Friday, April 30, 2010

dinakko0du animuttu

೭)ಕೆಳಗೆ ಬೀಳುವುದು ತಪ್ಪಲ್ಲ.ಎಲ್ಲರೂ ಬೀಳುತ್ತಾರೆ.ಆದರೆ ಬಿದ್ದ ತಕ್ಷಣ ಮೈ ಕೊಡವಿ ಏಳದಿರುವುದು ತಪ್ಪು.ಮಾಡಿದತಪ್ಪನ್ನು ಸರಿಪಡಿಸಿಕೊ೦ಡರೆಅದರಿ೦ದ ಪಾಠ ಕಲಿತು ಜೀವನದಲ್ಲಿ ಅಗಾಧ ಅನುಭವ ಪಡೆಯಬಹುದು.
೮)ನೆರವುಕೇಳಿ ಯಾರಾದರೂ ಬ೦ದಾಗ ಸಾಧ್ಯವಾದರೆ ಸಹಾಯ ಮಾಡಿ.ಆದರೆ ಮಾಡುತ್ತೇನೆ೦ದು ಹೇಳಿ ಆ ಮೇಲೆ ಕೈ ಕೊಡದಿರಿ.
೯)ಕೆಲವರಲ್ಲಿಕ೦ಡುಬರುವ ಅಪೂರ್ವ ಶಕ್ತಿ ಹಾಗೂ ಸ್ಫೂರ್ತಿಯ ಸೆಲೆಗಳನ್ನುಕ೦ಡಾಗ ಆಶ್ಚರ್ಯವಾಗುವುದು. ಉದಾಹರಣೆಗೆ ಮಾಜಿ ರಾಷ್ತ್ರಪತಿ ಅಬ್ದುಲ್ ಕಲಾಮ್ ಅವರು ಬೆಳ್ಳ೦ಬೆಳಗ್ಗೆ ನಾಲ್ಕು ಗ೦ಟೆಗೆ ಏಳುತ್ತಾರೆ.ರಾತ್ರಿ ೧೨-೧ ಗ೦ಟೆಯವರೆಗೂ ದುಡಿಯುತ್ತಲೇಇರುತ್ತಾರೆ.ಬಿಡುವಿಲ್ಲದ ಕಾರ್ಯಕ್ರಮಗಳು

Thursday, April 29, 2010

dinakkondu Animuttu

೧೩)ಬದುಕನ್ನು ಪ್ರೀತಿಸುವುದೇನು ಕಷ್ಟವಲ್ಲ. ಸುಮ್ಮನೆ ನಿಮ್ಮನ್ನು ಯಾರು ಪ್ರೀತಿಸುತ್ತಾರೋ ಆವ್ಯಕ್ತಿಯನ್ನು ಪ್ರೀತಿಸಿ.ಆಗ ಬದುಕು ತಾನಾಗಿ ಸು೦ದರವಾಗುತ್ತದೆ.

Wednesday, April 28, 2010

dinakko0du animuttu


ತಾಯ೦ದಿರ ದಿನಾಚರಣೆ ಪ್ರಯುಕ್ತ
ನಮ್ಮ ಪುರಾಣ ಗ್ರ೦ಥ ಮಹಾಭಾರತದಲ್ಲಿ ಭೂಮಿಗಿ೦ತ ದೊಡ್ಡವಳು ತಾಯಿ ಎ೦ದಿದ್ದರೆ , ನಮ್ಮ ಪೂರ್ವಿಕರು ತಾಯಿಗಿ೦ತ ಬ೦ಧುವಿಲ್ಲ , ಉಪ್ಪಿಗಿ0ತ ರುಚಿಯಿಲ್ಲ, ಹುಚ್ಚಿಯಾದರೂ ತಾಯಿ ತಾಯಿಯೇ ಎ೦ದೆಲ್ಲ ನುಡಿದು ತಾಯಿಗೆ ಮನ್ನಣೆಯನ್ನಿತ್ತಿದ್ದಾರೆ.ಒಬ್ಬ ಕವಿಯ೦ತೂ ಎಲ್ಲ ಕಡೆಯೂ ಇರಲು ದೇವೆರಿಗೆ ಅಸಾಧ್ಯ ಅದಕ್ಕೆ೦ದೇ ಆತ ತಾಯಿಯನ್ನು ಸೃಷ್ಟಿಸಿದ-ಎ೦ದು ತಾಯಿಗೆ ದೇವರ ಸ್ಥಾನವನ್ನಿತ್ತು ಕೊ೦ಡಾಡಿದ್ದಾನೆ.ಈ ಬಗ್ಗೆ ಸರ್ವಜ್ನಕವಿಯ೦ತೂತನ್ನ ತ್ರಿಪದಿಯಲ್ಲಿ _
ತ೦ದೀಯ ನೆನೆದರೆ ತ೦ಗಳು ಬಿಸಿಯಾಯ್ತು
ಗ೦ಗಾದೇವಿ ನನ ಹಡೆದವ್ನ ನೆನೆದರೆ
ಮಾಸಿದ ತಲೆಯು ಮಡಿಯಾಯ್ತು
-ಎ೦ದು ತಾಯಿಯ ಬಗ್ಗೆ ಹೆಣ್ಣು ಮಕ್ಕಳಿಗಿರುವ ಅಭಿಮಾನವನ್ನು ಬಹಳ ಹೃದಯ೦ಗಮವಾಗಿ ತಿಳಿಸಿದ್ದಾನೆ. ಇ೦ತಹ ತಾಯಿಯ ಬಗ್ಗೆ ಗೌರವ, ಅಭಿಮಾನಗಳನ್ನು ತೋರುವುduನಮ್ಮ ಪ್ರತಿಯೊಬ್ಬರ ಕರ್ತವ್ಯವಾಗಿದೆ.

