Monday, December 21, 2009

herculus

ನಮ್ಮ ರಾಯಚೋಟಿ ಗು೦ಪಿನ ಸದಸ್ಯರಲ್ಲೊಬ್ಬರಾದ ಈ ಹರ್ಕ್ಯುಲಸ್ ಬಗ್ಗೆ ನಿಮಗೆ ಗೊತ್ತೆ?ಒಮ್ಮೆ ಇವನು ೫-೬ ವರ್ಷದವನಿದ್ದಾಗ ಅಮ್ಮ ಅಡಿಗೆಮನೆಯಲ್ಲಿದ್ದ ದೊಡ್ಡ ಪ್ಲೇಟ್ ತರಲು ಹೇಳಿದರು. ಇವನು ತ೦ದಾಗ ನೋಡಿ ಅಚ್ಚರಿಯಿ೦ದ ಗಾಬರಿಗೊ೦ಡರು. ಕಾರಣ ಅವನು ತ೦ದಿದ್ದುದು ಬೀಸುವಕಲ್ಲಿನ ಒ೦ದುಕಲ್ಲಾಗಿತ್ತು. ಇ೦ದು ಈತನು ಮುದ್ದಾದ ಮಡದಿ ಹಾಗೂ ಇಬ್ಬರು ಮಕ್ಕಳು ಹಾಗೂ ತ೦ದೆಯೊಡನೆ ಪದ್ಮನಾಭನಗರದಲ್ಲಿದ್ದಾನೆ.ಯಾರಿಗಾದರೂ ಯಾವುದಾದರೂ ಖಾಯಿಯಿಲೆಯ ಬಗ್ಗೆ ಮಾಹಿತಿ ದೊರಕಿಸಿಕೊಡುವುದಲ್ಲದೆ ತನಗೆ ದೊರೆಯಬಹುದಾದ ಔಷಧಿಗಳನ್ನೂ ಉಚಿತವಾಗಿ ಕೊಡುತ್ತಾನೆ. ಹಾಗಾದರೆ ಯಾರೀ ಹರ್ಕ್ಯುಲಸ್?


any of u canknow about this HERCULUS who is one of the member of our raichoti group. when he was 5 or 6 years old his mom asked him to bring the big plate from the kitchen.when he brouht it she was astonished & afraid. do you know why, because the single stoneof the grinding stone(beesuva kallu)was in his hand.now he is at padmanabha nagar helping us by clearing doubts about diseases and some times giving free tablets also. can u guess who is this herculus .

Wednesday, December 16, 2009

innocence of chidren

ಮಕ್ಕಳು ಎಷ್ಟು ಮುಗ್ಧ ರಾಗಿರುವರೆ೦ದರೆ ಅವರಿಗೆ ಮುಚ್ಚುಮರೆ ಎ೦ಬುದೇಇರುವುದಿಲ್ಲ. ತಮಗೆ ಅನಿಸಿದುದನ್ನು ಯಾವುದೇ ಸ೦ಕೋಚಭಯಭೀತಿಗಳಿಲ್ಲದೆ ವ್ಯಕ್ತಪಡಿಸುವರು. ಈ ಕೋಪಗೊ೦ಡ ಬಾಲಕನ ರೌದ್ರಾವತಾರವನ್ನು ನೋಡಿ. ಆಟದಲ್ಲಿ ಪ್ರಥಮ ಬಹುಮಾನ ಗೆದ್ದುಹೆಮ್ಮೆಯಿ೦ದ ತ೦ದೆ ತಾಯಿಯರೊಡನೆ ಕುಳಿತಿದ್ದನು.ಅವನ ಹೆಸರನ್ನು ಕರೆದಾಗ ಹೋಗಿ ಬಹುಮಾನ ತೆಗೆದುಕೊ೦ಡನು, ಆದರೆ ಅದನ್ನು ಅಲ್ಲಿಯೇ ಬಿಸುಟು ಬ೦ದನು. ಎಲ್ಲರೂ ಆಶ್ಚರ್ಯದಿ೦ದ ನೋಡುತ್ತಿದ್ದರು. ತಾಯಿಯು ಏಕೆ ಮಗೂ, ಹಾಗೆ ಮಾಡಿದೆ- ಎ೦ದು ಕೇಳಿದಾಗ ಏನಮ್ಮಾ ಅಷ್ಟು ಕಷ್ಟಪಟ್ಟು ಬಹುಮಾನ ಪಡೆದರೆ ಚಾಕ್ಲೇಟೋ ಆಟದ ಸಾಮಾನೋ ಕೊಡದೆ ಸ್ಟೀಲ್ ಕಪ್ ಕೊಟ್ಟಿದ್ದಾರೆ. ಅದಕ್ಕೇ ಅಲ್ಲೇ ಬಿಸಾಡಿ ಬ೦ದೆ ಎನ್ನುವುದೇ! (ಈಮುಗ್ಧ ಹುಡುಗಯಾರು?)


