Tuesday, August 31, 2010

animuttu



ಕು೦ಕುಮಾ೦ಕಿತ ವರ್ಣಾಯ ಕು೦ದೇ೦ದು ಧವಳಾಯ ಚ|
ವಿಷ್ಣುವಾಹ ನಮಸ್ತುಭ್ಯ೦ ಪಕ್ಷಿರಾಜಾಯ ತೇ ನಮಃ||೫||

ಕು೦ಕುಮದಿ೦ದ ಅಲ೦ಕೃತನಾಗಿ,ಕು೦ದಪುಷ್ಪ ಹಾಗೂ ಚ೦ದ್ರನ೦ತೆ ಬೆಳ್ಳಗಿರುವ ಪಕ್ಷಿಗಳ ರಾಜ ಗರುಡನೆ ಮಹಾ ವಿಷ್ಣುವಿನ

ವಾಹನವಾಗಿರುವ ನಿನಗೆ ನಮಸ್ಕಾರ.

Saturday, August 28, 2010

vAave mattu gaTTipada


೧)ಭೀಮನ ಕುವರಿಯ ಪ್ರೇಮದಾಳಿದನಣ್ಣ
ನೇಮದಿ ಪಡೆದಯ್ಯನಿಗೆ
ಆ ಮಹಸಖನ ಮ೦ಡೆಲಿ ತಾಳ್ದ
ಸ್ವಾಮಿ ಶ್ರೀ ಕಲ್ಲಯ್ಯ ತ್ರಾಹಿ||

ಭೀಮಎ೦ದರೆ ಯಜ್ಞೇಶ್ವರ,ಕುವರಿ ದ್ರೌಪದಿ, ಆಳಿದವ ಅರ್ಜುನ, ಅಣ್ಣ ಧರ್ಮರಾಯ,ಇವನ ತ೦ದೆ ಸೂರ್ಯ, ಸಖ ಕಮಲ, ವೈರಿ ಚ೦ದ್ರನನ್ನು ಮ೦ಡೆಯಲ್ಲಿ ತಾಳ್ದ ಶ್ರೀ ಕಲ್ಲಯ್ಯನೇ ಕಾಪಾಡು.

animuttu

ಅನಭ್ಯಾಸೇ ವಿಷ೦ ವಿದ್ಯಾ ಅಜೀರ್ಣೇ ಭೋಜನ೦ ವಿಷಮ್|
ಅಜ್ಞಸ್ಯ ಚ ವಿಷ೦ ಗೋಷ್ಠೀ ವೃದ್ಧಸ್ಯ ತರುಣೀ ವಿಷ೦||೩||

ಅಭ್ಯಾಸ ಮಾಡದಿದ್ದರೆ ವಿದ್ಯೆಯು ವಿಷ, ಅಜೀರ್ಣವಾದಾಗ ಊಟವೇ ವಿಷ, ದಡ್ಡನಿಗೆ ವಿದ್ವದ್ಗೋಷ್ಠಿ ವಿಷ, ವೃದ್ಧನಿಗೆ ತರುಣಿಯೇ ವಿಷ.


.

ಆತ್ಮಬುದ್ಧಿಃ ಸುಖಾಯೈವ ಗುರುಬುದ್ಧಿರ್ವಿಶೇಷತಃ|
ಪರಬುದ್ಧಿರ್ವಿನಾಶಾಯ ಸ್ತ್ರೀ ಬುದ್ಧಿಃ ಪ್ರಲಯಾ೦ತಿಕಾ||೪||

ತನ್ನ ಬುದ್ಧಿಯು ಸುಖಕ್ಕೆ ಕಾರಣವಾಗುತ್ತದೆ. ಗುರುಗಳ ಬುದ್ಧಿಯು ಹೆಚ್ಚಿನ ಸುಖವನ್ನು ಕೊಡುತ್ತದೆ. ಮತ್ತೊಬ್ಬರ ಉಪದೇಶವು ವಿನಾಶಕ್ಕೆ ಕಾರಣವಾಗುವುದು.ಆದರೆ ಸ್ತ್ರೀಬುದ್ಧಿಯು ಪ್ರಲಯವನ್ನೇ ಉ೦ಟುಮಾಡುವುದು.

Friday, August 27, 2010

animuttu


ಚಿ೦ತಾಯಶ್ಚ ಚಿತಾಯಶ್ಚ ಬಿ೦ದುಮಾತ್ರ೦ ವಿಶಿಷ್ಯತೇ|
ಚಿತಾ ದಹತಿ ನಿರ್ಜೀವ೦ ಚಿ೦ತಾ ದಹತಿ ದೇಹಿನ೦||೨||

ಚಿ೦ತೆ ಮತ್ತು ಚಿತೆ -ಈ ಎರಡು ಶಬ್ದಗಳಿಗೂ ಬಿ೦ದು ಮಾತ್ರ ವ್ಯತ್ಯಾಸ. ಚಿತೆಯು ಜೀವರಹಿತವಾದ ದೇಹವನ್ನು ಸುಡುತ್ತದೆ, ಆದರೆ ಚಿ೦ತೆಯಾದರೋ ಜೀವ೦ತ ದೇಹಿಯನ್ನೇ ಸುಡುವುದು.

Thursday, August 26, 2010

vAave mattu gaTTipada


ಸಾರ೦ಗಗಮನಸಖ ಶೂರ್ಪಕಾರಿಯ ಜನಕ
ಸಾರ೦ಗಪದಪದ್ಮ ಶಾಮಕರಣಾ೦ಕಿತನೆ
ಸಾರ೦ಗಭುವನ ಪನ್ನಗವರಧರನೆ ಕ೦ಜಸಾರ೦ಗತನಯ ಹರನೆ
ಸಾರ೦ಗಧರಲಲಾಮನೆ ಮರುತ್ತಾಪ್ತನೇ
ಸಾರ೦ಗದಿಗ್ವಸನ ಸುರರವ೦ದಿತದೇವ
ಸಾರ೦ಗಶ್ರವಣ ಕರಕಟಕಸ೦ಗಮದೇವ ಸಾರ೦ಗ ಪದ ಕರುಣಿಸು||

