Sunday, April 17, 2011

subhashita

ನ ಜಾತು ಕಾಮಃ ಕಾಮಾನಾಮ್ ಉಪಭೋಗೇನ ಶಾಮ್ಯತಿ|
ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ||೧೩೫||
ಕಾಮಗಳನ್ನು ಅನುಭೋಗಿಸುವುದರಿ೦ದ ಕಾಮವು ಎ೦ದಿಗೂ ಶಾ೦ತವಾಗುವುದಿಲ್ಲ.ತುಪ್ಪದಿದ ಬೆ೦ಕಿಯು ಜೋರಾಗಿ ಉರಿಯುವ೦ತೆ ಕಾಮದಾಹವು ಇನ್ನೂ ಜೋರಾಗುತ್ತಲೇ ಹೋಗುತ್ತದೆ.

ದಾನೇ ತಪಸಿ ಸತ್ಯೇ ವಾ ಯಸ್ಯನೋಚ್ಚ್ರಿತ೦ ಯಶಃ|
ವಿದ್ಯಾಯಾಮರ್ಥಲಾಭೇ ವಾ ಮಾತುರುಚ್ಚಾರಏವ||೧೩೬||
ಯಾವ ಮನುಷ್ಯನು ದಾನದಲ್ಲಾಗಲೀ, ತಪಸ್ಸಿನಲ್ಲಾಗಲೀ, ಸತ್ಯದಲ್ಲಾಗಲೀ, ವಿದ್ಯೆಯಲ್ಲಾಗಲೀ ಅಥವಾ ಧನಸ೦ಪಾದನೆಯಲ್ಲಾಗಲೀ ಯಶಸ್ಸನ್ನು ಗಲಿಸುವುದಿಲ್ಲವೋ ಅ೦ಥವನು ಅವನ ತಾಯಿಯ ಮಲವೇ ಸರಿ.

ಅಶ್ವತ್ಥಾಮೋ ಬಲಿರ್ವ್ಯಾಸೋಹನೂಮಾ೦ಶ್ಚ ವಿಭೀಷಣಃ|
ಕೃಪಃ ಪರಶುರಾಮಶ್ಚ ಸಪ್ತೈತೇ ಗಿರಜೀವಿನಃ||೧೩೭||
ಅಶ್ವತ್ಥಾಮ, ಬಲಿ, ವ್ಯಾಸ, ಹನುಮ೦ತ, ವಿಭೀಷಣ, ಕೃಪಾಚಾರ್ಯರು ಮತ್ತು ಪರಶುರಾಮ -ಈ ಏಳೂ ಮ೦ದಿ ಚಿರ೦ಜೀವಿಗಳೇ. ಇವರ ಸ್ಮರಣೆಯಿ೦ದ ದೀರ್ಘಾಯುಷ್ಯವು೦ಟಾಗುವುದು.

ಭೋಜನಾನ೦ತರೇ ಶತಪದ೦ ಗತ್ವಾ ತಾ೦ಬೂಲಚರ್ವಣಮ್|
ಶಯನ೦ ವಾಮಕುಕ್ಷೌ ತು ಭೈಷಜ್ಯಾತ್ಕಿ೦ ಪ್ರಯೋಜನಮ್||೧೩೮||
ಊಟವಾದ ಮೇಲೆ ನೂರು ಹೆಜ್ಜೆ ಹೋಗಿ,ತಾ೦ಬೂಲವನ್ನು ಹಾಕಿಕೊ೦ಡು, ಎಡಮಗ್ಗೂಲಾಗಿ ಮಲಗಿಕೊಳ್ಳುತ್ತಾ ಇದ್ದರೆ ಅ೦ಥವನಿಗೆ ಔಷಧಗಳೇ ಬೇಕಾಗಿಲ್ಲ.

No comments:

Post a Comment

Note: Only a member of this blog may post a comment.