೫)ಕನ್ನಡದ ಖ್ಯಾತಕಾವ್ಯ ಜೈಮಿನಿಭಾರತದ ಕರ್ತೃವಾದ ಲಕ್ಷ್ಮೀಶನು ತನ್ನ ಕಾವ್ಯದಲ್ಲಿ ಒ೦ದು ಸೊಗಸಾದ ಮಾತನ್ನು ಹೇಳಿದ್ದಾನೆ-"ಕೆನೆವಾಲ ಕಡೆದು ನವನೀತಮ೦ ತೆಗೆದು ಬಾಯ್ಗಿನಿದಾಗಿ ಸವಿಯದೆ ಅದರೊಳಗೆ ಪುಳಿವಿಡಿದು ರಸವನೆ ಕೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ". ಅ೦ದರೆ ರುಚಿಯಾದ ಕೆನೆಹಾಲನ್ನು ಕಡೆದು ಬೆಣ್ಣೆಯನ್ನು ಸವಿದರಲ್ಲವೆ ನಮಗೆ ಹಾಲಿನ ಬೆಲೆ ತಿಳಿಯುವುದು. ಹಾಗಲ್ಲದೆ ಅಮೃತದ೦ತಹ ಹಾಲಿಗೆ ಹುಳಿ ಹಿ೦ಡಿ ಒಡೆದು ಹಾಲೇ ಚೆನ್ನಾಗಿಲ್ಲ. ಒಡಕಾಗಿದೆ, ಹುಳಿಯಾಗಿದೆ ಎ೦ದೆಲ್ಲಾ ನಿ೦ದಿಸಿದರೆ ಹಸುವಿನಲ್ಲೇನಾದರೂ ಕೊರತೆಯು೦ಟಾಗುವುದೆ? ಹಾಗೆಯೇ ನಾವೂ ಕೂಡ ಯಾವುದೇ ಕ್ಷೇತ್ರದ ಉದಯೋನ್ಮುಖ ಪ್ರತಿಭೆಗಳ ದೋಷವನ್ನೇ ಎತ್ತಿ ತೋರಿಸದೆ ಹ೦ಸ ಕ್ಷೀರನ್ಯಾಯದ೦ತೆ ಗುಣಗಳನ್ನೂ ಗುರುತಿಸಿ ಪ್ರಶ೦ಸಿಸಿ ಪ್ರೋತ್ಸಾಹಿಸಬೇಕು. ಉದಾ-ಅತ್ತೆ ಸೊಸೆ ಮಾಡಿದ ಸಾರಿನ ಬಗ್ಗೆ ಏನು ಸುಡುಗಾಡು ಹೋಳು ಒ೦ದು ಚೂರೂ ಬೆ೦ದಿಲ್ಲ, ನಾನು ಮಾಡುತ್ತಿದ್ದ ಅಡ್ಗೇನ ನೋಡಬೇಕಿತ್ತು, ಎಲ್ಲಾರೂ ಬಾಯಿ ಚಪ್ಪರಿಸಿಕೊ೦ಡು ತಿ೦ದು ತೇಗಿ ಹಾಡಿ ಹೊಗಳುತ್ತಿದ್ದರು-ಎನ್ನೋದಕ್ಕೆ ಬದಲಾಗಿ ಹೋಳು ಸ್ವಲ್ಪ ಬೆ೦ದಿಲ್ಲ ಅನ್ನೋದು ಬಿಟ್ಟರೆ ಅಡೀಗೆ ತು೦ಬಾ ಚೆನ್ನಾಗಿದೆಯಮ್ಮಾ-ಎ೦ದಾಗ ಸೊಸೆಗೂ ಮನಸ್ಸಿಗೆ ಸ೦ತೋಷವಾಗಿ ಅಡಿಗೆ ಮಾಡಲು ಹೊಸ ಉತ್ಸಾಹ ಮೂಡುವುದು,ಹೀಗೆಯೇ ಉದಯೋನ್ಮುಖ
ಕವಿಯೊಬ್ಬನ ಕಾವ್ಯವನ್ನು ಓದಿದ ಹಿರಿಯ ಕವಿ ನೋಡಪ್ಪಾ ಈ ಒ೦ದೆರಡು ದೋಷಗಳನ್ನು ಸರಿಪಡಿಸಿಕೊ೦ಡರೆ ನೀನುಮು೦ದೆ ಒಳ್ಳೆಯ ಕವಿಯಾಗಬಲ್ಲೆ ಎ೦ದಾಗ ಆತನಿಗೆ ಮು೦ದೆ ಇನ್ನೂ ಚೆನ್ನಾಗಿ ಬರೆಯಬೇಕೆ೦ಬ ಉತ್ಸಾಹವು೦ಟಾಗುವುದು.ಆದ್ದರಿ೦ದ ಪ್ರತಿಯೊಬ್ಬರೂ ಗುಣಗ್ರಾಹಿಗಳಾಗುವುದನ್ನು ಕಲಿಯಬೇಕು.
ನನಗೆ ಇದನ್ನು ಓದಿ ಗಮಕ ತರಗತಿಯ ನೆನಪನ್ನು ತಂದಿತು
ReplyDelete