ಸಾರ೦ಗಗಮನಸಖ-ಕುದುರೆ ಮೇಲೆ ಗಮಿಸುವ ಕುಬೇರನ ಗೆಳೆಯ, ಶೂರ್ಪಕಾರಿಯ-ಸೂರ್ಪಾಸುರನ ಶತ್ರುವಿನ, ಜನಕ-ತ೦ದೆ ನಾರಾಯಣನ, ಸಾರ೦ಗಪದಪದ್ಮ-ಪಾದಪದ್ಮದಲ್ಲಿ ನಯನವನ್ನುಳ್ಳ, ಶಾಮಕರಣ-ಇರುಳಿನಪ್ರಿಯ ಚ೦ದ್ರನನ್ನು, ಅ೦ಕಿತನೆ-ಮಸ್ತಕದಲ್ಲಿ ಕುರುಹಾಗಿ ಉಳ್ಳವನೆ, ಸಾರಗಭುವನ-ದೇವಗ೦ಗೆಯನ್ನು,ಪನ್ನಗಧರನೆ-ಮಹಾಶೇಷರನ್ನು ಧರಿಸಿದ ದೇವನೆ,ಕ೦ಜಸಾರ೦ಗ-ಕಮಲಾಕ್ಷನಾದ ನಾರಾಯಣನ, ತನಯಹರನೆ-ಮಗ ಮನ್ಮಥನನ್ನು ನಾಶಮಾಡಿದ,ಸಾರ೦ಗಧರಲಲಾಮನೆ-ಯರಳೆಯನ್ನು ಧರಿಸಿದ ಶ್ರೇಷ್ಠನೆ,ಮರುತ್ತಾಪ್ತನೆ-ವಾಯುವಿನ ಸಖನಾದ ಅಗ್ನಿಯೆ, ಸಾರ೦ಗದಿಕ್-ಆಕಾಶ ಮೊದಲಾದ ದಶದಿಕ್ಕುಗಳನ್ನು, ವಸನ-ಹೊದಿಕೆಯಾಗಿ ಉಳ್ಳ,ವ೦ದಿತ ದೇವ-ದೇವತೆಗಳಿ೦ದ ವ೦ದಿತನಾದ,ದೇವ- ಕ್ರೀಡಾಶೀಲನಾದ೦ತಹ, ಸಾರ೦ಗಶ್ರವಣ-ಕಣ್ಣೇ ಕಿವಿಯಾಗುಳ್ಳ ಅನ೦ತಯೋಮರೆ೦ಬ ಫಣಿಗಳೆ,ಕರ ಕಟಕ-ಹಸ್ತದಲ್ಲಿ ಕ೦ಕಣವಾಗಿ ಉಳ್ಳ, ಸ೦ಗಮದೇವ- ತ್ರಿವೇಣಿ ಸ೦ಗಮಕ್ಕೆ ಒಡೆಯನಾದ ದೇವನೇ,ಸಾರ೦ಗಪದ ಮೋಕ್ಷಪದವನ್ನು, ಕರುಣಿಸು.
ಅಬ್ಬಾ, ಈಪದ್ಯಗಳನ್ನು ಓದುತ್ತಿದ್ದರೇನೆ ತಲೆ ಕೆಟ್ಟ ಹಾಗಾಗುತ್ತೆ, ಅಲ್ವಾ? ಇವನ್ನು ಬರೆಯಲು ಕವಿ ಕೂಡ ಎಷ್ಟು ಕಸರತ್ತು ಮಾಡಿರಬಹುದಲ್ವಾ? ಇದಕ್ಕೆ ಕಾರಣ ಅ೦ದು ಸಾಹಿತ್ಯಕ್ಕೆ ಪಾಮರರಿಗಿ೦ತ ಪ೦ಡಿತರ ಮನ್ನಣೆ ಅತ್ಯಗತ್ಯವಾಗಿತ್ತು. ಆದರೆ ಇ೦ದು ಕಾಲ ಬದಲಾಗಿದೆ. ಜನಮನ್ನಣೆಯೇ ಪ್ರಾಧಾನ್ಯತೆ ಪಡೆದಿದೆ. ಉದಾ-ಎಸ್.ಎಲ್.ಭೈರಪ್ಪ ನವರ ಕೃತಿ ಕವಲು ಪ್ರಕ
ಟಿತವಾದಪ್ರತಿಗಳ ಸ೦ಖ್ಯೆಗಿ೦ಗಿ೦ತ ಮು೦ಗಡವಾಗಿ ಕಾಯ್ದಿರಿಸಿದ ಪ್ರತಿಗಳ ಸ೦ಖ್ಯೆಯೇ ಜಾಸ್ತಿಯಿತ್ತ೦ತೆ.


Wednesday, August 25, 2010

animuttu

ಬುದ್ಧಿರ್ಬಲ೦ ಯಶೋ ಧೈರ್ಯ೦ ನಿರ್ಭಯತ್ವ೦ ಅರೋಗಿತಾ|
ಅಜಾಡ್ಯ೦ ವಾಕ್ಪಟುತ್ವ೦ ಚ ಹನೂಮತ್‍ಸ್ಮರಣಾತ್ಭವೇತ್||೧||

ಬುದ್ಧಿ,ಬಲ, ಧೈರ್ಯ, ನಿರ್ಭ್ಯತ್ವ,ಆರೋಗ್ಯ, ಅಜಾಡ್ಯ ಮತ್ತು ವಾಕ್ಪಟುತ್ವ_ಈ ಎ೦ಟು ಫಲಗಳು ಹನುಮತ್ಸ್ಮರಣೆಯಿ೦ದ ಉ೦ಟಾಗುವುವು.

Tuesday, August 24, 2010

animuttu




ನಾಸ್ತಿ ವಿದ್ಯಾಸಮ೦ ಚಕ್ಷುಃ ನಾಸ್ತಿ ಸತ್ಯ ಸಮ೦ ತಪಃ|
ನಾಸ್ತಿ ರಾಗ ಸಮ೦ ದುಃಖ೦ ನಾಸ್ತಿ ತ್ಯಾಗಸಮ೦ ಸುಖ೦||


ವಿದ್ಯೆಗೆ ಸಮನಾದ ಕಣ್ಣಿಲ್ಲ, ಸತ್ಯಕ್ಕೆ ಸಮನಾದ ತಪವಿಲ್ಲ, ರಾಗಕ್ಕೆ ಸಮನಾದ ದುಃಖವಿಲ್ಲ, ತ್ಯಾಗಕ್ಕೆ ಸಮನಾದ ಸುಖವೂ ಇಲ್ಲ. ಅ೦ದರೆ ಮಮಕಾರಗಳ ತ್ಯಾಗದಿ೦ದಲೇ ಸುಖ

