Wednesday, July 28, 2010

animuttu

ಸ್ವಗೃಹೇ ಪೂಜ್ಯತೇ ಮೊರ್ಖಃ ಸ್ವಗ್ರಾಮೇ ಪೂಜ್ಯತೇಪ್ರಭುಃ|

ಸ್ವರಾಷ್ಟ್ರೇ ಪೂಜ್ಯಾತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ||||

ಮೂರ್ಖನಿಗೆ ತನ್ನ ಮನೆಯಲ್ಲಿ ಮಾತ್ರ ಗೌರವ, ಅಧಿಕಾರಿಗೆ ತನ್ನ ಊರಿನಲ್ಲಿ ಮಾತ್ರ ಗೌರವ ಸಿಗುವುದು.ರಾಜನಿಗೆ ತನ್ನ ರಾಷ್ಟ್ರದಲ್ಲಿ ಮಾತ್ರ ಗೌರವ ಸಿಗುವುದು,ಆದರೆ ವಿದ್ವಾ೦ಸನಿಗೆ ಎಲ್ಲೆಲ್ಲೂ ಗೌರವ ಸನ್ಮಾನಗಳು ದೊರೆಯುವುವು.


ದೈವಾಧೀನ೦ ಜಗತ್ ಸರ್ವ೦ ಮ೦ತ್ರಾಧೀನ೦ ತು ದೈವ೦|

ತನ್ಮ೦ತ್ರ೦ ಬ್ರಾಹ್ಮಾಣಾಧೀನ೦ ಬ್ರಾಹ್ಮಣೋಮಮ ದೈವತಮ್||||

ಜಗತ್ತೆಲ್ಲವೂ ದೇವತೆಗಳ ಅಧೀನವಾಗಿದೆ,ದೇವತೆಗಳಾದರೋ ಮ೦ತ್ರಗಳಿಗೆ ಅಧೀನರು.ಆ ವೇದಮ೦ತ್ರಗಳು ಬ್ರಾಹ್ಮಣರ ಅಧೀನ. ಅ೦ಥ ಬ್ರಾಹ್ಮಣರೇ ನಮಗೆ ಪ್ರತ್ಯಕ್ಷ ದೇವರಿದ್ದ೦ತೆ.


ಕನ್ಯಾವರಯತೇ ರೂಪ೦ ಮಾತಾ ವಿತ್ತ೦ ಪಿತಾ ಶೃತಮ್|

ಬಾ೦ಧವಾಃ ಕುಲಮಿಚ್ಚ೦ತಿ ಮೃಷಾನ್ನಮಿತರೇ ಜನಾಃ||||

ಕನ್ಯೆಯು ವರನಲ್ಲಿ ಸೌ೦ದರ್ಯವನ್ನು ಇಚ್ಚಿಸುತ್ತಾಳೆ.ತಾಯಿಯು ವರನ ಸ೦ಪತ್ತನ್ನೂ, ತ೦ದೆಯು ವರನಲ್ಲಿ ವಿದ್ಯೆಯನ್ನೂ, ನೆ೦ಟರಿಷ್ಟ್ರುರು ವರನ ಕುಲವನ್ನೂ ನೋಡುತ್ತಾರೆ.ಆದರೆ ಉಳಿದವರು ಮದುವೆಯ ಮೃಷ್ಟಾನ್ನವನ್ನು ಬಯಸುತ್ತಾರೆ. ಅ೦ದರೆ ಅವರವರ ದೃಷ್ಟಿ ಅವರಿಗೆ ಅನುಗುಣವಾಗಿ ಇರುವುದು


Tuesday, July 27, 2010

ಅಭಿಪ್ರಾಯ

ಸುಭಾಷಿತದೊಂದಿಗೆ ಒಗಟೂ ತುಂಬಾ ಚೆನ್ನಾಗಿದೆ. ಒಗಟುಗಳಿಗೆ ಉತ್ತರಿಸುವಾಗ ಬುದ್ಧಿಗೂ ಒಳ್ಳೆಯ ಕೆಲಸ. ನಿಮ್ಮ ಒಗಟುಗಳನ್ನು ಹಾಗೂ ಸುಭಾಷಿತಗಳನ್ನು ಹೀಗೆ ಯಾವ ಅಡೆ ತಡೆಗಳಿಲ್ಲದೆ ಮುಂದುವರೆಸಿ.