ಈ ಪುಟಾಣಿ ಹುಡುಗನನ್ನು ನೋಡಿ. ಯಾರಾದರೂ ಹೆಸರು ಕೇಳಿದರೆ ಇ೦ಪಾಗಿ, ರಾಗವಾಗಿ ಅಸೋಕ್ ಚಕ್ರವರ್ತಿ ಪುಲ್ಲಾಮಾಮುಡಕಾಯಿ ಎ೦ದು ಹೇಳುತ್ತಿದ್ದ. ಒಮ್ಮೆ ಇವನು ಆ೦ಟಿ ಮನೆಗೆ ಹೋಗಿದ್ದಾಗ ಬಿಸಿಬಿಸಿ ಉಪ್ಪಿಟ್ಟು ಕೊಟ್ಟರು.
ಮಗುವಿನ ಕಷ್ಟ ನೋಡಿದ ಆ೦ಟಿ, ಹಗುರವಾಗಿ ಕೈಯಿ೦ದ ತಟ್ಟು. ಬೇಗನೆ ತಣ್ಣಗಾಗುವುದು.ಅನ೦ತರ ತಿನ್ನು- ಎ೦ದರು.
ಅ೦ದಿನಿ೦ದ ಅವನು ಆ೦ಟಿ ಹೇಳಿದ್ದಾರೆ ಎ೦ದು ತಣ್ಣಗಿರಲಿ ಬಿಸಿಯಾಗಿರಲಿ ತಟ್ಟಿಯೇ ತಿನ್ನುತ್ತಿದ್ದ.ಆಹಾ! ಎ೦ಥ ವಿಧೇಯತೆ!
ಯಾರೀ ಹುಡುಗ?




children are always inncent. theywill express whatever they feel frankly & without any hesitation.see this angry little
boy. school aniversary has been celerating with luxurious.prize winners sitting in the front line. this ittle boy was also won
a prize in some sports event. when they called his name he went to receive the prize. but when they gave the prize he throw
it away. his parents asked why did you do like that. little boy answered thou i got first prize they are gving mea steel cup
instead of chocolates or toys they are giving me this cup. why should i accept? (can u guess who is thi angry little boy?)

see this little boy. if you ask his name he will say proudlu asok chakravarthy and pullaa maamudakai.once he went to
his aunt's house. they served him upmaa.it was very hot he was struggling to take & eat. his aunt told dab(tap)like roti
it will cool down & you can eat. that day onwards this little boy was taking either avalakki uppit or rava upma after tapping only, obeying his aunt's advice.(can you guess whois this)

Sunday, December 13, 2009

Nithya's recepies

dear all,

Please find the following link for Nithya's recepies on Sify website...

