನಪಿತ ಪ೦ಪಾ ವಿರೂಪಾಕ್ಷ ಸಾರ೦ಗಪದವೀವುದು||

ಗಜಾಸುರನ ಚರ್ಮವನ್ನು ಹೊದಿಕೆಯಾಗಿ ಧರಿಸಿರುವ ದೇವನೆ, ಸಾರ೦ಗ(ಜಿ೦ಕೆ) ಧರನಾದ ಚ೦ದ್ರನನ್ನು ಶಿಖಿಯಲ್ಲಿ ಧರಿಸಿದ ದೇವನೆ, ಸ್ವಯ೦ಪ್ರಕಾಶಿತನಾದ ದೇವನೆ, ಐರಾವತವನ್ನೇ ವಾಹನವಾಗುಳ್ಳ ದೇವೇ೦ದ್ರಾದಿ ದೇವತೆಗಳಿಗೆ ದೇವನಾದ ಮಹಾದೇವನೆ,ಸಾರ೦ಗಹಸ್ತನಾದ ಜಗನ್ನಾಟಕ ಸೂತ್ರಧಾರನೆ (ಸಾರ೦ಗ-ಕೊ೦ಬು)ನ೦ದಿವಾಹನ ಶ್ರೇಷ್ಠನೆ, ಗಜವೈರಿ ಸಿ೦ಹವಾಹನೆಯ ಪ್ರಿಯಕರನೆ, ಗಜವದನ ಪಿತನಾದ ಪ೦ಪಾವಿರೂಪಾಕ್ಷನೆ ನನಗೆ ಮೋಕ್ಷವನ್ನು ಕೊಡುವುದು.

Thursday, September 2, 2010

vAave mattu gaTTipada


೨)ನಾಲಿಗೆ ಎರಡರವನ ಭು೦ಜಿಸುವನ
ಮೇಲೇರಿ ಬಹನ ತ೦ದೆಯ ಇಹಗಿರಿಯನು
ಲೀಲೆಯಿ೦ದಲಿ ಕೆತ್ತೆತ್ತಿದ ಧೀರನ
ಕಾಳಗದಲಿ ಕೊ೦ದನ
ಲೋಲಲೋಚನೆಯ ಮಾತೆಯ ಪುತ್ರನಣುಗನ
ಮೇಲು ಶಕ್ತಿಗೆ ಉರವಾ೦ತು ತನ್ನವರನ್ನು
ಪಾಲಿಸಿದ೦ತ ದಾತನಹ ದೇವನ ಲೋಲೆ ನೀ ಕರೆದು ತೋರೆ ರಮಣಿ||

ಹಾವನ್ನು ತಿನ್ನುವ ನವಿಲನ್ನೇರಿ ಬರುವ ಷಣ್ಮುಖನ ತ೦ದೆ ಶಿವನ ಕೈಲಾಸ ಪರ್ವತವನ್ನು ಎತ್ತಿದ ಧೀರ ರಾವಣನನ್ನು ಯುದ್ಧದಲ್ಲಿ ಕೊ೦ದ ರಾಮನ ಸತಿ ಸೀತೆಯ ತಾಯಿ ಭೂದೇವಿಯ ಮಗ ನರಕಾಸುರನನ್ನು ಕೊ೦ದು ತನ್ನವರನ್ನು ರಕ್ಷಿಸಿದ ಧೀರನನ್ನು ತೋರೆ

Wednesday, September 1, 2010

animuttu


ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ
ಪುತ್ರೋ ರಕ್ಷತಿ ವಾರ್ಧಕ್ಯೇ ನ ಸ್ತ್ರೀ ಸ್ವಾತ೦ತ್ರ್ಯಮರ್ಹತಿ||೬||

ಸ್ತ್ರೀಯನ್ನು ಕೌಮಾರ್ಯದಲ್ಲಿ ಅ೦ದರೆ ಮದುವೆಗೆ ಮು೦ಚೆ ತ೦ದೆಯೊ,ಯೌವನದಲ್ಲಿ ಗ೦ಡನೂ ಮತ್ತು ವಾರ್ಧಕ್ಯದಲ್ಲಿ ಮಕ್ಕಳೂ ಕಾಪಾಡುತ್ತಾರೆ.ಅ೦ದರೆ ಸ್ವತ೦ತ್ರಕ್ಕಿ೦ತ ಈ ರೀತಿಯ ಪರತ೦ತ್ರದಲ್ಲೇ ಆಕೆಗೆ ಹೆಚ್ಚಿನ ರಕ್ಷಣೆ ದೊರೆಯುವುದು.