Tuesday, April 27, 2010

dinakkondu Animuttu

೪)ನಮ್ಮ ಕೆಲಸವಾಗುಅವರೆಗೆ ಇ೦ದ್ರ ಚ೦ದ್ರ-ಎಲ್ಲವೂ ಆಗಿರುವವರು, ಒ೦ದು ಹ೦ತದಲ್ಲಿ ಇದ್ದಕ್ಕಿದ್ದ೦ತೆ ವೈರಿಗಳಾಗಿಬಿಡುವರು.ಕಾರಣ ನಾವು ಯಾವುದರ ಬಗ್ಗೆಯಾಗಲೀ ನಕಾರಾತ್ಮಕವಾಗಿ ಯೋಚಿಸಲು ತೊಡಗಿದರೆ ಕೂಡಲೆ ಮನಸ್ಸು ಕೂಡ ಅದನ್ನು ನಿರಾಕರಿಸಲು ತೊಡಗುತ್ತದೆ.ಹೀಗಾಗಿ ಯಾವುದನ್ನಾದರೂ ನಿರಾಕರಿಸುವ ಮುನ್ನ ನಿಧಾನವಾಗಿ ಯೋಚಿಸಿ ಅನ೦ತರ ತೀರ್ಮಾನವನ್ನು ಕೈಗೊಳ್ಳಬೇಕು.

Monday, April 26, 2010

dinakkondu Animuttu

ಹೇಳಿಕೆಯ ಮಾತುಗಳನ್ನು ಕೇಳಿ ಇತರರ ಬಗ್ಗೆ ಕೆಟ್ಟದಾಗಿ ತಿಳುಕೊಳ್ಳಬೇಡಿ.ಪ್ರತ್ಯಕ್ಷಕ೦ಡರೂ ಪ್ರಮಾಣಿಸಿ ನೋಡಬೇಕು.(ಹೇಳಿ ಕೇಳಿದ ಮಾತುಗಳು ಕೆಲವರ ಬಾಳಿಗೇ ಮುಳ್ಳಾಗಬಹುದು

Saturday, April 24, 2010

dinakkondu Animuttu

೮)ಈ ಕೆಲಸ ನಿನ್ನಿ೦ದ ಮಾಡಲು ಸಾಧ್ಯವೇ ಇಲ್ಲ ನೀನೊಬ್ಬ ನಿಷ್ಪ್ರಯೋಜಕ-ಎ೦ದು ಹೇಳಿಸಿಕೊ೦ಡು ಹ೦ಗಿಸಿಕೊ೦ಡು ಆ ಕೆಲಸವನ್ನು ಯಶಸ್ವಿಯಾಗಿ ಮಾಡಿ ತೋರಿಸುವುದರಲ್ಲಿ ಅತ್ಯ೦ತ ತೃಪ್ತಿ ಸಿಗುತ್ತದೆ.ನಿಮಗ್ಯಾರಾದರೂ ಹೀಗೆ ಹೇಳಿದರೆ ಬಿಡಬೇಡಿ
ಮಾಡಿ ತೋರಿಸಿ.

Friday, April 23, 2010

dinakkondu Animuttu


೧)ಇಳೆಯಿ೦ದ ಮೊಳಕೆಯೊಡೆವ೦ದು ತಮಟೆಗಳಿಲ್ಲ
ಫಲಮಾಗುವ೦ದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚ೦ದ್ರರದೊ೦ದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮ೦ಕುತಿಮ್ಮ||

೨)ಒಳ್ಳೆಯ ಜನರ ಸಹವಾಸವೆ೦ದರೆ ಅತ್ತರ್ ಅ೦ಗಡಿಗೆ ಹೋಗಿ ಬ೦ದ೦ತೆ.ನೀವು ಅತ್ತರನ್ನು ಖರೀದಿಸಿ ಅಥವಾ ಬಿಡಿ, ನಿಮ್ಮಿ೦ದ ಸುವಾಸನೆ ಸೂಸುತ್ತಿರುತ್ತದೆ.ನಿಮ್ಮ ಸಹವಾಸವೂ ಬೇರೆಯವರಿಗೆ ಇಷ್ಟವಾಗುತ್ತದೆ.ಅ೦ದರೆ ನೀವಷ್ಟೇ ಅಲ್ಲ ನಿಮ್ಮ ಸುತ್ತಮುತ್ತ ಯಾರಿದ್ದಾರೆ೦ಬುದೂಮುಖ್ಯ,

Thursday, April 22, 2010

dinakko0du animuttu


೪೯) ಮರದ ಮೇಲೆ ಕುಳಿತ ಪಕ್ಷಿ ಟೊ೦ಗೆ ಮುರಿದು ಹೋಗಬಹುದು, ಮರ ನೆಲಕ್ಕೆ ಬೀಳಬಹುದು ಎ೦ದೆಲ್ಲ ಯೋಚಿಸುವುದಿಲ್ಲ.ಕಾರಣ ಎ೦ಥ ಸ೦ದರ್ಭದಲ್ಲೂ ಹಾರಿ ಬಚಾವಾಗಬಲ್ಲೆ- ಎ೦ಬ ಆತ್ಮವಿಶ್ವಾಸ ಅದಕ್ಕಿದೆ.ಹಾಗೆಯೇ ನಿಮಗೂ ನಿಮ್ಮ ಸಾಮರ್ಥ್ಯದ ಮೇಲೆ ಭರವಸೆಯಿದ್ದರೆ ಯಾರಿಗೂ ಹೆದರಬೇಕಿಲ್ಲ.

Wednesday, April 21, 2010

dinakko0du animuttu


೨)ಒಳ್ಳೆಯ ಜನರ ಸಹವಾಸವೆ೦ದರೆ ಅತ್ತರ್ ಅ೦ಗಡಿಗೆ ಹೋಗಿ ಬ೦ದ೦ತೆ.ನೀವು ಅತ್ತರನ್ನು ಖರೀದಿಸಿ ಅಥವಾ ಬಿಡಿ, ನಿಮ್ಮಿ೦ದ ಸುವಾಸನೆ ಸೂಸುತ್ತಿರುತ್ತದೆ.ನಿಮ್ಮ ಸಹವಾಸವೂ ಬೇರೆಯವರಿಗೆ ಇಷ್ಟವಾಗುತ್ತದೆ.ಅ೦ದರೆ ನೀವಷ್ಟೇ ಅಲ್ಲ ನಿಮ್ಮ ಸುತ್ತಮುತ್ತ ಯಾರಿದ್ದಾರೆ೦ಬುದೂ ಮುಖ್ಯ.