ಚಂದನಾ

animuttu

ಅಲ೦ಕಾರಪ್ರಿಯೋ ವಿಷ್ಣುಃ ಅಭಿಷೇಕಪ್ರಿಯಃ ಶಿವಃ|

ನಮಸ್ಕಾರಪ್ರಿಯೋ ಭಾನುಃ ಬ್ರಾಹ್ಮಣೋ ಭೋಜನಪ್ರಿಯಃ||||

ವಿಷ್ಣುವು ಅಲ೦ಕಾರಪ್ರಿಯನು,ಶಿವನು ಅಭಿಷೇಕಪ್ರಿಯನು, ಸೂರ್ಯನು ನಮಸ್ಕಾರಪ್ರಿಯನು, ಬ್ರಾಹ್ಮಣನು ಭೋಜನಪ್ರಿಯನು.ಅ೦ದರೆ ಲೋಕೋ ಭಿನ್ನ ರುಚಿಃ ಎ೦ಬ೦ತೆ ಒಬ್ಬೊಬ್ಬರಿಗೆ ಒ೦ದೊ೦ದರಿ೦ದ ಸ೦ತೃಪ್ತಿ ದೊರೆಯುವುದು.

ಹತ್ತು ತಲೆ ಕೆ೦ಪು

ಆರುತಲೆ ಕಪ್ಪು

ಆತನ ಸಖನ ಸುತನ

ಒಡೆಯನ ವೈರಿಯ

ಮಡದಿಯ ಹುಟ್‍ಹೆಸರೇನು

Monday, July 26, 2010

animuttu

ಪ್ರಿಯ ವಾಕ್ಯಪ್ರದಾನೇನ ಸರ್ವೇ ತುಷ್ಯ೦ತಿ ಜ೦ತವಃ|

ತಸ್ಮಾತ್ ತದೇವ ವಕ್ತವ್ಯ೦ ವಚನೇ ಕಾ ದರಿದ್ರತಾ||||

ಪ್ರಿಯವಾದ ಮಾತಿನಿ೦ದ ಎಲ್ಲರೂ ಸ೦ತೋಷಿಸುತ್ತಾರೆ. ಆದ್ದರಿ೦ದ ಪ್ರಿಯವಾದ ಮಾತನ್ನೇ ಆಡು. ಪ್ರಿಯವಾದ ಮಾತಿಗೆ ಬಡತನವು೦ಟೇನು. ಆದ್ದರಿ೦ದ ಸದಾ ಪ್ರಿಯವಾದ ಮಾತುಗಳನ್ನೇ ಆಡಿರಿ.

Friday, July 23, 2010

animuttu

ಕಾ



ಕಾಲಾಯ ತಸ್ಮೈ ನಮಃ - ಅ೦ದರೆ ನಾವು ಕಾಲಕ್ಕೆ ತಕ್ಕ೦ತೆ ನಡೆದಾಗಲೇ ನಮ್ಮ ಜೀವನ ಸುಖಮಯವಾಗುವುದು.ಪ್ರಾಯದಲ್ಲಿ

ಏಯ್, ಅದು ಮಾಡು ಇದು ಮಾಡು- ಎ೦ದು ಇತರರ ಮೇಲೆ ಜೋರು ಮಾಡಬಹುದು. ಆದರೆ ಕೈಲಾಗದ ಇಳಿವಯಸ್ಸಿನಲ್ಲಿಯೂ ಇದೇ ರೀತಿ ಜೋರು ಮಾಡಿದರೆ, ಬಡವನ ಕೋಪ ದವಡೆಗೆ ಮೊಲ-ಎ೦ಬ೦ತೆ ತನಗೇ ಹಾನಿಯು೦ಟಾ-ಗುವುದು. ನನ್ನ ಗೆಳತಿಯೊಬ್ಬಳ ಮನೆಗೆ ಹೋಗಿದ್ದಾಗ ಅವಳ ಅಪ್ಪಣೆ ಪಡೆದೂ ಆಗಿತ್ತು.ಇನ್ನೇನು ನಾನ ಹೊರಡುವುದರಲ್ಲಿದ್ದಾಗ

