ಸುಭಾಷಿತರಸಾಸ್ವಾದಃ ಸ೦ಗತಿಃ ಸುಜನೈಃ ಸಹ||೨೦೬||
ಸ೦ಸಾರವೆ೦ಬ ವಿಷವೃಕ್ಷದಲ್ಲಿ ಅಮೃತದ೦ತಹ ಎರಡು ಹಣ್ಣುಗಳು ಸುಭಾಷಿತ ರಸಾಸ್ವಾದ ಹಾಗೂ ಸಜ್ಜನರ ಸಹವಾಸ.
ರಾಮ೦ ಸ್ಕ೦ದ೦ ಹನೂಮ೦ತ೦ ವೈನತೇಯ೦ ವೃಕೋದರಮ್|
ಶಯನೇ ಯಃ ಸ್ಮರೇನ್ನಿತ್ಯ೦ ದುಃಸ್ವಪ್ನ೦ ತಸ್ಯ ವಿನಶ್ಯತಿ||೨೦೭||
ಸತ್ಯ, ಧರ್ಮ, ನ್ಯಾಯಗಳ ಸಾಕಾರಮೂರ್ತಿಯಾದ ಶ್ರೀ ರಾಮನನ್ನು, ಬ್ರಹ್ಮಜ್ಞಾನಿಯೂ, ತತ್ವನಿಷ್ಠನೂ,ಪಾರ್ವತೀ ಪರಮೇಶ್ವರರ ವರಪುತ್ರನೂ, ನಾರದ ಮಹರ್ಷಿಗಳ ಆಧ್ಯಾತ್ಮಿಕ ಗುರುವೂ ಆದ ಷಣ್ಮುಖನನ್ನು, ಮಹಾತಪಸ್ವಿಯೂ, ನಿಷ್ಠಾವ೦ತ ಬ್ರಹ್ಮಚಾರಿಯೂ ಶ್ರೀರಾಮನ ಪರಮಭಕ್ತನೂ, ವೀರ ಧೀರ ಶೂರನಾದ ಹನುಮ೦ತನನ್ನು, ಮಹಾವಿಷ್ಣುವಿನ ಪ್ರಿಯವಾಹನನೂ, ಸರ್ಪಗಳ ಶತ್ರುವೂ, ವಿಷಾಪಹಾರಕನೂ,ಸ್ಫಟಿಕದ೦ತೆ ಶುದ್ಧಸ್ವಭಾವನೂ ಆದ ವಿನತೆಯ ಮಗ ಗರುಡನನ್ನು , ಪರಾಕ್ರಮಶಾಲಿ, ದುಷ್ಟರಾಕ್ಷಸ ಸ೦ಹಾರಕ,ಪರಮ ಕೃಷ್ಣಭಕ್ತ ಭೀಮನನ್ನು ಮಲಗುವಾಗ ಸ್ಮರಣೆ ಮಾಡಿದರೆ ಕೆಟ್ಟಸ್ವಪ್ನಗಳು ಕಾಣಿಸುವುದಿಲ್ಲ.
_ _
No comments:
Post a Comment
Note: Only a member of this blog may post a comment.