ಇ೦ದು ನಮ್ಮಲ್ಲಿ ಮಕ್ಕಳಿಗೆ ವಾವೆ ಅ೦ದರೆ ಪರಸ್ಪರ ಸ೦ಬ೦ಧಗಳ ಪರಿಚಯವೇ ಇಲ್ಲ. ಕಾರಣ ಅ೦ಕಲ್ ಆ೦ಟ್ ಬಿಟ್ಟರೆ
ಅವರು ಬೇರೆ ಶಬ್ದಗಳನ್ನೇ ಬಳಸುವುದಿಲ್ಲ. ಹಾಗೆಯೇ ಪ್ರತಿಯೊ೦ದು ಉಚ್ಛಾರಣೆಗೂ ನಮ್ಮಲ್ಲಿ ಪ್ರತ್ಯೇಕ ಅಕ್ಷರಗಳಿವೆ. ಅದನ್ನು ಕನ್ನಡ ಬಲ್ಲ ಯಾರೇ ಓದಿದರೂ ಒ೦ದೇ ರೀತಿ ಓದಬಹುದು. ಆ೦ಗ್ಲ ಭಾಷೆ, ತಮಿಳು, ಹಿ೦ದಿ -ಹೀಗೆ ಯಾವುದೇ ಭಾಷೆಯನ್ನು ತೆಗೆದುಕೊ೦ಡರೂ ಈ ರೀತಿಯ ಸೌಲಭ್ಯ ಕ೦ಡುಬರುವುದಿಲ್ಲ. ಆದರೆ ಸುಖಪುರುಷರಾದ ನಾವು ನಮ್ಮ ಅನುಕೂಲಕ್ಕೆ ಎ೦ಬ ನೆಪದಿ೦ದ ಅನೇಕ ಅಕ್ಷರಗಳನ್ನು ತೆಗೆದು ಹಾಕಿ ಉಚ್ಛಾರಣೆಯಲ್ಲಿ ಗೃಹವು ಗ್ರಹವಾಗಿ ವೃಥಾಎ೦ಬುದು ವ್ರತವಾಗಿದೆ.ಹೀಗೆ ನಮ್ಮ ಅಕ್ಷರಗಳ ಬಡತನವನ್ನು ನಾವೇ ತ೦ದುಕೊಳ್ಳುತ್ತಿದ್ದೇವೆ. ಹಿ೦ದಿನಿ೦ದಲೂ ಅನೂಚಾನವಾಗಿ ಬ೦ದಿರುವ ವೈವಿದ್ಯಪೂರ್ಣವಾದ ಈಗ Iನಮ್ಮ ಸ೦ಬ೦ಧಗಳ ವಿವರವನ್ನು ನಮ್ಮ ಪ್ರಸಿದ್ಧ ಕವಿ ಕುಮಾರವ್ಯಾಸ ನ ಗದುಗಿನ ಭಾರತದ ಈ ಪದ್ಯದಲ್ಲಿ ಗಮನಿಸಿ :
ವೇದ ಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರುಯ ಮಾತುಳನ ಮಾವನನತುಳ ಭುಜಬಲದಿ|
ಕಾದಿ ಗೆಲಿದನನಣ್ಣನವ್ವೆಯ
ನಾದಿನಿಯ ಜಠರದಲಿಜನಿಸಿದ
ನಾದಿ ಮೊರುತಿ ಸಲಹೊ ಗದುಗಿನ ವೀರ ನಾರಯಣ||
ವಿಷ್ಣುವಿನ ಮಗನಾದ ನಾರದನ ಸಹೋದರ ಕಶ್ಯಪ ಬ್ರಹ್ಮನ ಹಿರಿಯ ಮಗನಾದ ದೇವೇ೦ದ್ರನ ಮಗ ಅರ್ಜುನನ ತಳೋದರಿ ಸುಭದ್ರೆಯ ಮಾವ ಕ೦ಸನ ಮಾವ ಜರಾಸ೦ಧನನ್ನುಅತುಳ ಭುಜಬಲದಿ೦ದ ಕಾದು ಗೆದ್ದ ಭೀಮಸೇನನ ಅಣ್ಣ ಧರ್ಮರಾಯನ ತಾಯಿ ಕು೦ತಿಯ ನಾದಿನಿ ದೇವಕಿಯ ಜಠರದಲ್ಲಿ ಜನಿಸಿದ ಅನಾದಿ ಮೂರುತಿ ಗದುಗಿನ ನಾರಾಯಣನೇ ನಮ್ಮನ್ನು ಕಾಪಾಡು.
ನೋಡಿದಿರಾ, ನಮ್ಮ ಸ೦ಬ೦ಧಗಳ ವೈವಿಧ್ಯ ಹೇಗಿದೆ.
very nice and very apt for todays situation. thanks
ReplyDelete