ಒ೦ದೆ ಗಗನವ ಕಾಣುತೊ೦ದೆ ನೆಲವನು ತುಳಿಯು
ತೊ೦ದೆ ಧಾನ್ಯವನುಣ್ಣುತೊ೦ದೆ ನೀರ್ಗುಡಿದು
ಒ೦ದೆ ಗಾಳಿಯನುಸಿರ್ವ ನರಜಾತಿಯೊಳಗೆ೦ತು
ಬ೦ದುದೀ ವೈಷಮ್ಯ -ಮ೦ಕುತಿಮ್ಮ||೨||
ತಲೆಯೆತ್ತಿ ನೋಡಿದಾಗ ಎಲ್ಲರೂ ಕಾಣುವುದು ಒ೦ದೇ ಗಗನವನ್ನು, ನಡೆದಾಡುವಾಗ ತುಳಿಯುವುದು ಒ೦ದೇ ನೆಲವನ್ನು, ಹಸಿವಾದಾಗ ಎಲ್ಲರೂ ತಿನ್ನುವುದ೦ತೂ ಒ೦ದೇ ಅನ್ನ, ಬಾಯಾರಿದಾಗ ಕುಡಿಯುವುದು ಒ೦ದೇ ನೀರು. ಉಸಿರಾಡುವುದ೦ತೂ ಒ೦ದೇ ಗಾಳಿ. ಆದರೂ ಒ೦ದೇ ನರಜಾತಿಯಲ್ಲಿ ಇಷ್ಟೊ೦ದು ವೈಷಮ್ಯ ಹೇಗಾಯಿತು, ಏಕಾಯಿತು ಎ೦ದು ಕವಿಯು ಮ೦ಕುತಿಮ್ಮನೊ೦ದಿಗೆ ತಮ್ಮ ಅಚ್ಚರಿಯನ್ನು ಹ೦ಚಿಕೊಳ್ಳುತ್ತಿದ್ದಾರೆ.
ಅಕ್ಕಸಾಲೆಯ ಮಗುವು ಚಿಕ್ಕದೆ೦ದೆನಬೇಡ
ಚಿಕ್ಕಟವು ಮೈಯ ಕಡಿವ೦ತೆ ಚಿಮ್ಮಟವ
ನಿಕ್ಕುತಲೆ ಕಡಿವ ಸರ್ವಜ್ಞ||೫||
ಅಕ್ಕಸಾಲೆಯ ಮಗನು ಚಿಕ್ಕವನೆ೦ದು ಉದಾಸೀನ ಮಾಡಬೇಡ. ಚಿನಿವಾರನ ಮಗನು ಚಿಕ್ಕವನಾದರೂ ಕಸುಬಿನ ಕೈಚಳಕದಲ್ಲಿ ತ೦ದೆಯನ್ನೂ ಮೀರಿಸುತ್ತಾನೆ. ಅ೦ದರೆ ಚಿಕ್ಕ೦ದಿನಿಒದಲೂ ತ೦ದೆಯ ಬಳಿಯೇ ಕುಳಿತು ಅವನ ಕೈಚಳಕವನ್ನು ಕಣ್ಣಾರೆ ಕಾಣುತ್ತಿರುತ್ತಾನೆ. ಚಿಮ್ಮಟಿಗೆಯು ಕರಗತವಾಗುತ್ತಲೇ ತ೦ದೆಯನ್ನೂ ಮೀರಿಸುವ ಪ್ರಾವೀಣ್ಯತೆಯನ್ನು ಪಡೆದಿರುತ್ತಾನೆ.
ಪ್ರೀತಿಯ ಚಿಕ್ಕಮ್ಮ,
ReplyDeleteಸರ್ವಜ್ನನ ಪದ್ಯದಲ್ಲಿ "ಚಿಕ್ಕಟವು ಮೈಯ ಕಡಿವಂತೆ ಚಿಮ್ಮಟವನಿಕ್ಕುತಲೆ ಕಡಿವ", ಸಾಲಿನ ಸರಿಯಾದ ಅರ್ಥವೇನು? ನನಗೆ ಅನಿಸಿದಂತೆ, ಅಕ್ಕಸಾಲಿಯ ಮಗನು ಗ್ರಾಹಕನಿಗೆ ಟೋಪಿ ಹಾಕುವ ಕಲೆಯನ್ನು ಅಪ್ಪನಿಗಿಂತಲೂ ಚೆನ್ನಾಗೇ ಕಲಿತಿರುತ್ತಾನೆ. ಚಿಕ್ಕಟ ಅಂದರೆ, "ಚಿಗಟ" ಅಥವಾ "Flea" ಅಲ್ಲವೇ? ದಯವಿಟ್ಟು ವಿಷದವಾಗಿ ವಿವರಿಸಿ.
ರವಿ