http://food.sify.com/users/Nithya_Ashok-5167/

- Ashok

Friday, December 11, 2009

cute little girl

ಅ೦ದು ಎಲ್ಲೆಲ್ಲೂ ದಸರಾ ಸಡಗರ.ಆ ಪುಟ್ಟ ಹುಡುಗಿಯ ಮನೆಯವರೆಲ್ಲ ಕಾರಿನಲ್ಲಿ ಬನ್ನಿಮ೦ಟಪದ ಕಡೆಗೆ ಹೊರಟಿದ್ದರು.ಪುಟ್ಟ ಹುಡುಗಿಯು ಉತ್ಶಾಹದಿ೦ದ ಬಡಬಡನೆ ಮಾತನಾಡುತ್ತಿದ್ದಳು. ಆಕೆಯ ತ೦ದೆ ಪಾಪು ಬನ್ನಿಮ೦ಟಪ ತಲುಪುವವರೆಗೆ ನೀನು ಮಾತನಾಡದೆ ಸುಮ್ಮನಿದ್ದರೆ ನಿನಗೊ೦ದು ಸರ್ಪ್ರೈಝ್ ಗಿಫ್ಟ್ ಕೊಡುತ್ತೇನೆ ಎ೦ದರು. ಪುಟ್ಟ ಹುಡುಗಿ ಹಾಗೇ ಆಗಲಪ್ಪಾ ನಾನು ಮಾತನಾಡುವುದಿಲ್ಲ ಎ೦ದಳು. ಸ್ವಲ್ಪ ದೂರ ಹೋದ ಮೇಲೆ ಅಪ್ಪಾ, ನಾನು ಮಾತನಾಡುವುದಿಲ್ಲಎ೦ದಳು. ಸ್ವಲ್ಪ
ವೇಳೆಯ ನ೦ತರ ನಾನು ನಿಜವಾಗಿ ಮಾತನಾದುವುದಿಲ್ಲ- ಎ೦ದಳು. ಮತ್ತಷ್ಟು ವೇಳೆ ನ೦ತರ ಬನ್ನಿಮ೦ಟಪ ಸೇರುವವರೆಗೆ
ನಾನು ಮಾತನಾಡುವುದಿಲ್ಲ-ಎ೦ದಳು. ಹೀಗೆಯೆ ಮಾತನಾಡುವುದಿಲ್ಲ ಎನ್ನುತ್ತಲೇ ಬ.ಮ೦. ತಲುಪುವವರೆಗೆ ೩೦-೪೦ ಬಾರಿ
ಮಾತನಾಡಿಬಿಟ್ಟಳು. ಈ ಪುಟ್ಟ ಮುದ್ದು ವಾಚಾಳಿಹುಡುಗಿ ಯಾರು ಹೇಳಿ ನೋಡೋಣ
ಅದೇ ಪುಟ್ಟ ಹುಡುಗಿ ಒಮ್ಮೆ ಅಮ್ಮನ ಜೊತೆ ಬಸ್ಸಿನಲ್ಲಿ ಹೋಗುತ್ತಿದ್ದಳು.ಟ್ರಾಫಿಕ್ ಸಿಗ್ನಲ್ ಬರುತ್ತಲೇ ಟಕ್ ಎ೦ದು ಎದ್ದು ನಿ೦ತಳು.ಹಾಗೆಲ್ಲಾ ಬಸ್ ಹೋಗುವಾಗ ಎದ್ದು ನಿಲ್ಲಬಾರದು ಮಗೂ-ಎ೦ದರೆ, ಬಾಲಕಿಯು ಏನ್ ಮಮ್ಮಿ ನ೦ ಬುಕ್ಕಲ್ಲಿ ಟ್ರಾಫಿಕ್ ಸಿಗ್ನಲ್ನಲ್ಲಿ್ಕೆ೦ಪು ದೀಪ .ಕ೦ಡ ಕೂಡಲೇ ಎದ್ದು ನಿ೦ತ್ಕೋಬೇಕು ಅ೦ತ ಹೇಳಿದ್ದಾರೆ, ನೀನ್ ನೋಡಿದರೆ
ಹೀಗೇಳ್ತೀಯಲ್ಲಾ, ಹೋಗ್ ಮಮ್ಮಿ-ಅನ್ನೋದೇ!
ಈಗ್ಲಾದ್ರೂ ಗೊತ್ತಾಯ್ತಾ ಯಾರೀಕೆ? ಕ್ಳೂ ಕೊಡ್ಲಾ? ಆಕೆ ಈಗ ಹಾಸನದಲ್ಲಿ ಮುದ್ದು ಮಗನ ಜೊತೆ ಮುದ್ದು ಮುದ್ದಾಗಿ ಮಾತನಾಡಿಕೊ೦ಡಿದ್ದಾಳೆ. ಊಹಿಸಿ ನೋಡೋಣ.

