Friday, June 10, 2011

SARVAJNA & DVG

ಅವಯವಗಳೆಲ್ಲರಿಗೆ ಸಮವಾಗಿ ಇರುತಿರಲು
ಭವಿ ,ಭಕ್ತ, ಶೂದ್ರರಿವರಿ೦ತೆ೦ಬ
ಕವನವೆತ್ತಣದೊ ಸರ್ವಜ್ಞ||೨||
ಚಾತುರ್ವೇದಗಳ ಧರ್ಮರಹಸ್ಯವನ್ನೇ ಅರಿಯದೆ, ಬ್ರಾಹ್ಮಣನೇ ಶ್ರೇಷ್ಠ ಮಿಕ್ಕವರೆಲ್ಲರೂ ಕೀಳು ಎ೦ದು ಅಲ್ಲಗಳೆಯುವ, ಬ್ರಾಹ್ಮಣ್ಯದ ಅರ್ಥವನ್ನೇ ಅರಿಯದ ಬ್ರಾಹ್ಮಣರನ್ನು ಸರ್ವಜ್ಞನು ಈ ರೀತಿ ಅಲ್ಲಗಳೆಯುತ್ತಾನೆ.ಸಕಲಜಾತಿಯವರಿಗೂ ಒ೦ದೇ ರೀತಿಯ ಅವಯವಗಳಿದ್ದು, ಅವುಗಳ ಕಾರ್ಯಕ್ಷಮತೆಯೂ ಒ೦ದೇ ಆಗಿರುವಾಗ ಇವನು ಬ್ರಾಹ್ಮಣ, ಇವನು ಶೂದ್ರ ಮತ್ತೊಬ್ಬನು ಶ್ವಪಚ -ಎ೦ದು ದೂರುವುದರಲ್ಲಿ ಅರ್ಥವಿಲ್ಲ.


ಅನ್ಯ ಸತಿಯನು ಕ೦ಡು ತನ್ನ ಹೆತ್ತವಳೆ೦ದು
ಮನ್ನಿಸಿ ನಡೆವ ಪುರುಷ೦ಗೆ ಇಹಪರದಿ
ಮುನ್ನ ಭಯವಿಲ್ಲ||೩||
ಪರಸತಿಯನ್ನು ಹೆತ್ತತಾಯಿಯ೦ತೆ ಗೌರವಿಸಿ ನಡೆಯುವ ಪುರುಷನಿಗೆ ಇಹಪರಗಳೆರಡರಲ್ಲೂ ಯಾವ ರೀತಿಯ ನೈತಿಕ ಭಯವೂಇರುವುದಿಲ್ಲ.

No comments:

Post a Comment

Note: Only a member of this blog may post a comment.