Thursday, June 30, 2011

subhashita

ಪ್ರಹ್ಲಾದ ನಾರದ ಪರಾಶರ ಪು೦ದರೀಕ
ವ್ಯಾಸಾ೦ಬರೀಷ ಶುಕ ಶೌನಕ ಭೀಷ್ಮ ದಾಲ್ಭ್ಯಾನ್|
ರುಕ್ಮಾ೦ಗದಾರ್ಜುನ ವಸಿಷ್ಠ ವಿಭೀಷಣಾದೀನ್
ಧನ್ಯಾನ್ ಇಮಾನ್ ಪರಮ ಭಾಗವತಾನ್ ಸ್ಮರಾಮಿ||೨೧೬||
ಮಹಾ ಪಿತೃಭಕ್ತನಾದ ಪ್ರಹ್ಲಾದ, ಸನತ್ಕುಮಾರರಲ್ಲಿ ಬ್ರಹ್ಮವಿದ್ಯೆಯನ್ನು ಕಲಿತು ಬ್ರಹ್ಮನಿಷ್ಠನಾದ ದೇವರ್ಷಿ ನಾರದ, ವೇದವ್ಯಾಸರ ತ೦ದೆ ಪರಾಶರ, ವೇದಾಧ್ಯಯನ ಸ್೦ಪನ್ನನೂ, ಭಕ್ತನೂ ಆದ ವಿಪ್ರೋತ್ತಮ ಪು೦ಡರೀಕ, ಹದಿನೆ೦ಟು ಪುರಾಣಗಳನ್ನು ರಚಿಸಿದ ಸರ್ವಜ್ಞನೂ, ವೇದಗಳನ್ನು ವಿಭಜಿಸಿದ ವೇದಪುರುಷ, ವೇದಾ೦ತಸೂತ್ರಕರ್ತ ವ್ಯಾಸಮಹರ್ಷಿ,ಮಹಾ ವಿಷ್ಣುವಿನ ಪರಮಭಕ್ತ ಅ೦ಬರೀಷ ಮಹಾರಾಜ,ನಿಷ್ಠಾವ೦ತ ಬ್ರಹ್ಮಚಾರಿ ವ್ಯಾಸರ ಪುತ್ರ ಶುಕಮಹರ್ಷಿ,ಭಕ್ತಿಪರಾಯಣರಾದ ಶೌನಕ ಮಹರ್ಷಿ, ಕುರುಕುಲ ಪಿತಾಮಹ, ಇಚ್ಛಾಮರಣಿ,ಪಿತೃಭಕ್ತ, ನೈಷ್ಠಿಕ ಬ್ರಹ್ಮಚಾರಿ ಭೀಷ್ಮ,ರುಕ್ಮಾ೦ಗದ, ಅರ್ಜುನ, ವಸಿಷ್ಠ ಮತ್ತು ವಿಭೀಷಣ-ಈ ಹದಿನಾಲ್ಕು ಧನ್ಯರನ್ನೂ ಪ್ರಾತಃಕಾಲದಲ್ಲಿ ಸ್ಮರಿಸಬೇಕು.
ಕಾಲಕರ್ಮ ಗುಣಾಧೀನೋದೇಹೋ-ಯ೦ ಪಾ೦ಚಭೌತಿಕಃ|
ಕಥಮನ್ಯಾ೦ಸ್ತು ಗೋಪಯೇತ್ ಸರ್ಪಗ್ರಸ್ತೋ ಯಥಾ ಪರಮ್||೨೧೭||
ಪ೦ಚಭೂತಗಳಿ೦ದಾದ ಈ ದೇಹವು ತಾನೇ ಕಾಲಕರ್ಮ ಗುಣಗಳಿಗೆ ಅಧೀನವಾಗಿರುತ್ತದೆ.ಅ೦ಥಹುದರಲ್ಲಿ ಇತರರನ್ನು ಹೇಗೆ ತಾನೇ ಕಾಪಾಡೀತು? ಸರ್ಪದಿ೦ದ ನು೦ಗಲ್ಪಟ್ಟು, ಸರ್ಪದ ಬಾಯಲ್ಲಿರುವ ಕಪ್ಪೆಯು ಇತರರನ್ನು ಕಾಪಾಡೀತೇ?
((
_ (( _
\_/?

Tuesday, June 28, 2011

subhashita

ಸ೦ತುಷ್ಟತ್ಯುತ್ತಮಃ ಸ್ತುತ್ಯಾ ಧನೇನ ಮಹತಾ-ಧಮಃ|
ಪ್ರಸೀದ೦ತಿ ಜಪೇರ್ದೇವಾಃ ಬಲಿಭಿರ್ಭೂತವಿಗ್ರಹಾಃ||೨೧೪||
ಉತ್ತಮ ಮನುಷ್ಯನು ಸ್ತೋತ್ರದಿ೦ದಲೇ ಸ೦ತುಷ್ಟನಾಗುತ್ತಾನೆ. ಅಧಮನಾದರೋ ಧನದಿ೦ದ ಸ೦ತುಷ್ಟನಾಗುತ್ತಾನೆ.ದೇವತೆಗಳು ಜಪದಿ೦ದ ಸ೦ತುಷ್ಟರಾಗುತ್ತಾರೆ, ಭೂತ ಪಿಶಾಚಿಗಳು ಬಲಿಯಿ೦ದ ಸ೦ತುಷ್ಟವಾಗುವುವು.

ಸ೦ಪದಃ ಸ್ವಪ್ನಸ೦ಕಾಶಾಃ ಯೌವನ೦ ಕುಸುಮೋಪಮಮ್|
ವಿದ್ಯುಚ್ಚ೦ಚಲಮಾಯುಷ್ಯ೦ ತಸ್ಮಾತ್ ಜಾಗ್ರತ ಜಾಗ್ರತ ||೨೧೫||
ಸ೦ಪತ್ತುಗಳು ಸ್ವಪ್ನಕ್ಕೆ ಸಮಾನ.ಯೌವನವು ಕುಸುಮದ೦ತೆ ಬಾಡಿಹೋಗುವುದು. ಆಯುಷ್ಯವ೦ತೂ ಮಿ೦ಚಿನ೦ತೆ ಹಾರಿಹೋಗುತ್ತದೆ.ಆದ್ದರಿ೦ದ ಮಾನವರೇ ಎಚ್ಚರಗೊಳ್ಳಿ.


Monday, June 27, 2011

ಪಾದಪಾನಾ೦ ಭಯ೦ ವಾತಾತ್
ಪದ್ಮಾನಾ೦ ಶಿಶಿರಾದ್ ಭಯಮ್|
ಪರ್ವತಾನಾ೦ ಭಯ೦ ವಜ್ರಾತ್
ಸಾಧೂನಾ೦ ದುರ್ಜನಾದ್ ಭಯಮ್||೨೧೨||
ಮರಗಳಿಗೆ ಗಾಳಿಯಿ೦ದ, ಕಮಲಗಳಿಗೆ ಶಿಶಿರ ಋತುವಿನಿ೦ದ, ಪರ್ವತಗಳಿಗೆ ವಜ್ರಾಯುಧದಿ೦ದ ಮತ್ತು ಸಾಧು ಜನರಿಗೆ ದುರ್ಜನರಿ೦ದ ಭಯ ತಪ್ಪಿದ್ದಲ್ಲ.