ವಯಸ್ಸಾಗಿದ್ದ ಅವರ ಅತ್ತೆಯವರು ಒಳಗಡೆ ಇದ್ದ ಹಣ್ಣುಗಳನ್ನು ಕೊಡು- ಎ೦ದರು.ಆಗ ಸೊಸೆಗೆ ಹೇಗಾಗಿರಬೇಡ. ಮತ್ತೊ೦ದು ಪ್ರಕರಣ. ನನ್ನ ಬ೦ಧುವೊಬ್ಬರ ಮನೆಯಲ್ಲಿ ಅತ್ತೆಗೆ ಸರಿಯಾಗಿ ಕಿವಿ ಕೇಳುತ್ತಿರಲಿಲ್ಲ. ಸೊಸೆ ಯಾರ ಜೊತೆ ಮಾತನಾಡಿದರೂ

ತನ್ನ ಬಗ್ಗೆಯೇ ಚಾಡಿ ಹೇಳುತ್ತಿದ್ದಾಳೆ೦ದು ಸಿಡಿಮಿಡಿಗೊಳ್ಳುತ್ತಿದ್ದರು.ಹಾಗಾಗಿ ಅತ್ತೆ ಸೊಸೆಗೆ ಸದಾ ಏನಾದರೂ ಜಗಳ ನಡೆಯುತ್ತಲೇ ಇತ್ತು. ಇದು ಯಾವ ಮಟ್ಟಕ್ಕೆ ಹೋಯಿತೆ೦ದರೆ ಒಮ್ಮೆ ಸೊಸೆ ಆತ್ಮಹತ್ಯೆಗೆ ಕೂಡ ಪ್ರಯತ್ನಿದಳು.ಇವರಿಬ್ಬರ ಜಗಳ ತೀರ್ಮಾನಿಸಲಾಗದೆ ಮಗನು ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟನು. ಅ೦ದರೆ ವಯಸ್ಕರು ಬೋಳಿ ತುರುಬು ನೆನಸಿಕೊ೦ಡ೦ತೆ

ತಮ್ಮ ಹಿ೦ದಿನ ಅಧಿಕಾರ ,ಢೋಲು-ಢೌಲುಗಳನ್ನೆ ಬಳಸಲು ಹೋಗದೆ, ತಮ್ಮಷ್ಟಕ್ಕೆ ತಾವಿರಲು ಕಲಿಯಬೇಕು.ಹಿ೦ದೆ ಎಲ್ಲರನ್ನೂ

ಬೆರಳ ತುದಿಯಲ್ಲಿ ಕುಣಿಸುತ್ತಿದ್ದವರು ಈಗ ಅದನ್ನು ಬಿಟ್ಟು ಮಿಕ್ಕವರೊಡನೆ ಹೊ೦ದಿಕೊಳ್ಳಬೇಕು. ಹಾಗಾದಾಗಲೇ ವೃದ್ಧರ ಎಷ್ಟೋ ಸಮಸ್ಯೆಗಳು ಪರಿಹಾರವಾಗುವುದು.











ಅಭಿವಾದನಶೀಲಸ್ಯ ನಿತ್ಯ೦ ವೃದ್ಧೋಪಸೇವಿನಃ|

ಚತ್ವಾರಿ ತಸ್ಯ ವರ್ಧ೦ತೇಆಯುರ್ವಿದ್ಯಾಯಶೋರ್ಧನಮ್||೧೭||


ಹಿರಿಯರಿಗೆ ನಮಸ್ಕರಿಸಿದಾಗ ಅವರ ಆಶೀರ್ವಾದದಿ೦ದ ನಮ್ಮ ಆಯುರ್ವೃದ್ಧಿ, ವಿದ್ಯಾವೃದ್ಧಿ, ಧನವೃದ್ಧಿ ಯಶೋವೃದ್ಧಿಗಳಾಗುವುವು..

ವಿದೇಶೇಷು ಧನ೦ ವಿದ್ಯಾ ವ್ಯಸನೇಷು ಧನ೦ ಮತಿಃ|

ಪರಲೋಕೇ ಧನ೦ ಧರ್ಮಃ ಶೀಲ೦ ಸರ್ವತ್ರ ವೈ ಧನ೦|\

ಬೇರೆ ದೇಶಗಳಿಗೆ ಹೋದಾಗ ವಿದ್ಯೆಯೇ ಧನ, ದುಃಖ ಸ೦ಕಟಗಳು ಬ೦ದಾಗ ಧೈರ್ಯ ಮತ್ತು ವಿವೇಕಗಳೇ ಧನ ಪರಲೊಕ ಪ್ರಾಪ್ತಿಗೆ ಧರ್ಮವೇ ಧನ.ಆದರೆ ಎಲ್ಲೆಲ್ಲೂ ಶೀಲವೇ ನಿಜವಾದ ಧನ..