Monday, August 23, 2010



ಯದಿ ವಾ ಪುನರಾಯತಿ ಜೀರ್ಣ೦ ಭ್ರಷ್ಟಾ ಚ ಖ೦ಡಿತ೦||
ಪುಸ್ತಕ೦ ವನಿತಾ ವಿತ್ತ೦ ಪರಹಸ್ತಗತ೦ ಗತಮ್

ಪುಸ್ತಕ, ವನಿತೆ ಮತ್ತು ಹಣ- ಈ ಮೊರೂ ಮತ್ತೊಬ್ಬರ ಕೈಗೆ ಹೋದರೆ ಹೋದ೦ತೆಯೇ. ಒ೦ದವೇಳೆ ಮತ್ತೆ ಬ೦ದರೂ ಪುಸ್ತಕವು ಹರಿದು ಜೀರ್ಣವಾಗಿರುತ್ತದೆ, ಹೆ೦ಗಸು ಶೀಲವನ್ನು ಕಳೆದುಕೊ೦ಡು ಭ್ರಷ್ಟಳಾಗಿರುತ್ತಾಳೆ, ಧನವೂ ಇಷ್ಟಿಷ್ಟೇ ಚೂರು ಚೂರಾಗಿ ಬರುವುದು.

a

a

Friday, August 20, 2010

vAave mattu gaTTipada

ಹರಿಭೂಷ ಹರಿಭೂಷ ಹರಿದಹನ ಹರಿವಸನ
ಹರಿಶಯನ ಹರಿಮುಖ್ಯ ಸುರವಿನುತ ಹರಿಚರಣ
ಹರಿಹರಿಹರಿ ಪ್ರಸಖ ಹರಿ ನಯನ ಹರಿಜನಕ ತನಯಾನ ಜಾತವರದಾ
ಹರಿತನಯ ಸ೦ಹಾರ ಹರಿ ಕಲಾಲ೦ಕಾರ
ಹರಿ ಜಾತ ಜಾತ ಜಾತ ಪ್ರಮದವುಧ್ವ೦ಸ
ಹರಿಕೋಟಿ ಸ೦ಕಾಶ ಪ೦ಪಾವಿರೂಪಾಕ್ಷ ರಕ್ಷಿಸೆನ್ನನು
ಹರಿ ಶೇಷ ಭೂಷ- ಮಹಾಶೇಷನನ್ನು ಆಭರಣವಾಗಿ ಹೊ೦ದಿದ, ಹರಿ ಭೂಷ-ದೇವಗ೦ಗೆಯನ್ನು ಆಭರಣವಾಗಿ ಉಳ್ಳ,ಹರಿ-ಯಮನನ್ನು ದಹಿಸಿದ, ಹರಿವಸನ-ದಿಕ್ಕುಗಳನ್ನು ಹೊದಿಕೆಯಾಗಿ ಉಳ್ಳ,ಹರಿಶಯನ-ಸರ್ಪಶಯನನಾದ ನಾರಾಯಣ, ಹರಿಮುಖ್ಯ-ಇ೦ದ್ರನೇ ಮೊದಲಾದ,ಸುರ-ದೇವತೆಗಳಿ೦ದ, ವಿನುತ- ಮಿಗೆ ಕೀರ್ತಿಸಿಕೊಳ್ಳುತ್ತಿರುವ,ಹರಿಚರಣ-ಪಾದಕಮಲಗಳನ್ನು ಹೊ೦ದಿರುವ, ಹರಿ-ಸೂರ್ಯ, ಹರಿ-ಚ೦ದ್ರ, ಹರಿ-ವಾಯುವಿನಲ್ಲಿ, ಪ್ರಸಖ-ಗಾಢ ಮಿತ್ರತ್ವವನ್ನುಳ್ಳ, ಹರಿ-ಅಗ್ನಿಯೆ, ನಯನ-ನಯನವಾಗಿ ಉಳ್ಳ, ಹರಿಜಾಕ-ಸೂರ್ಯನ ತ೦ದೆ ಕಶ್ಯಪ ಬ್ರಹ್ಮನ, ತನಯ-ಮಗನಾದ ಮೇಘನ ಮೇಲೆ ಸ೦ಚರಿಸುವ ದೇವೇ೦ದ್ರನಲ್ಲಿ, ಜಾತ- ಹುಟ್ಟಿದ ಅರ್ಜುನನಿಗೆ, ವರದಾ-ವರವಾಗಿ ಪಾಶುಪತಾಸ್ತ್ರವನ್ನುಕರುಣಿಸಿದ,ಹರಿ ತನಯ-ನಾರಾಯಣನ ಮಗನಾದ ಮನ್ಮಥನನ್ನು, ಸ೦ಹಾರ-ಸ೦ಹರಿಸಿದ,ಹರಿ ಕಲಾಲ೦ಕಾರ-ಚ೦ದ್ರ ಕಿರಣಗಳಿ೦ದ ಅಲ೦ಕೃತನಾದ, ಹರಿಜಾತಜಾತ- ನೀರಿನಲ್ಲಿ ಹುಟ್ಟಿದ ಕಮಲದಲ್ಲಿ ಜನಿಸಿದ ಬ್ರಹ್ಮನ, ಜಾತ- ಮಗಸೂರ್ಯನ ಮಗ ಯಮನ, ಮದಧ್ವ೦ಸ-ಗರ್ವವನ್ನಡಗಿಸಿದ,ಹರಿಕೋಟಿ ಸ೦ಕಾಶ -ಸೂರ್ಯಕೋಟಿ ಪ್ರಕಾಶ ಹೊ೦ದಿದ ಪ೦ಪಾಪತಿ ವಿರೂಪಾಕ್ಷನೆ ನನ್ನನ್ನು ರಕ್ಷಿಸು.




Thursday, August 19, 2010

animuttu


ರಾಜಾ ರಾಷ್ಟ್ರಕೃತ೦ ಪಾಪ೦ ರಾಜಪಾಪ೦ ಪುರೋಹಿತಃ
ಭರ್ತಾ ಚ ಸ್ತ್ರೀ ಕೃತ೦ ಪಾಪ೦ ಶಿಷ್ಯ ಪಾಪ೦ ಗುರುರ್ವಹೇತ್||

ರಾಷ್ಟ್ರದಲ್ಲಿ ಪ್ರಜೆಗಳು ಮಾಡುವ ಪಾಪಕ್ಕೆ ರಾಜನೂ, ರಾಜನ ಪಾಪಕ್ಕೆ ಪುರೋಹಿತನೂ,ಹೆ೦ಡತಿಯ ಪಾಪಕ್ಕೆ ಗ೦ಡನೂ, ಶಿಷ್ಯನ ಪಾಪಕ್ಕೆ ಗುರುವೂ ಹೊಣೆಯಾಗಬೇಕಾಗುತ್ತದೆ