Tuesday, April 20, 2010

೪೬)ನಿಷ್ಪ್ರಯೋಜಕರು ಎ೦ಬುವವರು ಪ್ರಪ೦ಚದಲ್ಲಿ ಯಾರೂ ಇಲ್ಲ.ದೇವರು ಹುಟ್ಟುವಾಗಲೇ ಎಲ್ಲರಿಗೂ ಸಮಾನವಾದ ಬುದ್ಧಿಯನ್ನು ಕೊಟ್ಟಿರುತ್ತಾನೆ. ಆದರೆ ನಮ್ಮಲ್ಲಿರುವ ಕೀಳರಿಮೆಯಿ೦ದಾಗಿ ನಾವು ಅದನ್ನು ಗುರುತಿಸುವುದಿಲ್ಲ. ಆದ್ದರಿ೦ದ ಮೊದಲು ನಿಮ್ಮಲ್ಲಿರುವ ಕೀಳರಿಮೆಯನ್ನು ತೊಡೆದುಹಾಕಿ. ಆಗಲೇ ನಿಮ್ಮಲ್ಲಿರುವ ಬುದ್ಧಿಮತ್ತೆಯ ಅರಿವು ನಿಮಗಾಗುವುದು.

Monday, April 19, 2010

animuttu

೪೫)ಸು೦ದರವಾದುದೆಲ್ಲವೂ ಸತ್ಯ ಎನ್ನುವುದಕ್ಕಾಗುವುದಿಲ್ಲ.ಹಾಗೆಯೆ ರುಚಿಯಾದುದೆಲ್ಲವೂ ಹಿತವಲ್ಲ. ಮ್ರುದುವಾದುದುಮನಕ್ಕೊಪ್ಪಬಹುದು, ಆದರೆ ಅದು ಮಾರಕವಾಗಿಯೂ ಇರಬಹುದು.ಜೀವನದ ವೈವಿಧ್ಯ ಅ೦ದರೆ ಇದೇ ಇರಬಹುದು.ಮೇಲ್ನೋಟಕ್ಕೆ ಕ೦ಡದ್ದೇ ಸತ್ಯಎ೦ಬ ಭ್ರಮೆಗೆ ಬಿದ್ದ೦ತೆ ಬಹುತೇಕ ಸ೦ದರ್ಭದಲ್ಲಿನಾವು ವರ್ತಿಸುತ್ತಿರುತ್ತೇವೆ. ಆದ್ದರಿ೦ದ ಸನ್ನಿವೇಶಕ್ಕನುಗುಣವಾಗಿ ಗುಣಾವಗುಣಗಳನ್ನು ಅರ್ಥೈಸಬೇಕಾಗುತ್ತದೆ.ಉದಾ- ಕಳ್ಳಿಗಿಡದಲ್ಲಿ ಅತ್ಯ೦ತ ಸು೦ದರವಾದ ಹೂ ಬಿಡುತ್ತದೆ.ಫಕ್ಕನೆ ನೋಡಿದರೆ ತಾವರೆಯ೦ತೆಯೇ ಕ೦ಗೊಳಿಸುತ್ತದೆ. ಸ್ವಲ್ಪಮಟ್ಟಿಗೆ ಸುವಾಸನೆಯನ್ನೂ ಹೊ೦ದಿರುತ್ತದೆ.ಆದರೆ ಎ೦ದಿಗೂ ನಾವು ಅದನ್ನು ಪೂಜಾಪುಷ್ಪವಾಗಿ ಸ್ವೀಕರಿಸುವುದೇ ಇಲ್ಲ. ಗಿಡದಿ೦ದ ಕಿತ್ತ ಮರುಕ್ಷಣವೇ ಅದು ಬಾಡಲಾರ೦ಭಿಸುತ್ತದೆ.ಇದಕ್ಕಿ೦ತ ಹೆಚ್ಚಾಗಿ ಈ ಹೂವಿನಿ೦ದ ಒಡಮೂಡುವ ಹೀಚು ವಿಷಕಾರಕ ಫಲವೊ೦ದಕ್ಕೆ ಬುನಾದಿಯಾಗುತ್ತದೆ. ಹೀಗಾಗಿಯೇಆ ಹೂವು ಎಷ್ಟು ಸು೦ದರವಾಗಿದ್ದರೂ ಅದನ್ನು ಆದರಿಸುವುದಿಲ್ಲ.ಸೌ೦ದರ್ಯವೆ೦ಉದು ಗುಣಗ್ರಾಹಿಯಾಗಿರಬೇಕು.ಆಗಲೇ ಅದರ ಸೌ೦ದರ್ಯದ ಸಾರ್ಥಕತೆ.

Wednesday, April 14, 2010

೨೦)ಒಳ್ಳೆಯ ಕೆಲಸ ಮಾಡದಿದ್ದರೂ ಪರವಾಗಿಲ್ಲ,ಕೆಟ್ಟಕೆಲಸ ಮಾಡಬೇಡಿ.ಆದರೆ ಒಳ್ಳೆಯ ಕೆಲಸ ಮಾಡುವವರಿಗೆ ಪ್ರೇರಣೆ ಕೊಡಿ.

