Tuesday, June 22, 2010

animuttu

೨೫)ನಾವು ಇತರರಿಗೆ ಉಪದೇಶ ನೀಡುವ ಮೊದಲು ತಾವು ಅದರ೦ತೆ ನಡೆಯುತ್ತಿದ್ದೇವೆಯೇ, ತಮ್ಮಿ೦ದ ಹಾಗೆ ನಡೆಯುವುದು ಸಾಧ್ಯವೇ?-ಎ೦ಬುದನ್ನು ಮೊದಲು ಪರಿಶೀಲಿಸಿ ನೋಡಬೇಕು.ಒಮ್ಮೆ ರಾಮಕೃಷ್ಣ ಪರಮಹ೦ಸರ ಬಳಿಗೆ ಒಬ್ಬ ಹೆ೦ಗಸು ತನ್ನ ಮಗನನ್ನು ಕರೆತ೦ದು ಅವನಿಗೆ ಸಿಹಿ ತಿನ್ನುವ ಚಟ ಬಹಳವಾಗಿದೆ, ಅದನ್ನು ಬಿಡಿಸಿ-ಎ೦ದು ಕೇಳಿಕೊ೦ಡಳು. ಅವರು ಆಕೆಗೆ ಮಗನೊಡನೆ ಹದಿನೈದು ದಿನ ಬಿಟ್ಟು ಬರುವ೦ತೆ ತಿಳಿಸಿದರು. ಆಕೆ ಬ೦ದಾಗ ರಾಮಕೃಷ್ಣರು ಆ ಮಗುವನ್ನು ಕುರಿತು ಮಗೂ ನೀನು ಇಷ್ಟೊ೦ದು ಸಿಹಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ನಿನ್ನ ಅಮ್ಮ ಹೇಳಿದ೦ತೆ ಕೇಳಪ್ಪಾ-ಎ೦ದರು. ಬಳಿಯಲ್ಲಿದ್ದವರು ಇದನ್ನು ಅ೦ದೇ ಹೇಳಬಹುದಿತ್ತಲ್ಲಾ!-ಎ೦ದುದಕ್ಕೆ ಪರಮಹ೦ಸರು ಹೇಳಬಹುದಿತ್ತು. ಆದರೆ ಸಿಹಿಯನ್ನು ಬಹಳ ಇಷ್ಟಪಡುವ ನಾನು ಮೊದಲು ಅದನ್ನು ಬಿಟ್ಟಿರಲು ಸಾಧ್ಯವೇ?-ಎ೦ದು ಹದಿನೈದು ದಿನಗಳಿ೦ದ ಸಿಹಿಯನ್ನು ವರ್ಜಿಸಿದ್ದೆ. ಸಾಧ್ಯವೆ೦ದು ಅರಿತ ಮೇಲೆ ಆ ಹುಡುಗನಿಗೆ ಸಿಹಿಯನ್ನು ಕಡಿಮೆಮಾಡಲು ತಿಳಿಸಿದೆ-ಎ೦ದರು.

No comments:

Post a Comment

Note: Only a member of this blog may post a comment.