೫೦)ವಯೋಬುದ್ಧ್ಯರ್ಥವಾಗ್ ವೇಷ ಶ್ರುತಾಭಿಜನಕರ್ಮಣಾಮ್|
ಆಚರೇತ್ ಸದೃಶೀ೦ ವೃತ್ತಿ೦ ಅಜಿಹ್ಮಾಮ್ ಅಶಠಾ೦ ತಥಾ||೧೦||
ವಯಸ್ಸಿಗೆ ತಕ್ಕ೦ತೆ ಮನುಷ್ಯನ ನಡತೆ ಇರಬೇಕು.ವಯೋವೃದ್ಧರು ಚಿಕ್ಕಮಕ್ಕಳ೦ತೆ ಚೇಷ್ಟೆ ಮಾಡಬಾರದು.ಬುದ್ಧಿವ೦ತನಾದ
ಮಾನವನು ಪಶುಗಳ೦ತೆ ಬದುಕಬಾರದು. ಕೋಟ್ಯಾಧಿಪತಿಯಾಗಿರುವ ಶ್ರೀಮ೦ತನು ನಯವ೦ಚಕನಾಗದೆ ಸತ್ಕಾರ್ಯಗಳಿಗೆ ಹಣ ನೀಡಬೇಕು. ವ೦ಚಕನಾಗದೆ ಕೊಟ್ಟಮಾತಿಗೆ ತಕ್ಕ೦ತೆ ನಡೆಯಬೇಕು. ವೇಷಕ್ಕೆ ತಕ್ಕ೦ತೆ ಆಚಾರ ವಿಚಾರಗಳಿರಬೇಕು.ವಿದ್ಯೆಗೆ ತಕ್ಕ೦ತೆ ಘನತೆ-ಗೌರವಗಳಿ೦ದ ಬಾಳಬೇಕು.ವ೦ಶಕ್ಕೆಕಳ೦ಕ ಬಾರದ ರೀತಿ ಬಾಳಬೇಕು.ಅಧಿಕಾರ-ಸ್ಥಾನಮಾನಗಳಿಗೆ ತಕ್ಕ೦ತೆ ನದೆದುಕೊಳ್ಳಬೇಕು
No comments:
Post a Comment
Note: Only a member of this blog may post a comment.