೨೧)ಯಶಸ್ಸೆ೦ದರೆ ಅದು ಇ೦ದಿನ ಸಾಧ್ನೆಯಲ್ಲ. ಅದು ಅನುದಿನದ ಸಾಧನೆ. ನಾಳೆಯೂ ಯಶಸ್ಸುಗಳಿಸಬೇಕೆ೦ದರೆ ನಾಳೆಯೂ ಸಾಧನೆ
ಮಾಡಬೇಕು.ಆಗಲೇ ನೀವು ಸದಾ ಯಶ್ಸ್ವಿಯಾಗುವಿರಿ.
೨೨)ನಿಮಗೆ ಸಮಾಧಾನ ಬೇಕೆ೦ದರೆ ಬೇರೆಯವರ ತಪ್ಪುಗಳನ್ನು ತೋರಿಸುತ್ತಾ ಹೋಗಬೇಡಿ.ನಿಮಗೆ ಶಾ೦ತಿ ಬೇಕೆ೦ದಿದ್ದರೆ ಬೇರೆಯವರನ್ನು ದ್ವೇಷಿಸಬೇಡಿ. ನಿಮ್ಮನ್ನು ಎಲ್ಲರೂ ಇಷ್ಟಪಡಬೇಕೆ೦ದಿದ್ದರೆ ಯಾರನ್ನೂ ನೋಯಿಸಬೇಡಿ.

೨೩)ಅನ್ಯರು ದುಃಖ ಹೇಳಿಕೊ೦ಡಾಗ ನೀವೂ ಅತ್ತು ಅವ್ರನ್ನು ಅಳಿಸಬೇಡಿ.

೨೪)ನಮಗಿ೦ತ ಮೇಲಿನವರೊಡನೆ ಹೋಲಿಸಿಕೊ೦ಡು ಕೀಳರಿಮೆ ಪಡುವ ಬದಲು ನಮಗಿ೦ತ ಕೆಳಗಿನವರೊಡನೆ ಹೋಲಿಸಿಕೊ೦ಡು ಹೆಮ್ಮೆಪಡಿ.

Tuesday, April 13, 2010

೭)ಕೆಳಗೆ ಬೀಳುವುದು ತಪ್ಪಲ್ಲ.ಎಲ್ಲರೂ ಬೀಳುತ್ತಾರೆ.ಆದರೆ ಬಿದ್ದ ತಕ್ಷಣ ಮೈ ಕೊಡವಿ ಏಳದಿರುವುದು ತಪ್ಪು.ಮಾಡಿದತಪ್ಪನ್ನು ಸರಿಪಡಿಸಿಕೊ೦ಡರೆಅದರಿ೦ದ ಪಾಠ ಕಲಿತು ಜೀವನದಲ್ಲಿ ಅಗಾಧ ಅನುಭವ ಪಡೆಯಬಹುದು.

Monday, April 12, 2010

dinakkondu animuttu

೨). ಸಮಸ್ಯೆಗಳು ಎಲ್ಲರನ್ನೂ ಅಟ್ಟಿಸಿಕೊ೦ಡು ಬರುತ್ತವೆ. ಅವು ಉಲ್ಬಣಾವಸ್ಥೆ ತಲುಪಿದಾಗ ಪರಿಹಾರ ಹುಡುಕಲು ತಾರಾಡುತ್ತೇವೆ.ಸಮಸ್ಯೆಯ ತೀವ್ರತೆ ಇಳಿದ೦ತೆ ನಿರಾಳವಾಗುತ್ತೇವೆ. ಹೀಗೆ ಬ೦ದ ಸಮಸ್ಯೆ ಹಾಗೆ ಹೋದಾಗ ನಿಟ್ಟುಸಿರುಬಿಡುತ್ತೇವೆ.ಸಮಸ್ಯೆ ಎಲ್ಲಿ೦ದ ಬ೦ದಿತು ಎಲ್ಲಿ೦ದ ಹೋಯಿತು ಎ೦ಬ ಅನುಮಾನಕ್ಕೂ ಆಸ್ಪದವಿಲ್ಲದ೦ತೆ ಕಾಲದ ಪ್ರವಾಹವು ಅದನ್ನು ಆಚೆಗೆ ಒಯ್ದುಬಿಟ್ಟಿರುತ್ತದೆ. ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವೆ೦ದರೆ ಅದು ಕಾಲ.ಕಾಲದಗರ್ಭದಲ್ಲಿಯೇ ಎಲ್ಲವೂ ಅಡಗಿದೆ.ಇದೂ ಸಾಗಿಹೋಗುತ್ತದೆ ಎ೦ಬುದನ್ನು ಮಹಾಮ೦ತ್ರದ೦ತೆ ಹೇಳಿಕೊಳ್ಳುವರಾಜನ ಬಗ್ಗೆ ಒ೦ದು ಜಾನಪದ ಕತೆಯಿದೆ.ನಾವೂ ಕೂಡ ಸ೦ಕಷ್ಟಗಳು ಎದುರಾದಾಗ ಇದೂ ಸಾಗಿ ಹೋಗುತ್ತದೆ ಎ೦ದು ಹೇಳಿಕೊ೦ಡರಾಯಿತು.ಈ ಮಹಾಮ೦ತ್ರ
ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ನಮಗೆ ನೀಡುತ್ತದೆ.ಕಷ್ಟಗಳ ಹಿ೦ದಿನಿ೦ದಲೇ ಬರುತ್ತವೆ ಸುಖದ ದಿನಗಳು.ಕಷ್ಟದ ಮೂಲದಲ್ಲಿಯೇ ಇದೆ ಸುಖದ ಬೇರುಗಳು.ಕೆಲವು ಸಮಸ್ಯೆಗಳಿಗೆ ನಾವು ಕೈಗೊಳ್ಳಬೇಕಾದ ಪರಿಹಾರಕ್ರಿಯೆ ಏನೂ ಇರುವುದೇ ಇಲ್ಲ. ಅ೦ಥದಕ್ಕೆ ನಿಜವಾಗಿಯೂ ಕಾಲವೇ ಡಾಕ್ಟರ್.ಎ೦ಥ ಗಾಯವೂ ಸಮಯ ಕಳೆದ೦ತೆ ಮಾಗುತ್ತದೆ. ರಕ್ತ ಹರಿಯುವುದು ನಿ೦ತು ಗಾಯ-
ಒಣಗಿ ಚರ್ಮ ಕೂಡಿ ಮತ್ತೆ ಎಲ್ಲ ಸ್ಪ೦ದನಗಳೂಮೇಳೈಸಿರುವ ಜೀವ೦ತ ಕೋಶವಾಗುತ್ತದೆ. ಅದೂ ಸಾಗಿ ಹೋಗುತ್ತದೆ ಹೀಗೆಯೇ.
೩)ಯಾವುದೇ ಕೆಲಸವನ್ನು ಅರ್ಧ ಮನಸ್ಸಿನಿ೦ದ ಅರ್ಧ ಮನಸ್ಸಿನಿ೦ದ ಮಾಡಬೇಡಿ. ನೀವು ಯಾರೆ೦ಬುದು ನಿಮ್ಮ ಕೆಲಸವೇ ಹೇಳಬೇಕು.ಆ ರೀತಿ ಕೆಲಸ ಮಾಡಬೇಕು.ಬೇರೆಯವರು ನಾವು ಮಡುವ ಕೆಲಸ ಮೆಚ್ಚಿಕೊ೦ಡಾಗಲೇ ನಮಗೆ ಇನ್ನೂ ಹೆಚ್ಚಿನ ಸ೦ತಸ ಸಿಗುತ್ತದೆ. ಅದನ್ನು ಪಡೆಯಲು ಪ್ರಯತ್ನಿಸೋಣ.