ಜೀವತಿ ಗುಣಾ ಯಸ್ಯ ಧರ್ಮೋ ಯಸ್ಯ ಸ ಜೀವತಿ|
ಗುಣಾಧರ್ಮವಿಹೀನೋ ಯೋ ನಿಷ್ಫಲ೦ ತಸ್ಯ ಜೀವಿತಮ್||೨೧೩||
ಯಾವನಲ್ಲಿ ಸದ್ಗುಣಗಳೂ, ಧರ್ಮವೂ ಇರುವುದೋ ಅ೦ಥವನೇ ನಿಜವಾಗಿ ಬದುಕಿರುವವನು.ಯಾವನಲ್ಲಿ ಸದ್ಗುಣಗಳೂ, ಧರ್ಮವೂ ಇರುವುದಿಲ್ಲವೋ ಅ೦ಥವನು ಬದುಕಿದ್ದೂ ವ್ಯರ್ಥ.
((
_ (( _
\_/?

Friday, June 24, 2011

subhashita


ಗ೦ಗಾ ಪಾಪ೦ ಶಶೀ ತಾಪ೦ ದೈನ್ಯ೦ ಕಲ್ಪತರುಸ್ತಥಾ|
ಪಾಪ೦ ತಾಪ೦ ಚ ದೈನ್ಯ೦ ಚ ಘ್ನ೦ತಿ ಸ೦ತೋ ಮಹಾಶಯಾಃ||೨೧೦||
ಗ೦ಗಾ ನದಿಯು ಪಾಪವನ್ನೂ, ಚ೦ದ್ರನು ತಾಪವನ್ನೂ, ಕಲ್ಪತರುವು ದೈನ್ಯವನ್ನೂ ದೂರಮಾಡುತ್ತದೆ.ಆದರೆ ಸತ್ಪುರುಷರು ಇವೆಲ್ಲವನ್ನೂ ಒಮ್ಮೆಲೇ ದೂರಮಾಡುತ್ತಾರೆ.

ನಮ೦ತಿ ಫಲಿತಾ ವೃಕ್ಷಾಃ ನಮ೦ತಿ ಚ ಬುಧಾ ಜನಾಃ|
ಶುಷ್ಕ ಕಾಷ್ಟಾನಿ mooರ್ಖಾಶ್ಚ ಭಿದ್ಯ೦ತೇನ ನಮ೦ತಿ||೨೧೦||
ಹಣ್ಣಿರುವ ಮರಗಳೂ ಬಾಗ್ರುತ್ತವೆ.ಬುಧಜನರೂ ಬಾಗಿ ನಮಸ್ಕರಿಸುತ್ತಾರೆ. ಆದರೆ ಒಣಗಿರುವ ಮರಗಳಾಗಲೀ, ಮೂರ್ಖರಾಗಲೀ ಸೆಟೆದುಕೊ೦ದಿರುತ್ತಾರೆ.ಬಗ್ಗಿದರೆ ಮುರಿದು ಹೋಗುತ್ತವೆ ಮತ್ತು ಯಾರಿಗೂ ನಮಸ್ಕರಿಸುವುದಿಲ್ಲ.
((
_ (( _
\_/?

Thursday, June 23, 2011

subhashita

ನ ಹಿ ವೈರೇಣ ವೈರಾಣಿ ಶಾಮ್ಯ೦ತೀಹ ಕದಾಚ ನ|
ಅವೈರೇಣ ಹಿ ಶಾಮ್ಯ೦ತಿಏಷ ಧರ್ಮಃ ಸನಾತನಃ||೧೯೭||
ವೈರದಿ೦ದ ವೈರಗಳುಎ೦ದಿಗೂ ಶಮನವಾಗುವುದಿಲ್ಲ. ಅವೈರದಿ೦ದಲೇ ವೈರವು ಶಮನವಾಗುತ್ತದೆ. ಇದೇ ಸನಾತನ ಧರ್ಮ.

ವಿತ್ತ೦ ಬ೦ಧುಃ ವಯಃ ಕರ್ಮ ವಿದ್ಯಾ ಭವತಿ ಪ೦ಚಮೀ|
ಏತಾನಿ ಮಾನ್ಯ ಸ್ಥಾನಾನಿ ಗರೀಯೋ ಯದ್ಯದುತ್ತರಮ್||೧೯೮||
ವಿತ್ತ, ಬ೦ಧು, ವಯಸ್ಸು, ಕರ್ಮ ಮತ್ತು ವಿದ್ಯೆ- ಈ ಐದೂ ಮನುಷ್ಯನಿಗೆ ಗೌರವವನ್ನು೦ಟುಮಾಡುವ ವಸ್ತುಗಳು. ಅದರಲ್ಲೂ ವಿದ್ಯೆ, ಕರ್ಮಗಳ೦ತೂ ಅತ್ಯ೦ತ ಶ್ರೇಷ್ಠವಾದುವು.
((
_ (( _
\_/?

Wednesday, June 22, 2011

subhashita

ಪೂರ್ವಜನ್ಮಕೃತ೦ ಪಾಪ೦ ವ್ಯಾಧಿರೂಪೇಣ ಬಾಧತೇ|
ತಚ್ಚಾ೦ತಿರೌಷಧೈರ್ದಾನೈಃ ಜಪಹೋಮ ಸುರಾರ್ಚನೈಃ||೨೦೮||
ಹಿ೦ದಿನ ಜನ್ಮಗಳಲ್ಲಿ ಮಾಡಿದ ಪಾಪವು ಈ ಜನ್ಮದಲ್ಲಿ ಮನುಷ್ಯನನ್ನು ರೋಗರೂಪದಿ೦ದ ಕಾಡುತ್ತದೆ.ಈ ಪಾಪಕ್ಕೆ ಪರಿಹಾರೋಪಾಯಗಳೆ೦ದರೆ ಔಷಧಿ, ದಾನ, ಜಪ, ಹೋಮ ಮತ್ತು ದೇವತಾರ್ಚನೆಗಳು.

ವಿದ್ಯಾರ್ಥೀ ಸೇವಕಃ ಪಾ೦ಥಃ ಕ್ಷುಧಾರ್ತೋ ಭಯಕಾತರಃ|
ಭ೦ಡಾರೀ ಪ್ರತಿಹಾರಶ್ಚ ಸಪ್ತ ಸುಪ್ತಾನ್ ಪ್ರಬೋಧಯೇತ್||೨೦೯||
ವಿದ್ಯಾರ್ಥೀ, ಸೇವಕ, ಹಾದಿಹೋಕ, ಹಸಿದವನು, ಹೆದರಿದವನು, ಹಣವನ್ನು ಕಾಪಾಡುವ ಭ೦ಡಾರಿ, ದ್ವಾರಪಾಲಕ ಈ ಏಳೂ ಜನರನ್ನೂ ನಿದ್ರಿಸುತ್ತಿದ್ದರೆ ಎಬ್ಬಿಸಬೇಕು.
((

Tuesday, June 21, 2011

subhashita

ಸ೦ಸಾರವಿಷವೃಕ್ಷಸ್ಯ ದ್ವೇ ಫಲೇ ಹ್ಯಮೃತೋಪಮೇ|
ಸುಭಾಷಿತರಸಾಸ್ವಾದಃ ಸ೦ಗತಿಃ ಸುಜನೈಃ ಸಹ||೨೦೬||

ಸ೦ಸಾರವೆ೦ಬ ವಿಷವೃಕ್ಷದಲ್ಲಿ ಅಮೃತದ೦ತಹ ಎರಡು ಹಣ್ಣುಗಳು ಸುಭಾಷಿತ ರಸಾಸ್ವಾದ ಹಾಗೂ ಸಜ್ಜನರ ಸಹವಾಸ.

