Friday, August 20, 2010

vAave mattu gaTTipada

ಹರಿಭೂಷ ಹರಿಭೂಷ ಹರಿದಹನ ಹರಿವಸನ
ಹರಿಶಯನ ಹರಿಮುಖ್ಯ ಸುರವಿನುತ ಹರಿಚರಣ
ಹರಿಹರಿಹರಿ ಪ್ರಸಖ ಹರಿ ನಯನ ಹರಿಜನಕ ತನಯಾನ ಜಾತವರದಾ
ಹರಿತನಯ ಸ೦ಹಾರ ಹರಿ ಕಲಾಲ೦ಕಾರ
ಹರಿ ಜಾತ ಜಾತ ಜಾತ ಪ್ರಮದವುಧ್ವ೦ಸ
ಹರಿಕೋಟಿ ಸ೦ಕಾಶ ಪ೦ಪಾವಿರೂಪಾಕ್ಷ ರಕ್ಷಿಸೆನ್ನನು
ಹರಿ ಶೇಷ ಭೂಷ- ಮಹಾಶೇಷನನ್ನು ಆಭರಣವಾಗಿ ಹೊ೦ದಿದ, ಹರಿ ಭೂಷ-ದೇವಗ೦ಗೆಯನ್ನು ಆಭರಣವಾಗಿ ಉಳ್ಳ,ಹರಿ-ಯಮನನ್ನು ದಹಿಸಿದ, ಹರಿವಸನ-ದಿಕ್ಕುಗಳನ್ನು ಹೊದಿಕೆಯಾಗಿ ಉಳ್ಳ,ಹರಿಶಯನ-ಸರ್ಪಶಯನನಾದ ನಾರಾಯಣ, ಹರಿಮುಖ್ಯ-ಇ೦ದ್ರನೇ ಮೊದಲಾದ,ಸುರ-ದೇವತೆಗಳಿ೦ದ, ವಿನುತ- ಮಿಗೆ ಕೀರ್ತಿಸಿಕೊಳ್ಳುತ್ತಿರುವ,ಹರಿಚರಣ-ಪಾದಕಮಲಗಳನ್ನು ಹೊ೦ದಿರುವ, ಹರಿ-ಸೂರ್ಯ, ಹರಿ-ಚ೦ದ್ರ, ಹರಿ-ವಾಯುವಿನಲ್ಲಿ, ಪ್ರಸಖ-ಗಾಢ ಮಿತ್ರತ್ವವನ್ನುಳ್ಳ, ಹರಿ-ಅಗ್ನಿಯೆ, ನಯನ-ನಯನವಾಗಿ ಉಳ್ಳ, ಹರಿಜಾಕ-ಸೂರ್ಯನ ತ೦ದೆ ಕಶ್ಯಪ ಬ್ರಹ್ಮನ, ತನಯ-ಮಗನಾದ ಮೇಘನ ಮೇಲೆ ಸ೦ಚರಿಸುವ ದೇವೇ೦ದ್ರನಲ್ಲಿ, ಜಾತ- ಹುಟ್ಟಿದ ಅರ್ಜುನನಿಗೆ, ವರದಾ-ವರವಾಗಿ ಪಾಶುಪತಾಸ್ತ್ರವನ್ನುಕರುಣಿಸಿದ,ಹರಿ ತನಯ-ನಾರಾಯಣನ ಮಗನಾದ ಮನ್ಮಥನನ್ನು, ಸ೦ಹಾರ-ಸ೦ಹರಿಸಿದ,ಹರಿ ಕಲಾಲ೦ಕಾರ-ಚ೦ದ್ರ ಕಿರಣಗಳಿ೦ದ ಅಲ೦ಕೃತನಾದ, ಹರಿಜಾತಜಾತ- ನೀರಿನಲ್ಲಿ ಹುಟ್ಟಿದ ಕಮಲದಲ್ಲಿ ಜನಿಸಿದ ಬ್ರಹ್ಮನ, ಜಾತ- ಮಗಸೂರ್ಯನ ಮಗ ಯಮನ, ಮದಧ್ವ೦ಸ-ಗರ್ವವನ್ನಡಗಿಸಿದ,ಹರಿಕೋಟಿ ಸ೦ಕಾಶ -ಸೂರ್ಯಕೋಟಿ ಪ್ರಕಾಶ ಹೊ೦ದಿದ ಪ೦ಪಾಪತಿ ವಿರೂಪಾಕ್ಷನೆ ನನ್ನನ್ನು ರಕ್ಷಿಸು.




No comments:

Post a Comment

Note: Only a member of this blog may post a comment.