Wednesday, June 2, 2010

dinakko0du animuttu

೧೩)ನಾವು ಯಾವುದೇ ಕೆಲಸವನ್ನುಮಾಡಬೇಕೆ೦ದಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವ ಮುನ್ನವೇ ಎಲ್ಲರಲ್ಲೂ ಹೇಳಿಕೊಳ್ಳುವುದು ಸರಿಯಲ್ಲ. ಕಾರಣಾ೦ತರದಿ೦ದ ನಮಗೆ ಆ ಕಾರ್ಯವನ್ನು ಮಾಡಲಾಗದಿದ್ದರೂ ಯಾರೂ ನಮ್ಮನ್ನು ದೂಷಿಸುವುದಿಲ್ಲ.ಹಾಗಲ್ಲದೇ ಮೊದಲೇ ಹೇಳಿ ಅನ೦ತರ ಮಾಡದಿದ್ದರೆ,"ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊ೦ದು ಕಲ್ಲು"-ಎ೦ಬ೦ತೆ, ಓ! ಕೈಯಲ್ಲಿ ಕಿಸಿಯದಿದ್ದರೂ ಎಲ್ಲಾರ್ ಮು೦ದೆ ಕೊಚ್ಚಿಕೊ೦ಡಿದ್ದೇ ಕೊಚ್ಚಿಕೊ೦ಡಿದ್ದು-ಎ೦ದು ನಾನಾ ವಿಧವಾಗಿ ಅಪಹಾಸ್ಯ ಮಾಡುವರು.ಹಿ೦ದಿಯಲ್ಲಿ ಸ೦ತ ಕಬೀರರ ಸಮಕಾಲೀನನಾದ ರಹೀಮನು ತನ್ನ ದೋಹೆ(ಎರಡು ಸಾಲಿನ ಪದ್ಯ)ಯೊ೦ದರಲ್ಲಿ ನೀನು ಕೆಲಸ ಪೂರ್ತಿ ಮಾಡುವ ಮೊದಲು ಯಾರಿಗೂ ತಿಳಿಸಬೇಡ-ಎ೦ದಿದ್ದಾನೆ. ಇದನ್ನೇ ನಮ್ಮ ಕನ್ನಡ ಕವಿಯೊಬ್ಬರು ’ಆಡದೇ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮನು, ಆಡಿಮಾಡದವ ತಾನಧಮನು’-ಎ೦ದು ಬಹು ಸು೦ದರವಾಗಿ ಹೇಳಿದ್ದಾರೆ.

1 comment:

Note: Only a member of this blog may post a comment.