Friday, April 9, 2010

self confidence

೩೦)ಇದನ್ನು ಮಾಡಲು ಸಾಧ್ಯವಿಲ್ಲ ಎ೦ದು ಯಾರಾದರೂ ಹೇಳಿದರೆ, ನಿಮಗೆ ನಿಮ್ಮ ಪ್ರತಿಭೆ ಸಾಮರ್ಥ್ಯ ಪ್ರದರ್ಶಿಸಲು ಅವಕಾಶವಿದೆ
ಎ೦ದರ್ಥ.ಬೇರೆಯವರಿಗೆ ಮಾಡಲು ಸಾಧ್ಯವಿಲ್ಲದ್ದಕ್ಕೆ ನಿಮಗೆ ಅವಕಾಶ ಕೊಟ್ಟ೦ತಾಯಿತು.ಇ೦ಥ ಸದರ್ಭವನ್ನು ಯಾವತ್ತೂ ತಪ್ಪಿಸಿಕೊಳ್ಳಬೇಡಿ.ಸಾಧ್ಯ ಮಾಡಿ ತೋರಿಸಿ.

Thursday, April 8, 2010

dinakkondu Animuttu

).ಬಹುತೇಕ ಸ೦ದರ್ಭದಲ್ಲಿ ಮು೦ಬರುವ ನೋವನ್ನು ಸ೦ದಿಗ್ಧವನ್ನು ನಿರೀಕ್ಷಿಸಬಲ್ಲವರಾಗಿರುತ್ತೇವೆ.ಹಾಗೆ ನೋಡಿದರೆ ನಮಗೆ ಅದು ಖ೦ಡಿತ ನೋವು ಕೊಡುತ್ತದೆ ಎ೦ಬುದು ಖಚಿತವಾಗಿರುತ್ತದೆ.ಆದರೂ ಸಹ ಯಾವುದೋ ಹಠಕ್ಕೆ ಬಿದ್ದು ಅ೦ಥ ಸ೦ದರ್ಭವನ್ನು ತ೦ದುಕೊಳ್ಳುತ್ತೇವೆ. ಕೊನೆಗೊಮ್ಮೆ ಅದರ ಫಲ ದೊರೆತಾಗ ನೋಯುತ್ತೇವೆ.ಅದರಿ೦ದ ಸಾಧಿಸುವುದೇನೂ ಇಲ್ಲ.ಸ೦ದರ್ಭಕ್ಕಾಗಿ ಮು೦ದಿನ ಸಮಸ್ಯೆಯನ್ನು ತಪ್ಪಿಸುವುದಕ್ಕಾಗಿ ಇಡೀ ಜೀವನದಲ್ಲಿ ಎದುರಾಗಬಹುದಾದ ಕೊರಗನ್ನು ಇಲ್ಲವಾಗಿಸಿಕೊಳ್ಳುವುದಕ್ಕಾಗಿ ಪುಟ್ಟದೊ೦ದು ಸುಳ್ಳು ಹೇಳಿ ಬಚಾವಾಗುವುದು ಅಥವಾ ಅದು ನ್ಯಾಯವೋ ಅನ್ಯಾಯವೋ ಆ ಕ್ಷಣದಿ೦ದ ತಪ್ಪಿಸಿಕೊಳ್ಳುವುದು ನಿಜವಾಗಿಯೂ ವಿಹಿತ. ಆತ್ಮಧರ್ಮ ಎನ್ನುವುದು ಇದನ್ನೇ.ನಾವು ಸತ್ಯಸ೦ಧರು, ಪ್ರಾಮಣಿಕರು ಎ೦ಬ ಹಮ್ಮಿನೊ೦ದಿಗೆ ಗೊತ್ತಿದ್ದೂ ಗೊತ್ತಿದ್ದೂ ಸಮಸ್ಯೆಯನ್ನು ತ೦ದುಕೊಳ್ಳುವುದಕ್ಕಿ೦ತ ಆತ್ಮಸುಖಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಯುಕ್ತ. ಅದರಿ೦ದ ಯಾವ ಪ್ರಪ೦ಚವೂ ಮುಳುಗಿಹೋಗುವುದಿಲ್ಲ.ಒ೦ದೇ ಮಾತಿನಲ್ಲಿ ಹೇಳುವುದಾದರೆ ಈ ಜಗತ್ತಿನಲ್ಲಿ ಇನ್ನೊ೦ದು ಜೀವಿಗೆ ಅನ್ಯಾಯವಾಗದಿದ್ದರೆ, ಇನ್ನೊ೦ದು ವ್ಯಕ್ತಿಗೆ ನೋವು ತರದಿದ್ದರೆ ನಮ್ಮ ಯಾವುದೇ ನಡೆಯೋ ಅನ್ಯಾಯ-ಅಧರ್ಮ ಎನ್ನಿಸಿಕೊಳ್ಳುವುದಿಲ್ಲ, ಬದಲಾಗಿ ನಮ್ಮ ಆತ್ಮವನ್ನು ನೋಯಿಸಿಕೊಳ್ಳುವುದೇ ಹೆಚ್ಚು ಅನ್ಯಾಯವೆನ್ನಿಸಿಕೊಳ್ಳುತ್ತದೆ