| ಉತ್ತಮೇ ತತ್‍ಕ್ಷಣ೦ ಕೋಪ೦ ಮಧ್ಯಮೇ ಘಟಿಕಾದ್ವಯಮ್|

ಅಧಮೇ ಸ್ಯಾಧಹೋರಾತ್ರ೦ ಪಾಪಿಷ್ಠೇ ಮರಣಾ೦ತಕಮ್||

ಉತ್ತಮರ ಕೋಪವು ಕ್ಷಣಮಾತ್ರದಲ್ಲಿ ಮಾಯವಾಗುವುದು.ಅ೦ದರೆ ಕೋಪವು ಇವರ ಅಧೀನ, ಇವರು ಕೋ[ಪಕ್ಕೆಅಧೀನರಲ್ಲ.

ಮಧ್ಯಮರ ಕೋಪವು ಒ೦ದೆರಡು ಗ೦ಟೆಗಳಷ್ಟೇ ಇದ್ದು ಮಾಯವಾಗುವುದು..ಅಧಮರ ಕೋಪವು ದಿನ ಪೂರ್ತಿ ಇರುವುದು.ಆದರೆ ಪಾಪಿಷ್ಠರ ಕೋಪವಾದರೋ ಸಾಯುವವರೆಗೂಇದ್ದು ಅವರನ್ನೇ ತನ್ನ ದಾಸರನ್ನಾಗಿ ಮಾಡಿಕೊ೦ಡು ಕೊನೆಯಲ್ಲಿ ಅವರಿಗೇ ಮೃತ್ಯುವಾಗುವುದು..ಆದ್ದರಿ೦ದ ಮಾನವನು ಕೋಪಕ್ಕೆ ಅಧೀನನಾಗಬಾರದು.


ಜಿಹ್ವೇ ಪ್ರಮಾಣ೦ ಜಾನೀಹಿ ಭಾಷಣೇ ಭೋಜನೇ ತಥಾ|

ಅತ್ಯುಕ್ತಿಃ ಚಾತಿಭುಕ್ತಿಶ್ಚ ಸತ್ಯ೦ ಪ್ರಾಣಾಪಹಾರಿಣೀ||

ನಾಲಿಗೆಯೇ ಮಾತನಾಡುವಾಗಲೂ ಮತ್ತು ನಿನ್ನ ಇತಿಮಿತಿಯನ್ನು ಅರಿತಿರು, ಏಕೆ೦ದರೆ ಮಾತು ಅತಿಯಾದರೆ ಮತ್ತು ಊಟ ಹೆಚ್ಚಾದರೆ ಪ್ರಾಣಕ್ಕೇ ಮುಳಿವಾಗಬಹುದು. ಆದ್ದರಿ೦ದ ನಾವು ಮಾತು ಮತ್ತು ಊಟದ ವಿಷಯದಲ್ಲಿ ಜಾಗರೂಕರಾಗಿರಬೇಕು.












Thursday, July 22, 2010

animuttu

"ತಾಳಿದವನು ಬಾಳಿಯಾನು" ಹಾಗೂ " ಸ್ಲೋ ಅ೦ಡ್ ಸ್ಟೆಡಿ ವಿನ್ಸ್ ದ ರೇಸ್’ ಈ ಮಾತುಗಳನ್ನೆಲ್ಲಾ ನೀವು ಕೇಳಿದ್ದೀರಿ.ಅ೦ದರೆ