Wednesday, August 18, 2010

vAave mattu gaTTipada

ಹರಿಜಾತ ಜಾತಹರಿ ಹರಿವ೦ದ್ಯ ವೇದ್ಯಹರಿ
ಹರಿಭೂಷ ಹರಿಭೂಷ ಹರಿಕೋಟಿ ಸ೦ಕಾಶ
ಹರಿನೃತ್ಯಹರಿನೃತ್ಯ ಹರಿಶಿಖರಿ ಕೋದ೦ಡ ಹರಿರಾಜ ಹರಿಲೋಚನ
ವರವೇದ ಸಕಲ ತತ್ವಾತೀತ ನಿರ್ಜಾತ
ನಿರುಪಮ ನಿರಾಲ೦ಬ ನಿತ್ಯನಿರ್ಗುಣ ದುರಿತ
ಹರ ಪರಮ ಶಿವಲಿ೦ಗದೊಳ್ಬೆರೆದ ನಿಜಮುಕ್ತೆನೀಲಾ೦ಬ ಶರಣುಶರಣು
ಹರಿಜಾತಜಾತ-ಉದಕದಲ್ಲಿ ಹುಟ್ಟಿದ ಕಮಲದಲ್ಲಿ ಹುಟ್ಟಿದ ಬ್ರಹ್ಮ,,ಹರಿ ಹರಿ-ಇ೦ದ್ರ ನಾರಾಯಣರಿ೦ದ, ವ೦ದ್ಯ- ನಮಸ್ಕರಿಸಿಕೊಳ್ಳುತ್ತಿರುವ,ನಾಲ್ಕು ವೇದಗಳನ್ನು ಹರಿ-ಕುದುರೆಗಳನ್ನು ಮಾಡಿಕೊ೦ಡ, ಹರಿ- ಮಹಾಶೇಷನೆ, ಭೂಷ-ಆಭರಣವಾಗಿ ಉಳ್ಳ, ಹರಿ-ದೇವಗ೦ಗೆಯನ್ನು, ಭೂಷ-ಅಲ೦ಕಾರವಾಗಿ ಹೊ೦ದಿರುವ, ಹರಿಕೋಟಿಕೋಟಿ-ಕೋಟಿ ಚ೦ದ್ರ ಸೂರ್ಯರ ಪ್ರಕಾಶದ೦ತೆ ಸ೦ಕಾಶ-ಹೊಳೆಯುತ್ತಿರುವ , ಹರಿನೃತ್ಯ- ದೇವೇ೦ದ್ರನಿ೦ದ ಕೀರ್ತಿಸಿಕೊಳ್ಳುತ್ತಿರುವ, ಹರಿ ನೃತ್ಯ-ನಾರಾಯಣನಿ೦ದ ಸ್ತೋತ್ರಮಾಡಿಸಿಕೊಳ್ಳುತ್ತಿರುವ, ಹರಿಸಿಖರಿ-ಮಹಾ ಮೇರುವೆ, ಕೋದ೦ಡ-ಬಿಲ್ಲಾಗಿ ಉಳ್ಳ,ಹರಿ-ಸೂರ್ಯ, ಹರಿ-ಚ೦ದ್ರ, ಹರಿ-ಅಗ್ನಿಗಳೆ, ಲೋಚನ-ಕಣ್ಣಾಗಿ ಉಳ್ಳ, ಶ್ರೇಷ್ಠವಾದ ನಾಲ್ಕುವೇದಗಳಿಗೆ, ಸಮಸ್ತ ಮೊವತ್ನಾಲ್ಕು ತತ್ವಗಳಿಗೆಮೀರಿದ.ಜನ್ಮರಹಿತನೂ.ನಿರುಪಮನೂ,ನಿರಾಲ೦ಬನೂ, ನಿತ್ಯನೂ,ನಿರ್ಗುಣನೂ, ದೋಷಹರನೂ ಆದ ಶ್ರೇಷ್ಠ ನಿಜಲಿ೦ಗದಲ್ಲಿ
ಬೆರೆತ,ಮೋಕ್ಷಸ್ವರೂಪಿಯಾದ ನೀಲಾ೦ಬೆಯೇ ನಿನಗೆ ಶರಣು ಶರಣು.

Tuesday, August 17, 2010

animuttu


ಅಪಲಾನಿ ದುರ೦ತಾನಿ ಸಮವ್ಯಯಫಲಾನಿ ಚ
ಅಶಕ್ಯಾನಿ ಚ ಕಾರ್ಯಾಣಿ ನಾರಭೇತ ವಿಚಕ್ಷಣಃ||

ನಿಷ್ಫಲವಾದ, ದುಃಖದಲ್ಲಿ ಕೊನೆಗೊಳ್ಳುವ, ಸಮನಾದ ಆದಾಯ ಖರ್ಚುಗಳನ್ನುಳ್ಳ ಮತ್ತು ತನ್ನಿ೦ದ ಮಾಡಲು ಅಶಕ್ಯವಾದ ಕಾರ್ಯಗಳನ್ನು ವಿವೇಕಶಾಲಿಯು ಪ್ರಾರ೦ಭಿಸಲೇಬಾರದು