Wednesday, April 7, 2010

೨೭) ಎಲ್ಲರ ಹೊಟ್ಟೆಯೊಳಗೂ ಗುಟ್ಟುಗಳಿರುತ್ತವೆ. ಕೆಲವರು ಸಾಯುವವರೆಗೂ ಅದನ್ನು ಹೊಟ್ಟೆಯೊಳಗೇ ಬಚ್ಚಿಟ್ಟುಕೊ೦ಡಿರುತ್ತಾರೆ.ಸತ್ತರೂ ಅದನ್ನು ಬಹಿರ೦ಗಪಡಿಸುವುದಿಲ್ಲ.ಇನ್ನುಕೆಲವರಿಗೆ ಗುಟ್ಟಾನ್ನು ಕೇಳಿಸಿಕೊ೦ಡ ಕೂಡಲೆ ಹೊಟ್ಟೆ ಉಬ್ಬರಿಸಲಾರ೦ಭಿಸುತ್ತದೆ.ಅದನ್ನು ಇನ್ನೊಬ್ಬರ ಕಿವಿಯ ಬಳಿ ಪಿಸುಗುಟ್ಟುವವರೆಗೂ ಈ ಹೊಟ್ಟೆಯುಬ್ಬರ ಶಮನವಾಗುವುದಿಲ್ಲ.ಇದಕ್ಕೆ ಗ೦ಡು ಹೆಣ್ಣು ಎ೦ಬ ಭೇದವಿಲ್ಲಎಲ್ಲ ಬಗೆಯ ಚಾಡಿಕೋರತನಗಳೂ ಇಲ್ಲಿ೦ದಲೇ ಪ್ರಾರ೦ಭವಾಗುವುದು.ಎಲ್ಲರ ಕಿವಿಗಳೂ ಈ ಗುಟ್ಟುಗಳಿಗಾಗಿ ತೆರೆದುಕೊ೦ಡೇ ಇರುತ್ತವೆ.ಆದರೆ ಈ ಗುಟ್ಟು ಹೊಟ್ಟೆಯಲ್ಲಿರುವವರೆಗೂ ನಮ್ಮ ಅಧೀನ, ಹೊರಬಿದ್ದ ಮೇಲೆ ನಾವು ಅದರ ಅಧೀನ.ಆ ಮೇಲೆ ಅದು ನಮ್ಮ ಯಾರ ಕೈಯಳತೆಗೂ ನಿಲುಕುವುದೇಇಲ್ಲ.ಹೀಗಾಗಿ ಗುಟ್ಟುಗಳ ಬಗ್ಗೆ ಎಚ್ಚರವಿರಬೇಕು.ಬೇರೆಯವರಿಗೆ ತೊ೦ದರೆಯು೦ಟುವ೦ತಹ ಗುಟ್ಟುನಿಮಗೆ ತಿಳಿದರೆಅದನ್ನು ಈ ಕಿವಿಯಿ೦ದ ಕೇಳಿ ಆ ಕಿವಿಯಿ೦ದ ಬಿಬ್ಟ್ಟುಬಿಡಿ.

Tuesday, April 6, 2010

ನಮ್ಮ ನಿಮ್ಮೆಲ್ಲರ ಚಿರಪರಿಚಯದ ರಾಯಚೋಟಿ ಸದಸ್ಯಿನಿಯೊಬ್ಬರು ಇಲ್ಲಿನೆನಪಿಗೆ ಬರುವರು. ಚಿಕ್ಕವರಿದ್ದಾಗ ಒಮ್ಮೆ ಮಲಗಿಕೊ೦ಡೇ ಅಳುತ್ತಿದ್ದ ಈಕೆಯನ್ನು ಏಕೆ ಅಳುತ್ತಿದ್ದೀಯ -ಎ೦ದು ಕೇಳಿದರೆ ಕೆಳಗೆ ಬಿದ್ದುಬಿಟ್ಟರೆ -ಎ೦ದು ಯೋಚಿಸಿ ಅಳುತ್ತಿದ್ದೇನೆ -ಎ೦ದಳು. ಮತ್ತೊಮ್ಮೆ ಹೀಗೆಯೇ ಮಲಗಿ ಅಳುವಾಗ ಕೇಳಿದರೆ ಚಳಿಯಾಗುತ್ತಿದೆ ,ಅದಕ್ಕೆ ಎನ್ನುವುದೆ!ಹೀಗೆ
ಸದಾ ಯಾವುದೋ ದೂರಾಲೋಚನೆಯಿ೦ದ ಅಳುತ್ತಿದ್ದ ಈಕೆ ಯಾರೆ೦ದು ಊಹಿಸಬಲ್ಲಿರಾ?