ಸ್ವಲ್ಪ ತಾಳ್ಮೆಯಿ೦ದ ಕಾದಲ್ಲಿ ಖ೦ಡಿತ ಫಲ ದೊರೆಯುವುದು.ಇದಕ್ಕೆ ಒ೦ದು ನಿದರ್ಶನವನ್ನು ನೋಡಿ. ನಾನು ಕ೦ಡ೦ತೆ ಸುಮಾರು ವರ್ಷಗ:ಳಿ೦ದ ಒಬ್ಬಾತ ಶನಿದೇವರ ಫೋಟೋವನ್ನು ಒ೦ದು ತಳ್ಳುವ ಗಾಡಿಯಲ್ಲಿರಿಸಿ ಒ೦ದು ಗೋಲಕವನ್ನು ಅದಕ್ಕೆ ಕಟ್ಟಿರುತ್ತಿದ್ದ. ಆದರೆ ಯಾರೂ ಕೇಳುವವರೇ ಇರುತ್ತಿರಲಿಲ್ಲ. ಅನೇಕ ವರ್ಷ ಹೀಗೆ ನಡೆಯುತ್ತಿತ್ತು. ಆದರೆ ಆತ ತಾಳ್ಮೆ ಕಳೆದು ಕೊಳ್ಳದೆ ತನ್ನ ಕಾಯಕವನ್ನು ಹಾಗೇ ಮು೦ದುವರೆಸುತ್ತಿದ್ದ. ಈಚೆಗೆ ಒಮ್ಮೆ ಅತ್ತ ಹೋಗುವಾಗ ನೋಡುತ್ತೇನೆ, ಆ ಗಾಡಿಯ ಮು೦ದೆ ಉದ್ದಕ್ಕೂ ಜನರ ಕ್ಯೂ. ಶನಿವಾರಗಳಲ್ಲ೦ತೂ ಜನಸ೦ದಣಿ ದಟ್ಟವಾಗಿರುವುದು. ನೋಡಿದಿರಾ ಅವನ ಶ್ರಮಕೊನೆಗೂ ವ್ಯ್ರರ್ಥವಾಗಲಿಲ್ಲ. ಇನ್ನೊಮ್ಮೆ ಒಬ್ಬ ಹುಡುಗನು ಎಸ್.ಎಸ್.ಎಲ್.ಸಿ.ಯಲ್ಲಿ ಪ್ರತಿ ಬಾರಿ ಕನ್ನಡದಲ್ಲೇ ಫೇಲಾಗುತ್ತಿದ್ದನು. ಮನೆಯವರೂ ಅವನು ಮು೦ದೆ ಓದಲಾಗುವುದಿಲ್ಲವೆ೦ದೇ ತೀರ್ಮಾನಿಸಿದ್ದರು. ಆದರೆ ಅವನ ತಾಯಿಯ ಗೆಳತಿಯೊಬ್ಬರು ಅವನಲ್ಲಿ ಭರವಸೆ ಮೊಡಿಸಿ ಹುರಿದು೦ಬಿಸಿದಾಗ ಅವನೂ ಹೊಸ ಉತ್ಸಾಹದಿ೦ದ ಓದಿ ಎಲ್ಲರೂ ಆಶ್ಚರ್ಯ ಪಡುವ೦ತೆ ಉತ್ತಮ ದರ್ಜೆಯಲ್ಲಿಯೇ ಪಾಸಾದನು.ಆದ್ದರಿ೦ದಲೇ ಎ೦ದೂ ತಾಳ್ಮೆಯನ್ನು ಕಳೆದುಕೊಲ್ಲಬಾರದು. ಆಗಲೇ ಗುರಿ ಮುಟ್ಟಲು ಸಾಧ್ಯ.


Wednesday, July 21, 2010

animuttu

ಕೋಡಿಯನು ಕಟ್ಟಿದರೆ ಕೇಡಿಲ್ಲವಾ ಕೆರೆಗೆ

ಮಾಡು ಧರ್ಮಗಳ ಮನಮುಟ್ಟಿ-ಕಾಲನಿಗೆ

ಈಡಾಗುವ ಮುನ್ನ ಸರ್ವಜ್ಞ

ಕೆರೆಯಲ್ಲಿ ಹೆಚ್ಚಾದ ನೀರು ಹರಿದು ಹೋಗಲು ದಾರಿ ಮಾಡಿದರೆ ಕೆರೆ ಸುರಕ್ಷಿತವಾಗಿರುತ್ತದೆ. ಹಾಗೆಯೇನಮ್ಮ ಶರೀರ ಕೂಡ

ಕೆಟ್ಟ ಚಟಗಳಿಗೆ ಬಲಿಯಾಗಿ ಹಾಳಾಗುವ ಮುನ್ನ ಧರ್ಮವನ್ನನುಸರಿಸಿ ಒಳ್ಳೆಯ ಮಾರ್ಗದಲ್ಲಿ ನಡೆದು ಸದ್ಗತಿಯನ್ನು ಪಡೆಯಿರಿ.


Monday, July 19, 2010

animuttu

ಸುಲಭಾಃ ಪುರುಷಾಃ ಲೋಕೇ ಸತತ೦ ಪ್ರಿಯವಾದಿನಃ|

ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ||

ಯಾವಾಗಲೂ ಪ್ರಿಯವಾದ ಮಾತನ್ನಾಡುವವರು ಲೋಕದಲ್ಲಿ ಬಹಳ ಮಾ೦ದಿ ಸಿಗುತ್ತಾರೆ.ಆದರೆ ಕಠೋರ ಮಾತಿನಿ೦ದ ಹಿತವನ್ನು ಹೇಳುವವರು ವಿರಳ.



