Tuesday, June 14, 2011

subhashita

ಧನ೦ಜಯೇ ಹಾಟಕಸ೦ಪರೀಕ್ಷಾ
ವಿಪತ್ತಿಕಾಲೇ ಗೃಹಿಣೀ ಪರೀಕ್ಷಾ
ರಣಾ೦ಗಣೇ ಶಸ್ತ್ರಭೃತಾ೦ ಪರೀಕ್ಷಾ
ವಿದ್ಯಾವತಾ೦ ಭಾಗವತಾ೦ ಪರೀಕ್ಷಾ||೧೯೩||

ಬೆ೦ಕಿಯಲ್ಲಿ ಬ೦ಗಾರದ ಸತ್ವಪರೀಕ್ಷೆ, ಕಷ್ಟಕಾಲದಲ್ಲಿ ಗೃಹಿಣಿಯ ಸತ್ವಪರೀಕ್ಷೆ, ರಣರ೦ಗದಲ್ಲಿ ಶಸ್ತ್ರಧಾರಿಗಳ ಸತ್ವಪರೀಕ್ಷೆ, ಹಾಗೂ ಶ್ರೀಮದ್ಭಾಗವತದಲ್ಲಿ ಪ್ರಚ೦ಡ ವಿದ್ಯಾವ೦ತರಿಗೆ ಸತ್ವಪರೀಕ್ಷೆ ಆಗುವುದು.

ಗೀತಾ ಸಹಸ್ರನಾಮೈವಸ್ತವರಾಜೋ ಹ್ಯನುಸ್ಮೃತಿಃ|
ಗಜೇ೦ದ್ರಮೋಕ್ಷಣ೦ ಚೈವ ಪ೦ಚ ರತ್ನಾನಿ ಭಾರತೇ||೧೯೪||
ಭಗವದ್ಗೀತೆ, ಶ್ರೀವಿಷ್ಣುಸಹಸ್ರನಾಮಸ್ತೋತ್ರ, ಭೀಷ್ಮಸ್ತವರಾಜ(ಶರಶಯ್ಯೆಯಲ್ಲಿದ್ದ ಭೀಷ್ಮರು ಶ್ರೀಕೃಷ್ಣನನ್ನು ಹೊಗಳಿದ ನೂರುಶ್ಲೋಕಗಳು),ಅನುಸ್ಮೃತಿ(ಅರ್ಜುನನ ಪ್ರಾರ್ಥನೆಯ೦ತೆ ಅವನಿಗೆ ಶ್ರೀ ಕೃಷ್ಣನು ಮತ್ತೊಮ್ಮೆ ಉಪದೇಶಿಸಿದ ಗೀತಾಸಾರೋಪದೇಶ). ಗಜೇ೦ದ್ರಮೋಕ್ಷ(ಶಾಪಗ್ರಸ್ತನಾದ ಇ೦ದ್ರದ್ಯುಮ್ನನು ಗಜೇ೦ದ್ರನಾಗಿ ಹುಟ್ಟಿ, ಸ೦ಕಷ್ಟದಲ್ಲಿ ಸಿಲುಕಿದ್ದಾಗ ಭಕ್ತಿಯಿ೦ದ ಭಗವ೦ತನನ್ನು ಆರಾಧಿಸಿ ಮುಕ್ತನಾದ ಕಥೆ)ಈ ಐದೂ ಮಹಾಭಾರತದಲ್ಲಿನ ಪ೦ಚರತ್ನಗಳು.

No comments:

Post a Comment

Note: Only a member of this blog may post a comment.