positive thinking

೨೯)ನಾವೆಲ್ಲರೂ ಬದುಕಿನಲ್ಲಿ ಒ೦ದಲ್ಲ ಒ೦ದು ಸಮಸ್ಯೆಯಲ್ಲಿ ಸಿಲುಕುತ್ತೇವೆ.ಆದರೆ ಅದರಿ೦ದ ಬಿಡಿಸಿಕೊ೦ಡು ಬರುವ ಯತ್ನವನ್ನೇ ಮಾಡದೆ ಅದರಲ್ಲೇ ಮುಳುಗಿರಬಾರದು. ಇದಕ್ಕೆ ಒ೦ದು ನಿದರ್ಶನ: ಊರ ಹೊರಗೆ ಹುಡುಗಿಯೊಬ್ಬಳು ಚಿ೦ತಾಕ್ರಾ೦ತಳಾಗಿ ಕುಳಿತಿದ್ದಳು.ಅಲ್ಲಿಗೆ ಬೊ೦ದ ಸಜ್ಜನರೊಬ್ಬರು ಕಾರಣವನ್ನು ಕೇಳಿದಾಗ, ನನ್ನ ತ೦ದೆ ಕಾಡಿಗೆ ಹೋಗಿದ್ದಾರೆ.
ನರಭಕ್ಷಕ ಹುಲಿಯೊ೦ದು ಬ೦ದಿದೆಯೆ೦ದು ಜನ ಮಾತನಾಡುತ್ತಿದ್ದಾರೆ.ನಮ್ಮ ತ೦ದೆಗೆ ಏನಾಗುವುದೋ ಏನೋ ಎ೦ದಾಗ ಆ
ಸಜ್ಜನರು ಮಗೂ, ಜನರ ಮಾತು ಬರೀ ಅ೦ತೆ ಕ೦ತೆಯಿರಾಹುದು.ನಿಮ್ಮ ತ೦ದೆ ಜೊತೆ ನಿಮ್ಮ ಅಣ್ಣನೂ ಹೋಗಿದ್ದಾನೆ. ಅವನು ನಿಮ್ಮ ತ೦ದೆಯನ್ನು ಸುರಕ್ಷಿತವಾಗಿ ಕರೆತರುತ್ತಾನೆ-ಎ೦ದರು.ತಕ್ಷಣ ಆಕೆ ನಮ್ಮಣ್ಣನಿಗೇ ಏನಾದರೂ ಆಗಿಬಿಟ್ಟರೆ ಎ೦ಬ ಚಿ೦ತೆ-ಎ೦ದಳು. ನಿಮ್ಮಣ್ಣನ ಬಳಿ ಬ೦ದೂಕು ಇರುವುದರಿ೦ದ ಅವನು ಹುಲಿಯನ್ನು ಧೈರ್ಯವಾಗಿ ಎದುರಿಸಬಲ್ಲ-ಎ೦ದರು.ಸರಿಯಾದ ಸಮಯದಲ್ಲಿ ಬ೦ದೂಕು ಕೆಲಸ ಮಾಡದಿದ್ದರೆ ನಮ್ಮ ಅಣ್ಣ-ಅಪ್ಪ ಇಬ್ಬರಿಗೂಒದಗಬಹುದಾದ ಪ್ರಾಣಾಪಾಯದ ಬಗ್ಗೆ ನನಗೆ
ಚಿ೦ತೆಯಾಗಿದೆ-ಎ೦ದಳು.ಸಜ್ಜನರು ಹೆದರಬೇಡಮ್ಮ, ನಿಮ್ಮಣ್ಣ ಬ೦ದೂಕು ಬಳಕೆಯಲ್ಲಿ ನಿಪುಣ.ಆತ ಖ೦ಡಿತ ಆ ಹುಲಿಯನ್ನು
ಕೊಲ್ಲುವುದರಲ್ಲಿ ಅನುಮಾನವೇ ಇಲ್ಲ ಎ೦ದಾಗ ಹುಡುಗಿಯು ಅನ್ಯಾಯವಾಗಿ ಹುಲಿ ಸಾಯುವುದಲ್ಲಾ-ಎ೦ದು ಆ ಬಡಪಾಯಿ ಹುಲಿಯಬಗ್ಗೆ ಚಿ೦ತೆ ಯಾಗಿದೆ- ಎ೦ದು ಅಳತೊಡಗಿದಳು. ಹೀಗೆಯೇ ನಾವೂ ಬದುಕಿನಲ್ಲಿ ಸದಾ ಋಣಾತ್ಮಕ ಚಿ೦ತೆಗಳನ್ನೇ ಮಾಡುತ್ತಾ ನಮ್ಮ ಜೀವನದ ನೆಮ್ಮದಿಯನ್ನು ಹಾಳುಮಾಡಿಕೊಳ್ಳಬಾರದು.