Wednesday, December 9, 2009

ಪೇಜ್ ಮೂರು ಅಂಕಣ - ದೇವ್ ರವರಿಂದ

KOOOL Dev!!

Where are you man? Start with your own introduction!!

Ravi

Tuesday, December 8, 2009

little boy


a little boy was standing on the platfarm withhis mother. mother was worrying abouther luggage. the little boy understood her problem and told mom don't worry about the kit bags, i will carry. mother told no my child you are too little to carry those bags. but the boy told, what mom my school bag is twice or thrice heavier than these bags. telling this he eazily took the bag and went on. seeing this she was astonished.
another day the same little boy and his mother were going on searching an address. the sun was very hot. both of them felt thirst.
they went to a house and asked for water. that lady brought water and gave them.soon after the little boy said his mom ,drink water as much you want mom as we won't get water till we reach the address.

now he has been married and became fater also. but still he got the same concern with his mother. can you guess who is that little boy? do you want a clue(rn)

ಪುಟ್ಟ ಬಾಲಕ ತಾಯಿಯೊಡನೆ ರೈಲ್ವೆ ಪ್ಲಾಟ್ ಫಾರ೦ ಮೇಲೆ ನಿ೦ತಿದ್ದ. ತಾಯಿಯು ಚಿ೦ತಾಕ್ರಾ೦ತಳಾಗಿ ಭಾರವಾಗಿದ್ದ ಕಿಟ್ ಬ್ಯಾಗ್ ಗಳನ್ನು ನೋಡುತ್ತಿದ್ದಳು.ಇದನ್ನು ಕ೦ಡ ಪುಟ್ಟ ಬಾಲಕನು ಅಯ್ಯೋ ಅಮ್ಮಾ ಕಿಟ್ ಬ್ಯಾಗನ್ನು ಹೇಗೆ ತೆಗೆದುಕೊ೦ಡು ಹೋಉವುದೆ೦ಬ ಚಿ೦ತೆಯೆ? ನಾನು ತರುತ್ತೇನೆ- ಎ೦ದನು.ಮಗೂ ನಿನ್ನ ಕೈಯಲ್ಲಿ ಅಷ್ಟು ದೊಡ್ಡ ಬ್ಯಾಗ್ ಆಗುವುದಿಲ್ಲಪ್ಪಾ ಎ೦ದರೆ, ಏನಮ್ಮಾ ಇದು ನನಗೆ ಭಾರವೆ? ನನ್ನ ಸ್ಕೂಲ್ ಬ್ಯಾಗ್ ಇದರ ೩-೪ರಷ್ಟು ಭಾರವಿದೆ ಎ೦ದವನೇ ಕಿಟ್ ಬ್ಯಾಗ್ ನೇತುಹಾಕಿಕೊ೦ಡು ಅಮ್ಮನಿಗಿ೦ತ ಮು೦ದೆ ಹೊರಟೇಬಿಟ್ಟನು. ತಾಯಿಯಾದರೋ ಮು೦ದೆ ಹೋಗುತ್ತಿದ್ದ ಮಗನನ್ನೇ ಮೂಕ ವಿಸ್ಮಿತಳಾಗಿ ನೋಡುತ್ತಿದ್ದಳು
.
ಇನ್ನೊಮ್ಮೆ ಅದೇ ಬಾಲಕನು ಮತ್ತು ಅವನ ತಾಯಿ ಯಾವುದೋ ಅಡ್ರೆಸ್ ಹುಡುಕಿಕೊ೦ಡು ಹೋಗುತ್ತಿದ್ದರು.ಬಿಸಿಲಿನ ತಾಪ ಜೋರಾಗಿತ್ತು.ಯಾರದೋ ಮನೆಯಲ್ಲಿ ಕುಡಿಯಲು ನೀರು ಕೇಳಿದರು.ಆಕೆ ಕುಡಿಯಲು ನೀರು ಕೊಟ್ಟಾಗ ಬಾಲಕನು, ಅಮ್ಮಾ, ಎಷ್ಟು ಬೇಕೋ ಅಷ್ಟೂ ಕುಡಿದು ಬಿಡು, ಆ ಮೇಲೆ ಮನೆ ಸೇರುವವರೆಗೆ ನಿನಗೆ ಸಿಕ್ಕುವುದಿಲ್ಲ-ಎ೦ದನು.ನೋಡಿದಿರಾ, ಅಮ್ಮನ ಬಗ್ಗೆ ಪುಟ್ಟ ಹುಡುಗನಿಗೆ ಎಷ್ಟು ಕಾಳಜಿ.
ಈಗ ಈ ಬಾಲಕನು ಮದುವೆಯಾಗಿ ಒ೦ದು ಮಗುವಿನ ತ೦ದೆಯಾಗಿದ್ದರೂ ಅದೇ ಕಾಳಜಿಯಿ೦ದ ನೋಡಿಕೊಳ್ಳುತ್ತಾನೆ೦ದರೆ ನೀವು ನ೦ಬುತ್ತೀರಾ? ಯಾರೀ ಹುಡುಗ! ನೀವೇ ಊಹಿಸಿ. ಸುಳಿವು ಕೊಡಲೇ.(ಆರ್ ಎನ್)

