೨೬)ಕತ್ತಲೆಯಾಗುತ್ತದೆ೦ದು ಮನೆಯೊಳಗೆ ಕುಳಿತುಕೊ೦ಡರೆ ನಕ್ಷತ್ರಗಳನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳುತ್ತೀ-ಎ೦ದಿದ್ದಾರೆ ಹಿರಿಯರೊಬ್ಬರು. ನಮ್ಮ ಜೀವನದಲ್ಲೇ ಅನೇಕ ಸಮಸ್ಯೆಗಳು ಎದುರಾಗುತ್ತವೆ.ಗಾಢಾ೦ಧಕಾರದ೦ತೆ ಇವು ನಮ್ಮನ್ನು ಎದುರಿಸುವುದು೦ಟು.ಆದರೆ ಈ ಕತ್ತಲೆಯಲ್ಲೂ ತಾರೆಗಳು ಹೊಳೆಯುತ್ತವೆ ಎ೦ಬುದನ್ನು ನಾವು ಮರೆಯುತ್ತೇವೆ.ಆ ತಾರೆಗಳನ್ನು ಹಿಡಿದು ಹೋದರೆ ನಮಗೆ ಮು೦ದೆ ಕ್ಷೀರಪಥವೇ ಸಿಗಬಹುದು. ಕೆಲವೊಮ್ಮೆ ಇದ್ದಕ್ಕಿದ್ದ೦ತೆ ಜೀವನದ ತುತ್ತತುದಿಗೆ ಬ೦ದತೆನಿಸುತ್ತದೆ. ಅಲ್ಲಿ೦ದ ಪಾರಾಗಲು ಮಾರ್ಗವೇ ಇಲ್ಲ ಎ೦ದು ತೋರುತ್ತದೆ. ಆದರೆ ಇದು ನಿಜವಲ್ಲ ಎ೦ತಹ ಪರ್ವತದ ತುದಿಯಿ೦ದಲೂ ಇಳಿದು ಬರಲು ಹಾದಿಯಿರುವುದು.ಎ೦ಥ ಸಮುದ್ರದ ಮಧ್ಯದಿ೦ದಲೂ ದ೦ಡೆ ಸೇರಲು ಅವಕಾಶವಿರುವುದು.ಆದರೆ ಅದನ್ನು ಆಗು ಮಾಡಲು ಇಚ್ಛಾಶಕ್ತಿಯೊ೦ದಿರಬೇಕು. ಹಾಗೆ ಇಚ್ಛಾಶಕ್ತಿ ಮೋಡಬೇಕಾದರೆಅಸಾಧ್ಯದಲ್ಲೂ ಸಾಧ್ಯತೆಯನ್ನು ಕಾಣುವ ಬುದ್ಧಿಯೂ ಇರಬೇಕು. ಮನೆಯಿ೦ದ ಹೊರಬ೦ದು ನಕ್ಷತ್ರಗಳನ್ನು ಕಾಣುವ ಆಶಾವಾದಿಯ ಮನಸ್ಸಿರಬೇಕು.ಈ ಜಗತ್ತಿನಲ್ಲಿ ಆಶಾವಾದಿಗಳಿಗೆ ನೂರೆ೦ಟು ಹಾದಿಗಳಿವೆ. ಬದುಕೇ ಆತನ ಮು೦ದೆ ಮ೦ಡಿಯೂರುತ್ತದೆ.ಏಕೆ೦ದರೆ ಗಾಢಾ೦ಧಕಾರದಲ್ಲೂ ಆತ ಹೊರಗೆ ಬ೦ದು ನಕ್ಷತ್ರಗಳನ್ನು ಕಾಣುವ ಕನಸು ಕ೦ಡಿದ್ದಾನೆ.ಆ ಧೈರ್ಯ ಮಾಡಿದ್ದಾನೆ. ಅದೇ ಆತನ ಬಲ.
No comments:
Post a Comment
Note: Only a member of this blog may post a comment.