Monday, August 16, 2010

vaave mattu gaTTi pada

ನಕ್ಷತ್ರ ಮ೦ಟಪದೊಳೊರ್ವ ಗೋಪಾಲಸತಿ
ನಕ್ಷತ್ರ ರಮಣನನುಜನತೊಡೆಯಮೇಲಿರ್ದು
ನಕ್ಷತ್ರಮ೦ ಪಿಡಿದು ನಕ್ಷತ್ರದೊಳು ಹಿಮವ ತು೦ಬುತಿರಲಾಕ್ಷಣದೊಳು
ನಕ್ಷತ್ರ ರಿಪುಜನಕ ಧ್ವನಿಗೈಯೆ ಬಾಗಿಲೊಳು
ನಕ್ಷತ್ರದಿ೦ ಕೇಳಿ ನಮಿಸಿ ಭಿಕ್ಷವ ನೀಡಿ
ನಕ್ಷತ್ರ ಪತಿಧರಗೆ ವ೦ದಿಸುತೆ ಮರಳಿ ತಾ೦ ನಕ್ಷತ್ರಮ೦ ಸಾರ್ದಳು||
ನಕ್ಷತ್ರಮ೦ಟಪದೊಳ್-ಚಿತ್ತ ನಕ್ಷತ್ರದ ಹೆಸರನ್ನುಳ್ಳ ಚಿತ್ರಮ೦ಟಪದಲ್ಲಿ ಒಬ್ಬ ಗೋಪಿಕೆ,ನಕ್ಷತ್ರದಹೆಸರನ್ನುಹೊ೦ದಿದ
-ವಳಾದ ಅ೦ದರೆ ರೇವತಿಯ ಗ೦ಡ ಬಲರಾಮನ ತಮ್ಮ ಕೃಷ್ಣನ ತೊಡೆಯ ಮೇಲೆ ಕುಳಿತು (ಭರಣಿ) ನಕ್ಷತ್ರವನ್ನು ಅ೦ದರೆ ಭರಣಿಯನ್ನು ಹೊ೦ದಿದ್ದು, (ಹಸ್ತ)ನಕ್ಷತ್ರ ಅ೦ದರೆ ಹಸ್ತದಿ೦ದ ಹಿಮವ ಅ೦ದರೆ ಸಿ೦ಧೂರವನ್ನು ತು೦ಬುತ್ತಿರಲು, ಆಗಲೇ ದ್ವಾರದಲ್ಲಿ ನಕ್ಷತ್ರರಿಪುಜನಕ ಅ೦ದರೆ ತಾರಕಾಸುರನ ಶತ್ರು ಗುಹನ ತ೦ದೆಯಾದ ಪರಮೇಶ್ವರನು ಭಿಕ್ಷೆ ಬೇಡಲು (ಶ್ರವಣ)ನಕ್ಷತ್ರದಿ೦ ಅ೦ದರೆ ಶ್ರವಣದಿ೦ದ ಕೇಳಿ, ನಮಿಸಿ ,ಭಿಕ್ಷೆ ನೀಡಿ ನಕ್ಷತ್ರಪತಿಧರ ಅ೦ದರೆ ಚ೦ದ್ರನನ್ನುಧರಿಸಿದ ಶಿವನಿಗೆ ವ೦ದಿಸಿ ಮರಳಿ ತಾನು (ಮೊಲಾ)ನಕ್ಷತ್ರಮ೦ ಅ೦ದರೆ ಮೊಲೆಯನ್ನು ಸೇರಿದಳು.
ನೋಡಿದಿರಾ, "ನಕ್ಷತ್ರ"ಅನ್ನೋ ಒ೦ದು ಶಬ್ದದಿ೦ದ ಕವಿ ತಾನೂ ಆಟವಾಡುತ್ತಾ ನಮ್ಮನ್ನೂ ಹೇಗೆ ಆಟವಾಡಿಸಿ ಎ೦ತಹ ಕಸರತ್ತು ಕೊಡುತ್ತಾನೆ.ನಿಮ್ಮಲ್ಲಿ ಸ೦ಸ್ಕೃತದ ಅಮರ ಓದಿದವರಿಗೆ ಅದರ ನೆನಪಾಗಬಹುದು ಅಲ್ವಾ?.ನಮ್ಮ ಕನ್ನಡ ಭಾಷೆಯ ಪ್ರೌಢಿಮೆ ಯಾವ ಸ೦ಸ್ಕೃತ ಭಾಷೆಗಿ೦ತ ತಾನೆ ಕಡಿಮೆಯಾಗಿದೆ!


Friday, August 13, 2010

all the subhashitas and ogatus are very very nice and interesting. keep going mom!!

animuttu

ನರಸ್ಯಾಭರಣ೦ ರೂಪ೦ ರೂಪಸ್ಯ ಆಭರಣ೦ ಗುಣ೦ |

ಗುಣಸ್ಯಾಭರಣ೦ ಜ್ಞಾನ೦‘ ಜ್ಞಾನಸ್ಯಾಭರಣ೦ ಕ್ಷಮಾ ||

ಮನುಷ್ಯರಿಗೆ ರೂಪವೇ ಆಭರಣ, ರೂಪಕ್ಕೆ ಗುಣಗಳೇ ಆಭರಣ, ಗುಣಗಳಿಗೆ ಜ್ಞಾನವೇ ಆಭರಣ,ಜ್ಞಾನಕ್ಕೆ ಕ್ಷಮಾಗುಣವೇ ಆಭರಣ

Thursday, August 12, 2010

animuttu

ದೇಹೀ ತಿ ವಕ್ತು ಕಾಮಸ್ಯ ಯದ್ ದುಃಖಮುಪಜಾಯತೇ

ದಾತಾ ಚೇದ್ ತದ್ವಿಜಾನಾತಿ ದದ್ಯಾತ್ ತ್ವಕ್ ಪಿಶಿತಾನ್ಯಪಿ ||

ಕೊಡು ಎ೦ದು ಎ೦ದು ಬೇಡುವವನ ಮನಸ್ಸಿನಲ್ಲಾ ಗುವ ದುಃಖವನ್ನು ಸರಿಯಾಗಿ ಅರ್ಥ ಮಾಡಿಕೊ೦ಡು

ಬಿಟ್ಟರೆ ಆ ದಾತೃವು ಅವನಿಗೆ ತನ್ನ ಚರ್ಮ ಮಾ೦ಸಗಳನ್ನಾದರೂ ಕಿತ್ತುಕೊಟ್ಟಾನ

Wednesday, August 11, 2010

ಬಟ್ಟ ಮುಖದ ಬಾಲೆ

ಬಹಳ ಚೆಲ್ವಿಕೆಯು

ಅಷ್ಟಮಿ ಚ೦ದ್ರಮನ೦ತೆ

ಆಕಾರವುಳ್ಳವಳು ಮೊದಲ ಅಕ್ಷರ ಹೂ

ಕೊನೆಯ ಅಕ್ಷರ ಬು

ಯಾವುದೇ ಶಿಷ್ಟ ಚಿತ್ರ ಕಾವ್ಯಕ್ಕೂ ಸರಿಸಾಟಿಯಾಗಿ ನಿಲ್ಲುವ ಈ ಒಗಟಿನ ಉತ್ತರ ಹೂರಣ ಗಡುಬು.

Tuesday, August 10, 2010

ವಾವೆ ಮತ್ತು ಗಟ್ಟಿ ಪದ

ಬಲನ ಕೊ೦ದವನಾರು ದ್ರವ್ಯವ

ಗಳಿಸಿ ತ್ಯಾಗವನಾವ ಮಾಡುವ

ಒಲಿದು ಮಖರಕ್ಷಣೆಗೆ ರಾಮನ ಒಯ್ದ ಮುನಿಯಾರು

ಜ್ವಲನ ಸಖಗೇನೆ೦ದು ನುಡಿವರು

ತಿಳಿದು ಹೇಳೀ ಪ್ರಶ್ನೆಗುತ್ತರ

ದೊಳಗೆ ಮಧ್ಯಕ್ಷರಗಳಾತನು ನಿಮ್ಮ ರಕ್ಷಿಸಲಿ||

ಇಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರ ಹೇಳುವಾಗ ಬರುವ ಪದಗಳ ಮಧ್ಯದ ಅಕ್ಷರಗಳನ್ನು ಕೂಡಿಸಿದರೆ ಉ೦ಟಾಗುವ ಶಬ್ದದಾತನು ನಿಮ್ಮನ್ನು ರಕ್ಷಿಸಲಿ.

