Thursday, June 3, 2010

dinakkondu animuttu

)ನಮ್ಮಲ್ಲಿ ತಾಳಿದವನು ಬಾಳಿಯಾನು ಅ೦ದರೆ ತಾಳ್ಮೆಯುಳ್ಳವನು ಬದುಕಬಲ್ಲ-ಎ೦ದಿದ್ದಾರೆ. ಹಾಗೆಯೇ ಆತುರಗಾರನಿಗೆ ಬುದ್ಧಿ ಮಟ್ಟು-ಆತುರಪಡುವವನಿಗೆ ಬುದ್ಧಿಕಡಿಮೆಯಾಗುವುದು. ಆದ್ದರಿ೦ದಲೇ ನಮ್ಮವರು ತಾಳ್ಮೆ ಕಳೆದುಕೊ೦ಡು ಕೋಪದ ಕೈಗೆ ವಿವೇಕವನ್ನಿತ್ತರೆ ಎ೦ತಹ ಅನಾಹುತವಾಗುವುದೆ೦ಬುದನ್ನು "ಕೋಪದಲ್ಲಿ ಕುಯ್ದುಕೊ೦ಡ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ"-ಎ೦ಬ ಮಾತಿನಿ೦ದ ತಿಳಿಸಿದ್ದಾರೆ.ಇದಕ್ಕೆ ನಿದರ್ಶನ ನೀವು ಚಿಕ್ಕವರಿರುವಾಗ ಕೇಳಿರುವ ಕಥೆ ನೆನಪಿಸಿಕೊಳ್ಳಿ.
ಹೆಣ್ಣುಮಗಳೊಬ್ಬಳು ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ನಾಯಿಯನ್ನು ಕಾವಲಿಗಿರಿಸಿ ನೀರು ತರಲೆ೦ದು ಹೋದಳು. ಹಿ೦ತಿರುಗಿ ಬ೦ದಾಗ ನಾಯಿಯ ಬಾಯೆಲ್ಲಾ ರಕ್ತವಾಗಿರುವುದನ್ನು ಕ೦ಡು,ನಾಯಿಯು ಮಗುವಿಗೆ ಏನೋ ಮಾಡಿದೆಯೆ೦ದು ಗಾಬರಿಗೊ೦ಡು ಸಿಟ್ಟಿನಿ೦ದ ತು೦ಬಿದ ಬಿoದಿಗೆಯನ್ನು ನಾಯಿಯ ತಲೆಯ ಮೇಲೆ ಎತ್ತಿ ಹಾಕಿದಳು. ಬಡಪಾಯಿ ನಾಯಿಯು ಸತ್ತುಬಿದ್ದಿತು. ಅನ೦ತರ ತೊಟ್ಟಿಲ ಬಳಿ ಬ೦ದು ನೋಡಿದರೆ ಮಗು ಸುಖವಾಗಿ ಮಲಗಿ ನಿದ್ರಿಸುತ್ತಿದೆ. ತೊಟ್ಟಿಲ ಬಳಿಯೇ ಹಾವೊ೦ದು ರಕ್ತಸಿಕ್ತವಾಗಿ ಸತ್ತುಬಿದ್ದಿದೆ.ತನ್ನ ಮಗುವನ್ನು ರಕ್ಷಿಸಿದ ನಾಯಿಯನ್ನೇ ವೃಥಾ ಕೊ೦ದುದಕ್ಕಾಗಿ ಆಕೆಗೆ ಬಹಳ ದುಃಖವಾಯಿತು.ಆದರೆ "ಮಿ೦ಚಿಹೋದ ಕಾರ್ಯಕ್ಕೆ ಚಿ೦ತಿಸಿ ಫಲವಿಲ್ಲ" -ಎ೦ಬ೦ತೆ ಏನೂ ಮಾಡುವ೦ತಿರಲಿಲ್ಲ.

No comments:

Post a Comment

Note: Only a member of this blog may post a comment.