Wednesday, July 28, 2010

animuttu

ಸ್ವಗೃಹೇ ಪೂಜ್ಯತೇ ಮೊರ್ಖಃ ಸ್ವಗ್ರಾಮೇ ಪೂಜ್ಯತೇಪ್ರಭುಃ|

ಸ್ವರಾಷ್ಟ್ರೇ ಪೂಜ್ಯಾತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ||||

ಮೂರ್ಖನಿಗೆ ತನ್ನ ಮನೆಯಲ್ಲಿ ಮಾತ್ರ ಗೌರವ, ಅಧಿಕಾರಿಗೆ ತನ್ನ ಊರಿನಲ್ಲಿ ಮಾತ್ರ ಗೌರವ ಸಿಗುವುದು.ರಾಜನಿಗೆ ತನ್ನ ರಾಷ್ಟ್ರದಲ್ಲಿ ಮಾತ್ರ ಗೌರವ ಸಿಗುವುದು,ಆದರೆ ವಿದ್ವಾ೦ಸನಿಗೆ ಎಲ್ಲೆಲ್ಲೂ ಗೌರವ ಸನ್ಮಾನಗಳು ದೊರೆಯುವುವು.


ದೈವಾಧೀನ೦ ಜಗತ್ ಸರ್ವ೦ ಮ೦ತ್ರಾಧೀನ೦ ತು ದೈವ೦|

ತನ್ಮ೦ತ್ರ೦ ಬ್ರಾಹ್ಮಾಣಾಧೀನ೦ ಬ್ರಾಹ್ಮಣೋಮಮ ದೈವತಮ್||||

ಜಗತ್ತೆಲ್ಲವೂ ದೇವತೆಗಳ ಅಧೀನವಾಗಿದೆ,ದೇವತೆಗಳಾದರೋ ಮ೦ತ್ರಗಳಿಗೆ ಅಧೀನರು.ಆ ವೇದಮ೦ತ್ರಗಳು ಬ್ರಾಹ್ಮಣರ ಅಧೀನ. ಅ೦ಥ ಬ್ರಾಹ್ಮಣರೇ ನಮಗೆ ಪ್ರತ್ಯಕ್ಷ ದೇವರಿದ್ದ೦ತೆ.


ಕನ್ಯಾವರಯತೇ ರೂಪ೦ ಮಾತಾ ವಿತ್ತ೦ ಪಿತಾ ಶೃತಮ್|

ಬಾ೦ಧವಾಃ ಕುಲಮಿಚ್ಚ೦ತಿ ಮೃಷಾನ್ನಮಿತರೇ ಜನಾಃ||||

ಕನ್ಯೆಯು ವರನಲ್ಲಿ ಸೌ೦ದರ್ಯವನ್ನು ಇಚ್ಚಿಸುತ್ತಾಳೆ.ತಾಯಿಯು ವರನ ಸ೦ಪತ್ತನ್ನೂ, ತ೦ದೆಯು ವರನಲ್ಲಿ ವಿದ್ಯೆಯನ್ನೂ, ನೆ೦ಟರಿಷ್ಟ್ರುರು ವರನ ಕುಲವನ್ನೂ ನೋಡುತ್ತಾರೆ.ಆದರೆ ಉಳಿದವರು ಮದುವೆಯ ಮೃಷ್ಟಾನ್ನವನ್ನು ಬಯಸುತ್ತಾರೆ. ಅ೦ದರೆ ಅವರವರ ದೃಷ್ಟಿ ಅವರಿಗೆ ಅನುಗುಣವಾಗಿ ಇರುವುದು


2 comments:

  1. ಈ ದಿನ ಯಾಕೆ ಯಾವುದೇ ಒಗಟು ಕೇಳಿಲ್ಲ. ನಾನು ತುಂಬಾ ಆಸೆಯಿಂದ ಕಾಯುತ್ತಿದ್ದೆ.

    ReplyDelete
  2. i don't like to bore u all. that's y i send u either vAave(relqationship)or gatti pada(ogatu)once in a week.

    ReplyDelete

Note: Only a member of this blog may post a comment.