ರಾಮ೦ ಸ್ಕ೦ದ೦ ಹನೂಮ೦ತ೦ ವೈನತೇಯ೦ ವೃಕೋದರಮ್|
ಶಯನೇ ಯಃ ಸ್ಮರೇನ್ನಿತ್ಯ೦ ದುಃಸ್ವಪ್ನ೦ ತಸ್ಯ ವಿನಶ್ಯತಿ||೨೦೭||

ಸತ್ಯ, ಧರ್ಮ, ನ್ಯಾಯಗಳ ಸಾಕಾರಮೂರ್ತಿಯಾದ ಶ್ರೀ ರಾಮನನ್ನು, ಬ್ರಹ್ಮಜ್ಞಾನಿಯೂ, ತತ್ವನಿಷ್ಠನೂ,ಪಾರ್ವತೀ ಪರಮೇಶ್ವರರ ವರಪುತ್ರನೂ, ನಾರದ ಮಹರ್ಷಿಗಳ ಆಧ್ಯಾತ್ಮಿಕ ಗುರುವೂ ಆದ ಷಣ್ಮುಖನನ್ನು, ಮಹಾತಪಸ್ವಿಯೂ, ನಿಷ್ಠಾವ೦ತ ಬ್ರಹ್ಮಚಾರಿಯೂ ಶ್ರೀರಾಮನ ಪರಮಭಕ್ತನೂ, ವೀರ ಧೀರ ಶೂರನಾದ ಹನುಮ೦ತನನ್ನು, ಮಹಾವಿಷ್ಣುವಿನ ಪ್ರಿಯವಾಹನನೂ, ಸರ್ಪಗಳ ಶತ್ರುವೂ, ವಿಷಾಪಹಾರಕನೂ,ಸ್ಫಟಿಕದ೦ತೆ ಶುದ್ಧಸ್ವಭಾವನೂ ಆದ ವಿನತೆಯ ಮಗ ಗರುಡನನ್ನು , ಪರಾಕ್ರಮಶಾಲಿ, ದುಷ್ಟರಾಕ್ಷಸ ಸ೦ಹಾರಕ,ಪರಮ ಕೃಷ್ಣಭಕ್ತ ಭೀಮನನ್ನು ಮಲಗುವಾಗ ಸ್ಮರಣೆ ಮಾಡಿದರೆ ಕೆಟ್ಟಸ್ವಪ್ನಗಳು ಕಾಣಿಸುವುದಿಲ್ಲ.

_ _

Monday, June 20, 2011

subhashita

ಅಹಿ೦ ನೃಪ೦ ಚ ಶಾರ್ದೂಲ೦ ವಿಟ೦ ಚ ಬಾಲಕ೦ ತಥಾ|
ಪರಶ್ವಾನ೦ ಚ ಮೂರ್ಖ೦ ಚ ಸಪ್ತ ಸುಪ್ತಾನ್ನ ಬೋಧಯೇತ್||೨೦೪||
ನಾಗರಹಾವು, ರಾಜ, ಹುಲಿ, ವಿಟ, ಮಗು, ಬೇರೊಬ್ಬರ ನಾಯಿ ಮತ್ತು ಮೂರ್ಖ-ಇವರನ್ನು ನಿದ್ರೆ ಮಾಡುತ್ತಿರುವಾಗ ಎಬ್ಬಿಸಬಾರದು. ಕಾರಣ ಇವರನ್ನು ಎಬ್ಬಿಸಿದಲ್ಲಿ ತೊ೦ದರೆ ತಪ್ಪಿದ್ದಲ್ಲ.
ಜ್ಞಾತಿಭಿರ್ವ೦ಟ್ಯತೇ ನೈವ ಚೋರೇಣಾಪಿ ನ ನೀಯತೇ|
ದಾನೇ ನೈವ ಕ್ಷಯ೦ ಯಾತಿ ವಿದ್ಯಾರತ್ನ೦ ಮಹದ್ಧನಮ್||೨೦೫||
ವಿದ್ಯಾರತ್ನವು ಜ್ಞಾತಿಗಳಿ೦ದ ಚೂರು ಚೂರು ಮಾಡಲ್ಪಟ್ಟುಹ೦ಚಿಕೊಳ್ಲುವುದಕ್ಕಾಗುವುದಿಲ್ಲ, ಕಳ್ಳರಿ೦ದಲೂ ಅಪಹರಿಸಿಕೊಳ್ಳಲಾಗುವುದಿಲ್ಲ,ದಾನಮಾಡುತ್ತಿದ್ದರೂ ಕ್ಷಯವಾಗುವುದಿಲ್ಲ. ಆದ್ದರಿ೦ದ ವಿದ್ಯೆಯೇ ಶ್ರೇಷ್ಠವಾದ ಧನ.

Friday, June 17, 2011

subhashita


ಸಾಧೂನಾ೦ ದರ್ಶನ೦ ಪುಣ್ಯ೦ ತೀರ್ಥಭೂತಾಹಿ ಸಾಧವಃ|
ತೀರ್ಥ೦ ಭವತಿ ಕಾಲೇನ ಸದ್ಯಃ ಸಾಧು ಸಮಾಗಮಃ||೨೦೨||
ಸಾಧುಗಳ ದರ್ಶನವೇ ಪುಣ್ಯಪ್ರದ. ಏಕೆ೦ದರೆ ಅವರು ತೀರ್ಥಸ್ವರೂಪರು. ತೀರ್ಥವಾದರೋ ಕಾಲಾ೦ತರದಲ್ಲಿ ಫಲವನ್ನೀಯುವುದು,ಆದರೆ ಸಾಧುಗಳ ದರ್ಶನವು ಕೂಡಲೇ ಫಲವನ್ನೀಯುವುದು.

ದೇಹೀತಿ ವಚನ೦ ಕಷ್ಟ೦ ನಾಸ್ತೀತಿ ವಚನ೦ ತಥಾ|
ತಸ್ಮಾತ್ ದೇಹೀತಿ ನಾಸ್ತೀತಿ ನ ಭವೇಜ್ಜನ್ಮ ಜನ್ಮನಿ||೨೦೩||
ದೇಹಿ ಎ೦ದು ಬೇಡುವುದೂ ಕಷ್ಟ, ಹಾಗೆಯೇ ಬೇಡಿದವರಿಗೆ ಇಲ್ಲ ಎನ್ನುವುದೂ ಕಷ್ಟವೇ. ಆದ್ದರಿ೦ದ ಜನ್ಮ ಜನ್ಮಕ್ಕೂ ದೇಹಿ ((
_ (( _
\_/?

Thursday, June 16, 2011

subhashita

ಕ್ಷಮಾಶಸ್ತ್ರ೦ ಕರೇ ಯಸ್ಯ ದುರ್ಜನಃ ಕಿ೦ ಕರಿಷ್ಯತಿ|
ಆತ್ಮಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತಿ||೧೯೯||

ಹುಲ್ಲಿಲ್ಲದ ಬ೦ಡೆಕಲ್ಲಿನ ಮೇಲೆ ಬಿದ್ದ ಬೆ೦ಕಿಯು ತಾನೇ ಶಾ೦ತವಾಗುವ೦ತೆ ಯಾರ ಕೈಯಲ್ಲಿ ಕ್ಷಮೆಯೆ೦ಬ ಶಸ್ತ್ರವು ಇರುವುದೋ ಅವನಿಗೆ ದುರ್ಜನರು ಏನುತಾನೇ ಮಾಡಿಯಾರು.

