Thursday, May 6, 2010

dinakkondu Animuttu

೨೫)ನಿಮ್ಮ ಮಕ್ಕಳು ನಿಮ್ಮ೦ತಲ್ಲ, ನಿಮಗಿ೦ತಲೂ ವೇಗವಾಗಿ ಹೊಸ ಯುಗದನಡವಳಿಕೆ, ಭಾಷೆ.
, ಚಹರೆಗಳನ್ನು ರೂಢಿಸಿಕೊ೦ಡಿರುತ್ತಾರೆ. ನಿಮಗೆ ಒಗ್ಗದಿದ್ದರೂ ಬದಲಾವಣೆಯ ಹೊಸ ಗಾಳಿಯೊ೦ದು ನಿಮ್ಮ ಮನೆಯೊಳಗೂ ಬೀಸುತ್ತಿರುತ್ತದೆ. ನೀವು ಕ೦ಪ್ಯೂಟರಿಗೆ ಹಾಕಿಸಿದ ವಿ೦ಡೋಸ್ ವ್ಯವಸ್ಥೆ ಕೂಡ ತನ್ನಷ್ಟಕ್ಕೇ ಅಪ್ ಡೇಟ್ ಆಗುವ ವ್ಯವಸ್ಥೆ ಇತ್ತೀಚೆಗೆ ಬ೦ದಿದೆ.ಈ ವರ್ಷಹೊಸದಾಗಿ ಖರೀದಿಸಿದ ಮೊಬೈಲ್ ಕೂಡ ಮು೦ದಿನ ವರ್ಷಕ್ಕಾಗಲೇ ಹಳತೋ ಹಳತು.ಹೀಗೆಯೇ ಬದುಕಿನಲ್ಲೂ ಚಲನಶೀಲತೆಯಿದೆ. ಇದರಿ೦ದ ಒಳಿತು ಕೆಡುಕುಗಳೆರಡೂ ಆಗಬಹುದು. ಆದರೆ ಅಪ್ ಡೇಟ್ ಆಗುವುದ೦ತೂ ಖಚಿತ.ಆದ್ದರಿ೦ದ ನೀವೂ ನಿಮ್ಮ ಹಳೆಯ ನ೦ಬಿಕೆಗಳು,ಕ೦ದಾಚಾರಗಳನ್ನು ಬಿಟ್ಟು ಹೊಸ ವೈಚಾರಿಕತೆಯನ್ನು ಅಳವಡಿಸಿಕೊಳ್ಳಿ. ನಮ್ಮ ಕಾಲವಾಯ್ತು, ಇವೆಲ್ಲ ನಮಗೇಕೆ ಎ೦ಬ ಉದಾಸೀನ-ಉಡಾಫೆ ಬೇಡ.

3 comments:

  1. ಇಂಗ್ಲಿಷ್-ನಲ್ಲಿ ಒಂದು ಆಡು ಮಾತಿದೆ. Except "change" nothing is permanent in this world. The world keeps changing, whether we like it or not. And with the end of the industrial age, and the advent of the information age - change has become a way of life. ಬದಲಾವಣೆ - ಬದುಕಿನ ಎಲ್ಲ ಮಜಲುಗಳಲ್ಲೂ ಒಂದು ಅನಿವಾರ್ಯತೆಯಾಗಿ ಬಿಟ್ಟಿದೆ. ನಮಗೆ ಬೇಕಿದ್ದರೂ ಅಥವಾ ಬೇಡದಿದ್ದರೂ, ಬದಲಾವಣೆ ನಮ್ಮ ಬದುಕಿನ ಭಾಗವಾಗಿದೆ. ಈ ಬದಲಾವಣೆಯ ಯುಗದಲ್ಲಿ, ಹೊಸತನ್ನು ಅರಿಯುವ, ಬದಲಾವಣೆಗೆ ಒಗ್ಗಿಕೊಳ್ಳುವ ಮನಸ್ಥಿತಿ ಬಹಳ ಮುಖ್ಯವಾಗುತ್ತದೆ. ನನ್ನ ಅಭಿಪ್ರಾಯದಲ್ಲಿ ಒಂದು ಪುಟ್ಟ ಮಗುವಿನ ಕುತೂಹಲ ನಮ್ಮಲ್ಲಿ ಇನ್ನೂ ಉಳಿದಿದ್ದರೆ, ಈ ಬದಲಾವಣೆಗೆ ಹೊಂದಿಕೊಳ್ಳುವುದು ಸುಲಭ. ನಿರಂತರ ಕಲಿಕೆ - ಯಾವ ವಿಷಯದಲ್ಲಾದರೂ ಸಹ ಬೆಳೆಸಿಕೊಂಡರೆ ಅದು ನಮ್ಮ ಬದಲಾವಣೆಗೆ ಹೊಂದಿಕೊಳ್ಳುವ ಕಷ್ಟ-ಅಇಷ್ಟ ಇಲ್ಲದಂತೆ ಮಾಡುತ್ತದೆ. ಹೊಸತನ್ನು ಕಲಿಯುವುದು ನಮಗೆ ಮನರಂಜನೆಯಾದಾಗ ಮಾತ್ರ - ಬದಲಾವಣೆಗೆ ಹೊಂದಿಕೊಳ್ಳುವುದು ಬಹಳ ಸುಲಭವಾಗುತ್ತದೆ ಎಂದು ನನ್ನ ಅನಿಸಿಕೆ. ನನ್ನ ಟಿಪ್ಪಣಿ ಉದ್ದವಾಗಿದ್ದಕ್ಕೆ ಕ್ಷಮೆಯಿರಲಿ.

    ರವಿ

    ReplyDelete
  2. ರವಿ,
    ನಿನ್ನ ವಿವರಣೆ ನನಗೆ ಬಹಳ ಹಿಡಿಸಿತು.ನೀನು ಕೊಟ್ಟಿರುವ ವಿವರಣೆಗಳೂ ಬಹಳ ಸಮ೦ಜಸವಾಗಿದೆ. ಈ ರೀತಿ ವಿವರಣೆ ಜೊತೆಗೆ ವಿಮರ್ಶೆಗಳು ಬರುತ್ತಿದ್ದರೆ ಆಣಿಮುತ್ತುಗಳನ್ನು ಆಯುವವರೂ ನಮ್ಮಲ್ಲಿ ಇರುವರೆ೦ಬುದು ತಿಳಿದು ನನಗೆ ಬಹಳ ಸ೦ತೋಷ ಹಾಗೂ ಸ್ಫೂರ್ತಿಗಳು ದೊರೆತಿವೆ. ಇಲ್ಲಿ ಕ್ಷಮಾಯಾಚನೆಯ ಪ್ರಶ್ನೆಯೇ ಬರುವುದಿಲ್ಲ.
    ಸುಶೀಲಾಗೋಪಾಲ್

    ReplyDelete
  3. ನಿಮ್ಮಂತ ಮೇಧಾವಿಗಳ ಚರ್ಚೆ, ವಿಮರ್ಶೆ ಹಾಗೂ ವಾದ ವಿವಾದಗಳಿಂದ ನಮ್ಮಂತವರಿಗೆ ಅಲ್ಪ ಸ್ವಲ್ಪ ಜ್ನಾನಾರ್ಜನೆ ಆಗುತ್ತದೆ. ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ.

    ReplyDelete

Note: Only a member of this blog may post a comment.