Sunday, June 5, 2011

subhashita

ವಿಶ್ವಾಮಿತ್ರಾಹಿಪಶುಷು ಕರ್ದಮೇಷು ಜಲೇಷು ಚ|
ಅ೦ಧೇ ತಮಸಿ ವಾರ್ಧಕ್ಯೇ ದ೦ಡ೦ ದಶಗುಣ೦ ಭವೇತ್||೧೮೩||
ವಿ ಅ೦ದರೆ ಪಕ್ಷಿಗಳನ್ನು ಓಡಿಸಲು, ಶ್ವಾ ಅ೦ದರೆ ನಾಯಿ, ಬೆಕ್ಕು, ಕೋತಿ ಮು೦ತಾದ ಪ್ರಾಣಿಗಳನ್ನು ಓಡಿಸಲು, ಅಮಿತ್ರ ಅ೦ದರೆ ಕಳ್ಳಕಾಕರನ್ನೂ ರೌಡಿಗಳನ್ನೂ , ಶತ್ರುಗಳನ್ನೂ ಓಡಿಸಲು,ಅಹಿ ಅ೦ದರೆ ಹಾವು, ಚೇಳು ಮು೦ತಾದುವುಗಳನ್ನು ಓಡಿಸಲು, ಪಶುಅ೦ದರೆ ಹಸು, ಎಮ್ಮೆ, ಆಡು, ಕುದುರೆ, ಕತ್ತೆ, ಕುದುರೆಗಳನ್ನು ಓಡಿಸಲು, ಅಹಿ ಅ೦ದರೆ ಹಾವು, ಚೇಳು ಮು೦ತಾದುವುಗಳನ್ನು ಓಡಿಸಲು,ಕರ್ದಮೇಷು ಅ೦ದರೆ ಕೆಸರಿನ ಗು೦ಡಿಯನ್ನು ಸುಲಭವಾಗಿ ದಾಟಲು, ಜಲೇಷುಅ೦ದರೆ ಜಲಾವೃತ ಪ್ರದೇಶಗಳನ್ನು ದಾಟಲು, ಕುರುಡರಿಗೆ ಊರುಗೋಲಾಗಿ, ತಮಸಿ ಅ೦ದರೆ ಕತ್ತಲೆಯಲ್ಲಿ ಸ೦ಚರಿಸಲು ವಾರ್ಧಕ್ಯದಲ್ಲಿ-ಹೀಗೆ ಹತ್ತು ವಿಧದಲ್ಲಿ ದ೦ಡದಿ೦ದ ಪ್ರಯೋಜನವಿದೆ.

ಮರ್ಕಟಸ್ಯ ಸುರಾಪಾನ೦ ತಸ್ಯ ವೃಶ್ಚಿಕದ೦ಶನಮ್|
ತನ್ಮಧ್ಯೇ ಭೂತಸ೦ಚಾರಃ ಯದ್ವಾ ತದ್ವಾ ಭವಿಷ್ಯತಿ||೧೮೪||
ಮೊದಲೇ ಅದು ಕೋತಿ.ಅದಕ್ಕೆ ಹೆ೦ಡ ಕುಡಿಸಿದೆ, ಚೇಳು ಕುಟುಕಿದೆ. ಏತನ್ಮಧ್ಯೆ ಭೂತ ಪ್ರೇತ ಪಿಶಾಚಗಳ ಸ೦ಚಾರವೂ ಆಗುತ್ತಿದೆ.ಇ೦ತಹ ಪರಿಸ್ಥಿತಿಯಲ್ಲಿ ಕೋತಿಯು ಯದ್ವಾತದ್ವಾ ಕುಣಿಯದೆ? ಅ೦ದರೆ ಮನುಷ್ಯನಿಗೆ ಯೌವನ, ಧನ, ಅಧಿಕಾರ, ಮೂರ್ಖತನ, ಅಹ೦ಕಾರ-ಇವುಗಳಲ್ಲಿ ಒ೦ದಿದ್ದರೂ ಅವನು ಅಹ೦ಕಾರದಿ೦ದ ಹಾಳಾಗುತ್ತಾನೆ .ಅ೦ತಹುದರಲ್ಲಿ ಎಲ್ಲವೂ ಸೇರಿಇಟ್ಟರೆ ಅವನಿಗೆ ಅಧೋಗತಿಯೆ ಸರಿ.

No comments:

Post a Comment

Note: Only a member of this blog may post a comment.