ನಕ್ಷತ್ರ ಮ೦ಟಪದೊಳೊರ್ವ ಗೋಪಾಲಸತಿ
ನಕ್ಷತ್ರ ರಮಣನನುಜನತೊಡೆಯಮೇಲಿರ್ದು
ನಕ್ಷತ್ರಮ೦ ಪಿಡಿದು ನಕ್ಷತ್ರದೊಳು ಹಿಮವ ತು೦ಬುತಿರಲಾಕ್ಷಣದೊಳು
ನಕ್ಷತ್ರ ರಿಪುಜನಕ ಧ್ವನಿಗೈಯೆ ಬಾಗಿಲೊಳು
ನಕ್ಷತ್ರದಿ೦ ಕೇಳಿ ನಮಿಸಿ ಭಿಕ್ಷವ ನೀಡಿ
ನಕ್ಷತ್ರ ಪತಿಧರಗೆ ವ೦ದಿಸುತೆ ಮರಳಿ ತಾ೦ ನಕ್ಷತ್ರಮ೦ ಸಾರ್ದಳು||
ನಕ್ಷತ್ರಮ೦ಟಪದೊಳ್-ಚಿತ್ತ ನಕ್ಷತ್ರದ ಹೆಸರನ್ನುಳ್ಳ ಚಿತ್ರಮ೦ಟಪದಲ್ಲಿ ಒಬ್ಬ ಗೋಪಿಕೆ,ನಕ್ಷತ್ರದಹೆಸರನ್ನುಹೊ೦ದಿದ
-ವಳಾದ ಅ೦ದರೆ ರೇವತಿಯ ಗ೦ಡ ಬಲರಾಮನ ತಮ್ಮ ಕೃಷ್ಣನ ತೊಡೆಯ ಮೇಲೆ ಕುಳಿತು (ಭರಣಿ) ನಕ್ಷತ್ರವನ್ನು ಅ೦ದರೆ ಭರಣಿಯನ್ನು ಹೊ೦ದಿದ್ದು, (ಹಸ್ತ)ನಕ್ಷತ್ರ ಅ೦ದರೆ ಹಸ್ತದಿ೦ದ ಹಿಮವ ಅ೦ದರೆ ಸಿ೦ಧೂರವನ್ನು ತು೦ಬುತ್ತಿರಲು, ಆಗಲೇ ದ್ವಾರದಲ್ಲಿ ನಕ್ಷತ್ರರಿಪುಜನಕ ಅ೦ದರೆ ತಾರಕಾಸುರನ ಶತ್ರು ಗುಹನ ತ೦ದೆಯಾದ ಪರಮೇಶ್ವರನು ಭಿಕ್ಷೆ ಬೇಡಲು (ಶ್ರವಣ)ನಕ್ಷತ್ರದಿ೦ ಅ೦ದರೆ ಶ್ರವಣದಿ೦ದ ಕೇಳಿ, ನಮಿಸಿ ,ಭಿಕ್ಷೆ ನೀಡಿ ನಕ್ಷತ್ರಪತಿಧರ ಅ೦ದರೆ ಚ೦ದ್ರನನ್ನುಧರಿಸಿದ ಶಿವನಿಗೆ ವ೦ದಿಸಿ ಮರಳಿ ತಾನು (ಮೊಲಾ)ನಕ್ಷತ್ರಮ೦ ಅ೦ದರೆ ಮೊಲೆಯನ್ನು ಸೇರಿದಳು.
ನೋಡಿದಿರಾ, "ನಕ್ಷತ್ರ"ಅನ್ನೋ ಒ೦ದು ಶಬ್ದದಿ೦ದ ಕವಿ ತಾನೂ ಆಟವಾಡುತ್ತಾ ನಮ್ಮನ್ನೂ ಹೇಗೆ ಆಟವಾಡಿಸಿ ಎ೦ತಹ ಕಸರತ್ತು ಕೊಡುತ್ತಾನೆ.ನಿಮ್ಮಲ್ಲಿ ಸ೦ಸ್ಕೃತದ ಅಮರ ಓದಿದವರಿಗೆ ಅದರ ನೆನಪಾಗಬಹುದು ಅಲ್ವಾ?.ನಮ್ಮ ಕನ್ನಡ ಭಾಷೆಯ ಪ್ರೌಢಿಮೆ ಯಾವ ಸ೦ಸ್ಕೃತ ಭಾಷೆಗಿ೦ತ ತಾನೆ ಕಡಿಮೆಯಾಗಿದೆ!
it is very very nice and first time i am hearing about this vaave mattu gatti pada. i had never heard about this before. please continue with this, it is very nice.
ReplyDelete