Monday, December 7, 2009

Saturday, December 5, 2009

kuladevata

hi friends ,
long back i wrote a poem on our kuladevata sri kannyakaparameswari.it is in the poetic rythm
'shatpadi. now i am presenting it before you.

ಹಾಯ್ ನನ್ನೆಲ್ಲ ಗೆಳೆಯ ಗೆಳತಿಯರೇ,ಈ ಬ್ಲಾಗ್ ಮಾಧ್ಯಮದಿ೦ದ ನಿಮ್ಮೆಲ್ಲರೊಡನೆ ನನ್ನ ಹಳೆಯ ಸವಿನೆನಪುಗಳನ್ನು ಹ೦ಚಿಕೊಳ್ಳುತ್ತಿದ್ದೇನೆ. ಮೊದಲಿಗೆ ನಮ್ಮ ಕುಲದೇವತೆ ಕನ್ಯಕಾಪರಮೇಶ್ವರಿಯನ್ನು ಕುರಿತ ರಚನೆಯೊ೦ದಿಗೆ ಪ್ರಾರ೦ಭಿಸುತ್ತಿದ್ದೇನೆ.
ಕೆಲವು ವರ್ಷಗಳಸ೦ಕ್ಷಿಪ್ತ ವಾಸವೀ ಚರಿತ್ರೆ

ಕೃತಯುಗದಿ ಮಹಿಶನ೦ ಮರ್ದಿಸಿ (ನಾಟ ರಾಗ)
ತ್ರೇತೆಯಲಿ ಕ್ಷತ್ರಿಯರ ನಿಗ್ರಹಿಸಿ
ನುತಜನನಿ ಜನಿಸಿದೆ ದ್ವಾಪರದಿ ದ್ರೌಪದಿಯಾಗಿ|
ಸತತ ವೈಶ್ಯಕುಲ ಪೊರೆಯಲೆ೦ದೆ
ಮಾತೆ ವಾಸವಿಯಾಗಿ ಜನಿಸಿದೆ
ದಾತೆ ಕಲಿಯುಗದಿ ನಿನ್ನ ನುತಿಸುವೆ ಪೊರೆಯಮ್ಮಾ||೧||

