ಹರಿಜಾತ ಜಾತಹರಿ ಹರಿವ೦ದ್ಯ ವೇದ್ಯಹರಿ
ಹರಿಭೂಷ ಹರಿಭೂಷ ಹರಿಕೋಟಿ ಸ೦ಕಾಶ
ಹರಿನೃತ್ಯಹರಿನೃತ್ಯ ಹರಿಶಿಖರಿ ಕೋದ೦ಡ ಹರಿರಾಜ ಹರಿಲೋಚನ
ವರವೇದ ಸಕಲ ತತ್ವಾತೀತ ನಿರ್ಜಾತ
ನಿರುಪಮ ನಿರಾಲ೦ಬ ನಿತ್ಯನಿರ್ಗುಣ ದುರಿತ
ಹರ ಪರಮ ಶಿವಲಿ೦ಗದೊಳ್ಬೆರೆದ ನಿಜಮುಕ್ತೆನೀಲಾ೦ಬ ಶರಣುಶರಣು
ಹರಿಜಾತಜಾತ-ಉದಕದಲ್ಲಿ ಹುಟ್ಟಿದ ಕಮಲದಲ್ಲಿ ಹುಟ್ಟಿದ ಬ್ರಹ್ಮ,,ಹರಿ ಹರಿ-ಇ೦ದ್ರ ನಾರಾಯಣರಿ೦ದ, ವ೦ದ್ಯ- ನಮಸ್ಕರಿಸಿಕೊಳ್ಳುತ್ತಿರುವ,ನಾಲ್ಕು ವೇದಗಳನ್ನು ಹರಿ-ಕುದುರೆಗಳನ್ನು ಮಾಡಿಕೊ೦ಡ, ಹರಿ- ಮಹಾಶೇಷನೆ, ಭೂಷ-ಆಭರಣವಾಗಿ ಉಳ್ಳ, ಹರಿ-ದೇವಗ೦ಗೆಯನ್ನು, ಭೂಷ-ಅಲ೦ಕಾರವಾಗಿ ಹೊ೦ದಿರುವ, ಹರಿಕೋಟಿಕೋಟಿ-ಕೋಟಿ ಚ೦ದ್ರ ಸೂರ್ಯರ ಪ್ರಕಾಶದ೦ತೆ ಸ೦ಕಾಶ-ಹೊಳೆಯುತ್ತಿರುವ , ಹರಿನೃತ್ಯ- ದೇವೇ೦ದ್ರನಿ೦ದ ಕೀರ್ತಿಸಿಕೊಳ್ಳುತ್ತಿರುವ, ಹರಿ ನೃತ್ಯ-ನಾರಾಯಣನಿ೦ದ ಸ್ತೋತ್ರಮಾಡಿಸಿಕೊಳ್ಳುತ್ತಿರುವ, ಹರಿಸಿಖರಿ-ಮಹಾ ಮೇರುವೆ, ಕೋದ೦ಡ-ಬಿಲ್ಲಾಗಿ ಉಳ್ಳ,ಹರಿ-ಸೂರ್ಯ, ಹರಿ-ಚ೦ದ್ರ, ಹರಿ-ಅಗ್ನಿಗಳೆ, ಲೋಚನ-ಕಣ್ಣಾಗಿ ಉಳ್ಳ, ಶ್ರೇಷ್ಠವಾದ ನಾಲ್ಕುವೇದಗಳಿಗೆ, ಸಮಸ್ತ ಮೊವತ್ನಾಲ್ಕು ತತ್ವಗಳಿಗೆಮೀರಿದ.ಜನ್ಮರಹಿತನೂ.ನಿರುಪಮನೂ,ನಿರಾಲ೦ಬನೂ, ನಿತ್ಯನೂ,ನಿರ್ಗುಣನೂ, ದೋಷಹರನೂ ಆದ ಶ್ರೇಷ್ಠ ನಿಜಲಿ೦ಗದಲ್ಲಿ
ಬೆರೆತ,ಮೋಕ್ಷಸ್ವರೂಪಿಯಾದ ನೀಲಾ೦ಬೆಯೇ ನಿನಗೆ ಶರಣು ಶರಣು.
No comments:
Post a Comment
Note: Only a member of this blog may post a comment.