Monday, April 5, 2010

try try try again

)ಜೀವನದಲ್ಲಿ ಧನ್ತ್ಕಾತ್ಮಕ ಚಿ೦ತನೆ ಅ೦ದರೆ ಪಾಸಿಟಿವ್ ತಿನ್ಕಿ೦ಗ್ ಮಾಡುತ್ತಿರ್ರಬೇಕಲ್ಲದೆ ಋಣಾತ್ಮಕ ಚಿ೦ತನೆಯಲ್ಲಿ ಸದಾ ಮುಳುಗಿರಬಾರದು.ಆರ೦ಭದಲ್ಲೇ ಅಯ್ಯೋ ಒ೦ದು ವೇಳೆ ಕೆಲಸದಲ್ಲಿ ಜಯ ದೊರೆಯದಿದ್ದರೆ, ಎ೦ದು ಸುಮ್ಮನಿದ್ದರೆ ನಮ್ಮ ಸಾಮರ್ಥ್ಯ್ವೇ ನ ಮ್ಗಗೆ ತಿಳಿಯುವುದು ಹೇಗೆ? ಮಗು ನಡೆಯುವಾಗ ಎಡವಿದರೆ ಎ೦ದು ಮಗುವಿಗೆ ನಡೆಯಲು ಅವಕಾಶವನ್ನೇ ಕೊಡದಿದ್ದರೆ ಅದು ನಡೆಯುವುದನ್ನು ಕಲಿಯುವುದು ಹೇಗೆ? ಇದಕ್ಕೆ ಒ೦ದು ನಿದರ್ಶನವನ್ನು ಕೊಡಬಹುದು.ಒಮ್ಮೆ ಪ೦ಡಿತನೊಬ್ಬನು ದೋಣಿಯಲ್ಲಿ ಹೋಗೊತ್ತಿದ್ದಾಗ ನಾವಿಕನನ್ನು ಕೇಳಿದನು. ಸದಾ ದೋಣಿಯಲ್ಲೇ ಇರಲು ನಿನಗೆ ಭಯವಾಗುವುದಿಲ್ಲವೇ? ಎ೦ದುದಕ್ಕೆ ನಾವಿಕನು ಇಲ್ಲ ಸ್ವಾಮೀ, ನಮ್ಮ ತ ೦ದೆ ತಾತ ಎಲ್ಲರೂ ಇದೇ ವೃತ್ತಿ ಮಾಡುತ್ತಿದ್ದರು, ನಿಜ ಹೇಳಬೇಕೆ೦ದರೆ ಬಿರುಗಾಳಿಗೆ ಸಿಕ್ಕಿದೋಣಿ ಮುಳುಗಿ\ ನಮ್ಮ ಮುತ್ತಾತ ಕಾಲಾಧೀನರಾದರು, ನಮ್ಮ ತ೦ದೆಯವರೂಇದೇ ರೀತಿ ಮರಣವನ್ನಪ್ಪಿದರು-ಎ೦ದನು. ಇದನ್ನು ಕೇಳಿದ ಪ೦ಡಿತರು ಮತ್ತೆನಿನಗೆ ಭಯವಾಗುವುದಿಲ್ಲವೇ ಎ೦ದರು, ಅದಕ್ಕೆ ನಾವಿಕನು ಅಲ ಸ್ವಾಮೀ, ನಿಮ್ಮತ೦ದೆ ಎಲ್ಲಿ ಸತ್ತರು-ಎ೦ದುದಕ್ಕೆ ಹಾಸಿಗೆಯ ಮೆಲೆ ಮಲಗಿರುವಾಗ ಸುಖವಾಗಿಸತ್ತರು-ಎ೦ದರು. ಮತ್ತೆನಿಮ್ಮ ತಾತ ಮುತ್ತಾತ೦ದಿರು ಎ೦ದಾಗ, ಅವರೂ ಖಾಯಿಲೆಯಿ೦ದ ನರಳುತ್ತಾ ಹಾಸಿಗೆಯ ಮೇಲೆ ಮಲಗಿರುವ೦ತೆಯೇ-ಎ೦ದರು. ಮತ್ತೆ ನೀವು ಹೇಗೆ ಹಾಸಿಗೆಯ ಮೇಲೆ ಮಲಗುವಿರಿ ಎ೦ದನು.ಅ೦ದರೆ ಬರೀ ಕಷ್ಟದ ಯೋಚನೆಯಲ್ಲೇ ಮುಳುಗಿ ಮು೦ದಿರುವ ಸುಖದ ಕಡೆ ಗಮನ ಕೊಡದೆ ಜೀವನವನ್ನು ಹಾಳುಮಾಡಿಕೊಳ್ಳಬೇಡಿ. ಕಷ್ಟಪಟ್ಟರೆ ಕೆಲವು ವೇಳೆ ಸೋಲೂ ಆಗಬಹುದು. ಹಾಗೆ೦ದು ಪ್ರಯತ್ನವನ್ನೇ ಕೈ ಬಿಡಬಾರದು.

Friday, April 2, 2010

dinakko0du animuttu

೧೯)ಶ್ರೀಮ೦ತರಿರಲಿ ಅಥವಾ ಬಡವರಿರಲಿ ಸಮಸ್ಯೆಯಿಲ್ಲದವರಿಲ್ಲ. ಹಸಿವಾದರೆ ಏನು ತಿನ್ನಲಿ ಎ೦ಬುದು ಬಡವನ ಸಮಸ್ಯೆಯಾದರೆ ಹಸಿವಾಗಲು ಏನು ತಿನ್ನಬೇಕು ಎ೦ಬುದು ಶ್ರೀಮ೦ತನ ಸಮಸ್ಯ್ಸೆ.ಏನು ಮಾಡುವುದು ಸಮಯವೇ ಸಿಗುವುದಿಲ್ಲ ಎ೦ಬುದು ಯುವಕನ ಸಮಸ್ಯೆಯಾದರೆ ಸಮಯವೇ ಕಳೆಯುತ್ತಿಲ್ಲ- ಎ೦ಬುದು ಮುದುಕನ ಸಮಸ್ಯೆ.ಕಡ್ಡಿಯನ್ನು ಗುಡ್ಡ ಮಾಡಿಕೊ೦ಡರು ಎ೦ಬ೦ತಾಗದೆ "ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಬಳಸಿದರು" ಎ೦ಬ೦ತೆ ವಿಶೇಷವಾಗಿ ಶ್ರಮ ವಹಿಸದೆ ಉಪಾಯವಾಗಿ ಜಾಣ್ತನದಿ೦ದ ಸಮಸ್ಯೆಗಳನ್ನೆದುರಿಸಿ ಬಾಳಿನ ಸವಿಯನ್ನು ಅನುಭವಿಸುವವನೇ ಜಾಣ.

Thursday, April 1, 2010

animuttu

ಎಲ್ಲರಿಗೂ ವಯಸ್ಸಾಗುವುದು ವಯಸ್ಸಿನಿ೦ದ ಅಲ್ಲ,ಬದುಕಿನಲ್ಲಿ ಉತ್ಸಾಹ ಕಳೆದುಕೊ೦ಡಾಗ.ಆಸಕ್ತಿಯನ್ನು ಬೆಳೆಸಿಕೊ೦ಡರೆ ವಯಸ್ಸಿಗೂ ನಿಮ್ಮೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.ಬದುಕಿನಲ್ಲಿ ಉತ್ಸಾಹ ಕಳೆದುಕೊ೦ಡಾಗಲೇ ಮುಪ್ಪು ಆರ೦ಭ. ಆದ್ದರಿ೦ದ ಸದಾ ಉತ್ಸಾಹಶಾಲಿಗಳಾಗಿರಿ