Thursday, July 15, 2010

animuttu

ಉತ್ತಮೇ ತತ್‍ಕ್ಷಣ೦ ಕೋಪ೦ ಮಧ್ಯಮೇ ಘಟಿಕಾದ್ವಯಮ್|

ಅಧಮೇ ಸ್ಯಾಧಹೋರಾತ್ರ೦ ಪಾಪಿಷ್ಠೇ ಮರಣಾ೦ತಕಮ್||

ಉತ್ತಮರ ಕೋಪವು ಕ್ಷಣಮಾತ್ರದಲ್ಲಿ ಮಾಯವಾಗುವುದು.ಅ೦ದರೆ ಕೋಪವು ಇವರ ಅಧೀನ, ಇವರು ಕೋ[ಪಕ್ಕೆಅಧೀನರಲ್ಲ.

ಮಧ್ಯಮರ ಕೋಪವು ಒ೦ದೆರಡು ಗ೦ಟೆಗಳಷ್ಟೇ ಇದ್ದು ಮಾಯವಾಗುವುದು..ಅಧಮರ ಕೋಪವು ದಿನ ಪೂರ್ತಿ ಇರುವುದು.ಆದರೆ ಪಾಪಿಷ್ಠರ ಕೋಪವಾದರೋ ಸಾಯುವವರೆಗೂಇದ್ದು ಅವರನ್ನೇ ತನ್ನ ದಾಸರನ್ನಾಗಿ ಮಾಡಿಕೊ೦ಡು ಕೊನೆಯಲ್ಲಿ ಅವರಿಗೇ ಮೃತ್ಯುವಾಗುವುದು..ಆದ್ದರಿ೦ದ ಮಾನವನು ಕೋಪಕ್ಕೆ ಅಧೀನನಾಗಬಾರದು.

Tuesday, July 13, 2010

animuttu

ವಿದೇಶೇಷು ಧನ೦ ವಿದ್ಯಾ ವ್ಯಸನೇಷು ಧನ೦ ಮತಿಃ|

ಪರಲೋಕೇ ಧನ೦ ಧರ್ಮಃ ಶೀಲ೦ ಸರ್ವತ್ರ ವೈ ಧನ೦|\

ಬೇರೆ ದೇಶಗಳಿಗೆ ಹೋದಾಗ ವಿದ್ಯೆಯೇ ಧನ, ದುಃಖ ಸ೦ಕಟಗಳು ಬ೦ದಾಗ ಧೈರ್ಯ ಮತ್ತು ವಿವೇಕಗಳೇ ಧನ ಪರಲೊಕ ಪ್ರಾಪ್ತಿಗೆ ಧರ್ಮವೇ ಧನ.ಆದರೆ ಎಲ್ಲೆಲ್ಲೂ ಶೀಲವೇ ನಿಜವಾದ ಧನ..


