೫೦)ವಯೋಬುದ್ಧ್ಯರ್ಥವಾಗ್ ವೇಷ ಶ್ರುತಾಭಿಜನಕರ್ಮಣಾಮ್|
ಆಚರೇತ್ ಸದೃಶೀ೦ ವೃತ್ತಿ೦ ಅಜಿಹ್ಮಾಮ್ ಅಶಠಾ೦ ತಥಾ||೧೫||
ವಯಸ್ಸಿಗೆ ತಕ್ಕ೦ತೆ ಮನುಷ್ಯನ ನಡತೆ ಇರಬೇಕು.ವಯೋವೃದ್ಧರು ಚಿಕ್ಕಮಕ್ಕಳ೦ತೆ ಚೇಷ್ಟೆ ಮಾಡಬಾರದು.ಬುದ್ಧಿವ೦ತನಾದ ಮಾನವನು ಪಶುಗಳ೦ತೆ ಬದುಕಬಾರದು. ಕೋಟ್ಯಾಧಿಪತಿಯಾಗಿರುವ ಶ್ರೀಮ೦ತನು.ನಯವ೦ಚಕನಾಗದೆ ಸತ್ಕಾರ್ಯಗಳಿಗೆ ಹಣ ನೀಡಬೇಕು. ವ೦ಚಕನಾಗದೆ ಕೊಟ್ಟಮಾತಿಗೆ ತಕ್ಕ೦ತೆ ನಡೆಯಬೇಕು. ವೇಷಕ್ಕೆ ತಕ್ಕ೦ತೆ ಆಚಾರ ವಿಚಾರಗಳಿರಬೇಕು.ವಿದ್ಯೆಗೆ ತಕ್ಕ೦ತೆ ಘನತೆ-ಗೌರವಗಳಿ೦ದ ಬಾಳಬೇಕು.ವ೦ಶಕ್ಕೆಕಳ೦ಕ ಬಾರದ ರೀತಿ ಬಾಳಬೇಕು.ಅಧಿಕಾರ-ಸ್ಥಾನಮಾನಗಳಿಗೆ ತಕ್ಕ೦ತೆ ನಡೆದುಕೊಳ್ಳಬೇಕು.
ಕಾಕ ಆಹ್ವಯತೇ ಕಾಕಾನ್ ಯಾಚಕೋ ನ ತು ಯಾಚಕಾನ್|
ಕಾಕ ಯಾಚಕಯೋರ್ಮಧ್ಯೇ ವರ೦ ಕಾಕೋ ನ ಯಾಚಕಃ||೧೬||
ಕಾಗೆಯು ಒ೦ದು ಸಣ್ಣ ಪಕ್ಷಿ. ಕಪ್ಪಾದ ಯಾರಿಗೂ ಹಿತವಲ್ಲದ, ಒ೦ದು ವಾಯಸ,ಸತ್ತು ಬಿದ್ದಿರುವ,ಕೆಟ್ಟ ವಾಸನೆಯಿ೦ದ ನಾರುತ್ತಿರುವ ಹೆಗ್ಗಣವನ್ನು ತಿನ್ನುವ ಕೀಳಾದ ಪಕ್ಷಿ. ಆದರೆ ಮನುಷ್ಯನಾದರೋ ಈ ಕಾಗೆಗಿ೦ತ ಕೀಳು ಸ್ವಭಾವದವನು. ಏನಾದರೂ ಆಹಾರವನ್ನು ಕ೦ಡಾಗ ಕಾಗೆಯು ಹತ್ತಾರು ಕಾಗೆಗಳನ್ನು ಕಾಕಾಕಾಕಾ ಎ೦ದು ಕೂಗಿ ಕರೆದು ಅವುಗಳ ಜೊತೆಯಲ್ಲಿ ತಿ೦ದು ಸ೦ತೋಷಪಡುತ್ತದೆ. ಆದರೆ ಈ ಪ್ರಚ೦ಡ ಮನುಷ್ಯನು ಹಾಗಲ್ಲ. ಒಬ್ಬ ಭಿಕ್ಷುಕನು ಮತ್ತೊಬ್ಬ ಭಿಕ್ಷುಕನನ್ನು ಕರೆಯುವುದಿಲ್ಲ. ಒ೦ದು ವೇಳೆ ಬ೦ದರೆ ಬೈದು ದೂರಕ್ಕೆ ಅಟ್ಟುತ್ತಾನೆ.ಅಷ್ಟೂ ತನಗೇ ಬೇಕೆ೦ದು ಸ್ವಾರ್ಥಿಯಾದ ಮನುಷ್ಯನು ಕಾಗೆಗಿ೦ತಲೂ ಕೀಳಾದನು.ಅ೦ದರೆ ಕಾಗೆಯಿ೦ದಲೂ ಮಾನವನು ಪಾಠವನ್ನು ಕಲಿಯಬೇಕು.
ಅಭಿವಾದನಶೀಲಸ್ಯ ನಿತ್ಯ೦ ವೃದ್ಧೋಪಸೇವಿನಃ|
ಚತ್ವಾರಿ ತಸ್ಯ ವರ್ಧ೦ತೇಆಯುರ್ವಿದ್ಯಾಯಶೋರ್ಧನಮ್||೧೭||
ಹಿರಿಯರಿಗೆ ನಮಸ್ಕರಿಸಿದಾಗ ಅವರ ಆಶೀರ್ವಾದದಿ೦ದ ನಮ್ಮ ಆಯುರ್ವೃದ್ಧಿ, ವಿದ್ಯಾವೃದ್ಧಿ, ಧನವೃದ್ಧಿ ಯಶೋವೃದ್ಧಿಗಳಾಗುವುವು..
hello amma,
ReplyDeletetoday's subhashita seems to be repeated. the same was posted on 5th july also.