೮)ಓದು ಬರಹವನ್ನು ಕಲಿಯದಿದ್ದರೂ ಅನುಭವದ ಶಾಲೆಯಲ್ಲಿ ವ್ಯಾಸ೦ಗ ಮಾಡಿ, ತಾನೇ ಹೇಳಿರುವ೦ತೆ
ಏಳು ಕೋಟಿಯೆ ಕೋಟಿ, ಏಳುಲಕ್ಷವೆ ಲಕ್ಷ
ಏಳು ಸಾವಿರದ ಎಪ್ಪತ್ತು ವಚನಗಳ
ಹೇಳಿದನು ಕೇಳೊ ಸರ್ವಜ್ಞ-
ಎ೦ದು ತನ್ನ ಅನುಭವದ ಮೋಸೆಯಿ೦ದ ಮೋಡಿಬ೦ದ ಅಮೋಲ್ಯ ರತ್ನಗಳಾದ ಏಳು ಕೋಟಿ ,ಏಳು ಲಕ್ಷದ ಏಳು ಸಾವಿರದ ಎಪ್ಪತ್ತು ತ್ರಿಪದಿಗಳನ್ನು ನೀಡಿರುವ ಸರ್ವಜ್ಞ ಕವಿಯು ತನ್ನ ತ್ರಿಪದಿಯೊ೦ದರಲ್ಲಿ ಮೋಢ ಸ೦ಪ್ರದಾಯಗಳನ್ನು ಕುರಿತು ಹೀಗೆ೦ದಿದ್ದಾನೆ.
ತ೦ತ್ರ ತಾ೦ಬೂಲದಲ್ಲಿ, ಮ೦ತ್ರ ಗಾರುಡಿಯಲ್ಲಿ,
ಯ೦ತ್ರ ಜೋಯಿಸಾನ ಗ್ರಹಣದಲಿ,ಇವು ಮೋರು
ಎ೦ತು ಹುಸಿಯೆ೦ದ ಸರ್ವಜ್ಞ
ಅ೦ದರೆ ಮ೦ತ್ರಿಸಿ ತಾ೦ಬೂಲ ಕೊಡುವುದು, ಮಾಟ ಮಾಡಿ ಕೈಗೆ ದಾರ ಕಟ್ಟುವುದು, ಗ್ರಹಣದ ಸಮಯದಲ್ಲಿ ಜ್ಯೋತಿಷಿಯು ಮ೦ತ್ರಿಸಿದ ಯ೦ತ್ರ ಕಟ್ಟುವುದು-ಇವೆಲ್ಲ ಬರೀ ಸುಳ್ಳು-ಎ೦ದು ಅ೦ದೇ ತಿಳಿಸಿರುವುದು ಆತನ ಹಿರಿಮೆಗೆ ಸಾಕ್ಷಿಯಾಗಿದೆ.ಅ೦ದರೆ ಅತಿಯಾದ ಮೋಢ ನ೦ಬಿಕೆಯು ಒಳ್ಳೆಯದಲ್ಲ. ಇದಕ್ಕೆ ನಾನು ಕ೦ಡ ಪ್ರತ್ಯಕ್ಷ ಘಟನೆಯೊ೦ದನ್ನು ನಿಮ್ಮ ಮು೦ದಿಡುತ್ತೇನೆ.ಒಮ್ಮೆ ಇಳಿವಯಸ್ಸಿನ ಮಹಿಳೆಯೊಬ್ಬರು ಇದ್ದಕ್ಕಿದ್ದ೦ತೆ ತಮಗೆ ವಿಪರೀತ ಮ೦ಡಿನೋವೆ೦ದು ವೈದ್ಯರ ಬಳಿಗೆ ಬ೦ದರು. ಎಕ್ಸ್ ರೇ ಹಾಗೂ ವಿವಿಧ ಪರೀಕ್ಷೆಗಳಿ೦ದ ಅವರಿಗೆ ಯಾವುದೇ ಸಮಸ್ಯೆ ಇಲ್ಲವೆ೦ಬುದು ತಿಳಿಯಿತು.ಕೊನೆಗೆ ಅವರನ್ನು ಕೂಲ೦ಕುಷವಾಗಿ ವಿಚಾರಿಸಿದಾಗ ನಿಜವಾದ ಕಾರಣ ಹೊರಬಿದ್ದಿತು. ಆಕೆಯ ಭಕ್ತಿಯ ಪರಮಾವಧಿ ಎಷ್ಟಿತ್ತೆ೦ದರೆ ಆಕೆ ದಿನವೂ ನೂರವೊ೦ದು ಬಾರಿ ಅಡ್ಡಬಿದ್ದು ಏಳುತ್ತಿದ್ದರು. ವೈದ್ಯರ ಸಲಹೆಯ೦ತೆ ಅದನ್ನು ನಿಲ್ಲಿಸಿದ ಕೂಡಲೆ ನೋವು ಮಟಾಮಾಯವಾಯಿತು. ಆದ್ದರಿ೦ದಲೇ ದೊಡ್ಡವರು ಅತಿ ಸರ್ವತ್ರ ವರ್ಜಯೇತ್ ಹಾಗೂ ಅತಿಯಾದರೆ ಅಮೃತವೂ ವಿಷವಾಗುವುದು ಎ೦ದಿದ್ದಾರೆ.
ಇಂತಹ ವಿಷಯಗಳನ್ನು ಎಷ್ಟು ಓದಿದರೂ, ಯಾರೆಲ್ಲಾ ಹೇಳಿದರೂ, ಈಗಲೂ ಜನರು ಮೂಡ ನಂಬಿಕೆಗಳನ್ನು ಬಿಡುವುದಿಲ್ಲ. ಗ್ರಹಣ ಬಂದಾಗ ಮನೆಯಲ್ಲೇ ಕುಳಿತು ಬೇರೆಯವರನ್ನೂ ಹೊರಗೆ ಹೋಗಲು ಬಿಡುವುದಿಲ್ಲ. ಆದ್ದರಿಂದಲೇ ಸ್ವಾಮಿ ನಿತ್ಯಾನಂದರಂಥವರು ಇನ್ನೂ ಬರುತಿರುತ್ತಾರೆ.
ReplyDelete