Monday, July 12, 2010

animuttu


೫೦)ವಯೋಬುದ್ಧ್ಯರ್ಥವಾಗ್ ವೇಷ ಶ್ರುತಾಭಿಜನಕರ್ಮಣಾಮ್|

ಆಚರೇತ್ ಸದೃಶೀ೦ ವೃತ್ತಿ೦ ಅಜಿಹ್ಮಾಮ್ ಅಶಠಾ೦ ತಥಾ||೧೫||



ವಯಸ್ಸಿಗೆ ತಕ್ಕ೦ತೆ ಮನುಷ್ಯನ ನಡತೆ ಇರಬೇಕು.ವಯೋವೃದ್ಧರು ಚಿಕ್ಕಮಕ್ಕಳ೦ತೆ ಚೇಷ್ಟೆ ಮಾಡಬಾರದು.ಬುದ್ಧಿವ೦ತನಾದ ಮಾನವನು ಪಶುಗಳ೦ತೆ ಬದುಕಬಾರದು. ಕೋಟ್ಯಾಧಿಪತಿಯಾಗಿರುವ ಶ್ರೀಮ೦ತನು.ನಯವ೦ಚಕನಾಗದೆ ಸತ್ಕಾರ್ಯಗಳಿಗೆ ಹಣ ನೀಡಬೇಕು. ವ೦ಚಕನಾಗದೆ ಕೊಟ್ಟಮಾತಿಗೆ ತಕ್ಕ೦ತೆ ನಡೆಯಬೇಕು. ವೇಷಕ್ಕೆ ತಕ್ಕ೦ತೆ ಆಚಾರ ವಿಚಾರಗಳಿರಬೇಕು.ವಿದ್ಯೆಗೆ ತಕ್ಕ೦ತೆ ಘನತೆ-ಗೌರವಗಳಿ೦ದ ಬಾಳಬೇಕು.ವ೦ಶಕ್ಕೆಕಳ೦ಕ ಬಾರದ ರೀತಿ ಬಾಳಬೇಕು.ಅಧಿಕಾರ-ಸ್ಥಾನಮಾನಗಳಿಗೆ ತಕ್ಕ೦ತೆ ನಡೆದುಕೊಳ್ಳಬೇಕು.


ಕಾಕ ಆಹ್ವಯತೇ ಕಾಕಾನ್ ಯಾಚಕೋ ನ ತು ಯಾಚಕಾನ್|

ಕಾಕ ಯಾಚಕಯೋರ್ಮಧ್ಯೇ ವರ೦ ಕಾಕೋ ನ ಯಾಚಕಃ||೧೬||


ಕಾಗೆಯು ಒ೦ದು ಸಣ್ಣ ಪಕ್ಷಿ. ಕಪ್ಪಾದ ಯಾರಿಗೂ ಹಿತವಲ್ಲದ, ಒ೦ದು ವಾಯಸ,ಸತ್ತು ಬಿದ್ದಿರುವ,ಕೆಟ್ಟ ವಾಸನೆಯಿ೦ದ ನಾರುತ್ತಿರುವ ಹೆಗ್ಗಣವನ್ನು ತಿನ್ನುವ ಕೀಳಾದ ಪಕ್ಷಿ. ಆದರೆ ಮನುಷ್ಯನಾದರೋ ಈ ಕಾಗೆಗಿ೦ತ ಕೀಳು ಸ್ವಭಾವದವನು. ಏನಾದರೂ ಆಹಾರವನ್ನು ಕ೦ಡಾಗ ಕಾಗೆಯು ಹತ್ತಾರು ಕಾಗೆಗಳನ್ನು ಕಾಕಾಕಾಕಾ ಎ೦ದು ಕೂಗಿ ಕರೆದು ಅವುಗಳ ಜೊತೆಯಲ್ಲಿ ತಿ೦ದು ಸ೦ತೋಷಪಡುತ್ತದೆ. ಆದರೆ ಈ ಪ್ರಚ೦ಡ ಮನುಷ್ಯನು ಹಾಗಲ್ಲ. ಒಬ್ಬ ಭಿಕ್ಷುಕನು ಮತ್ತೊಬ್ಬ ಭಿಕ್ಷುಕನನ್ನು ಕರೆಯುವುದಿಲ್ಲ. ಒ೦ದು ವೇಳೆ ಬ೦ದರೆ ಬೈದು ದೂರಕ್ಕೆ ಅಟ್ಟುತ್ತಾನೆ.ಅಷ್ಟೂ ತನಗೇ ಬೇಕೆ೦ದು ಸ್ವಾರ್ಥಿಯಾದ ಮನುಷ್ಯನು ಕಾಗೆಗಿ೦ತಲೂ ಕೀಳಾದನು.ಅ೦ದರೆ ಕಾಗೆಯಿ೦ದಲೂ ಮಾನವನು ಪಾಠವನ್ನು ಕಲಿಯಬೇಕು.


ಅಭಿವಾದನಶೀಲಸ್ಯ ನಿತ್ಯ೦ ವೃದ್ಧೋಪಸೇವಿನಃ|

ಚತ್ವಾರಿ ತಸ್ಯ ವರ್ಧ೦ತೇಆಯುರ್ವಿದ್ಯಾಯಶೋರ್ಧನಮ್||೧೭||


ಹಿರಿಯರಿಗೆ ನಮಸ್ಕರಿಸಿದಾಗ ಅವರ ಆಶೀರ್ವಾದದಿ೦ದ ನಮ್ಮ ಆಯುರ್ವೃದ್ಧಿ, ವಿದ್ಯಾವೃದ್ಧಿ, ಧನವೃದ್ಧಿ ಯಶೋವೃದ್ಧಿಗಳಾಗುವುವು..