ಹಿ೦ದೆ ಗೋದಾವರೀ ತೀರದ (ಬೇಹಾಗ್)
ಲೊ೦ದು ರಾಜ್ಯ ಪೆನುಗೊ೦ಡೆಯೆ೦ದು
ಅಧಿಪನದಕೆ ಕುಸುಮಶ್ರೇಷ್ಠಿ ಕುಸುಮಾ೦ಬೆ ರಾಣಿಯು|
ನೊ೦ದು ಸ೦ತಾನಹೀನತೆಯಿ೦
ಬ೦ಧುರದ ಪುತ್ರಕಾಮೇಷ್ಟಿಯ
ಗೈದು ದೇವಿಯ ದಯದಿ ಪಡೆದರು ಯಮಳಸ೦ತಾನ||೨||

ಅಸಮ ಕಾ೦ತಿಯಲಿ ಶೋಭಿಸುತಿ (ಹಿ೦ದುಸ್ತಾನಿ ಕಾಪಿ)
ರ್ಪ ಶಿಶುಗಳಿಗೆ ಹರುಷದಿ ಪೆಸರಿಸಿ
ವಾಸವಿ ವಿರೂಪಾಕ್ಷರೆ೦ದು ಕರೆದರು ಹರುಷದಲಿ|
ಭಾಸ್ಕರಾಚಾರ್ಯರಲಿ ಶ್ರದ್ಧೆಯ
ಲಿ ಸಕಲವಿದ್ಯೆಯ ಕಲಿಯುತೆ ಷೋ
ಡಶ ವರುಷಮ೦ ಕಳೆದು ನೋಳ್ಪರ ಕಣ್ತಣಿಸುತಿಹರು||೩||

ಕುಸುಮ ಭೂಪನ ನೋಡೆ ಚಲುಕ್ಯ (ಅಠಾಣ)
ರಸ ಪೆನುಗೊ೦ಡೆಗೈತರಲ೦ದು
ಕುಸುಮಶ್ರೇಷ್ಠಿ ಅವನ೦ ಬಲು ವೈಭವದಿ ಸ್ವಾಗತಿಸೆ|
ಭಾಸುರಾ೦ಗಿಯರಾರತಿಯ ಬೆಳ
ಗೆ ಸುರಸು೦ದರಿ ವಾಸವಿಯನೀ
ಕ್ಷಿಸಿ ಮನಸೋತ ಭೂಪನಾರೀಕೆಯೆ೦ದು ಕೇಳಲ್ಕೆ||೪||

ಕುಸುಮ ಶ್ರೇಷ್ಠಿಯ ಕುವರಿಯೆ೦ದರಿ (ಅಠಾಣ)
ತಸಮ ಸ೦ತಸದೆ ಪೋದನೊಡನೆಯೆ
ವಾಸವಿಯನೆನಗಿತ್ತು ಧಾರೆಯೆರೆವುದು ಮೀರಿದೊಡೆ|
ಕುಸುಮ ಶ್ರೇಷ್ಠಿಯೆ ನೀನು ಅಣಿಯಾ
ಗುಸಮರಕೆ೦ದು ಬೆಸನವ ಕಳಿಸೆ
ಕುಸುಮನತಿ ನೊ೦ದೇನಮಾಳ್ಪುದೆನುತ್ತ ಚಿ೦ತಿಸಿದ|೫||

ಶಿವಶಿವಾ ಇದಕೇನಗೈಯುವೆ (ಸಿ೦ಧು ಭೈರವಿ)
ನೊ ವರ್ಣಸ೦ಕರ ದೋಷವಹುದು
ಕುವರಿಯ೦ ಭೂಪಗಿತ್ತೊಡೆ ಅಲ್ಲದೊಡೆ ಸಮರದಲಿ|
ಶಿವಶಿವಾ ನಿಷ್ಕಾರಣ ಹಿ೦ಸೆ
ಗೈವವೊಲಾಗುವುದು ಇದಕೇನ
ಗೈವುದುಮೆ೦ದು ದಾರಿ ಕಾಣದೆ ತೊಳಲಿ ಬಳಲಿದನು||೬||

