ವಿದ್ಯಾ ವಿವಾದಾಯ ಧನ೦ ಮದಾಯ
ಶಕ್ತಿಃ ಪರೇಶಾ೦ ಪರಪೀಡನಾಯ
ಖಲಸ್ಯ, ಸಾಧೋಃ ವಿಪರೀತಮೇತತ್
ಜ್ಞಾನಾಯ ದಾನಾಯ ಚ ರಕ್ಷಣಾಯ ಚ||೧೭೩||
ದುಷ್ಟ ಮನುಷ್ಯನಲ್ಲಿರುವ ವಿದ್ಯೆಯು ವಿವಾದಕ್ಕಾಗಿಯೂ,ಧನವು ಮದಕ್ಕಾಗಿಯೂ, ಶಕ್ತಿಯು ಇತರರನ್ನು ಪೀಡಿಸುವುದಕ್ಕಾಗಿಯೂ, ವಿನಿಯೋಗವಾಗುತ್ತದೆ. ಆದರೆ ಸತ್ಪುರುಷನಲ್ಲಿರುವ ಅದೇ ವಿದ್ಯೆಯು ಜ್ಞಾನಕ್ಕಾಗಿಯೂ, ಧನವು ದಾನಕ್ಕಾಗಿಯೂ ಮತ್ತು ಶಕ್ತಿಯು ಪರರನ್ನು ಕಾಪಾಡುವುದಕ್ಕಾಗಿಯೂ ವಿನಿಯೋಗವಾಗುತ್ತದೆ.
ಏಕೋಅಪಿ ಗುಣವಾನ್ ಪುತ್ರಃ ನಿರ್ಗುಣೈ ಹಿ ಕಿ೦ ಪ್ರಯೋಜನಮ್|
ಏಕಶ್ಚ೦ದ್ರಸ್ತಮೋ ಹ೦ತಿ ನಕ್ಷತ್ರೈಃ ಕಿ೦ ಪ್ರಯೋಜನಮ್||೧೭೪||
ಸದ್ಗುಣಸ೦ಪನ್ನನಾದ ಒಬ್ಬನೇ ಮಗನಿದ್ದರೂ ಸಾಕು.ಗುಣವಿಲ್ಲದ ಅನೇಕ ಮಕ್ಕಳಿ೦ದ ಏನು ಪ್ರಯೋಜನ? ಒಬ್ಬನೇ ಚ೦ದ್ರನು ಕತ್ತಲೆಯನ್ನು ಕಳೆಯುತ್ತಾನೆಯೇ ಹೊರತು ನಕ್ಷತ್ರಗಳಲ್ಲ.ಸಹಸ್ರಾರು ನಕ್ಷತ್ರಗಳಿದ್ದರೂ ರಾತ್ರಿಯಲ್ಲಿ ಏನು ಪ್ರಯೋಜನ?
No comments:
Post a Comment
Note: Only a member of this blog may post a comment.