Thursday, August 12, 2010

animuttu

ದೇಹೀ ತಿ ವಕ್ತು ಕಾಮಸ್ಯ ಯದ್ ದುಃಖಮುಪಜಾಯತೇ

ದಾತಾ ಚೇದ್ ತದ್ವಿಜಾನಾತಿ ದದ್ಯಾತ್ ತ್ವಕ್ ಪಿಶಿತಾನ್ಯಪಿ ||

ಕೊಡು ಎ೦ದು ಎ೦ದು ಬೇಡುವವನ ಮನಸ್ಸಿನಲ್ಲಾ ಗುವ ದುಃಖವನ್ನು ಸರಿಯಾಗಿ ಅರ್ಥ ಮಾಡಿಕೊ೦ಡು

ಬಿಟ್ಟರೆ ಆ ದಾತೃವು ಅವನಿಗೆ ತನ್ನ ಚರ್ಮ ಮಾ೦ಸಗಳನ್ನಾದರೂ ಕಿತ್ತುಕೊಟ್ಟಾನ

1 comment:

  1. ಪ್ರೀತಿಯ ಚಿಕ್ಕಮ್ಮ,

    ಬಹಳ ದಿನಗಳಿಂದ ನಿಮ್ಮ ಬ್ಲಾಗ್ ಬಗ್ಗೆ ಬರೆಯಬೇಕೆಂದು ಅನಿಸುತ್ತಲೇ ಇತ್ತು. ಆದರೆ ಸಮಯ ಹಾಗೂ ವ್ಯವಧಾನದ ಅಭಾವದಿಂದ ಬರೆಯಲಾಗಲಿಲ್ಲ. ನಿಮ್ಮ ದಿನಕ್ಕೂಂದು ಆಣಿಮುತ್ತು ಬಹಳ ಚೆನ್ನಾಗೆ ಮೂಡಿ ಬರುತ್ತಿದೆ. ಹೆಚ್ಚು ಕಡಿಮೆ ಪ್ರತಿದಿನವೂ ನಿಮ್ಮ ಬ್ಲಾಗ್ ಓದುತ್ತೇನೆ. ಪ್ರತಿಕ್ರಿಯಿಸಲಾಗಲಿಲ್ಲ. ನೀವು ಕಳಿಸುತ್ತಿರುವ ಸುಭಾಷಿತಗಳು, ಹಳೆಗನ್ನಡದ ಒಗಟುಗಳು ಬಹಳ ಚೆನ್ನಾಗಿವೆ. ರಾಜಾಜಿನಗರದ ಮನೆಯಲ್ಲಿ ಇನ್ನೊಮ್ಮೆ ನಿಮ್ಮ ಮುಂದೆ ಕುಳಿತು ಗಮಕ ಕಲಿತಂತೆ ಅನ್ನಿಸಿತು. ನಿಮ್ಮ ಪ್ರತಿಭೆಯ ಇನ್ನೊಂದು ಮುಖ ಈ ಬ್ಲಾಗ್-ನ ನಮ್ಮೆಲ್ಲ ಸದಸ್ಯರಿಗೂ ಆಗುತ್ತಿದೆ. ಧನ್ಯವಾದಗಳು. ನಿಮ್ಮ ಬರಹಗಳು ಹೀಗೇ ನಿರಂತರವಾಗೆ ಮೂಡಿಬರುತ್ತಿರಲಿ.

    ನಾನು ನಮ್ಮ ಬ್ಲಾಗ್-ನ ಎಲ್ಲಾ ಸದಸ್ಯರಿಗೂ ಇನ್ನೊಮ್ಮೆ ಮನವಿ ಮಾಡುತ್ತೇನೆ, ನಿಮ್ಮ ಅಮೂಲ್ಯವಾದ ಸಮಯದಲ್ಲಿ ಯಾವಾಗಲಾದರೂ ಸ್ವಲ್ಪ ಸಮಯ ಈ ಬ್ಲಾಗ್-ಗೊಸ್ಕರ ಖರ್ಚು ಮಾಡಿ, ಯಾವಾಗಲಾದರೂ ಒಮ್ಮೊಮ್ಮೆ ಒಂದು ಪ್ರತಿಕ್ರಿಯೆ ನೀಡಿ, ಚಿಕ್ಕಮ್ಮನವರಿಗೆ ಉತ್ತೇಜಿಸಿ.

    ರವಿ

    ReplyDelete

Note: Only a member of this blog may post a comment.