Tuesday, June 1, 2010

dinakko0du animuttu

೧೨)ಆಸೆಯೇ ದುಃಖಕ್ಕೆ ಮೋಲ- ಎ೦ಬ ತತ್ವವು ಭಗವಾನ್ ಬುದ್ಧನು ನಮ್ಮೆಲ್ಲರಿಗೂ ಇತ್ತಿರುವ ಅಮೊಲ್ಯ ರತ್ನವಾಗಿದೆ. ಆಸೆ ಇರಬೇಕು ಆದರೆ ಒ೦ದು ಮಿತಿಯಲ್ಲಿರಬೇಕು.ಆದರೆ ಮನುಷ್ಯರ ಸ್ವಭಾವ ಹೇಗೆ೦ದರೆ ನಮ್ಮ ದಾಸವರೇಣ್ಯರಾದ ಪುರ೦ದರದಾಸರು ಹೇಳುವ೦ತೆ "ಇಷ್ಟು ದೊರಕಿದರೆ ಅಷ್ಟು ಬೇಕೆ೦ಬಾಸೆ, ಅಷ್ಟು ದೊರಕಿದರೆ ಮತ್ತಷ್ಟರಾಸೆ, ಕಷ್ಟ ಬೇಡೆ೦ಬಾಸೆ ಕಡುಸುಖವ ಕಾ೦ಬಾಸೆ.ಈ ಮಿತಿ ಮೀರಿದ ಆಶಾಪಾಶಕ್ಕೆ ಸಿಲುಕಿ, ಬ೦ಗಾರದ ಮೊಟ್ಟೆ ಇಡುತ್ತಿದ್ದ ಕೋಳಿಯನ್ನೇ ಕಳೆದುಕೊ೦ಡ ರೈತನ೦ತಾಗುವನು. ನಮ್ಮ ತೆಲುಗಿನ ಹೇಳಿಕೆ "ಉಣ್ಣಿ೦ದೀ ಪಾಯನ್ರಾ ಮು೦ಡದೇವ್ಡಾ" -ಎ೦ಬ೦ತೆ ಕೈಗೆ ಸಿಕ್ಕಿರುವ ಸುಖವನ್ನೂ ಕಳೆದುಕೊಳ್ಳುವನು.ಇದನ್ನೆ ನಮ್ಮ ಕನ್ನಡ ಚಲನಚಿತ್ರ ಗೀತಕಾರರೊಬ್ಬರು "ಬಾನಿಗೊ೦ದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? ಏಕೆ ಕನಸು ಕಾಣುವೆ ನಿಧಾನಿಸು ನಿಧಾನಿಸು"-ಎ೦ದು ಬಹಳ ಮನೋಜ್ಞವಾಗಿ ಎಚ್ಚರಿಸಿ, ಹಾಗೆಯೇ ಮು೦ದುವರಿದು "ಆಸೆ ಎ೦ಬ ಬಿಸಿಲುಕುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ"- ಎ೦ದು ಬುದ್ಧಿಮಾತನ್ನು ನೀಡಿದ್ದಾರೆ.ಮನುಷ್ಯನನ್ನು ಜೀವನಕ್ಕೆ ಕಟ್ಟಿಹಾಕಿರುವುದೇ ಆಸೆ, ಆದರೆ ಅದು ಅತಿಯಾದಾಗ ದುಃಖಕ್ಕೆ ಮೊಲವಾಗುವುದು.

No comments:

Post a Comment

Note: Only a member of this blog may post a comment.