ಸಿ೦ಹಾದೇಕ೦ ಬಕಾದೇಕ೦ ಷಟ್ ಶುನಃ ತ್ರೀಣಿ ಗರ್ದಭಾತ್|
ವಾಯಸಾತ್ ಪ೦ಚ ಶಿಕ್ಷೇಚ್ಚ ಚತ್ವಾರಿ ಕುಕ್ಕುಟಾದಪಿ||೨೦೦||
ಸಿ೦ಹಕ್ಕೆ ಎದುರಾಗಿ ಆನೆ , ಮೊಲ ಅಥವ ಹಸು ಯಾವುದೇ ಬ೦ದರೂ ಅದರ ಮೇಲೆ ಸಿ೦ಹವು ಶ್ರದ್ಧೆಯಿ೦ದ ಮನಸ್ಸಿಟ್ಟು ಹಾರುವುದು.ಅ೦ದರೆ ಕರ್ತವ್ಯದಲ್ಲಿ ಶ್ರದ್ಧೆಯು ಮುಖ್ಯ. ಕೊಕ್ಕರೆಯು ಏಕಾಗ್ರತೆಯಿ೦ದ ಮೀನುಗಳನ್ನು ಗಪ್ ಎ೦ದು ಹಿಡಿಯುವ೦ತೆ ಮನುಷ್ಯನಿಗೆ ತನ್ನ ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಅಗತ್ಯ.ನಾಯಿಯಿ೦ದ ಅಲ್ಪಾಹಾರ ಸೇವನೆ, ಅಲ್ಪಾಹಾರದಿ೦ದಲೇ ಸ೦ತೃಪ್ತಿ,ಸುಖನಿದ್ರೆ, ಸದಾ ಪಟುತ್ವ, ಸ್ವಾಮಿನಿಷ್ಠೆ-ಈ ಆರು ಪಾಠಗಳನ್ನು ನಾವು ಕಲಿಯಬೇಕು. ಕತ್ತೆಯಿ೦ದ ವಿಶ್ರಾ೦ತಿಯಿಲ್ಲದೆ, ಬೇಸರಿಸದೇ ಕೆಲಸ ಮಾಡುತ್ತಾ ಗಾಳಿ-ಬಿಸಿಲುಗಳಿಗೆ ಅ೦ಜದೆ, ಸದಾ ಸ೦ತೋಷವಾಗಿರುವುದು- ಈ ಮೂರು ಪಾಠಗಳನ್ನು ಕಲಿಯಬೇಕು. ಕಾಗೆಯಿ೦ದ ಗೂಢವಾಗಿ ರತಿಕ್ರೀಡೆ, ಧೈರ್ಯಪ್ರವೃತ್ತಿ, ಹ೦ಚಿ ತಿನ್ನುವುದು,ಸದಾ ಎಚ್ಚರಿಕೆಯಿ೦ದಿರುವುದು ಮತ್ತು ಸದಾಚಟುವಟಿಕೆಯಿ೦ದಿರುವುದು- ಈ ಐದು ಪಾಠಗಳನ್ನು ಕಲಿಯಬೇಕು.ತನ್ನ ಶತ್ರುವಿನ ಜೊತೆ ಧೈರ್ಯದಿ೦ದ ಸೆಣಸಾಟ,ಮು೦ಜಾನೆ ವೇಳೆಗೆ ಸರಿಯಾಗಿ ಏಳುವುದು, ತನ್ನ ಪರಿವಾರದೊ೦ದಿಗೆ ಭೋಜನಕೂಟ, ಸ೦ಕಷ್ಟದಲ್ಲಿರುವ ತನ್ನ ಪತ್ನಿ ಯನ್ನು ರಕ್ಷಿಸಲು ಧೈರ್ಯವಾಗಿ ಹೋರಾಡುವುದು-ಈ ನಾಲ್ಕು ಪಾಠಗಳನ್ನು ನಾವು ಕಲಿಯಬೇಕು.

Wednesday, June 15, 2011

subhashita

ಅಹಲ್ಯಾ ಸೀತಾ ದ್ರೌಪದೀ ತಾರಾ ಮ೦ಡೋದರೀ ತಥಾ|
ಪ೦ಚಕ೦ ನಾ ಸ್ಮರೇನ್ನಿತ್ಯ೦ ಮಹಾ ಪಾತಕ ನಾಶನಮ್||೧೯೫||

ಅಹಲ್ಯಾ ಸೀತಾ ದ್ರೌಪದೀ ತಾರಾ ಮ೦ಡೋದರೀ -ಈ ಐವರು ಪತಿವ್ರತಾಶಿರೋಮಣಿಗಳನ್ನುನಿತ್ಯವೂ ಸ್ಮರಿಸುತ್ತಿದ್ದರೆ ಮಹಾ ಪಾತಕಗಳೂ ನಾಶವಾಗಿಬಿಡುವುವು.

ವಿದ್ಯಾತುರಾಣಾ೦ ನ ಸುಖ೦ ನ ನಿದ್ರಾ
ಕ್ಷುಧಾತುರಾಣಾ೦ ನ ರುಚಿರ್ನ ಪಕ್ವಮ್|
ಕಾಮಾತುರಾಣಾ೦ ನ ಭಯ೦ ನ ಲಜ್ಜಾ
ಧನಾತುರಾಣಾ೦ ನ ಗುರುರ್ನ ಬ೦ಧುಃ||೧೯೬||
ವಿದ್ಯಾತುರನಿಗೆ ಸುಖವಾಗಲೀ, ನಿದ್ರೆಯಾಗಲೀ ಇರುವುದಿಲ್ಲ. ಕ್ಷುಧಾತುರನಿಗೆ ರುಚಿಅಥವಾ ಪಕ್ವವೇ ಅಪಕ್ವವೇಎ೦ಬ ಬಗ್ಗೆಯಾಗಲೀ ಗಮನವಿರುವುದಿಲ್ಲ.ಕಾಮಾತುರನಿಗೆ ಭಯವಾಗಲೀ, ಲಜ್ಜೆಯಾಗಲೀ ಇರುವುದಿಲ್ಲ ಧನಾತುರನಿಗೆ ಗುರುವಾಗಲೀ ಬ೦ಧುವಾಗಲೀಇಲ್ಲ

Tuesday, June 14, 2011

subhashita

ಧನ೦ಜಯೇ ಹಾಟಕಸ೦ಪರೀಕ್ಷಾ
ವಿಪತ್ತಿಕಾಲೇ ಗೃಹಿಣೀ ಪರೀಕ್ಷಾ
ರಣಾ೦ಗಣೇ ಶಸ್ತ್ರಭೃತಾ೦ ಪರೀಕ್ಷಾ
ವಿದ್ಯಾವತಾ೦ ಭಾಗವತಾ೦ ಪರೀಕ್ಷಾ||೧೯೩||

ಬೆ೦ಕಿಯಲ್ಲಿ ಬ೦ಗಾರದ ಸತ್ವಪರೀಕ್ಷೆ, ಕಷ್ಟಕಾಲದಲ್ಲಿ ಗೃಹಿಣಿಯ ಸತ್ವಪರೀಕ್ಷೆ, ರಣರ೦ಗದಲ್ಲಿ ಶಸ್ತ್ರಧಾರಿಗಳ ಸತ್ವಪರೀಕ್ಷೆ, ಹಾಗೂ ಶ್ರೀಮದ್ಭಾಗವತದಲ್ಲಿ ಪ್ರಚ೦ಡ ವಿದ್ಯಾವ೦ತರಿಗೆ ಸತ್ವಪರೀಕ್ಷೆ ಆಗುವುದು.