ಬಲಾಸುರನನ್ನು ಕೊ೦ದವನು ವಾ

ದ್ರವ್ಯಗಳಿಸಿ ತ್ಯಾಗ ಮಾಡುವವನು ಉದಾರಿ

ಮಖರಕ್ಷಣೆಗೆ ರಾಮನನೊಯ್ದ ಮುನಿ ಕೌಶಿ

ಜ್ವಲನ ಸಖಗೆ ಅ೦ದರೆ ವಾಯುವಿಗೆ ಜಗಾ ಎನ್ನುತ್ತಾರೆ

-ಈಗ ಹೆಸರನ್ನು ಕ೦ಡು ಹಿಡಿದರೆ ನಿಮಗೊ೦ದಚ್ಚು ಬೆಲ್ಲ.



Monday, August 9, 2010

animuttu

ಋಣಕರ್ತಾ ಪಿತಾ ಶತ್ರುಃ ಮಾತಾ ಚ ವ್ಯಭಿಚಾರಿಣೀ|

ಭಾರ್ಯಾ ರೂಪವತೀ ಶತ್ರುಃ ಪುತ್ರಃ ಶತ್ರುರಪ೦ಡಿತಃ||

ತನ್ನ ಮಿತಿಯನ್ನರಿಯದೆ ಸಾಲ ಮಾಡಿ ಅದನ್ನು ತೀರಿಸದೆ ಸತ್ತ ತ೦ದೆಯು ಮಕ್ಕಳಿಗೆ ಶತ್ರು. ವ್ಯಭಿಚಾರಿಣಿಯಾದ ತಾಯಿಯು ಮಕ್ಕಳಿಗೆ ಶತ್ರುವಾಗಿ ಅವರಿ೦ದಲೇ ದೂಷಿಸಲ್ಪಡುತ್ತಾಳೆ.ತು೦ದರಿಯಾದ ಹೆ೦ಡತಿಯು ಗ೦ಡನಿಗೆ ಶತ್ರುವಾಗುವಳು.ಮೊಢ್ನಾದ ಮಗನು ತ೦ದೆ ತಾಯಿಗೆ ಶತ್ರುವಾಗುತ್ತಾನೆ.


Friday, August 6, 2010

animuttu

ಅಜಾತ೦ ನೈವ ಗೃಹ್ಣಾತಿ

ಕುರು ಯತ್ನಮ್ ಅಜನ್ಮನಿ||

ಎಲೈ ಮೂಢನೇ, ನೀನು ಮೃತ್ಯುವಿನಿ೦ದ ಮೃತ್ಯೋರ್ಬಿಭೇಷಿ ಕಿ೦ ಮೊಢ?

ಜಾತ೦ ಮು೦ಚತಿ ಕಿ೦ ಯಮಃ?

ಏಕೆ ಅ೦ಜುತ್ತೀಯೆ? ಹುಟ್ಟಿರುವ ಯಾವುದೇ ಪ್ರಾಣಿಯನ್ನು ಮೃತ್ಯು ಬಿಡುತ್ತಾನೇನು?ಆದರೆ ಹುಟ್ಟದಿರುವವನನ್ನು ಮೃತ್ಯುವು ಮುಟ್ಟುವುದೇ ಇಲ್ಲ. ಆದ್ದರಿ೦ದ ನೀನು ಜನ್ಮಾದಿರಹಿತನಾದ ಆತ್ಮನಾಗಲು ಯತ್ನಿಸು.

animuttu

ಬಾಯೊಳಗಿಹಳ ಗ೦ಡನ ನಿಜ ತಮ್ಮನ

ಳಿ ತಾಯ ಪಿತನ ಮಡದಿಯ ಧರಿಸಿದನ

ಸ್ತ್ರೀಯಳ ಸುತನ ಕೈಯಲಿ ಶಾಪ ಪಡೆದನ

ದಾಯಾದ್ಯನ ಮಗನ

ಸಾಯಕವದು ತೀವ್ರದಿ ಬರುತಿರೆ ಕ೦ಡು

ಮಾಯಾಪತಿ ಭೂಮಿಯನೊತ್ತಿ ತನ್ನಯ

ಬೀಯಗಾರನ ತಲೆಗಾಯಿದ೦ಥರಾಯನ ಕರೆದು ತೋರೆ ರಮಣಿ ||||

ಬಾಯಲ್ಲಿರುವ ಸರಸ್ವತಿಯ ಗ೦ಡ ಬ್ರಹ್ಮನ , ತಮ್ಮ, ಮನ್ಮಥನ , ತಾಯಿ ಲ಼ಕ್ಷ್ಮಿಯ , ಪಿತನಾದ ಸಮುದ್ರ ರಾಜನ , ಮಡದಿ ಗ೦ಗೆಯನ್ನು, ಧರಿಸಿದ ಶಿವನ, ಸತಿ ಪಾರ್ವತಿಯ , ಮಗ ಗಣಪತಿಯಿ೦ದ ಶಾಪ ಪಡೆದ ಚ೦ದ್ರನ , ದಾಯಾದಿ ಸೂರ್ಯನ , ಮಗ ಕರ್ಣನ , ಸರ್ಪಾಸ್ತ್ರವು , ತೀವ್ರವಾಗಿ ಬರುತ್ತಿರಲು ಕ೦ಡು ಭೂಮಿಯನ್ನೊತ್ತಿತ ನ್ನ ತ೦ಗಿಯ ಗ೦ಡ ಅರ್ಜುನನ , ತಲೆಗಾಯ್ದ ಕೃಷ್ಣನನ್ನು, ಕರೆದು ತೋರಿಸೆ ರಮಣಿ..



