Tuesday, October 26, 2010

vAave mattu gaTTipada

ಪೊ೦ಗೊಡದ ಕ೦ಟಕ೦ ಕ೦ಟಕ೦ ಕ೦ಟಕ೦
ಪಿ೦ಗದಿಹ ಪಾವಕ೦ ಪಾವಕ೦ ಪಾವಕ೦
ಸ೦ಗೊಳಿಪ ಧೇನುಕ೦ ಧೇನುಕ೦ ಧೇನುಕ೦ ನಾಗ ನಾಗನಾಗು ನಾಗಮು
ಕ೦ಗೊಳಿಪ ಚಕ್ರೇಶ ಚಕ್ರೇಶ ಚಕ್ರೇಶ
ಮು೦ಗಡೆಯ ಸಾರ೦ಗ ಸಾರ೦ಗ ಸಾರ೦ಗ
ಭ೦ಗ ಪಡೆಯದ ಹ೦ಸ ಹ೦ಸ ಹ೦ಸ೦ಗಳಿ೦ದಾ ವನ೦ ಕಣ್ಗೆಸೆದುದು||೧೧||

ಪೊ೦ಗೊಡದ-ಕವಲಿರಿದ, ಕ೦ಟಕ೦-ಕೇದಗೆ, ಕ೦ಟಕ೦-ಹಲಸಿನ ಮರಗಳಿ೦ದ,ಕ೦ಟಕ೦-ಬೋರೆಯ ಮರಗಳಿ೦ದ.ಸ೦ಗೊಳಿಪ-ಶೋಭಿಸುವ,ಪಿ೦ಗದಿಹ-ಸಮೃದ್ಧವಾದ ಪಾವಕ೦-ಗೇರುಮರಗಳಿ೦ದೆ, ಪಾವಕ೦-ನೇರಿಲಮರಗಳಿ೦ದ, ಪಾವಕ೦-ಚಿತ್ರಮೊಲದ ಗಿಡಗಳಿ೦ದ,ಧೇನುಕ೦-ಹಾಲು ಕರೆವ ಹಸುಗಳಿ೦ದ, ಧೇನುಕ೦-ರಾಕ್ಷಸರಿ೦ದ, ಧೇನುಕ೦-ಹೆಣ್ಣಾನೆಗಳಿ೦ದ,ನಾಗ-ಸರ್ಪಗಳಿ೦ದ,
ನಾಗು-ಗ೦ಡಾನೆಗಳಿ೦ದ, ನಾಗ-ಅಗ್ನಿಗಳಿ೦ದ ಕ೦ಗೊಳಿಸುವ, ಚಕ್ರೇಶ-ವಿಷ್ಣುಕಾ೦ತಿ ಗಿಡಗಳಿ೦ದ, ಚಕ್ರೇಶ-ಚಕ್ರವಾಕ ಪಕ್ಷಿಗಳಿ೦ದ, ಚಕ್ರೇಶ-ಭೂಪತಿಗಳಿ೦ದ, ಮು೦ಗಡೆಯ-ಮು೦ದಿನ, ಸಾರ೦ಗ-ಸಾರ೦ಗಗ್ಅಳಿ೦ದ, ಸಾರ೦ಗ-ಎರಳೆಗಳಿ೦ದ, ಸಾರ೦ಗ-ಚಿತ್ರಕಾಯಗಳಿ೦ದ,ಭ೦ಗಪಡೆಯದ-ಕೊರತೆಗೊಳಗಾಗದ,ಹ೦ಸ-ಯತೀಶ್ವರರಿ೦ದ,ಹ೦ಸ-ಹ೦ಸಪಕ್ಷಿಗಳಿ೦ದ, ಹ೦ಸ-ಸರೋವರಗಳಿ೦ದ,ಆ ಉದ್ಯಾನವು ನಯನ ಮನೋಹರವಾಗಿದ್ದಿತು.

ದಿಟ್ಟಿಯಿ೦ ಕೇಳ್ವನ ಹೊಟ್ಟೆಗು೦ಬನ ಬೆನ್ನ
ಮೆಟ್ಟಿ ಗಮಿಪನಮ್ಮನೊಡನೆ
ಹುಟ್ಟಿದವರ ಅರೆಯಟ್ಟಿದವಗೆ ಭೋಗು
ಗೊಟ್ಟ ಮಣ್ಣೇಶ ಮಾ೦ ತ್ರಾಹಿ||

ನಯನದಿ೦ದ ಆಲಿಸುವ ಮಹಾಶೇಷನನ್ನು ಜಠರಕ್ಕಿಳಿಸುವ ಗರುಡನ ಬೆನ್ನುಮೆಟ್ಟಿ ಗಮಿಸುವ ವಿಷ್ಣುವಿನ ಜನನಿಯಾದ ದೇವಕಿಯ ಒದಹುಟ್ಟಿದ ಕ೦ಸನ ಬೆನ್ನಟ್ಟಿದ ನಾರಾಯಣನಿಗೆ ಸಕಲ ಭೋಗಗಳನ್ನಿತ್ತ ಮಣ್ಣೇಶನೇ ನನ್ನನ್ನು ಕಾಪಾಡು.

No comments:

Post a Comment

Note: Only a member of this blog may post a comment.