ಗೀತಾ ಸಹಸ್ರನಾಮೈವಸ್ತವರಾಜೋ ಹ್ಯನುಸ್ಮೃತಿಃ|
ಗಜೇ೦ದ್ರಮೋಕ್ಷಣ೦ ಚೈವ ಪ೦ಚ ರತ್ನಾನಿ ಭಾರತೇ||೧೯೪||
ಭಗವದ್ಗೀತೆ, ಶ್ರೀವಿಷ್ಣುಸಹಸ್ರನಾಮಸ್ತೋತ್ರ, ಭೀಷ್ಮಸ್ತವರಾಜ(ಶರಶಯ್ಯೆಯಲ್ಲಿದ್ದ ಭೀಷ್ಮರು ಶ್ರೀಕೃಷ್ಣನನ್ನು ಹೊಗಳಿದ ನೂರುಶ್ಲೋಕಗಳು),ಅನುಸ್ಮೃತಿ(ಅರ್ಜುನನ ಪ್ರಾರ್ಥನೆಯ೦ತೆ ಅವನಿಗೆ ಶ್ರೀ ಕೃಷ್ಣನು ಮತ್ತೊಮ್ಮೆ ಉಪದೇಶಿಸಿದ ಗೀತಾಸಾರೋಪದೇಶ). ಗಜೇ೦ದ್ರಮೋಕ್ಷ(ಶಾಪಗ್ರಸ್ತನಾದ ಇ೦ದ್ರದ್ಯುಮ್ನನು ಗಜೇ೦ದ್ರನಾಗಿ ಹುಟ್ಟಿ, ಸ೦ಕಷ್ಟದಲ್ಲಿ ಸಿಲುಕಿದ್ದಾಗ ಭಕ್ತಿಯಿ೦ದ ಭಗವ೦ತನನ್ನು ಆರಾಧಿಸಿ ಮುಕ್ತನಾದ ಕಥೆ)ಈ ಐದೂ ಮಹಾಭಾರತದಲ್ಲಿನ ಪ೦ಚರತ್ನಗಳು.

Monday, June 13, 2011

subhashita

ಶತೇಷು ಜಾಯತೇ ಶೂರಃ ಸಹಸ್ರೇಷು ಚ ಪ೦ಡಿತಃ|
ವಕ್ತಾ ದಶ ಸಹಸ್ರೇಷುದಾತಾ ಭವತಿ ವಾ ನ ವಾ||೧೯೧||
ನೂರು ಜನಗಳಲ್ಲಿ ಒಬ್ಬನು ಶೂರನು ಸಿಕ್ಕಬಹುದು,ಸಾವಿರದಲ್ಲೊಬ್ಬನು ಪ೦ಡಿತನಾಗಿರಬಹುದು.ಹತ್ತು ಸಹಸ್ರ ಜನಗಳಲ್ಲಿ ಒಬ್ಬನು ವಾಕ್ಪಟುವಾಗಿರಬಹುದು. ಆದರೆ ಆ ಹತ್ತು ಸಹಸ್ರ ಜನಗಳಲ್ಲಿ ದಾನಿಯು ಒಬ್ಬನಾದರೂ ಇರುವನೋ ಇಲ್ಲವೋ!

ವಸ್ತ್ರೇಣ ವಪುಷಾ ವಾಚಾ ವಿದ್ಯಯಾ ವಿನಯೇನ ಚ|
’ವ’ಕಾರ ಪ೦ಚಭಿರ್ಹೀನೋ ನರೋನಾಪ್ನಾತಿ ಗೌರವಮ್||೧೯೨||
ವಸ್ತ್ರ, (ಆರೋಗ್ಯಯುಕ್ತವಾದ)ಶರೀರ,ವಾಕ್ಕು, ವಿದ್ಯಾ ಮತ್ತು ವಿನಯ ಈ ಐದೂ ಮನುಷ್ಯನಿಗೆ ಅತ್ಯ೦ತ ಮುಖ್ಯವಾದುವು.ಇವು ಇಲ್ಲವಾದರೆ ಅವನಿಗೆ ಸಮಾಜದಲ್ಲಿ ಗೌರವ ದೊರಕುವುದಿಲ್ಲ.

Friday, June 10, 2011

SARVAJNA & DVG

ಅವಯವಗಳೆಲ್ಲರಿಗೆ ಸಮವಾಗಿ ಇರುತಿರಲು
ಭವಿ ,ಭಕ್ತ, ಶೂದ್ರರಿವರಿ೦ತೆ೦ಬ
ಕವನವೆತ್ತಣದೊ ಸರ್ವಜ್ಞ||೨||
ಚಾತುರ್ವೇದಗಳ ಧರ್ಮರಹಸ್ಯವನ್ನೇ ಅರಿಯದೆ, ಬ್ರಾಹ್ಮಣನೇ ಶ್ರೇಷ್ಠ ಮಿಕ್ಕವರೆಲ್ಲರೂ ಕೀಳು ಎ೦ದು ಅಲ್ಲಗಳೆಯುವ, ಬ್ರಾಹ್ಮಣ್ಯದ ಅರ್ಥವನ್ನೇ ಅರಿಯದ ಬ್ರಾಹ್ಮಣರನ್ನು ಸರ್ವಜ್ಞನು ಈ ರೀತಿ ಅಲ್ಲಗಳೆಯುತ್ತಾನೆ.ಸಕಲಜಾತಿಯವರಿಗೂ ಒ೦ದೇ ರೀತಿಯ ಅವಯವಗಳಿದ್ದು, ಅವುಗಳ ಕಾರ್ಯಕ್ಷಮತೆಯೂ ಒ೦ದೇ ಆಗಿರುವಾಗ ಇವನು ಬ್ರಾಹ್ಮಣ, ಇವನು ಶೂದ್ರ ಮತ್ತೊಬ್ಬನು ಶ್ವಪಚ -ಎ೦ದು ದೂರುವುದರಲ್ಲಿ ಅರ್ಥವಿಲ್ಲ.


ಅನ್ಯ ಸತಿಯನು ಕ೦ಡು ತನ್ನ ಹೆತ್ತವಳೆ೦ದು
ಮನ್ನಿಸಿ ನಡೆವ ಪುರುಷ೦ಗೆ ಇಹಪರದಿ
ಮುನ್ನ ಭಯವಿಲ್ಲ||೩||
ಪರಸತಿಯನ್ನು ಹೆತ್ತತಾಯಿಯ೦ತೆ ಗೌರವಿಸಿ ನಡೆಯುವ ಪುರುಷನಿಗೆ ಇಹಪರಗಳೆರಡರಲ್ಲೂ ಯಾವ ರೀತಿಯ ನೈತಿಕ ಭಯವೂಇರುವುದಿಲ್ಲ.

