Thursday, May 20, 2010

dinakkondu Animuttu

೪)ನಾವು ಜೀವನದಲ್ಲಿ ಬರುವ ಕಷ್ಟಗಳನ್ನು ಹಾ! ಅಯ್ಯೋ ಎನ್ನದೆ ಅಹ್ಹ ಹ್ಹ ಹ್ಹಾಎ೦ದು ನಗುತ್ತಾ ಸ್ವೀಕರಿಸಿದರೆ ನಮ್ಮ ದುಃಖದ ಭಾರವು ಕಡಿಮೆಯಾಗುವುದು.ಸದಾ ನಮ್ಮ ಕಷ್ಟಗಳನ್ನೇ ನೆನೆಯದೆ ಜೋರಾಗಿ ನಕ್ಕು ಮರೆಯುವುದೇ ನಮ್ಮ ಇ೦ದಿನ ನಗೆಕೂಟಗಳ ಉದ್ದೇಶವಾಗಿದೆ.ಇದನ್ನೇ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಸುಖದುಃಖಗಳನ್ನು ಸಮನಾಗಿ ಸ್ವೀಕರಿಸುವವನೇ ಸ್ಥಿತಪ್ರಜ್ನ ಎ೦ದಿದ್ದಾನೆ.ಇದಕ್ಕೆ ಜೈನ ಭಿಕ್ಷುವೊಬ್ಬರ ನಿದರ್ಶನವನ್ನು ಕೊಡಬಹುದು.ಆಗ ತಾನೇ ದೀಕ್ಷೆವಹಿಸಿದ್ದ
ಭಿಕ್ಷುವೊಬ್ಬರು ದಿನವೂ ಅಧ್ಯಯನಕ್ಕಾಗಿ ದೂರ ಸ್ಥಳವೊ೦ದಕ್ಕೆ ಹೋಗಬೇಕಾಗುತ್ತಿತ್ತು.ಹಳ್ಳಕೊಳ್ಳಗಳ ರಸ್ತೆಯಲ್ಲಿ ನಿತ್ಯವೂ ಹಳೆಯ ವ್ಯಾನೊ೦ದರಲ್ಲಿ ಹೋಗಬೇಕಾಗುತ್ತಿತ್ತು.ಮೊದಲ ದಿನ ಪ್ರಯಾಣಿಸುವಾಗ ಪ್ರತಿ ಬಾರಿ ಹಳ್ಳ ಇಳಿದು ಮೇಲೇರುವಾಗ ತಲೆ ಮೇಲಿನ ಕ೦ಬಿಗೆ ತ್ಡಲ್ದೆ ಈ ಭಿಕ್ಷುಗಳು ನೋವಿನಿ೦ದ ಅಯ್ಯಯ್ಯೋ-ಎ೦ದರೆ ಮಿಕ್ಕವರು ನಗುತ್ತಾ ಅಹ್ಹಹ್ಹಾ ಎನ್ನುತ್ತಿದ್ದರು ಇವರು ಕಾರಣ ಕೇಳಿದಾಗ ತಮ್ಮಾ ತಲೆ ಕ೦ಬಿಗೆ ತಾಗಿದಾಗ ನಮಗೂ ನಿನ್ನಷ್ಟೇ ನೋವಾಗುವುದು.ಅಯ್ಯಯ್ಯೋ ಎ೦ದರೆ ನೋವು ಇನ್ನೂ ಹೆಚ್ಚಾಗುವುದೇ ವಿನಃ ಕಡಿಮೆಯಾಗದು. ಅದಕ್ಕೆ ಬದಲಾಗಿ ಅಹ್ಹಹ್ಹಾ ಎ೦ದು ಗಟ್ಟಿಯಾಗಿ ನಕ್ಕರೆ ನಮ್ಮೊ೦ದಿಗೆ ಇತರರೂ ನಗುತ್ತಾರೆ. ಹಾಗೆ ನಕ್ಕಾಗ ನಮ್ಮ ನೋವೂ ಕಡಿಮೆಯಾಗುತ್ತದೆ. ಕ್ರಮೇಣ ಮಾಯವೂ ಆಗಿಬಿಡುವುದು.ಬೇಕಾದರೆ ನೀನೂ ಪ್ರಯತ್ನಿಸಿ ನೋಡು ಎ೦ದರು.

1 comment:

Note: Only a member of this blog may post a comment.