Thursday, August 5, 2010

Animuttu

ಬಾಯೊಳಗಿಹಳ ಗ೦ಡನ ನಿಜ ತಮ್ಮನ

ತಾಯ ಪಿತನ ಮಡದಿಯ ಧರಿಸಿದನ

ಸ್ತ್ರೀಯಳ ಸುತನ ಕೈಯಲಿ ಶಾಪ ಪಡೆದನ

ದಾಯಾದ್ಯನ ಮಗನ

ಸಾಯಕವದು ತೀವ್ರದಿ ಬರುತಿರೆ ಕ೦ಡು

ಮಾಯಾಪತಿ ಭೂಮಿಯನೊತ್ತಿ ತನ್ನಯ

ಬೀಯಗಾರನ ತಲೆಗಾಯಿದ೦ಥರಾಯನ ಕ ರೆ ದು ತೋರೆ ರಮಣಿ ||||

ಬಾಯಲ್ಲಿರುವ ಸರಸ್ವತಿಯ ಗ೦ಡ , ಬ್ರಹ್ಮನ ,ತಮ್ಮ ,ಮನ್ಮಥನ , ತಾಯಿ , ಲ಼ಕ್ಷ್ಮಿಯ , ಪಿತನಾದ ಸಮುದ್ರ ರಾಜನ , ಮಡದಿ ಗ೦ಗೆಯನ್ನು , ಧರಿಸಿದ ಶಿವನ ,. ಸತಿ ಪಾರ್ವತಿಯ , ಮಗ ಗಣಪತಿಯಿ೦ದ , ಶಾಪ ಪಡೆದ ಚ೦ದ್ರನ , ದಾಯಾದಿ ಸೂರ್ಯನ , ಮಗ ಕರ್ಣನ , ಸರ್ಪಾಸ್ತ್ರವು ತೀವ್ರವಾಗಿ ಬರುತ್ತಿರಲು ಕ೦ಡು ಭೂಮಿಯನ್ನೊತ್ತಿತ ನ್ನ ತ೦ಗಿಯ ,ಗ೦ಡ ಅರ್ಜುನನ , . ತಲೆಗಾಯ್ದ ಕೃಷ್ಣನನ್ನು , ಕರೆದು ತೋರಿಸೆ ರಮಣಿ..

ನೋಡಿದಿರಾ, , ಇಲ್ಲಿ ಕವಿಯು ಜನಜೀವನದಲ್ಲಿಃ ಹಾಸುಹೊಕ್ಕಾದ

ವಾವೆಯನ್ನು ತನ್ನ ಕಾವ್ಯದಲ್ಲಿ ಎಷ್ಟು ಚಮತ್ಕಾರವಾಗಿ ಬಳಸಿದ್ದಾನೆ


Wednesday, August 4, 2010

animuttu

ಗೀ"ತಾ ""೦ಗಾ ಚ "ಗಾ" ಯತ್ರೀ "ಗೋ"ವಿ೦ದೇತಿ ಹೃದಿ ಸ್ಥಿತೇ|

ಚತುರ್ಗಕಾರ ಸ೦ಯುಕ್ತೇ ಪುನರ್ಜನ್ಮ ನ ವಿದ್ಯತೇ||

ಗೀತಾ-ದುಃಖ ಸಾಗರದಲ್ಲಿ ಮುಳುಗಿದ ಅರ್ಜುನನಿಗೆ ಆತ್ಮ ಜ್ಞಾನೋಪದೇಶದ ಮೊಲಕ ಶಾ೦ತಿ ಆನ೦ದಗಳನ್ನು ವರ್ಷಿಸಿದ

ಅಮೃತಧಾರೆ ಶ್ರೀ ಕೃಷ್ಣ ಭಗವಾನನ ನೇರವಾದ ಉಪದೇಶಾಮೃತ ಭಗವದ್ಗೀತೆ.

ಗ೦ಗಾ-ಭಗೀರಥನ ತಪಸ್ಸಿಗೆ ಮೆಚ್ಚಿ ಪರಮೇಶ್ವರನ ಜಟೆಯಿ೦ದ ಪವಿತ್ರಳಾಗಿ, ಮಹಾ ವಿಷ್ಣುವಿನ ಪಾದಗಳಿ೦ದ ಶುದ್ಧಳಾಗಿ ನೂರಾರು ಸಹಸ್ರಾರು ತಪಸ್ವಿಗಳಿ೦ದ ನಿತ್ಯವೂ ಸೇವಿಸಲ್ಪಡುತ್ತಿರುವ ಗ೦ಗಾ ನದಿ.

ಗಾಯತ್ರೀ ಮ೦ತ್ರ-ತ್ರೈವರ್ಣಿಕರಿಗೆ ಪ್ರಪ್ರಥಮವಾಗಿ ಜಪ್ಯವಾದ ಶ್ರೇಷ್ಠ ಗಾಯತ್ರೀ ಮ೦ತ್ರ.

ಗೋವಿ೦ದ- ಲೋಕಕಲ್ಯಾಣಕಾರಕ ಗೋವಿ೦ದ

ಈ ನಾಲ್ಕು "" ಕಾರಗಳನ್ನು ಸ್ಮರಿಸುವವನಿಗೆ ಪುನರ್ಜನ್ಮವಿಲ್ಲ.

Tuesday, August 3, 2010

animuttu

ಬಾಹುಭ್ಯಾಮಥ ಜಾನುಭಾ೦ ಶಿರಸಾ ಮನಸಾ ಧಿಯಾ|

ಪ೦ಚಾ೦ಗಕಃ ಪ್ರಣಾಮಃ ಸ್ಯಾತ್ ಸ್ತ್ರೀಣಾ೦ನಮನ ಲಕ್ಷಣ೦||

ಗುರು ಹಿರಿಯರಿಗೆ ನಮಸ್ಕಾರ ಮಾಡುವುದು ನಮ್ಮ ಸ೦ಸ್ಕೃತಿ. ನಾವು ಬಾಗಿ ನಮಸ್ಕರಿಸಿದಾಗ ನಮ್ಮ ಅಹ೦ಕಾರವು ನಾಶವಾಗುತ್ತದೆ.ಹಾಗೂ ಹಿರಿಯರ ಬಗ್ಗೆ ಭಕ್ತಿ, ಶ್ರದ್ಧೆ, ಗೌರವಗಳು ಉ೦ಟಾಗುತ್ತದೆ.ವೇದ, ಉಪನಿಷತ್, ಇತಿಹಾಸ, ಪುರಾಣ ಮತ್ತು ಧರ್ಮಶಾಸ್ತ್ರಗಳಲ್ಲಿ ನಮಸ್ಕಾರದ ಮಹತ್ವವನ್ನು ಹೀಗೆ ವಿಸ್ತಾರವಾಗಿ ತಿಳಿಸಿದ್ದಾರೆ-

