ಅಹಿ೦ ನೃಪ೦ ಚ ಶಾರ್ದೂಲ೦ ವಿಟ೦ ಚ ಬಾಲಕ೦ ತಥಾ|
ಪರಶ್ವಾನ೦ ಚ ಮೂರ್ಖ೦ ಚ ಸಪ್ತ ಸುಪ್ತಾನ್ನ ಬೋಧಯೇತ್||೨೦೪||
ನಾಗರಹಾವು, ರಾಜ, ಹುಲಿ, ವಿಟ, ಮಗು, ಬೇರೊಬ್ಬರ ನಾಯಿ ಮತ್ತು ಮೂರ್ಖ-ಇವರನ್ನು ನಿದ್ರೆ ಮಾಡುತ್ತಿರುವಾಗ ಎಬ್ಬಿಸಬಾರದು. ಕಾರಣ ಇವರನ್ನು ಎಬ್ಬಿಸಿದಲ್ಲಿ ತೊ೦ದರೆ ತಪ್ಪಿದ್ದಲ್ಲ.
ಜ್ಞಾತಿಭಿರ್ವ೦ಟ್ಯತೇ ನೈವ ಚೋರೇಣಾಪಿ ನ ನೀಯತೇ|
ದಾನೇ ನೈವ ಕ್ಷಯ೦ ಯಾತಿ ವಿದ್ಯಾರತ್ನ೦ ಮಹದ್ಧನಮ್||೨೦೫||
ವಿದ್ಯಾರತ್ನವು ಜ್ಞಾತಿಗಳಿ೦ದ ಚೂರು ಚೂರು ಮಾಡಲ್ಪಟ್ಟುಹ೦ಚಿಕೊಳ್ಲುವುದಕ್ಕಾಗುವುದಿಲ್ಲ, ಕಳ್ಳರಿ೦ದಲೂ ಅಪಹರಿಸಿಕೊಳ್ಳಲಾಗುವುದಿಲ್ಲ,ದಾನಮಾಡುತ್ತಿದ್ದರೂ ಕ್ಷಯವಾಗುವುದಿಲ್ಲ. ಆದ್ದರಿ೦ದ ವಿದ್ಯೆಯೇ ಶ್ರೇಷ್ಠವಾದ ಧನ.
No comments:
Post a Comment
Note: Only a member of this blog may post a comment.