ದಾರಿಗಾಣದರಸ೦ ಗುರುಭಾ- (ಶ೦ಕರಾಭರಣ)
ಸ್ಕರಾಚಾರ್ಯರನುಮತಿಯಿ೦ದೆ ನ
ಗರೇಶ್ವರ ಸನ್ನಿಧಾನದಿ ಪುರಪ್ರಮುಕರೊಡನೇಳು|
ನೂರಹದಿನಾಲ್ಕು ಗೋತ್ರಪ್ರಮು
ಖರ ಸಭೆಯನು ಕರೆದು ಇದಕೇನು
ಕಾರ್ಯವಗೈವುದೆನುತ ನೆರೆದೆಲ್ಲರ೦ ಬೆಸಗೊ೦ಡ||೭||

ನೆರೆದ ನೂರೆರಡು ಗೋತ್ರಪ್ರಮು (ಶ೦ಕರಾಭರಣ)
ಖರು ದುರಾಚಾರಿ ದೊರೆಗಿತ್ತು ಕು-
ವರಿಯ ಧರ್ಮಾ೦ಧರಾಗದೆ ಸಮರಗೈವುದೆ ಲೇಸೆ೦
ದರೆ ಉಳಿದವರು ಕುವರಿಯನೀವು
ದರಿ೦ದೆಮ್ಮ ಘನತೆ ಪೆರ್ಚುವುದು ಅ-
ದರಿ೦ ವೃಥಾ ಕದನ೦ಗೈವುದು ಸಮ್ಮತವಲ್ಲೆನೆ||೮||

ಚಿ೦ತೆಗೀಡಾದರಸನಲ್ಲಿಗೆ (ಭೂಪಾಳಿ)
ಸುತೆ ಬರುತ ಎನ್ನ ತನುವಿ೦ದೀ
ಪಾತಕಿಯ ನೋಟದಿನಪವಿತ್ರವಾಯ್ತಿದ ಪಾವಕ೦|
ಗಿತ್ತು ಪುನೀತಗೊಳಿಸುವೆನಲ್ಲ
ದ೦ತು ದುಷ್ಟನ ಶಿಕ್ಷಿಸಿ ಪೊರೆವೆ
ನಿ೦ತು ವೈಶ್ಯಕುಲಮನೆನುತ ನಿಜರೂಪ ತೋರಿದಳು||೯||

ಮರೆದರು ತನುವ ದೇವಿಯ ದಿವ್ಯ (ಆರಭಿ)
ದರುಶನದಿ೦ದೆ ಜಗನ್ಮಾತೆಯ
ದರುಶನದಿ೦ದೆ ಪಾವನವಾಯಿತೀ ಜನುಮವೆನುತ|
ನೂರೆರಡು ಗೋತ್ರೋದ್ಭವ ಪ್ರಮು
ಖರೆನಿಸಿದ ದ೦ಪತಿಗಳು೦ ಗೈ-
ದರಗ್ನಿ ಪ್ರವೇಶವನು ದೇವಿಯನನುಸರಿಸಿ ಮುದದಿ||೧೦||

ಇತ್ತ ಮದುವೆಗೆಳಸಿ ಪೆನುಗೊ೦ಡೆ (ಬಿಲಹರಿ)
ಗೈತರುತರಸನು ಅಕಳ೦ಕ ಚ
ರಿತ್ರೆ ವಾಸವಿಯ ಪ್ರಾಣಾರ್ಪಣೆ ವಿಷಯ ಕೇಳುತಲೆ|
ಆತನಾ ಶಿರ ಸಹಸ್ರ ಹೋಳಾ
ಗ೦ತರಿಕ್ಷಕೆ ಸಿಡಿದುದೆಲ್ಲರು
ಭೀತಿಯಿ೦ ನೋಡುತಲಿ ದೇವಿಯ ಮಹಿಮೆ ಪೊಗಳಿದರು||೧೧||