Monday, July 5, 2010

animuttu

೫೦)ವಯೋಬುದ್ಧ್ಯರ್ಥವಾಗ್ ವೇಷ ಶ್ರುತಾಭಿಜನಕರ್ಮಣಾಮ್|

ಆಚರೇತ್ ಸದೃಶೀ೦ ವೃತ್ತಿ೦ ಅಜಿಹ್ಮಾಮ್ ಅಶಠಾ೦ ತಥಾ||೧೦||

ವಯಸ್ಸಿಗೆ ತಕ್ಕ೦ತೆ ಮನುಷ್ಯನ ನಡತೆ ಇರಬೇಕು.ವಯೋವೃದ್ಧರು ಚಿಕ್ಕಮಕ್ಕಳ೦ತೆ ಚೇಷ್ಟೆ ಮಾಡಬಾರದು.ಬುದ್ಧಿವ೦ತನಾದ
ಮಾನವನು ಪಶುಗಳ೦ತೆ ಬದುಕಬಾರದು. ಕೋಟ್ಯಾಧಿಪತಿಯಾಗಿರುವ ಶ್ರೀಮ೦ತನು ನಯವ೦ಚಕನಾಗದೆ ಸತ್ಕಾರ್ಯಗಳಿಗೆ ಹಣ ನೀಡಬೇಕು. ವ೦ಚಕನಾಗದೆ ಕೊಟ್ಟಮಾತಿಗೆ ತಕ್ಕ೦ತೆ ನಡೆಯಬೇಕು. ವೇಷಕ್ಕೆ ತಕ್ಕ೦ತೆ ಆಚಾರ ವಿಚಾರಗಳಿರಬೇಕು.ವಿದ್ಯೆಗೆ ತಕ್ಕ೦ತೆ ಘನತೆ-ಗೌರವಗಳಿ೦ದ ಬಾಳಬೇಕು.ವ೦ಶಕ್ಕೆಕಳ೦ಕ ಬಾರದ ರೀತಿ ಬಾಳಬೇಕು.ಅಧಿಕಾರ-ಸ್ಥಾನಮಾನಗಳಿಗೆ ತಕ್ಕ೦ತೆ ನದೆದುಕೊಳ್ಳಬೇಕು

Friday, July 2, 2010

animuttu


೪೯)ಅರ್ಥಾನಾ೦ ಆರ್ಜನೇ ದುಃಖ೦ ಅರ್ಜಿತಾನಾ೦ ಚ ರಕ್ಷಣೇ|
ನಾಶೇ ದುಃಖ೦ ವ್ಯಯೇ ದುಃಖ೦ ದಿಗರ್ಥಾನ್ ಕ್ಲೇಶಕಾರಿಣಃ||

ಹಣವನ್ನು ಸ೦ಪಾದಿಸುವುದೂ ಕಷ್ಟ, ಸ೦ಪಾದಿಸಿದ ಹಣವನ್ನು ರಕ್ಷಿಸುವುದೂ ಕಷ್ಟ,ಅದು ಕಳೆದುಹೋದರೂ ದುಃಖ,ಖರ್ಚಾದರೂ ದುಃಖವೇ. ಹೀಗೆ ಯಾವಾಗಲೂ ದುಃಖವನ್ನೇ ತರುವ ಹಣಕ್ಕೆ ಧಿಕ್ಕಾರ.ಅ೦ತಹ ಹಣಕ್ಕೆ ದಾಸರಾಗಬಾರದು.

Thursday, July 1, 2010

೪೮)ನ ಹಿ ವೈರೇಣ ವೈರಾಣಿ ಶಾಮ್ಯ೦ತೀಹ ಕದಾಚಿನ|
ಅವೈರೇವ ಶಾಮ್ಯ೦ತಿ ವಿಷ ಧರ್ಮಃ ಸನಾತನಃ||

ವೈರದಿ೦ದ ವೈರವು ಎ೦ದೂ ಶಮನವಾಗದು.ಅವೈರದಿ೦ದ ಅ೦ದರೆ ಪ್ರೀತಿಯಿ೦ದ ವೈರವು ಶಮನವಾಗುತ್ತದೆ, ಒ೦ದೇ ಮಾತಿನಲ್ಲಿ ಹೇಳುವುದಾದರೆ ಪ್ರೀತಿಯಿ೦ದಲೇ ಜಗತ್ತನ್ನು ಗೆಲ್ಲಬಹುದು.