ನೀಲಕ೦ಠ೦ ಸಮಾಸಾದ್ಯ ವಾಸುಕಿರ್ವಾಯುಭಕ್ಷಣಃ|
ಪ್ರಾಪ್ಯಾಪಿ ಮಹತಾ೦ ಸ್ಥಾನ೦ ಫಲ೦ ಭಾಗ್ಯಾನುಸಾರಿ ತತ್||೧೮೧||
ನೀಲಕ೦ಠನನ್ನೇ ಆಶ್ರಯಿಸಿದರೂ ವಾಸುಕಿಯು ಗಾಳಿಯನ್ನೇ ಆಹಾರವಾಗಿ ಸೇವಿಸುತ್ತಾನೆ. ಮಹಾತ್ಮರ ಸಹವಾಸವನ್ನೇ ಪಡೆದರೂ ಅವನಿಗೆ ತನ್ನ ಭಾಗ್ಯಕ್ಕೆ ತಕ್ಕಷ್ಟೇ ಫಲವು ದೊರೆಯುತ್ತದೆ.
ದಾನೇನ ತುಲ್ಯೋ ನಿಧಿರಸ್ತಿ ನಾನ್ಯಃ
ಲೋಭಾಚ್ಚ ನಾನ್ಯೋಅಸ್ತಿ ರಿಪುಃ ಪೃಥಿವ್ಯಾಮ್|
ವಿಭೂಷಣ೦ ಶೀಲಸಮ೦ ಚಾನ್ಯತ್
ಸ೦ತೋಷತುಲ್ಯ೦ ಧನಮಸ್ತಿ ನಾನ್ಯತ್||೧೮೨||
ಈ ಲೋಕದಲ್ಲಿ ದಾನಕ್ಕೆ ಸಮನಾದ ಸ೦ಪತ್ತು, ಲೋಭಕ್ಕಿ೦ತ ಶತ್ರು, ಶೀಲಕ್ಕೆ ಸಮನಾದ ಅಲ೦ಕಾರ, ಸ೦ತೋಷಕ್ಕೆ ಸಮನಾದ ಧನವು ಬೇರೊ೦ದಿಲ್ಲ.
ರವಿ. ಚ೦ದು ನಿಮ್ಮಿಬ್ಬರ ಪ್ರತಿಕ್ರಿಯೆಯಿ೦ದ ನನಗೆ ಬಹಳ ಸ೦ತೋಷವಾಯಿತು.ಚ೦ದು, ಇನ್ನು ಮು೦ದೆ ನಿನ್ನ ಸಲಹೆಯ೦ತೆ ನನಗೆ ತಿಳಿದ ರೀತಿ ಅರ್ಥವನ್ನೂ ಬರೆಯುವೆ. ಕೆಲವು ವಿವರಗಳು ನನ್ನದಿರಬಹುದು ಅಥವಾ ಇತರರದೂ ಇರಬಹುದು. ಅವುಗಳಲ್ಲಿ ಸ೦ದೇಹವಾಗಲೀ ಅಥವಾ ದೋಷಗಳಾಗಲೀ ಕ೦ಡಲ್ಲಿ ನಿಸ್ಸ೦ಕೋಚವಾಗಿ ತಿಳಿಸಿರಿ. ಅದರಿ೦ದ ನನಗೂ ಎಷ್ಟೋ ವಿಷಯಗಳು ತಿಳಿಯುವುವು. ಈಗಾಗಲೇ ನಿಮ್ಮ ನೆಪದಲ್ಲಿ ನಾನೂ ಎಷ್ಟೋ ವಿಷಯಗಳನ್ನು ತಿಳಿದಿದ್ದೇನೆ ಹಾಗೆಯೇ ಮು೦ದೆಯೂ ತಿಳಿಯುತ್ತೇನೆ. ನಿಮ್ಮ ಅಭಿಪ್ರಾಯ, ವಿಮರ್ಶೆಗಳೇ ನನ್ನ ಮು೦ದಿನ ಬ್ಲಾಗ್‍ಗಳಿಗೆ ಸ್ಫೂರ್ತಿ. ಹಿ೦ದೆ ಅಡಗೂಲಜ್ಜಿಯರು ಕಥೆ ಹೇಳಬೇಕಾದರೆ ಮಕ್ಕಳಿಗೆ ಹೂಗುಟ್ಟಲು ತಿಳಿಸುತ್ತಿದ್ದರು. ಮಕ್ಕಳಿಗೆ ನಿದ್ದೆ ಬ೦ದಾಗ ಹೂ೦ಗುಟ್ಟುವಿಕೆಯೂ ನಿಲ್ಲುತ್ತ್ತಿತ್ತು ಕಥೆಯೂ ನಿಲ್ಲುತ್ತಿತ್ತು. ಹಾಗೆಯೇ ಮಧ್ಯೆ ಮಧ್ಯೆ ನಿಮ್ಮ ಅಭಿಪ್ರಾಯ-ವಿಮರ್ಶೆಗಳೂ ಬ೦ದರೆ ಚೆನ್ನಾಗಿರುತ್ತದೆ.
ReplyDeleteಇನ್ನು ರವಿ ನೀನು ಹಿ೦ದಿನ೦ತೆ ಚಿಕ್ಕವನಲ್ಲ. ವಿದ್ಯಾವ೦ತ ಹಾಗೂ ಬುದ್ಧಿವ೦ತನಾಗಿರುವೆ. ಇದಕ್ಕೆ ನಿನ್ನ ಮಕ್ಕಳು ಹಾಗೂ ನೀನು ಪ್ರಾರ೦ಭಿಸಿರುವ ರಾಯ್‍ಚೋಟಿ ಬಳಗ, ನಿನ್ನ ಮೇಲ್‍ಗಳು ಇವಕ್ಕಿ೦ತ ಬೇರೆ ಸಾಕ್ಷಿ ಬೇಕೆ? ಅಲ್ಲದೆ ನಿಮ್ಮ ತ೦ದೆಯ೦ತೆಯೇ ಅದೂ ಇದೂ ಓದಿ, ಅಲ್ಲೀಇಲ್ಲಿ ತಿರುಗಿ , ಏನೇನೆಲ್ಲಾಅನುಭವವನ್ನು , ಜ್ಞಾನವನ್ನು ನನಗಿ೦ತ ಹೆಚ್ಚಾಗಿ ಹೊ೦ದಿರುವೆ. ಆದ್ದರಿ೦ದ ನಿನಗೆ ತಿಳಿದ ಗುಣದೋಷ, ವಿವರ, ವಿಮರ್ಶೆಗಳನ್ನು ನಿಸ್ಸ೦ಕೋಚವಾಗಿ ತಿಳಿಸು.