This blog is for the members of the Raichoti Family group. ಈ ಬ್ಲಾಗ್ ರಾಯಚೋಟಿ ಗುಂಪಿನ ಸದಸ್ಯರುಗಳಿಗೆ ಮಾತ್ರ. ఈ బ్లాగ్ మా రాయచోటి ఫ్యామిలి సదస్యలుకు మాత్రమే. यह ब्लाग राय्चॊटि ग्रूप कॆ सद्स्यॊ के लियॆ है.
Tuesday, June 15, 2010
dinakko0du animuttu
೨೩)"ಮಕ್ಕಳನ್ನು ಹೊಡೆದು ಬಗ್ಗಿಸು, ನುಗ್ಗೇನ ಮುರಿದು ಬಗ್ಗಿಸು" ಎನ್ನುವುದನ್ನೇನೋ ಎಲ್ಲಾರೂ ಕೇಳಿದ್ದೇವೆ. ಆದರೆ ಇದು ಅವರು ಒ೦ದು ವಯಸ್ಸಿಗೆ ಬ೦ದು ಸರಿ-ತಪ್ಪುಗಳ ವಿವೇಚನೆ ಪಡೆಯುವವರೆಗೆ ಮಾತ್ರವಷ್ಟೇ ಸರಿ.ಸದಾ ಅವರಿಗೆ ಹೊಡೆಯುವ ಅಭ್ಯಾಸ ಖ೦ಡಿತ ಕೂಡದು. ಸಾಮಾನ್ಯವಾಗಿ ಮಕ್ಕಳು ತಮ್ಮ ತ೦ದೆತಾಯಿಯರನ್ನೇ ಆದರ್ಶವಾಗಿಟ್ಟುಕೊ೦ಡಿರುತ್ತಾರೆ. ಆದ್ದರಿ೦ದ ಅವರ ಮು೦ದೆ ದೊಡ್ಡವರೂ ತಮ್ಮ ನಡೆನುಡಿಗಳ ಕಡೆ ವಿಶೇಷ ಗಮನ ಕೊಡುವುದು ಅಗತ್ಯ. ಮಕ್ಕಳಿಗೆ ನೋಡು ನಿನ್ನ ಸಾಮಾನನ್ನೆಲ್ಲಾ ಹೇಗೆ ಎಸೆದಿದ್ದೀಯ ಎನ್ನುವ ತಾಯಿ ಮೊದಲು ತಾನು ಅದೇ ರೀತಿ ಇಟ್ಟು ತೋರಿಸಬೇಕು.ಹಾಗೆಯೇ ತ೦ದೆಯು ತನಗೆ ಯಾವುದಾದರೂ ದುರಭ್ಯಾಸವಿದ್ದರೂ ಅದನ್ನು ಮಕ್ಕಳೆದುರಿಗೆ ಪ್ರಕಟಿಸಬಾರದು. ಉದಾ-ನನ್ನ ಗೆಳತಿಯ ಗ೦ಡನಿಗೆ ಧೂಮಪಾನದ ಹವ್ಯಾಸವಿತ್ತು.ಆದರೆ ಮಕ್ಕಳೆಲ್ಲಾ ದೊಡ್ಡವರಾಗಿ ಮದುವೆ ವಯಸ್ಸಿಗೆ ಬರುವವರೆಗೆ ತಾಯಿಯನ್ನುಳಿದು ಬೇರೆ ಯಾರಿಗೂ ಈ ವಿಷಯ ತಿಳಿದಿರಲಿಲ್ಲ. ಹೀಗಿದ್ದಾಗಲೇ ಮಕ್ಕಳಿಗೆ ತ೦ದೆತಾಯಿಯರಲ್ಲಿ ಪ್ರೀತಿ ಗೌರವಗಳು ಉ೦ಟಾಗುವುದು.
Subscribe to:
Post Comments (Atom)
No comments:
Post a Comment
Note: Only a member of this blog may post a comment.