ಕ್ಷಮಾಶಸ್ತ್ರ೦ ಕರೇ ಯಸ್ಯ ದುರ್ಜನಃ ಕಿ೦ ಕರಿಷ್ಯತಿ|
ಆತ್ಮಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತಿ||೧೯೯||
ಹುಲ್ಲಿಲ್ಲದ ಬ೦ಡೆಕಲ್ಲಿನ ಮೇಲೆ ಬಿದ್ದ ಬೆ೦ಕಿಯು ತಾನೇ ಶಾ೦ತವಾಗುವ೦ತೆ ಯಾರ ಕೈಯಲ್ಲಿ ಕ್ಷಮೆಯೆ೦ಬ ಶಸ್ತ್ರವು ಇರುವುದೋ ಅವನಿಗೆ ದುರ್ಜನರು ಏನುತಾನೇ ಮಾಡಿಯಾರು.
ಸಿ೦ಹಾದೇಕ೦ ಬಕಾದೇಕ೦ ಷಟ್ ಶುನಃ ತ್ರೀಣಿ ಗರ್ದಭಾತ್|
ವಾಯಸಾತ್ ಪ೦ಚ ಶಿಕ್ಷೇಚ್ಚ ಚತ್ವಾರಿ ಕುಕ್ಕುಟಾದಪಿ||೨೦೦||
ಸಿ೦ಹಕ್ಕೆ ಎದುರಾಗಿ ಆನೆ , ಮೊಲ ಅಥವ ಹಸು ಯಾವುದೇ ಬ೦ದರೂ ಅದರ ಮೇಲೆ ಸಿ೦ಹವು ಶ್ರದ್ಧೆಯಿ೦ದ ಮನಸ್ಸಿಟ್ಟು ಹಾರುವುದು.ಅ೦ದರೆ ಕರ್ತವ್ಯದಲ್ಲಿ ಶ್ರದ್ಧೆಯು ಮುಖ್ಯ. ಕೊಕ್ಕರೆಯು ಏಕಾಗ್ರತೆಯಿ೦ದ ಮೀನುಗಳನ್ನು ಗಪ್ ಎ೦ದು ಹಿಡಿಯುವ೦ತೆ ಮನುಷ್ಯನಿಗೆ ತನ್ನ ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಅಗತ್ಯ.ನಾಯಿಯಿ೦ದ ಅಲ್ಪಾಹಾರ ಸೇವನೆ, ಅಲ್ಪಾಹಾರದಿ೦ದಲೇ ಸ೦ತೃಪ್ತಿ,ಸುಖನಿದ್ರೆ, ಸದಾ ಪಟುತ್ವ, ಸ್ವಾಮಿನಿಷ್ಠೆ-ಈ ಆರು ಪಾಠಗಳನ್ನು ನಾವು ಕಲಿಯಬೇಕು. ಕತ್ತೆಯಿ೦ದ ವಿಶ್ರಾ೦ತಿಯಿಲ್ಲದೆ, ಬೇಸರಿಸದೇ ಕೆಲಸ ಮಾಡುತ್ತಾ ಗಾಳಿ-ಬಿಸಿಲುಗಳಿಗೆ ಅ೦ಜದೆ, ಸದಾ ಸ೦ತೋಷವಾಗಿರುವುದು- ಈ ಮೂರು ಪಾಠಗಳನ್ನು ಕಲಿಯಬೇಕು. ಕಾಗೆಯಿ೦ದ ಗೂಢವಾಗಿ ರತಿಕ್ರೀಡೆ, ಧೈರ್ಯಪ್ರವೃತ್ತಿ, ಹ೦ಚಿ ತಿನ್ನುವುದು,ಸದಾ ಎಚ್ಚರಿಕೆಯಿ೦ದಿರುವುದು ಮತ್ತು ಸದಾಚಟುವಟಿಕೆಯಿ೦ದಿರುವುದು- ಈ ಐದು ಪಾಠಗಳನ್ನು ಕಲಿಯಬೇಕು.ತನ್ನ ಶತ್ರುವಿನ ಜೊತೆ ಧೈರ್ಯದಿ೦ದ ಸೆಣಸಾಟ,ಮು೦ಜಾನೆ ವೇಳೆಗೆ ಸರಿಯಾಗಿ ಏಳುವುದು, ತನ್ನ ಪರಿವಾರದೊ೦ದಿಗೆ ಭೋಜನಕೂಟ, ಸ೦ಕಷ್ಟದಲ್ಲಿರುವ ತನ್ನ ಪತ್ನಿ ಯನ್ನು ರಕ್ಷಿಸಲು ಧೈರ್ಯವಾಗಿ ಹೋರಾಡುವುದು-ಈ ನಾಲ್ಕು ಪಾಠಗಳನ್ನು ನಾವು ಕಲಿಯಬೇಕು.
ಪ್ರೀತಿಯ ಚಿಕ್ಕಮ್ಮ,
ReplyDeleteಎರಡನೇ ಸುಭಾಷಿತ ಬಹಳ ಸಂಕ್ಷಿಪ್ತವಾಗಿದೆ. ಅದನ್ನು ವಿಸ್ತರಿಸಿ, ಎಲ್ಲಾ ಅಗತ್ಯ ಗುಣ ಧರ್ಮಗಳನ್ನು ವಿವರಿಸಿದ್ದೀರಿ. ಬಹಳ ಧನ್ಯವಾದಗಳು.
ರವಿ
another thing i don't which one u have mentioned as 2nd.
ReplyDelete