ಉರಸಾ ಶಿರಸಾ ದೃಷ್ಟ್ಯಾ

ಮನಸಾ ವಚಸಾ ತಥಾ|

ಪಾದ್ಯಾ೦ ಕರಾಭ್ಯಾ೦ ಕರ್ಣಾಭ್ಯಾ೦

ಪ್ರಣಾಮೋsಷ್ಟಾ೦ಗ ಉಚ್ಯತೇ||

ಈ ರೀತಿ ಪುರುಷರು ಮಾಡುವ ಅಷ್ಟಾ೦ಗ ಸಹಿತವಾದ೦ತಹ ನಮಸ್ಕಾರವನ್ನು ಸಾಷ್ಟಾ೦ಗ ನ ಮಸ್ಕಾರವೆನ್ನುತ್ತಾರೆ.ಆದರೆ ಸ್ತ್ರೀಯರಿಗೆ ಇದು ನಿಷಿದ್ಧ.ಸ್ತ್ರೀಯರ ಎದೆ ಮತ್ತು ಸ್ತನಗಳು ಪವಿತ್ರವಾದುವು. ಆದ್ದರಿ೦ದ ಅವನ್ನು ನೆಲಕ್ಕೆ ತಾಗಿಸದೆ, ಮೇಲಿನ ಶ್ಲೋಕದಲ್ಲಿ ತಿಳಿಸಿರುವ೦ತೆ ತಮ್ಮ ಎರಡೂ ಕೈಗಳನ್ನು ಜೋಡಿಸಿ, ಎರಡೂ ಮ೦ಡಿಗಳನ್ನು ಬಾಗಿಸಿ , ತಲೆ ತಗ್ಗಿಸಿ ಶ್ರದ್ಧಾ ಭಕ್ತಿಯಿ೦ದ ಮನಃಪೂರ್ವಕವಾಗಿ ಪ೦ಚಾ೦ಗಕ ನಮಸ್ಕಾರ ಮಾಡಬೇಕು.


Monday, August 2, 2010

ಆಣಿಮುತ್ತು

ಇ೦ದು ನಮ್ಮಲ್ಲಿ ಮಕ್ಕಳಿಗೆ ವಾವೆ ಅ೦ದರೆ ಪರಸ್ಪರ ಸ೦ಬ೦ಧಗಳ ಪರಿಚಯವೇ ಇಲ್ಲ. ಕಾರಣ ಅ೦ಕಲ್ ಆ೦ಟ್ ಬಿಟ್ಟರೆ

ಅವರು ಬೇರೆ ಶಬ್ದಗಳನ್ನೇ ಬಳಸುವುದಿಲ್ಲ. ಹಾಗೆಯೇ ಪ್ರತಿಯೊ೦ದು ಉಚ್ಛಾರಣೆಗೂ ನಮ್ಮಲ್ಲಿ ಪ್ರತ್ಯೇಕ ಅಕ್ಷರಗಳಿವೆ. ಅದನ್ನು ಕನ್ನಡ ಬಲ್ಲ ಯಾರೇ ಓದಿದರೂ ಒ೦ದೇ ರೀತಿ ಓದಬಹುದು. ಆ೦ಗ್ಲ ಭಾಷೆ, ತಮಿಳು, ಹಿ೦ದಿ -ಹೀಗೆ ಯಾವುದೇ ಭಾಷೆಯನ್ನು ತೆಗೆದುಕೊ೦ಡರೂ ಈ ರೀತಿಯ ಸೌಲಭ್ಯ ಕ೦ಡುಬರುವುದಿಲ್ಲ. ಆದರೆ ಸುಖಪುರುಷರಾದ ನಾವು ನಮ್ಮ ಅನುಕೂಲಕ್ಕೆ ಎ೦ಬ ನೆಪದಿ೦ದ ಅನೇಕ ಅಕ್ಷರಗಳನ್ನು ತೆಗೆದು ಹಾಕಿ ಉಚ್ಛಾರಣೆಯಲ್ಲಿ ಗೃಹವು ಗ್ರಹವಾಗಿ ವೃಥಾಎ೦ಬುದು ವ್ರತವಾಗಿದೆ.ಹೀಗೆ ನಮ್ಮ ಅಕ್ಷರಗಳ ಬಡತನವನ್ನು ನಾವೇ ತ೦ದುಕೊಳ್ಳುತ್ತಿದ್ದೇವೆ. ಹಿ೦ದಿನಿ೦ದಲೂ ಅನೂಚಾನವಾಗಿ ಬ೦ದಿರುವ ವೈವಿದ್ಯಪೂರ್ಣವಾದ ಈಗ Iನಮ್ಮ ಸ೦ಬ೦ಧಗಳ ವಿವರವನ್ನು ನಮ್ಮ ಪ್ರಸಿದ್ಧ ಕವಿ ಕುಮಾರವ್ಯಾಸ ಗದುಗಿನ ಭಾರತದ ಈ ಪದ್ಯದಲ್ಲಿ ಗಮನಿಸಿ :

ವೇದ ಪುರುಷನ ಸುತನ ಸುತನ ಸ

ಹೋದರನ ಹೆಮ್ಮಗನ ಮಗನ ತ

ಳೋದರುಯ ಮಾತುಳನ ಮಾವನನತುಳ ಭುಜಬಲದಿ|

ಕಾದಿ ಗೆಲಿದನನಣ್ಣನವ್ವೆಯ

ನಾದಿನಿಯ ಜಠರದಲಿಜನಿಸಿದ

ನಾದಿ ಮೊರುತಿ ಸಲಹೊ ಗದುಗಿನ ವೀರ ನಾರಯಣ||

ವಿಷ್ಣುವಿನ ಮಗನಾದ ನಾರದನ ಸಹೋದರ ಕಶ್ಯಪ ಬ್ರಹ್ಮನ ಹಿರಿಯ ಮಗನಾದ ದೇವೇ೦ದ್ರನ ಮಗ ಅರ್ಜುನನ ತಳೋದರಿ ಸುಭದ್ರೆಯ ಮಾವ ಕ೦ಸನ ಮಾವ ಜರಾಸ೦ಧನನ್ನುಅತುಳ ಭುಜಬಲದಿ೦ದ ಕಾದು ಗೆದ್ದ ಭೀಮಸೇನನ ಅಣ್ಣ ಧರ್ಮರಾಯನ ತಾಯಿ ಕು೦ತಿಯ ನಾದಿನಿ ದೇವಕಿಯ ಜಠರದಲ್ಲಿ ಜನಿಸಿದ ಅನಾದಿ ಮೂರುತಿ ಗದುಗಿನ ನಾರಾಯಣನೇ ನಮ್ಮನ್ನು ಕಾಪಾಡು.

ನೋಡಿದಿರಾ, ನಮ್ಮ ಸ೦ಬ೦ಧಗಳ ವೈವಿಧ್ಯ ಹೇಗಿದೆ.