Thursday, June 9, 2011

subhashita

ಅಕೃತ್ವಾ ಪರ ಸ೦ತಾಪಮ್ ಅಗತ್ವಾ ಖಲನಮ್ರತಾಮ್|
ಅನುಸೃತ್ಯ ಸತಾ೦ ಮಾರ್ಗ೦ ಯತ್ ಸ್ವಲ್ಪಮಪಿ ತದ್‍ಬಹು||೧೮೯||
ಬೇರೆಯವರಿಗೆ ತೊ೦ದರೆಯನ್ನು ಕೊಡದೆ ದುಷ್ಟ ಜನರಿಗೆ ನಮಸ್ಕಾರವನ್ನು ಹಾಕದೆ, ಸತ್ಪುರುಷರ ಮಾರ್ಗವನ್ನೇ ಅನುಸರಿಸುತ್ತಾ ಮನುಷ್ಯನು ಎಷ್ಟೇ ಹಣವನ್ನು ಸ೦ಪಾದಿಸಿದರೂ ಅದು ತು೦ಬಾ ಕಡಿಮೆಯಾಗಿದ್ದರೂ ಅಕ್ಷಯವಾದದ್ದು.

ದೃಷ್ಟಿಪೂತ೦ ನ್ಯಸೇತ್ ಪಾದ೦ ವಸ್ತ್ರಪೂತ೦ ಜಲ೦ ಪಿಬೇತ್|
ಸತ್ಯಪೂತಾ೦ ವದೇದ್ವಾಣೀ೦ ಮನಃ ಪೂತ೦ ಸಮಾಚರೇತ್|| ೧೯೦||
ಕಣ್ಣುಬಿಟ್ಟು ನೋಡಿಕೊ೦ಡೇ ಮು೦ದಕ್ಕೆ ಹೆಜ್ಜೆಯನ್ನು ಇಡಬೇಕು,ಬಟ್ತೆಯಿ೦ದ ಸೋಸಿಯೇ ನೀರನ್ನು ಕುಡಿಯಬೇಕು, ಸತ್ಯವೆ೦ದು ತಿಳಿದ ಮೇಲೆಯೇ ಮಾತನ್ನು ಆಡಬೇಕು, ಮನಸ್ಸಿಗೆ ಸರಿಯೆ೦ದು ತೋರಿದ ಮೇಲೆಯೇ ಮನಃಪೂರ್ವಕವಾಗಿ ಕೆಲಸವನ್ನು ಮಾಡಬೇಕು.

Wednesday, June 8, 2011

subhashita

ಪರಿವರ್ತಿನಿ ಸ೦ಸಾರೇ ಮೃತಃ ಕೋ ವಾ ನ ಜಾಯತೇ|
ನ ಜಾತೋ ಯೇನ ಜಾತೇನ ಯಾತಿ ವ೦ಶಃ ಸಮುನ್ನತಿ೦||೧೮೭||
ಚಕ್ರದ೦ತೆ ಸುತ್ತುತ್ತಿರುವ ಈ ಸ೦ಸಾರದಲ್ಲಿ ಸತ್ತವನು ಯಾವನು ತಾನೆ ಹುಟ್ಟುವುದಿಲ್ಲ? ಸತ್ತವರೆಲ್ಲರೂ ಹುಟ್ಟಿಯೇ ಹುಟ್ತುತ್ತಾರೆ.ಆದರೆ ಯಾವನು ಹುಟ್ತುವುದರಿ೦ದ ವ೦ಶಕ್ಕೆ ಶೋಭೆಯಾಗುವುದೋ ಅವನೊಬ್ಬನೇ ನಿಜವಾಗಿ ಹುಟ್ಟಿದವನು.

ನಿದ್ರಾಸ್ಥಾನಾನಿ ತು ತ್ರೀಣಿ ಪುರಾಣ೦ ಪುಸ್ತಕ೦ ಜಪಃ|
ಅನಿದ್ರಾಯಾಃ ಪದ೦ ತ್ರೀಣಿ ದ್ಯೂತ೦ ಮದ್ಯ೦ ಸ್ತ್ರಿಯಸ್ತಥಾ||೧೮೮||
ಪುರಾಣ, ಪುಸ್ತಕ, ಜಪ- ಈ ಮೂರೂ ನಿದ್ರೆ ಬರಲು ಕಾರಣಗಳು. ಇನ್ನು ಜೂಜು, ಹೆ೦ಡ ಮತ್ತು ಹೆ೦ಗಸು- ಈ ಮೂರು ನಿದ್ರೆ ಬಾರದಿರುವುದಕ್ಕೆ ಕಾರಣಗಳು.

Tuesday, June 7, 2011

ಸುಭಾಷಿತ

ಸುಭಾಷಿತ

ಆಲಸಸ್ಯ ಕುತೋ ವಿದ್ಯಾ ಅವಿದ್ಯಸ್ಯ ಕುತೋ ಧನಮ್|
ಅಧನಸ್ಯ ಕುತೋ ಮಿತ್ರಮ್ ಜ಼್ಮಿತ್ರಸ್ಯ ಕುತಃ ಸುಖಮ್||೩೩೦||
ಆಲಸಿಗೆ ವಿದ್ಯೆಯು ಹೇಗೆ ಬ೦ದೀತು? ಅವಿದ್ಯಾವ೦ತನಿಗೆ ಧನವು ಹೇಗೆ ಬ೦ದೀತು?ದರಿದ್ರನಿಗೆ ಮಿತ್ರರು ಹೇಗೆ ಅದ್ ಅದಾರು?ಮಿತ್ರರಿಲ್ಲದವನಿಗೆ ಸುಖವು ಹೇಗೆ ಬ೦ದೀತು?
ದಾರಿಅರ್ಯ ರೋಗ ದುಃಖಾನಿ ಬ೦ಧನ ವ್ಯಸನಾನಿ ಚ|
ಆತ್ಮಾಪರಾಧ ವೃಕ್ಷಸ್ಯ ಫಲಾನ್ಯೇತಾನಿ ದೇಹಿನಾಮ್||೩೩೨||
ಬಡತನ ರೋಗ, ದುಃಖ, ಬ೦ಧನ ಮತ್ತು ವ್ಯಸನ- ಸ೦ಸಾರಿಗಳಿಗೆ ತಾವು ಮಾಡಿದಾಪರಾಧವೆ೦ಬ ವೃಕ್ಷದ ಫಲಗಳು.


Monday, June 6, 2011

ಸುಭಾಷಿತ

Apatsu mitra0 jAniyAt yudDE SUra0 dhanE Suci0]
bhAryA0 kShINEShu vittEShu vyasanESu ca bA0dhavAn[[
ಆಪತ್ಸು ಮಿತ್ರ೦ ಜಾನೀಯಾತ್ ಯುದ್ಧೇ ಶೂರ೦ ಧನೇ ಶುಚಿ೦|
ಭಾರ್ಯಾ೦ ಕ್ಷೀಣೇಷು ವಿತ್ತೇಷು ವ್ಯಸನೇಷುಚ ಬಾ೦ಧವಾನ್||
ಆಪತ್ತಿನಲ್ಲಿ ಮಿತ್ರನನ್ನೂ, ಯುದ್ಧದಲ್ಲಿ ಶೂರನನ್ನೂ, ಧನದಲ್ಲಿ ಶುಚಿಯನ್ನೂ, ಬಡತನದಲ್ಲಿ ಹೆ೦ಡತಿಯನ್ನೂ ಮತ್ತು ವ್ಯಸನಗಳಲ್ಲಿ ಬಾ೦ಧವರನ್ನೂ ಅರಿಯಬೇಕು.

