Thursday, January 12, 2012

ವಿದುರನೀತಿ

ವೈದ್ಯನಲಿ ಮಾ೦ಸದಲಿ ದ್ವಿಜನಲಿ
ನಿದ್ರೆಯಲಿ ತರುವಿನಲಿ ವನದಲಿ
ವಿದ್ಯೆಯಲಿ ಪದವಿಯಲಿ ಸ೦ಖ್ಯಾಸ೦ಖ್ಯವೆಸರುಗಳ
ತದ್ವಿಷಯಕೆ ಮಹಾ ಸಬುದವನು
ಹೊದ್ದಿಸುವುದತಿಕಷ್ಟವವರಿಗೆ
ssಸದ್ಯಫಲವದು ತಪ್ಪದವನೀಪಾಲ ಕೇಳೆ೦ದ||೪||

ವೈದ್ಯ,ಮಾ೦ಸ, ದ್ವಿಜ, ನಿದ್ರೆ, ತರು, ವನ,ವಿದ್ಯೆ, ಪದವಿ --ಇಷ್ಟು ಶಬ್ದಗಳ ಹಿ೦ದೆ ಮಹಾ ಎ೦ಬ ಪದವನ್ನು ವಿವೇಚನೆಯಿಲ್ಲದೆ ಬಳಸಬಾರದು. ಬಳಸಿದರೆ ಅಪಾರ್ಥವನ್ನು ಕೊಟ್ಟು ಅನರ್ಥಕಾರಿಯಾಗುತ್ತದೆ. ಹೇಗೆ೦ದರೆ -- ಮಹಾವೈದ್ಯ--ಯಮ, ಮಹಾಮಾ೦ಸ --ನರಮಾ೦ಸ, ಮಹಾ ಬ್ರಾಹ್ಮಣ --ಮೂರ್ಖ, ಮಹಾನಿದ್ರೆ-- ಮರಣ, ಮಹಾತರು--ನೇಣಿಗೇರಿಸುವ ಮರ, ಮಹಾವನ--ಶ್ಮಶಾನ,ಮಹಾವಿದ್ಯೆ--ಕಳ್
ಳತನ, ಮಹಾಪದವಿ--ಯಮಲೋಕದ ದಾರಿ --- ಎ೦ಬ ಅರ್ಥಗಳನ್ನು ಕೊಡುವುದು.

ಕೋಪವೆ೦ಬುದನರ್ಥ ಸಾಧನ
ಕೋಪವೇ ಸ೦ಸಾರಬ೦ಧನ
ಕೋಪದಿ೦ದಿಹಪರದ ಸುಕ್ರುತವು ಲಯವನೈದುವುದು
ಕೋಪವನು ವರ್ಜಿಸಲುಬೇಹುದು
ಕೋಪವುಳ್ಳವನಾವನಾಗಲಿ
ಕಾಪುರುಷನಿಹಪರಕೆ ಚಿತ್ತೈಸೆ೦ದನಾ ವಿದುರ||೫||
ಕೋಪವೆ೦ಬುದು ಅನರ್ಥಕ್ಕೆ ಕಾರಣ,ಸ೦ಸಾರ ಬ೦ಧನ,ಈಹಪರದ ಪುಣ್ಯನಾಶಕ್ಕೆ ಕಾರಣ.ಆದ್ದರಿ೦ದ ಕೋಪವನ್ನು ಬಿಡಬೇಕು.ಕೋಪವುಳ್ಳವನು ಯಾವನೇ ಆದರೂ ನಿ೦ದಾರ್ಹನು.

1 comment:

  1. ಮೊದಲನೆ ಪದ್ಯ ಬಹಳ ಸೊಗಸಾಗಿದೆ. "ಮಹಾ" ಪದವನ್ನು ರಾಜಕಾರಣಿಗಳ ಹೊಗಳುಭಟ್ಟರು ಎಲ್ಲೆಂದರಲ್ಲಿ ಬಳಸುತ್ತಾರೆ. ಇನ್ನು ಮುಂದೆ, ಮಹಾ ಪದದ ಬಳಕೆ ನೋಡಿದಾಗ ಅದರ ಸರಿಯಾದ ಅರ್ಥ ಹೊಳೆಯುತ್ತದೆ.

    ಧನ್ಯವಾದಗಳು,

    ರವಿ

    ReplyDelete

Note: Only a member of this blog may post a comment.