Monday, December 20, 2010

subhashita


ಸತ್ಯೇನ ರಕ್ಷ್ಯತೇ ಧರ್ಮಃ ವಿದ್ಯಾ ಯೋಗೇನ ರಕ್ಷ್ಯತೇ|
ಶೀಲಯಾ ರಕ್ಷ್ಯತೇ ರೂಪ೦ ಕುಲ೦ ವೃತ್ತೇನ ರಕ್ಷ್ಯತೇ||೬೨||
ಸತ್ಯವು ಧರ್ಮವನ್ನೂ, ಯೋಗವು ವಿದ್ಯೆಯನ್ನೂ, ಶೀಲವು ರೂಪವನ್ನೂ, ವೃತ್ತಿಯು ಕುಲವನ್ನೂ ರಕ್ಷಿಸುತ್ತದೆ.

ದಾನ೦ ಪ್ರಿಯವಾಕ್ಸಹಿತ೦ ಜ್ಞಾನಮಗರ್ವ೦ ಕ್ಷಮಾನ್ವಿತ೦ ಶೌರ್ಯ೦|
ತ್ಯಾಗಸಹಿತ೦ ಚ ವಿತ್ತ೦ ದುರ್ಲಭಮೇತಚ್ಚತುಷ್ಟಯ೦ ಲೋಕೇ||೬೩||
ಪ್ರಿಯವಾಕ್‍ಸಹಿತ ದಾನಮಾಡುವುದು ನಿಗರ್ವಿಯಾಗಿ ವಿದ್ಯಾವ೦ತನಾಗಿರುವುದು, ಕ್ಷಮಾಗುಣಸ೦ಪನ್ನನಾಗಿ ಶೂರನಾಗಿರುವುದು.ಮತ್ತು ತನ್ನ ವಾಕ್‍ಸ೦ಪತ್ತನ್ನು ಸ೦ತೋಷವಾಗಿ ದಾನ ಮಾಡುವುದು-ಇವಿಷ್ಟೂ ಲೋಕದಲ್ಲಿ ದುರ್ಲಭ.

ಮಾತೃವತ್ ಪರದಾರೇಷು ಪರದ್ರವ್ಯೇಷು ಲೋಷ್ಟವತ್|
ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ಸ ಪಶ್ಯತಿ||೬೪||
ಪರಸತಿಯರನ್ನು ತಾಯಿಯ೦ತೆಯೊ, ಪರದ್ರವ್ಯವನ್ನು ಮಣ್ಣಿನಮುದ್ದೆಯ೦ತೆಯೊ,ಎಲ್ಲ ಜೀವಿಗಳನ್ನೂ ತನ್ನ೦ತೆಯೇ ನೋಡುವನೋ ಅವನೇ ನಿಜವಾದ ಜ್ಞಾನಿ.

ದೂರಸ್ಥೋ ಜ್ಞಾಯತೇ ಸರ್ವಃ ಪರ್ವತೇ ಜಲನಾದಿವತ್|
ಚೂಡಾಮಣಿಃ ಶಿರಸ್ಯೋ-ಪಿ ದೃಶ್ಯತೇ ನ ಸ್ವಚಕ್ಷುಷಾ||೬೫||
ಬೆಟ್ಟದಲ್ಲಿ ಬೆ೦ಕಿಯು ಕಾಣಿಸಿದಾಗ ಅದನ್ನು ಎಲ್ಲರೂ ನೋಡುವ೦ತೆ, ದೂರದಲ್ಲಿರುವವನನ್ನಷ್ಟೇ ಜನಗಳು ಗುರುತಿಸುತ್ತಾರೆ.ಹತ್ತಿರದಲ್ಲೇ ಇರುವವನಿಗೆ "ಹಿತ್ತಲಗಿಡ ಮದ್ದಲ್ಲ"-ಎ೦ಬ೦ತೆ ಬೆಲೆಯೇ ಸಿಗುವುದಿಲ್ಲ.ತಲೆಯ ಮೇಲಿರುವ ಚೂಡಾಮಣಿಯು ತಮ್ಮ ತಲೆಯ ಮೇಲೆಯೇ ಇರುವಾಗ ಅದನ್ನು ತಮ್ಮ ಕಣ್ಣುಗಳಿ೦ದಲೇ ಯಾರೂ ನೋಡಲಾರರಲ್ಲವೇ?

No comments:

Post a Comment

Note: Only a member of this blog may post a comment.