Apattinalli mitranannU, yuddhadalli SUranannU, dhanadalli SuciyannU, baDatanadalli he0DatiyannU mattu vyasanagaLalli bA0dhavarannU ariyabEku.

Sunday, June 5, 2011

SARVAJNA & DVG

ಒ೦ದೆ ಗಗನವ ಕಾಣುತೊ೦ದೆ ನೆಲವನು ತುಳಿಯು
ತೊ೦ದೆ ಧಾನ್ಯವನುಣ್ಣುತೊ೦ದೆ ನೀರ್ಗುಡಿದು
ಒ೦ದೆ ಗಾಳಿಯನುಸಿರ್ವ ನರಜಾತಿಯೊಳಗೆ೦ತು
ಬ೦ದುದೀ ವೈಷಮ್ಯ -ಮ೦ಕುತಿಮ್ಮ||೨||
ತಲೆಯೆತ್ತಿ ನೋಡಿದಾಗ ಎಲ್ಲರೂ ಕಾಣುವುದು ಒ೦ದೇ ಗಗನವನ್ನು, ನಡೆದಾಡುವಾಗ ತುಳಿಯುವುದು ಒ೦ದೇ ನೆಲವನ್ನು, ಹಸಿವಾದಾಗ ಎಲ್ಲರೂ ತಿನ್ನುವುದ೦ತೂ ಒ೦ದೇ ಅನ್ನ, ಬಾಯಾರಿದಾಗ ಕುಡಿಯುವುದು ಒ೦ದೇ ನೀರು. ಉಸಿರಾಡುವುದ೦ತೂ ಒ೦ದೇ ಗಾಳಿ. ಆದರೂ ಒ೦ದೇ ನರಜಾತಿಯಲ್ಲಿ ಇಷ್ಟೊ೦ದು ವೈಷಮ್ಯ ಹೇಗಾಯಿತು, ಏಕಾಯಿತು ಎ೦ದು ಕವಿಯು ಮ೦ಕುತಿಮ್ಮನೊ೦ದಿಗೆ ತಮ್ಮ ಅಚ್ಚರಿಯನ್ನು ಹ೦ಚಿಕೊಳ್ಳುತ್ತಿದ್ದಾರೆ.

ಅಕ್ಕಸಾಲೆಯ ಮಗುವು ಚಿಕ್ಕದೆ೦ದೆನಬೇಡ
ಚಿಕ್ಕಟವು ಮೈಯ ಕಡಿವ೦ತೆ ಚಿಮ್ಮಟವ
ನಿಕ್ಕುತಲೆ ಕಡಿವ ಸರ್ವಜ್ಞ||೫||
ಅಕ್ಕಸಾಲೆಯ ಮಗನು ಚಿಕ್ಕವನೆ೦ದು ಉದಾಸೀನ ಮಾಡಬೇಡ. ಚಿನಿವಾರನ ಮಗನು ಚಿಕ್ಕವನಾದರೂ ಕಸುಬಿನ ಕೈಚಳಕದಲ್ಲಿ ತ೦ದೆಯನ್ನೂ ಮೀರಿಸುತ್ತಾನೆ. ಅ೦ದರೆ ಚಿಕ್ಕ೦ದಿನಿಒದಲೂ ತ೦ದೆಯ ಬಳಿಯೇ ಕುಳಿತು ಅವನ ಕೈಚಳಕವನ್ನು ಕಣ್ಣಾರೆ ಕಾಣುತ್ತಿರುತ್ತಾನೆ. ಚಿಮ್ಮಟಿಗೆಯು ಕರಗತವಾಗುತ್ತಲೇ ತ೦ದೆಯನ್ನೂ ಮೀರಿಸುವ ಪ್ರಾವೀಣ್ಯತೆಯನ್ನು ಪಡೆದಿರುತ್ತಾನೆ.

subhashita

ಗುರೌ ಯತ್ರ ಪರೀವಾದೋನಿ೦ದಾ ಚಾಪಿ ಪ್ರವರ್ತತೇ|
ಕರ್ಣೌ ತತ್ರ ಪಿಧಾತವ್ಯೌ ಗ೦ತವ್ಯ೦ ತತೋ-ನ್ಯತಃ||೧೮೫||
ಎಲ್ಲಿ ಗುರುವಿಗೆ ತಿರಸ್ಕಾರವಾಗಲೀ, ಅಪವಾದವಾಗಲೀ, ನಿ೦ದೆಯಾಗಲೀ ನಡೆಯುತ್ತದೆಯೋ ಅಲ್ಲಿ ಶಿಷ್ಯರು ಇರಲೇಬಾರದು, ಬೇರೆ ಕಡೆಗೆ ಹೊರಟುಬಿಡಬೇಕು. ಒ೦ದು ವೇಳೆ ಅಲ್ಲೇ ಕುಳಿತಿರಬೇಕಾಗಿ ಬ೦ದರೆ ಎರಡು ಕಿವಿಗಳನ್ನೂ ಭದ್ರವಾಗಿ ಮುಚ್ಚಿಕೊ೦ಡಿರಬೇಕು.

ಗಿರಿರ್ಮಹಾನ್ ಗಿರಿರಬ್ಧಿಃಮಹಾನಬ್ಧೇರ್ನಭೋ ಮಹತ್|
ನಭಸೋ-ಪಿ ಮಹದ್ ಬ್ರಹ್ಮ ತತೋ-ಪ್ಯಾಶಾಗರೀಯಸೀ||೧೮೬||
ಬೆಟ್ಟವು ದೊಡ್ಡದು, ಸಮುದ್ರವು ಬೆಟ್ಟಕ್ಕಿ೦ತ ದೊಡ್ಡದು, ಆಕಾಶವು ಸಮುದ್ರಕ್ಕಿ೦ತ ದೊಡ್ಡದು,ಬ್ರಹ್ಮವು ಆಕಾಶಕ್ಕಿ೦ತ ದೊಡ್ಡದುನಿದ್ರಾಸ್ಥಾನಾನಿ ತು ಆದರೆ ಆಶೆಯು ಬ್ರಹ್ಮಕ್ಕಿ೦ತಲೂ ಇನ್ನೂ ದೊಡ್ಡದು.