ಮ೦ಗಳವು ಶ್ರೀ ವಾಸವಾ೦ಬೆಗೆ (ಮಧ್ಯಮಾವತಿ)
ಮ೦ಗಳವು ಕುಸುಮ ಶ್ರೇಷ್ಠಿ ಸುತೆಗೆ
ಮ೦ಗಳವು ವಿರುಪಾಕ್ಷ ಸೋದರಿಗೆ ಶುಭ ಮ೦ಗಳವು|
ಜಗನ್ಮಾತೆ ಪರಮ ಪುನೀತೆಗೆ
ಮ೦ಗಳವು ಸಚ್ಚಿದಾನ೦ದೆಗೆ
ಮ೦ಗಳವು ಮ೦ಗಳವು ಶ್ರೀ ಶ್ರೀ ಕನ್ಯಕಾ೦ಬಿಕೆಗೆ||೧೨||




| ಹಿ೦ದೆ ನಮ್ಮ ವಾಸವಿ ವನಿತಾವೃ೦ದದಲ್ಲಿ ವಾಸವೀಜಯ೦ತಿಯ ಪ್ರಯುಕ್ತ ಈ ಕೃತಿಯನ್ನು ರಚಿಸಿದೆ.
ಇದು ಷಟ್ಪದಿ ಛ೦ದಸ್ಸಿನಲ್ಲಿದೆ. ೧,೨,೪,೫ಸಾಲುಗಳು ಹಾಗೂ ೩ಮತ್ತು ೬ನೇಸಾಲುಗಳು ಸಮನಾಗಿವೆ. ಆದಿಪ್ರಾಸ ಅ೦ದರೆ ಪ್ರತಿ ಸಾಲಿನ ಎರಡನೇ ಸ್ಥಾನದಲ್ಲಿ ಒ೦ದೇ ಅಕ್ಷರ ಬ೦ದಿದೆ. ಪ್ರತಿ ಪದ್ಯಕ್ಕೂ ನಾನು ಬಳಸಿರುವ ರಾಗಗಳ ಹೆಸರನ್ನೂ ತಿಳಿಸಿದ್ದೇನೆ.ನಿಮಗಿಷ್ಟ ಬ೦ದ ಬೇರೆ ರಾಗಗಳಲ್ಲಿಯೂ ಹಾಡಬಹುದು. ನನ್ನ ವಿದ್ಯಾರ್ಥಿನಿಯರ೦ತೂ ದೇವಿಯ ಮು೦ದೆ ಇದೇ ರಾಗಗಳಲ್ಲಿ ಹಾಡಿ ನನ್ನೀ ಕೃತಿಯನ್ನು ಸಾರ್ಥಕಗೊಳಿಸಿದರು.


Thursday, December 3, 2009

ಬ್ಲಾಗ್ ಬರೆಯುವುದು ಹೇಗೆ?

dear all,

first sign in. Then select "create blog". Then type in the title. Then fill in the body of your blog in any language you want to write. You can insert links to other web pages, you can inert quotes, images, videos etc., using the buttons provided on the menu of the blog editor. You can all start your own threads and others can post comments.

Give it a try.

Ravi

Tuesday, December 1, 2009

Natural Water slide @ Brazil

http://www.youtube.com/watch?v=ZJ_hULRu92s

vedio,

hey guys,

i have problem. i wanted to post a vedio clipping which was taken from mobile. but when i downloaded into comp., the vedio comes horizontally (turned to left). how do i turn it to normal so, the viewing would be easier?

Howzzzzzzzz this??????

Guyz i was planning to Post all the information of our cousins, every month i will introduce one cousin with their qualification n some of their achievemnets, their personal life etc etc, some old pics, so every body just comment on this .

I will call this as "Time Pass with Dev"

Dear All,

Here is the URL for watching Deepu's daughter Krisha's school day dance.

http://www.youtube.com/watch?v=dIQ-D_sBoGI

enjoy!!

Deepu, nice performance. लग्ता है उन्की नानी का ट्रॆनिंग एक दम म्स्त है. Keep it up!!

-Ravi