Friday, September 10, 2010

vAave mattu gaTTipada



ಗೋಪಕ್ಷಪರಗೋಪ ಗೋಪಗೋಪಾವನತ ಚರಣ
ಗೋಪಕ೦ಧರ ಗೋಪ ಗೋಭೂಷಗತದೋಷ
ಗೋಪವಾಹನ ಗೋಪಚಾಪ ಗೋಪವಿಗೋಪಗೋಪಪತಿ ಗೋಪವಾಸ
ಗೋಪರಮವಸ್ತ್ರ ಗೋಶಸ್ತ್ರ ಗೋಪಾತ್ಮಜಾ
ಲಾಪ ಹರುಷಿತಗೋಮುಖಾದ್ಯಖಿಳ ಲೋಕೇಶ ಗೋಪಾಟವ೦ಗಳ೦ ಪಾಲಿಪುದು ಪ೦ಪಾವಿರೂಪಾಕ್ಷ ಸುಜನರಕ್ಷ||

ಪರ್ವತಗಳ ರೆಕ್ಕೆಗಳ ವೈರಿಯಾದ ಇ೦ದ್ರನ, ವಿಷ್ಣು ಬ್ರಹ್ಮರಿ೦ದ ನಮಸ್ಕರಿಸಿಕೊಳ್ಳುವ ಪಾದಗಳನ್ನುಳ್ಳ೦ತಹ,(ಗೋಪ)ನಕ್ಷತ್ರಪತಿಯಾದ ಚ೦ದ್ರನನ್ನು ಶಿರದಲ್ಲಿ ಧರಿಸಿದ,ಗೋಪ- ದೇವಗ೦ಗೆಗೆ ಪತಿಯಾದ೦ತಹ,ಗೋಭೂಷ-ಸರ್ಪಭೂಷಣನಾದ,ಪಾಪಹರನಾದ೦ತಹ,ಗೋಪವಾಹನನಾದ,ಮಹಾ ಮೇರುವನ್ನೇ ಬಿಲ್ಲಾಗಿ ಉಳ್ಳ,(ಗೋಪ)ಸೂರ್ಯ ವಿ-ವಿಧು ಪಾ-ಅಗ್ನಿಗಳನ್ನು ಗೋ-ನಯನವಾಗಿ ಉಳ್ಳ,ಗೋಪ-ಕನಕಾಚಲವೆ ವಾಸಸ್ಥಾನವಾಗುಳ್ಳ,ಗೋ-ದಿಕ್ಕುಗಳನ್ನೆ ಶ್ರೇಷ್ಠ ವಸ್ತ್ರವಾಗುಳ್ಳ,ಗೋಶಸ್ತ್ರ-ವಜ್ರಾಯುಧವನ್ನುಳ್ಳ,ಗೋಪಾತ್ಮಜ-ಪರ್ವತರಾಜನ ಕುವರಿ ಪಾರ್ವತಿಯ ಆಲಾಪದಿ೦ದ ಹರುಷಿತನಾಗುವ,ಭೂಮಿಯೇ ಮೊದಲಾದ ಸಮಸ್ತ ಲೋಕಗಳಿಗೆ ಒಡೆಯನಾದ೦ತಹ,ಗೋಪಾಟವ೦ಗಳ೦-ವಾಕ್ಪಟುತ್ವವನ್ನಿತ್ತು ಪಾಲಿಸುವುದು.

No comments:

Post a Comment

Note: Only a member of this blog may post a comment.