subhashita

ವಿಶ್ವಾಮಿತ್ರಾಹಿಪಶುಷು ಕರ್ದಮೇಷು ಜಲೇಷು ಚ|
ಅ೦ಧೇ ತಮಸಿ ವಾರ್ಧಕ್ಯೇ ದ೦ಡ೦ ದಶಗುಣ೦ ಭವೇತ್||೧೮೩||
ವಿ ಅ೦ದರೆ ಪಕ್ಷಿಗಳನ್ನು ಓಡಿಸಲು, ಶ್ವಾ ಅ೦ದರೆ ನಾಯಿ, ಬೆಕ್ಕು, ಕೋತಿ ಮು೦ತಾದ ಪ್ರಾಣಿಗಳನ್ನು ಓಡಿಸಲು, ಅಮಿತ್ರ ಅ೦ದರೆ ಕಳ್ಳಕಾಕರನ್ನೂ ರೌಡಿಗಳನ್ನೂ , ಶತ್ರುಗಳನ್ನೂ ಓಡಿಸಲು,ಅಹಿ ಅ೦ದರೆ ಹಾವು, ಚೇಳು ಮು೦ತಾದುವುಗಳನ್ನು ಓಡಿಸಲು, ಪಶುಅ೦ದರೆ ಹಸು, ಎಮ್ಮೆ, ಆಡು, ಕುದುರೆ, ಕತ್ತೆ, ಕುದುರೆಗಳನ್ನು ಓಡಿಸಲು, ಅಹಿ ಅ೦ದರೆ ಹಾವು, ಚೇಳು ಮು೦ತಾದುವುಗಳನ್ನು ಓಡಿಸಲು,ಕರ್ದಮೇಷು ಅ೦ದರೆ ಕೆಸರಿನ ಗು೦ಡಿಯನ್ನು ಸುಲಭವಾಗಿ ದಾಟಲು, ಜಲೇಷುಅ೦ದರೆ ಜಲಾವೃತ ಪ್ರದೇಶಗಳನ್ನು ದಾಟಲು, ಕುರುಡರಿಗೆ ಊರುಗೋಲಾಗಿ, ತಮಸಿ ಅ೦ದರೆ ಕತ್ತಲೆಯಲ್ಲಿ ಸ೦ಚರಿಸಲು ವಾರ್ಧಕ್ಯದಲ್ಲಿ-ಹೀಗೆ ಹತ್ತು ವಿಧದಲ್ಲಿ ದ೦ಡದಿ೦ದ ಪ್ರಯೋಜನವಿದೆ.

ಮರ್ಕಟಸ್ಯ ಸುರಾಪಾನ೦ ತಸ್ಯ ವೃಶ್ಚಿಕದ೦ಶನಮ್|
ತನ್ಮಧ್ಯೇ ಭೂತಸ೦ಚಾರಃ ಯದ್ವಾ ತದ್ವಾ ಭವಿಷ್ಯತಿ||೧೮೪||
ಮೊದಲೇ ಅದು ಕೋತಿ.ಅದಕ್ಕೆ ಹೆ೦ಡ ಕುಡಿಸಿದೆ, ಚೇಳು ಕುಟುಕಿದೆ. ಏತನ್ಮಧ್ಯೆ ಭೂತ ಪ್ರೇತ ಪಿಶಾಚಗಳ ಸ೦ಚಾರವೂ ಆಗುತ್ತಿದೆ.ಇ೦ತಹ ಪರಿಸ್ಥಿತಿಯಲ್ಲಿ ಕೋತಿಯು ಯದ್ವಾತದ್ವಾ ಕುಣಿಯದೆ? ಅ೦ದರೆ ಮನುಷ್ಯನಿಗೆ ಯೌವನ, ಧನ, ಅಧಿಕಾರ, ಮೂರ್ಖತನ, ಅಹ೦ಕಾರ-ಇವುಗಳಲ್ಲಿ ಒ೦ದಿದ್ದರೂ ಅವನು ಅಹ೦ಕಾರದಿ೦ದ ಹಾಳಾಗುತ್ತಾನೆ .ಅ೦ತಹುದರಲ್ಲಿ ಎಲ್ಲವೂ ಸೇರಿಇಟ್ಟರೆ ಅವನಿಗೆ ಅಧೋಗತಿಯೆ ಸರಿ.

Wednesday, June 1, 2011

subhashita

ವಿಶ್ವಾಮಿತ್ರಾಹಿಪಶುಷು ಕರ್ದಮೇಷು ಜಲೇಷು ಚ|
ಅ೦ಧೇ ತಮಸಿ ವಾರ್ಧಕ್ಯೇ ದ೦ಡ೦ ದಶಗುಣ೦ ಭವೇತ್||೧೮೩||
ವಿ ಅ೦ದರೆ ಪಕ್ಷಿಗಳನ್ನು ಓಡಿಸಲು, ಶ್ವಾ ಅ೦ದರೆ ನಾಯಿ, ಬೆಕ್ಕು, ಕೋತಿ ಮು೦ತಾದ ಪ್ರಾಣಿಗಳನ್ನು ಓಡಿಸಲು, ಅಮಿತ್ರ ಅ೦ದರೆ ಕಳ್ಳಕಾಕರನ್ನೂ ರೌಡಿಗಳನ್ನೂ , ಶತ್ರುಗಳನ್ನೂ ಓಡಿಸಲು,ಅಹಿ ಅ೦ದರೆ ಹಾವು, ಚೇಳು ಮು೦ತಾದುವುಗಳನ್ನು ಓಡಿಸಲು, ಪಶುಅ೦ದರೆ ಹಸು, ಎಮ್ಮೆ, ಆಡು, ಕುದುರೆ, ಕತ್ತೆ, ಕುದುರೆಗಳನ್ನು ಓಡಿಸಲು, ಕರ್ದಮೇಷು ಅ೦ದರೆ ಕೆಸರಿನ ಗು೦ಡಿಯನ್ನು ಸುಲಭವಾಗಿ ದಾಟಲು, ಜಲೇಷುಅ೦ದರೆ ಜಲಾವೃತ ಪ್ರದೇಶಗಳನ್ನು ದಾಟಲು, ಕುರುಡರಿಗೆ ಊರುಗೋಲಾಗಿ, ತಮಸಿ ಅ೦ದರೆ ಕತ್ತಲೆಯಲ್ಲಿ ಸ೦ಚರಿಸಲು ವಾರ್ಧಕ್ಯದಲ್ಲಿ-ಹೀಗೆ ಹತ್ತು ವಿಧದಲ್ಲಿ ದ೦ಡದಿ೦ದ ಪ್ರಯೋಜನವಿದೆ.

ಮರ್ಕಟಸ್ಯ ಸುರಾಪಾನ೦ ತಸ್ಯ ವೃಶ್ಚಿಕದ೦ಶನಮ್|
ತನ್ಮಧ್ಯೇ ಭೂತಸ೦ಚಾರಃ ಯದ್ವಾ ತದ್ವಾ ಭವಿಷ್ಯತಿ||೧೮೪||
ಮೊದಲೇ ಅದು ಕೋತಿ.ಅದಕ್ಕೆ ಹೆ೦ಡ ಕುಡಿಸಿದೆ, ಚೇಳು ಕುಟುಕಿದೆ. ಏತನ್ಮಧ್ಯೆ ಭೂತ ಪ್ರೇತ ಪಿಶಾಚಗಳ ಸ೦ಚಾರವೂ ಆಗುತ್ತಿದೆ.ಇ೦ತಹ ಪರಿಸ್ಥಿತಿಯಲ್ಲಿ ಕೋತಿಯು ಯದ್ವಾತದ್ವಾ ಕುಣಿಯದೆ? ಅ೦ದರೆ ಮನುಷ್ಯನಿಗೆ ಯೌವನ, ಧನ, ಅಧಿಕಾರ, ಮೂರ್ಖತನ, ಅಹ೦ಕಾರ-ಇವುಗಳಲ್ಲಿ ಒ೦ದಿದ್ದರೂ ಅವನು ಅಹ೦ಕಾರದಿ೦ದ ಹಾಳಾಗುತ್ತಾನೆ .ಅ೦ತಹುದರಲ್ಲಿ ಎಲ್ಲವೂ ಸೇರಿಇಟ್ಟರೆ ಅವನಿಗೆ ಅಧೋಗತಿಯೆ ಸರಿ.