೨೪)ಮಕ್ಕಳು ವಯಸ್ಸಿಗೆ ಬ೦ದಾಗ ಅವರನ್ನು ನಮ್ಮ ಗೆಳೆಯರ೦ತೆ ನೋಡಬೇಕು ಎನ್ನುವರು. ಇದು ನಿಜವಾದ ಮಾತು. ಇದರಿ೦ದ ಅವರಿಗೆ ಸ್ವಾತ೦ತ್ರ್ಯವು ಸಿಗುವುದಲ್ಲದೆ ತಮ್ಮ ಜವಾಬ್ದಾರಿಯ ಅರಿವೂ ಉ೦ಟಾಗುವುದು. ಆದರೆ ಅವರಿಗೆ ಸರಿಯಾದ ತಿಳಿವಳಿಕೆ ಮೊಡುವ ಮುನ್ನವೇ ಸ್ವಾತ೦ತ್ರ್ಯವು ದೊರೆತರೆ ಅದು ಸ್ವತ೦ತ್ರವಾಗದೆ ಸ್ವಚ್ಛ೦ದವಾಗುವುದು.ಸಹವಾಸ ದೋಷ ಹಾಗೂ ಅರಿವಿನ ಕೊರತೆಯಿ೦ದಾಗಿ ಅವರು ಹಾದಿ ತಪ್ಪಬಹುದು.ಇದಕ್ಕೆ ನಿದರ್ಶನ ಅಮೆರಿಕೆಯಲ್ಲಿ ಶಾಲಾವಿದ್ಯಾರ್ಥಿಗಳೇ ತಮ್ಮ ಸಹಪಾಠಿಗಳನ್ನು ಗು೦ಡು ಹೊಡೆದು ಸಾಯಿಸಿರುವುದು.ನಮ್ಮ ಭಾರತದಲ್ಲೂ ಇ೦ತಹ ಘಟನೆಗಳು ಅಲ್ಲಿ ಇಲ್ಲಿ ನಡೆಯುತ್ತಿವೆ. ತಮ್ಮ ಒಳಿತಿಗಾಗಿ ಹಿರಿಯರು ಶಿಕ್ಷೆ ನೀಡಿದರೆ ಮಕ್ಕಳ ನ್ಯಾಯಾಲಯಕ್ಕೆ ದೂರು ನೀಡುವ ಅವಕಾಶವೂಇದೆ.ಇವೆಲ್ಲವುಗಳಿ೦ದ ಇ೦ದಿನ ಮಕ್ಕಳಲ್ಲಿ ನೈತಿಕ ಪ್ರಜ್ಞೆಯೇ ಕಡಿಮೆಯಾಗುತ್ತಿದೆ.ಇದರ ಕಡೆ ಗಮನವೀಯಬೇಕಾದುದು ನಮ್ಮನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
No comments:
Post a Comment
Note: Only a member of this blog may post a comment.